ಕಾಪಿಕಾಡ್‌ರ ‘ಬರ್ಸ’ ಸಿನಿಮಾಕ್ಕೆ ಮುಹೂರ್ತ

Saturday, April 23rd, 2016
Barsa Tulu Flim

ಮಂಗಳೂರು: ಬೊಳ್ಳಿ ಮೂವೀಸ್ ಲಾಂಛನದಲ್ಲಿ ದೇವದಾಸ್ ಕಾಪಿಕಾಡ್ ನಿರ್ದೇಶನದಲ್ಲಿ ಶರ್ಮಿಳಾ ಡಿ.ಕಾಪಿಕಾಡ್ ಮುಖೇಶ್ ಹೆಗ್ಡೆ, ಸಪ್ನಾ ಶ್ರೀನಿವಾಸ್ ಕಿಣಿ ನಿರ್ಮಾಣದಲ್ಲಿ ತಯಾರಾಗುತ್ತಿರುವ ‘ಬರ್ಸ’ ತುಳು ಚಲನ ಚಿತ್ರದ ಮೂಹೂರ್ತ ಸಮಾರಂಭವು ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಶನಿವಾರ ಜರಗಿತು. ಶರವು ರಾಘವೇಂದ್ರ ಶಾಸ್ತ್ರಿ ಕ್ಯಾಮರಾ ಚಾಲನೆ ಮಾಡಿದರು. ಉದ್ಯಮಿ ಮುಖೇಶ್ ಹೆಗ್ಡೆ ಎಕ್ಕಾರ್ ಕ್ಲ್ಯಾಪ್ ಮಾಡಿದರು. ನಿರ್ದೇಶಕ ದೇವದಾಸ್ ಕಾಪಿಕಾಡ್ ಮಾತನಾಡಿ ಬೊಳ್ಳಿ ಮೂವೀಸ್ ಲಾಂಛನದಲ್ಲಿ ತಯಾರಾಗುತ್ತಿರುವ ಮೂರನೇ ಚಿತ್ರ ‘ಬರ್ಸ’ದಲ್ಲಿ ಉತ್ತಮ ಹಾಸ್ಯ ಮನರಂಜನೆಯ ಜತೆಗೆ […]

ಉದ್ಯಾವರ ಅರಸು ದೈವಗಳ ಜಮಾಹತ್ ಭೇಟಿ: ಹಿಂದೂ ಮುಸ್ಲಿಂ ಭಾವೈಕ್ಯಕ್ಕೊಂದು ಸಾಕ್ಷಿ

Friday, April 22nd, 2016
daiva Beti

ಮಂಜೇಶ್ವರ: ಹಿಂದೂ ಮುಸ್ಲಿಂ ಬಾವೈಕ್ಯದ ಸಂಕೇತದೊಂದಿಗೆ ಕಳೆದ 800 ವರ್ಷಗಳಿಂದ ವಾಡಿಕೆಯಲ್ಲಿರುವ ಉದ್ಯಾವರ ಶ್ರೀ ಅರಸು ದೈವಗಳು ವರ್ಷಂಪ್ರತಿಯ ವಾಡಿಕೆಯಂತೆ ಶುಕ್ರವಾರ ಮದ್ಯಾಹ್ನ ಅರಸು ದೈವಪಾತ್ರಿಗಳು ಮತ್ತು ದೇವಸ್ಥಾನದ ಪ್ರತಿನಿಧಿಗಳು ಹಾಗು ಸಹಸ್ರಾರು ಹಿಂದೂ ಬಾಂಧವರು ಜೊತೆಯಾಗಿ ಉದ್ಯಾವರ ಸಾವಿರ ಜಮಾಅತ್ ಮಸೀದಿಗೆ ಭೇಟಿ ನೀಡಿದರು. ಉದ್ಯಾವರ ಅರಸು ಮಂಜಿಷ್ಣಾರ್ ಕ್ಷೇತ್ರದ ವಾರ್ಷಿಕ ಜಾತ್ರೋತ್ಸವದ ಸಲುವಾಗಿ ಪ್ರಾಚೀನ ಕಾಲದಿಂದಲೇ ನಡೆದು ಕೊಂಡು ಬರುತ್ತಿರುವ ಅರಸು ದೈವಗಳ ಜಮಾಅತ್ ಭೇಟಿ ಇಂದಿಗೂ ಹಿಂದೂ ಮುಸ್ಲಿಂ ಬಾವೈಕ್ಯತೆಗೊಂದು ಪ್ರತೀಕವಾಗಿದೆ. ಮೇಷ […]

ಸುರತ್ಕಲ್‌ ಕೇಂದ್ರ ಮೈದಾನಿನಲ್ಲಿ ವಿವಿಧ ಕಾಮಗಾರಿಗಳಿಗೆ ಮುಖ್ಯಮಂತ್ರಿಗಳಿಂದ ಶಿಲಾನ್ಯಾಸ

Friday, April 22nd, 2016
Surathkal

ಮಂಗಳೂರು: ಸುರತ್ಕಲ್‌ ಪ್ರದೇಶದ ಸಮಗ್ರ ಅಭಿವೃದ್ಧಿಯ ನಿಟ್ಟಿನಲ್ಲಿ ವಿವಿಧ ಕಾಮಗಾರಿಗಳಿಗೆ ಗುರುವಾರ ಸುರತ್ಕಲ್‌ ಕೇಂದ್ರ ಮೈದಾನಿನಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಶಿಲಾನ್ಯಾಸ ನೆರವೇರಿಸಿದರು. ಎಸ್‌.ಎಫ್‌.ಸಿ. 3 ಕೋಟಿ ರೂ. ವಿಶೇಷ ಅನುದಾನದಡಿ 1.70 ಕೋಟಿ ರೂ. ವೆಚ್ಚದಲ್ಲಿ ಸುರತ್ಕಲ್‌ ಆಧುನಿಕ ಕೇಂದ್ರ ಮಾರುಕಟ್ಟೆ ನಿರ್ಮಾಣದ ಪೂರ್ವದಲ್ಲಿ ಹಾಲಿ ಮಾರುಕಟ್ಟೆಯ ಸ್ಥಳಾಂತರದ ಕಾಮಗಾರಿ, ಮುಖ್ಯಮಂತ್ರಿಗಳ ನಗರೋತ್ಥಾನ 3ನೇ ಹಂತದ 100 ಕೋಟಿ ರೂ. ಯೋಜನೆಯಡಿ 2.25 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಮೊದಲ ಹಂತದ ಸುರತ್ಕಲ್‌ ವಲಯ […]

ಕರ್ನಾಟಕ ಪಾಲಿಟೆಕ್ನಿಕ್‌ ಕಾಲೇಜಿನ ಉಪನ್ಯಾಸಕ ರಸ್ತೆ ಅಫಘಾತದಲ್ಲಿ ಸಾವು

Friday, April 22nd, 2016
Sushanth thoudugoli

ಉಳ್ಳಾಲ: ಬೈಕಂಪಾಡಿ ಬಳಿ ಟ್ಯಾಂಕರ್‌ -ಬೈಕ್‌ ನಡುವೆ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡು ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಂಗಳೂರಿನ ಕರ್ನಾಟಕ ಪಾಲಿಟೆಕ್ನಿಕ್‌ ಕಾಲೇಜಿನ ಉಪನ್ಯಾಸಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಸೋಮೇಶ್ವರ ಸಾರಸ್ವತ ಕಾಲನಿ ನಿವಾಸಿ ಸುಶಾಂತ್‌ ಕುಮಾರ್‌ (28) ಮೃತಪಟ್ಟವರು. ಜೋಕಟ್ಟೆಯಲ್ಲಿರುವ ಸ್ನೇಹಿತನ ಮೆಹೆಂದಿ ಸಮಾರಂಭ ಮುಗಿಸಿ ಹೆದ್ದಾರಿ ತಲುಪುತ್ತಿದ್ದಂತೆ ಮಂಗಳೂರು ಕಡೆ ತೆರಳಲು ಸ್ಥಳೀಯರಲ್ಲಿ ವಿಚಾರಿಸಿ ಹೆದ್ದಾರಿಗೆ ಬರುತ್ತಿದ್ದಂತೆ ಅತೀ ವೇಗದಲ್ಲಿ ಬಂದ ಟ್ಯಾಂಕರ್‌ ಲಾರಿ ಇವರಿದ್ದ ಬೈಕಿಗೆ ಢಿಕ್ಕಿ ಹೊಡೆದಿದ್ದು, ಗಂಭೀರ ಗಾಯಗೊಂಡು […]

ಕಲ್ಲಡ್ಕದ ಶ್ರೀರಾಮ ಮಂದಿರ ಲೋಕಾರ್ಪಣೆ

Tuesday, April 19th, 2016
Kalladka Ramamandira

ಬಂಟ್ವಾಳ : ಶ್ರೀರಾಮ ಮಂದಿರ ಕಲ್ಲಡ್ಕದ ಲೋಕಾರ್ಪಣೆಯ ಅಂಗವಾಗಿ ದ್ವಜರೋಹಣವನ್ನು ರಾಷ್ಟ್ರೀಯ ಸಹಬೌದ್ದೀಕ್ ಪ್ರಮುಖ್ ಮುಕುಂದ ನೆರವೇರಿಸಿದರು. ಕಲ್ಲಡ್ಕದ ಶ್ರೀರಾಮ ವಿದ್ಯಾ ಕೇಂದ್ರದ ಸುಮಾರು ಮೂರು ಸಾವಿರ ವಿದ್ಯಾರ್ಥಿಗಳಿಂದ ಹೊರೆ ಕಾಣಿಕೆ , ಪ್ರತಿಯೊಬ್ಬ ವಿದ್ಯಾರ್ಥಿಗಳಿಂದ ಒಂದು ಸೇರು ಅಕ್ಕಿ, ಒಂದು ತೆಂಗಿನಕಾಯಿ , ಭಕ್ತಿ ಪೂರ್ವಕ ಕಾಣಿಕೆ ನೀಡಿದರು. ಅ ಬಳಿಕ ಉಗ್ರಾಣ ಮೂಹೂರ್ತ ನಡೆಯಿತು. ಮಹಾಬಲ ಶೆಟ್ಟಿ . ಡಾ.ಪ್ರಬಾಕರ ಭಟ್ಟ್, ರುಕ್ಮಯ ಪೂಜಾರಿ ಪದ್ಮನಾಭ ಕೊಟ್ಟಾರಿ, ಜಿತೇಂದ್ರ ಎಸ್ ಕೊಟ್ಟಾರಿ, ವಿಕಾಶ್ ಪುತ್ತೂರು, […]

ಕಾರ್ಯಕರ್ತರು ಸಂಘಟಿತರಾಗಿ ಐಕ್ಯರಂಗದ ವಿಜಯಕ್ಕೆ ಮುನ್ನುಡಿ ಬರೆಯಬೇಕು : ಯು.ಟಿ ಖಾದರ್

Tuesday, April 19th, 2016
Kerala Khader election campaign

ಉಪ್ಪಳ: ಕಾಸರಗೋಡು ಅಭಿವೃದ್ದಿಗೆ ಹೊಸ ಭಾಷ್ಯ ಬರೆದ ಐಕ್ಯರಂಗ ಮತ್ತೆ ಅಧಿಕಾರಕ್ಕೇರಲಿದೆ. ಕಳೆದ ಬಾರಿ ಚುನಾವಣೆಯಲ್ಲಿ ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿ ಗೆದ್ದ ಐಕ್ಯರಂಗ ಈ ಬಾರಿ ಐದು ಕ್ಷೇತ್ರಗಳನ್ನೂ ತನ್ನದಾಗಿಸಿಕೊಳ್ಳಲಿದೆ ಎಂದು ಮಾಜಿ ಸಚಿವ, ಹಿರಿಯ ಮುಸ್ಲಿಂ ಲೀಗ್ ನೇತಾರ ಚೆರ್ಕಳಂ ಅಬ್ದುಲ್ಲಾ ಹೇಳಿದರು. ಉಪ್ಪಳ ಮರಿಕೆ ಹಾಲ್ ನಲ್ಲಿ ಮಂಗಳವಾರ ಸಂಜೆ ನಡೆದ ಐಕ್ಯರಂಗ ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು. ಇತ್ತೀಚೆಗೆ ನಡೆದ ಸ್ಥಳೀಯ ಚುನಾವಣೆಯಲ್ಲಿ ಜಿಲ್ಲಾ ಪಂಚಾಯತ್ ಐಕ್ಯರಂಗದ ಪಾಲಾಗಿದೆ. ಕ್ಷೇತ್ರದ ಎಲ್ಲಕಾರ್ಯಕರ್ತರು ಅವಿರತ ಶ್ರಮಿಸಿ […]

ಶ್ರೀಕ್ಷೇತ್ರ ಕಣ್ವತೀರ್ಥದಲ್ಲಿ ಶ್ರೀರಾಮ ನವಮಿ ರಥೋತ್ಸವ

Tuesday, April 19th, 2016
Kanwa Tirtha

ಮಂಜೇಶ್ವರ: ಶ್ರೀಕ್ಷೇತ್ರ ಕಣ್ವತೀರ್ಥದಲ್ಲಿ ಶ್ರೀರಾಮ ನವಮಿ ರಥೋತ್ಸವ ಹಾಗೂ ಶ್ರೀಬ್ರಹ್ಮೇಶ್ವರ ದೇವರ ವಾರ್ಷಿಕ ಉತ್ಸವವು ವಿವಿಧ ವೈದಿಕ,ಧಾರ್ಮಿಕ,ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು. ಕಾರ್ಯಕ್ರಮದಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಧರ್ಮಜಾಗೃತಿ ಅಭಿಮಾನಿ ಬಳಗದ ಅಧ್ಯಕ್ಷ ಶ್ರೀಕೃಷ್ಣ ಶಿವಕೃಪಾ ಕುಂಜತ್ತೂರುರವರ ಅಧ್ಯಕ್ಷತೆಯಲ್ಲಿ ದಕ್ಷಿಣ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಉದ್ಘಾಟಿಸಿದರು.ರಾಮಪ್ಪ ಮಂಜೇಶ್ವರ,ಕೃಷ್ಣಪ್ಪ ಮಾಸ್ಟರ್ ತೂಮಿನಾಡು,ಭಗವಾನ್‌ದಾಸ್ ಕಣ್ವತೀರ್ಥ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.ಯೋಗಾಚಾರ್ಯ ಪುಂಡರೀಕಾಕ್ಷ ಉಪಾಧ್ಯಾಯ ಧಾರ್ಮಿಕ ಉಪನ್ಯಾಸ ನೀಡಿದರು.ಕ್ಷೇತ್ರ ಸಮಿತಿಯ ಅಧ್ಯಕ್ಷ ಆನಂದ ಮಾಸ್ಟರ್ ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ […]

60 ವರ್ಷಗಳ ಎಡ, ಬಲ ರಂಗಗಳ ಆಡಳಿತದಿಂದ ರಾಜ್ಯ ಕಂಗೆಟ್ಟಿದೆ : ಸುರೇಶ್ ಗೋಪಿ

Monday, April 18th, 2016
Kerala Bjp

ಕುಂಬಳೆ: ರಾಜ್ಯದಲ್ಲಿ ಅನಿವಾರ್ಯ ರಾಜಕೀಯ ಬದಲಾವಣೆಗೆ ಕಾಲ ಸನ್ನಿಹಿತವಾಗಿದ್ದು, ಬಿಜೆಪಿ ಅಭ್ಯರ್ಥಿಗಳು ಗೆಲ್ಲುವ ಅನುಕೂಲಕರ ವಾತಾವರಣ ಹಿಂದಿಗಿಂತ ಇಂದು ಅತಿ ಹೆಚ್ಚಿದೆಯೆಂದು ಮಲೆಯಾಳಂ ಚಲನಚಿತ್ರ ತಾರೆ, ಭರತ್ ಸುರೇಶ್ ಗೋಪಿ ಅಭಿಪ್ರಾಯ ವ್ಯಕ್ತಪಡಿಸಿದರು. ವಿಧಾನ ಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸೋಮವಾರ ಕುಂಬಳೆ ಸಿಟಿ ಹಾಲ್ ಸಭಾಂಗಣದಲ್ಲಿ ಆಯೋಜಿಸಲಾದ ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಎನ್‌ಡಿಎ ಬೃಹತ್ ಚುನಾವಣಾ ಪ್ರಚಾರ ಸಭೆಯ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು. ರಾಜ್ಯದ ಕಳೆದ 60 ವರ್ಷಗಳ ಎಡ,ಬಲ ರಂಗಗಳ ಸ್ವಾರ್ಥ ಲಾಲಸೆಯ […]

ಯಕ್ಷಗಾನ ಕಲಾವಿದರು ನಿವೃತ್ತರಾದ ಬಳಿಕ ಗಂಭೀರವಾಗಿ ಚಿಂತಿಸಬೇಕಿದೆ : ಪಟ್ಲ ಸತೀಶ ಶೆಟ್ಟಿ

Monday, April 18th, 2016
Patla Satish

ಕುಂಬಳೆ: ವೃತ್ತಿ ಕಲಾವಿದರಾಗಿ ದುಡಿಯುತ್ತಿರುವ ಅಸಂಖ್ಯಾತ ಯಕ್ಷಗಾನ ಕಲಾವಿದರು ವೃತ್ತಿಯಿಂದ ನಿವೃತ್ತರಾದ ಬಳಿಕ ಅವರ ಬದುಕಿಗೆ ಏನಿದೆಯೆಂಬುದನ್ನು ಗಂಭೀರವಾಗಿ ಚಿಂತಿಸಬೇಕಿದೆ. ಯಕ್ಷಗಾನ ಕಲಾರಂಗದಲ್ಲಿ ಅಪ್ರತಿಮ ಸಾಧನೆ ಮೆರೆದು ವೈಶಿಷ್ಟ್ಯಪೂರ್ಣ ಕೊಡುಗೆ ನೀಡಿದ ಕಲಾವಿದರಿಗೆ ರಂಗದಿಂದ ಹೊರತುಪಡಿಸಿ ಅಗತ್ಯ ಸ್ಪಂಧನೆಗಳು ಲಭಿಸದಿರುವುದು ದುರಂತ ಎಂದು ಖ್ಯಾತ ಭಾಗವತ,ಯಕ್ಷಧ್ರುವ ಪಟ್ಲ ಪೌಂಡೇಶನ್ ಅಧ್ಯಕ್ಷ ಪಟ್ಲ ಸತೀಶ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು. ಕುಂಬಳೆ ಸಮೀಪದ ಶೇಡಿಕಾವು ಪಾರ್ತಿಸುಬ್ಬ ಯಕ್ಷಗಾನ ಸಂಘದ 20ನೇ ವಾರ್ಷಿಕೋತ್ಸವದ ಅಂಗವಾಗಿ ಭಾನುವಾರ ಅಪರಾಹ್ನ ಶೇಡಿಕಾವು ಪಾರ್ತಿಸುಬ್ಬ ಸಭಾ […]

ಏ.29-30: ನೀರೊಳಿಕೆ ಸೇವಾಶ್ರಮ ಪ್ರವೇಶೋತ್ಸವ

Monday, April 18th, 2016
Sri Matha

ಮಂಜೇಶ್ವರ: ವರ್ಕಾಡಿ ಗ್ರಾಮದ ದೇವಂದಪಡ್ಪು ನೀರೊಳಿಕೆ ಶ್ರೀ ಮಾತಾ ಸೇವಾಶ್ರಮ ಟ್ರಸ್ಟ್‌ನ ಪ್ರವೇಶೋತ್ಸವ ಸಮಾರಂಭವು ಏ.೨೯ ಮತ್ತು ೩೦ರಂದು ವಿವಿಧ ಕಾರ್ಯಕ್ರಮಗೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ. ಶ್ರೀ ಮಾತಾ ಸೇವಾಶ್ರಮ ಟ್ರಸ್ಟ್ ಬಗ್ಗೆ…. ಕೇರಳ ರಾಜ್ಯದ ಉತ್ತರ ಭಾಗದ ತಲಪ್ಪಾಡಿ ಗಡಿ ಪ್ರದೇಶದ ಸನಿಹದಲ್ಲಿ ಇತಿಹಾಸ ಪ್ರಸಿದ್ಧ ದೇವಂದಪಡ್ಪು ಎಂಬಲ್ಲಿ ಪುರಾತನ ದೇವಿ ಕ್ಷೇತ್ರವೊಂದು ಇತ್ತೆಂದು ಹಾಗೂ ಮಧ್ವಾಚಾರ್ಯರು ತೀರ್ಥಯಾತ್ರೆ ಮಾಡುತ್ತಾ ಈ ದೇವಾಲಯದ ಪರಿಸರದಲ್ಲಿ ಧ್ಯಾನಾಸಕ್ತರಾದರೆಂದು ಅಲ್ಲದೆ ಮುಂದೆ ಇಲ್ಲಿ ಶ್ರೀ ಮಹಾವಿಷ್ಣು ದೇವಸ್ಥಾನವನ್ನು ನಿರ್ಮಿಸಲಾಯಿತೆಂದು ಐತಿಹ್ಯವಿದೆ. […]