ದುಬೈ : ಹರ್ಷಾದ್ ವರ್ಕಾಡಿಗೆ ಸಮ್ಮಾನ

Wednesday, April 6th, 2016
Harshad Vorkady

ಮಂಜೇಶ್ವರ: ದುಬೈ ನಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಕಾಸರಗೋಡು ಜಿಲ್ಲಾ ಪಂಚಾಯತು ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿಯವರನ್ನು ಸಮ್ಮಾನಿಸಲಾಯಿತು. ಮಲಬಾರ್ ಕಲಾ ಸಾಂಸ್ಕ್ರತಿಕ ಕಲಾ ವೇದಿಕೆ ಹಾಗೂ ದುಬೈ ಕನ್ನಡಿಗರ ಜಂಟಿ ಆಶ್ರಯದಲ್ಲಿ ದುಬ ಇಂಡಿಯನ್ ಸ್ಕೂಲ್ ಆಡಿಟೋರಿಯಂನಲ್ಲಿ ಜರುಗಿದ ಸಮಾರಂಭದಲ್ಲಿ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹಾಗೂ ಅನಿವಾಸಿ ಉದ್ಯಮಿ ಪದ್ಮಶ್ರಿ ಡಾ.ಬಿ.ಆರ್.ಶೆಟ್ಟಿ ಹರ್ಷಾದ್ ವರ್ಕಾಡಿಯವರನ್ನು ಶಾಲು ಹೊದೆಸಿ ಸ್ಮರಣಿಕೆ ನೀಡಿ ಸಮ್ಮಾನಿಸಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಸಚಿವರುಗಳಾದ ಬಿ.ರಮಾನಾಥ ರೈ, ಯು.ಟಿ.ಖಾದರ್, ಯುಎಇ ಎಕ್ಸ್‌ಚೇಂಜ್ ಅಧ್ಯಕ್ಷ […]

ತಂತ್ರಜ್ಞಾನಗಳ ಉಪಯೋಗವನ್ನು ಗರಿಷ್ಠಗಳಸಿ ಕೊಳ್ಳುವಲ್ಲಿ ಹಿಂದುಳಿಯಬಾರದು : ಡಾ.ಕೆ.ವಿ.ಆರ್.ಠಾಗೂರ್

Wednesday, April 6th, 2016
Karnataka Janapada Parishad

ಕುಂಬಳೆ: ಶ್ರೇಷ್ಠ, ಶ್ರೀಮಂತ ಸಾಂಸ್ಕೃತಿಕ ಹಿನ್ನೆಲೆಗಳಿರುವ ಭಾರತೀಯ ಪ್ರಾಚೀನ ಕಲೆಗಳ ದಾಖಲಾತಿಯಲ್ಲಿ ನಾವು ಹಿಂದುಳಿದಿದ್ದೇವೆ. ಇತಿಹಾಸದ ನನಹುಗಳಿಲ್ಲದೆ ಮುಂದಿನ ತಲೆಮಾರಿಗೆ ಕೃತಿ,ಸಾಧನೆಗಳ ಅರಿವು ಮೂಡಿಸಲು ದಾಖಲೀಕರಣಗಳ ಪ್ರಯತ್ನಗಳು ಇನ್ನಷ್ಟು ಆಗಬೇಕಿದೆಯೆಂದು ಕಾರ್ನಾಟಕ ರಾಜ್ಯ ನಿವೃತ್ತ ಪೋಲೀಸ್ ಮಹಾ ನಿರ್ದೇಶಕ ಡಾ.ಕೆ.ವಿ.ಆರ್.ಠಾಗೂರ್ ಅಭಿಪ್ರಾಯ ವ್ಯಕ್ತಪಡಿಸಿದರು. ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕ ಕೈಗೆತ್ತಿಕೊಂಡಿರುವ ಜಾನಪದ ಕಲೆ, ಕಲಾವಿದ ಹಾಗೂ ಪ್ರಾಚೀನ ಆಚರಣೆಗಳ ಪುಸ್ತಕ ಹಾಗೂ ಅಂತರ್ಜಾಲ ದಾಖಲೀಕರಣದ ಪೂರ್ವಭಾವೀ ಪರಿಚಯ ಪತ್ರವನ್ನು ಘಟಕದ ಕಾರ್ಯದರ್ಶಿ ಕೇಳು ಮಾಸ್ಟರ್ […]

‘ನಮ್ಮ ಕುಡ್ಲ’ ಕರಾವಳಿಯಾದ್ಯಂತ ಎಪ್ರಿಲ್ 8 ರ ಚಾಂದ್ರಮಾನ ಯುಗಾದಿಯಂದು ಬಿಡುಗಡೆ

Wednesday, April 6th, 2016
Namma Kudla

ಮಂಗಳೂರು : ತುಳು ಚಲನಚಿತ್ರ ‘ನಮ್ಮ ಕುಡ್ಲ’ ಕರಾವಳಿಯಾದ್ಯಂತ ಎಪ್ರಿಲ್ 8ರ ಚಾಂದ್ರಮಾನ ಯುಗಾದಿಯ ಶುಭದಿನದಂದು ಬಿಡುಗಡೆಗೊಳ್ಳಲಿದೆ. ಚಿತ್ರದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ನಾಯಕ ನಟ ಹಾಗೂ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದ ಪ್ರಕಾಶ್ ಶೆಟ್ಟಿ ಧರ್ಮನಗರ ಮಾತನಾಡಿ ಈ ಚಿತ್ರವು “ವಾರ್ ಫಾರ್ ಪೀಸ್”ಎಂಬ ಧ್ಯೇಯದಿಂದ ಸಾಮಾಜಿಕ ಕಳಕಳಿಯ ಚಿತ್ರವಾಗಿ ಮೂಡಿಬಂದಿದೆ. ವಿಭಿನ್ನ ಶೈಲಿಯ ಕಥಾ ಹಂದರವನ್ನು ಒಳಗೊಂಡ ಈ ಚಿತ್ರವು ಪ್ರೇಕ್ಷಕರ ಮನಸೂರೆಗೊಂಡು ದಾಖಲೆ ನಿರ್ಮಿಸುವತ್ತ ಮುಂದಡಿಯಿಡಲಿದೆ. ಮನೆಮಂದಿಯೆಲ್ಲಾ ಮನರಂಜಿಸಬಹುದಾದ ಈ ಚಿತ್ರವು ವಿಶೇಷ […]

ಕುಂಬಳೆ ರೈಲ್ವೇ ಫ್ಲಾಟ್ ಫಾರಂ ನಲ್ಲಿ ಕಾಂಕ್ರಿಟ್ ಕುಸಿದು ಕಲ್ಲುಗಳು ಬೀಳುತ್ತಿವೆ: ಪ್ರಯಾಣಿಕರು ಆತಂಕದಲ್ಲಿ

Sunday, April 3rd, 2016
platform

ಕುಂಬಳೆ: ಕುಂಬಳೆ ರೈಲ್ವೇ ನಿಲ್ದಾಣದ ಫ್ಲಾಟ್ ಫಾರಂ ನಲ್ಲಿ ಕಾಂಕ್ರೀಟ್ ಕುಸಿದು ಸಿಮೆಂಟ್ ಗಳು ಎದ್ದು ದೊಡ್ಡ ದೊಡ್ಡ ಕಲ್ಲುಗಳು ಬೀಳಲು ಆರಂಭಿಸಿರುವುದು ಇಲ್ಲಿಯ ಪ್ರಯಾಣಿಕರಲ್ಲಿ ಆತಂಕ ಹಾಗೂ ಭಯವನ್ನು ಸೃಷ್ಟಿಸಿದೆ. 250 ಮೀಟರ್ ಉದ್ದವಿರುವ ಫ್ಲಾಟ್ ಫರಂ ನ ಮೂರು ಕಡೆಗಳಲ್ಲಿ ಕಾಂಕ್ರೀಟ್ ಕುಸಿದು ದೊಡ್ದ ಗಾತ್ರದ ಕಲ್ಲುಗಳು ಬೀಳಲಾರಂಭಿಸಿರುವುದರಿಂದ ಪ್ರಯಾಣಿಕರು ಭಯದಿಂದ ಫ್ಲಾಟ್ ಫಾರಮ್ ನ್ನು ಪ್ರವೇಶಿಸುವಂತಾಗಿದೆ. ಕಳೆದ ಕೆಲವು ತಿಂಗಳುಗಳಿಂದ ಇಂತಹ ಭೀತಿಯ ವಾತಾವರಣವಿದ್ದರೂ ಅಧಿಕೃತರು ಯಾರೂ ಇತ್ತ ಕಡೆ ಗಮನ ಹರಿಸಿಲ್ಲವೆಂಬುದಾಗಿ […]

ದೃಢ ಭಕ್ತಿಯಿಂದ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ- ಕಾಣಿಯೂರು ಶ್ರೀ

Sunday, April 3rd, 2016
Kaniyooru seer

ಮುಳ್ಳೇರಿಯ: ದೃಢ ಭಕ್ತಿಯಿಂದ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ. ಭಗವಂತ ಸರ್ವವ್ಯಾಪಿ. ದೇವರ ಬಗ್ಗೆ ನಂಬಿಕೆ, ಆತ್ಮ ವಿಶ್ವಾಸ, ಭಕ್ತಿ-ಶ್ರದ್ಧೆಯಿಂದಾಗಿ ಭಗವಂತ ನಮಗೆ ಒಲಿಯುತ್ತಾನೆ. ನಮ್ಮಲ್ಲಿರುವ ದೇವರ ಇರುವಿಕೆಯ ಬಗೆಗಿನ ಗೊಂದಲದಿಂದಾಗಿ ನಮಗೆ ಪರಿಪೂರ್ಣ ಫಲ ಲಭಿಸಲಾರದು ಎಂದು ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದಂಗಳವರು ಹೇಳಿದರು. ಅವರು ಕುಂಟಾರು ಶ್ರೀ ಮಹಾವಿಷ್ಣುಮೂರ್ತಿ ದೇವಾಲಯದ ಜಾತ್ರೋತ್ಸವ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡುತ್ತಿದ್ದರು. ಶ್ರೀಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷ ಪದ್ಮನಾಭ ಭಟ್ ಅಧ್ಯಕ್ಷತೆ […]

ಹೊಸತನಗಳ ಹೊಸ ತುಳು ಚಿತ್ರ ‘ರಂಬಾರೂಟಿ’ ಏಪ್ರಿಲ್ 1 ರಂದು ಬಿಡುಗಡೆ

Thursday, March 31st, 2016
Rambarooti

ಮಂಗಳೂರು : ಹೊಸ ತಂತ್ರಜ್ಞಾನದೊಂದಿಗೆ ಹೊಸ ಯುವ ನಟರನ್ನು ಹಾಕಿ ನಿರ್ದೇಶಿಸಿದ ರಂಬಾರೂಟಿ ಚಿತ್ರ ಚಿತ್ರಪ್ರೇಮಿಗಳಿಗೆ ಮನರಂಜನೆ ನೀಡಲು ಸಿದ್ದಗೊಂಡಿದೆ ಎಂದು ಯುವ ನಿರ್ದೇಶಕ ಪ್ರಜ್ವಲ್ ಕುಮಾರ್ ಅತ್ತಾವರ ನಗರದಲ್ಲಿ ಚಿತ್ರದ ಬಿಡುಗಡೆ ಕುರಿತು ನಡೆದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು. ರಂಬಾರೂಟಿ ಚಿತ್ರ ಒಪೇರಾ ಡ್ರೀಮ್ ಮೂವೀಸ್ ಲಾಂಛನದಲ್ಲಿ ಪ್ರಕಾಶ್ ಕಾಬೆಟ್ಟು ಹಾಗೂ ಶ್ರೀನಿವಾಸ್ ಉಜಿರೆ ನಿರ್ಮಾಣದಲ್ಲಿ ಮೂಡಿಬಂದಿದೆ. ಮಂಗಳೂರು ನಗರ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಒಟ್ಟು 13 ಚಿತ್ರ ಮಂದಿರಗಳಲ್ಲಿ ಚಿತ್ರ ಎಪ್ರಿಲ್ 1 […]

ವಾಹನ ಡಿಕ್ಕಿ ಹೊಡೆದು ಆಸ್ಪತ್ರೆ ಸೇರಿದ ಮಹಿಳೆ ಮೃತ್ಯು

Tuesday, March 22nd, 2016
Mahile

ಬಂಟ್ವಾಳ; ಪಾಣೆಮಂಗಳೂರು ಗ್ರಾಮದ ಬೋಳಂಗಡಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನವೊಂದು ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ಅಪರಿಚಿತ ಮಹಿಳೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕಳೆದ ಮಾ.14 ರಂದು ಅಪಘಾತ ನಡೆದಿದ್ದು, ಗಾಯಗೊಂಡು ರಸ್ತೆ ಬದಿಯಲ್ಲಿ ಬಿದ್ದಿದ್ದ ಮಹಿಳೆಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿ, ಬಳಿಕ ಮಂಗಳೂರು ವೆನ್ ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮೃತಪಟ್ಟಿದ್ದಾರೆ. ಮೃತದೇಹದ ಶವಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು ಮಂಗಳೂರಿನ ಶವಾಗಾರದಲ್ಲಿರಿಸಲಾಗಿದೆ. ಮೃತ ಮಹಿಳೆಯ ವಾರೀಸುದಾರರಿದ್ದಲ್ಲಿ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆ(08255-281111)ಯನ್ನು ಸಂಪರ್ಕಿಸುವಂತೆ ಸಂಚಾರಿ […]

ಸಾಂಕ್ರಾಮಿಕ ರೋಗಗಳ ಜಾಗೃತಿ ಬೀದಿ ನಾಟಕ

Tuesday, March 22nd, 2016
street play

ಕುಂಬಳೆ: ಮಲೇರಿಯಾ,ಡೆಂಜಿಜ್ವರ,ಆನೆಕಾಲು ರೋಗ,ಇಲಿಜ್ವರ,ಹಳದಿ ಕಾಮಾಲೆ,ಅತಿಸಾರ ಮೊದಲಾದ ಸಾಂಕ್ರಾಮಿಕ ರೋಗಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ದೃಷ್ಟಿಯಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯ ನೇತೃತ್ವದಲ್ಲಿ ಆಯೋಜಿಸಲಾಗಿರುವ ಆರೋಗ್ಯ ಸಂದೇಶ ಯಾತ್ರೆ ಬೀದಿ ನಾಟಕ ಪ್ರದರ್ಶನ ಸೋಮವಾರ ಕುಂಬಳೆ ಪೇಟೆಯಲ್ಲಿ ಪ್ರದರ್ಶನಗೊಂಡಿತು. ಪ್ರತ್ಯೇಕವಾಗಿ ರೂಪೀಕರಿಸಿದ ಸರಳ ವೇದಿಕೆಯಲ್ಲಿ ಜಾಗೃತಿ ಬೀದಿ ನಾಟಕ ಯಶಸ್ವಿಯಾಗಿ ಪ್ರದರ್ಶಿಸಲ್ಪಟ್ಟಿತು.ವಿಶೇಷವೆಂಬಂತೆ ಆರೋಗ್ಯ ಇಲಾಖೆಯ ನೌಕರರೇ ಬರೆದು ನಿರ್ದೇಶಿಸಿ ಅಭಿನಯಿಸಿದ ಬೀದಿ ನಾಟಕವನ್ನು ನೂರಾರು ನಾಗರಿಕರು ಸುತ್ತ ನೆರೆದು ವೀಕ್ಷಿಸಿದರು.ಸುಂದರನ್ ತೊಳ್ಳೇರಿ ಬರೆದಿರುವ ನಾಟಕವನ್ನು ಪ್ರಕಾಶ್ ಚಂದೇರಾ ನಿರ್ದೇಶಿಸಿದ್ದು,ಕೃಷ್ಣಕುಮಾರ್ […]

ಎಲ್ಲಾ ಧರ್ಮಗಳ ಸಾರ ಒಂದೇ-ಗಣೇಶ್ ಉಳ್ಳೋಡಿ

Tuesday, March 22nd, 2016
Janapadasiri

ಕುಂಬಳೆ: ವಿವಿಧ ಕಾರಣಗಳಿಂದ ನಮ್ಮ ನೆಲವನ್ನು ಬಿಟ್ಟು ಬೇರೆಡೆ ವಾಸಿಸುತ್ತಿದ್ದರೂ ಮೂಲವನ್ನು ಮರೆಯಬಾರದು. ವೈವಿಧ್ಯಮಯ ಜೀವನ ಶೈಲಿ,ಸಂಸ್ಕೃತಿಗಳು ಪ್ರಾಚೀನ ಕಾಲದಿಂದಲೇ ಒಗ್ಗಟ್ಟಾಗಿ ಬದುಕುತ್ತಿರುವ ಜಗತ್ತಿನ ಏಕೈಕ ರಾಷ್ಟ್ರವಾದ ನಮ್ಮಲ್ಲಿ ತಲಾಂತರದಿಂದಲೂ ಸಾಂಸ್ಕೃತಿಕ ಸಮಾನತೆಗಳು ಒಗ್ಗಟ್ಟಾಗಿ ನಿಲ್ಲಿಸಿವೆ.ಇದರ ಹಿಂದೆ ಎಲ್ಲಾ ಧರ್ಮಗಳ ಸಾರ ಒಂದೆನ್ನುವುದು ವೇದ್ಯವಾಗುತ್ತದೆಯೆಂದು ಬದಿಯಡ್ಕ ಸಮೀಪದ ಮಾನ್ಯ ಕೊರಗು ತನಿಯ ಸನ್ನಿಧಿಯ ಧರ್ಮದರ್ಶಿ ಗಣೇಶ ಉಳ್ಳೋಡಿ ಅಭಿಪ್ರಾಯ ವ್ಯಕ್ತಪಡಿಸಿದರು. ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ಮತ್ತು ಕೇರಳ ಕಾಸರಗೋಡು ಘಟಕ ಮತ್ತು ಮುಲುಂಡ್ ಫ್ರೆಂಡ್ಸ್ […]

ಮತ್ತೆ ಆರ್ಭಟಿಸಿದ ಗೂಂಡಾಗಳು-ಓರ್ವನಿಗೆ ಇರಿತ

Saturday, March 19th, 2016
Aspak

ಉಪ್ಪಳ: ಉಪ್ಪಳ ಪರಿಸರದಲ್ಲಿ ಮತ್ತೆ ಗೂಂಡಾ ತಂಡಗಳು ಆರ್ಭಟಿಸತೊಡಗಿದ್ದು,ಕಳೆದೊಂದು ತಿಂಗಳಿಂದ ತೆರೆಮರೆಯಲ್ಲಿದ್ದ ತಂಡಗಳು ಇದೀಗ ಮತ್ತೆ ಕ್ರೀಯಾಶೀಲವಾಗಿ ಆಕ್ರಮಣಕ್ಕೆ ತೊಡಗಿದ್ದು, ಶುಕ್ರವಾರ ರಾತ್ರೆ ಓರ್ವನನ್ನು ಆಕ್ರಮಿಸಿದೆ. ಶುಕ್ರವಾರ ರಾತ್ರಿ 9.30 ರ ಸುಮಾರಿಗೆ ಉಪ್ಪಳ ಕೈಕಂಬದಲ್ಲಿ ಕೋಡಿಬೈಲು ಆಶಿತ್ ಮಂಝಿಲ್ ನ ಸೋಗಲ್ ಮೊಹಮ್ಮದ್ ರ ಪುತ್ರ ಪೈಂಟಿಂಗ್ ಕಾರ್ಮಿಕ ಮೊಹಮ್ಮದ್ ಅಶ್ಫಾಕ್(34)ಎಂಬವರಿಗೆ ಇರಿದು ಗಾಯಗೊಳಿಸಿದೆ.ಗಂಭೀರ ಗಾಯಗೊಂಡ ಇವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಶ್ಪಾಕ್ ಕೈಕಂಬದ ರಂಜಿತ್ ಟಾಕೀಸಿನ ಬಳಿ ನಡೆದು ಸಾಗುತ್ತಿದ್ದ ವೇಳೆ ರಿಟ್ಸ್ ಕಾರಿನಲ್ಲಿ […]