ಇಮೇಜ್ ಟ್ರಸ್ಟ್ ಮಸೀದಿಗೆ ಉಚ್ಛನ್ಯಾಯಾಲಯ ತಡೆಯಾಜ್ಞೆ

Wednesday, March 9th, 2016
Image Masjid

ಬಂಟ್ವಾಳ : ರಾಷ್ಟ್ರೀಯ ಹೆದ್ದಾರಿ ಬಿ.ಸಿ.ರೋಡಿನ ಮುಖ್ಯ ವೃತ್ತ ಬಳಿ ನಿರ್ಮಾಣ ಹಂತದಲ್ಲಿರುವ ಮೆ! ಇಮೇಜ್ ಟ್ರಸ್ಟ್ ಎಂಬ ಹೆಸರಿನ ಮಸೀದಿಗೆ ರಾಜ್ಯ ಉಚ್ಛನ್ಯಾಯಾಲಯ ತಡೆಯಾಜ್ಞೆ ನೀಡಿ ಆದೇಶಿಸಿದೆ. ಇಲ್ಲಿ ಮಸೀದಿ ನಿರ್ಮಿಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಹಿಂದೂ ಜಾಗರಣ ವೇದಿಕೆ ಬಂಟ್ವಾಳ ತಾಲೂಕು ಘಟಕ ದ.ಕ.ಜಿಲ್ಲಾಧಿಕಾರಿ ಅವರ ನ್ಯಾಯಾಲಯದಲ್ಲಿ ದಾವೆ ಹೂಡಿತ್ತು. ಆದರೆ ಜಿಲ್ಲಾಧಿಕಾರಿಯವರ ನ್ಯಾಯಾಲಯ ಇದಕ್ಕೆ ತಡೆಯಾಜ್ಞ್ಲೆ. ಬಳಿಕ ಇವರ ಆದೇಶವನ್ನು ರಾಜ್ಯ ಉಚ್ಛನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು. ಈ ಸಂದರ್ಭದಲ್ಲಿ ರಾಜ್ಯ ಉಚ್ಛನ್ಯಾಯಾಲಯ […]

ಮೈಮೇಲೆ ವಾಹನ ಹರಿದು ದಂಪತಿಗಳು ಸಾವು

Wednesday, March 9th, 2016
Manjeshwara accident

ಮಂಜೇಶ್ವರ: ಸಂಚರಿಸುತ್ತಿದ್ದ ಸ್ಕೂಟರಿಗೆ ಕಾರು ಡಿಕ್ಕಿಹೊಡೆದು ಹೊರಗೆಸೆಯಲ್ಪಟ್ಟ ದಂಪತಿಗಳ ಮೇಲೆ ಬೇರೊಂದು ವಾಹನ ಹರಿದು ಈರ್ವರೂ ಮೃತಪಟ್ಟ ದಾರುಣ ಘಟನೆ ಮಂಗಳವಾರ ಸಂಜೆ ವಾಮಂಜೂರು ಚೆಕ್‌ಪೋಸ್ಟ್ ಸನಿಹದ ಪೆಟ್ರೋಲ್ ಪಂಪ್ ಬಳಿ ನಡೆದಿದೆ. ಮಂಜೇಶ್ವರದಿಂದ ಉಪ್ಪಳದತ್ತಬರುತ್ತಿದ್ದ ಆಕ್ಟಿವಾ ಸ್ಕೂಟರ್ ಗೆ ಉಪ್ಪಳ ಕಡೆಯಿಂದ ಮಂಗಳೂರಿನತ್ತ ಸಾಗುತ್ತಿದ್ದ ಲಾರಿಯೊಂದು ಬೇರೊಂದು ವಾಹನವನ್ನು ಹಿಂದಿಕ್ಕಿ ಹೋಗುವ ಭರದಲ್ಲಿ ಡಿಕ್ಕಿಹೊಡೆದಿದ್ದು,ಈ ವೇಳೆ ಸ್ಕೂಟರ್ ನಲ್ಲಿದ್ದ ಪಾವೂರು ಸೂಫಿಗುರಿ ನಿವಾಸಿ ಮೊಯ್ದೀನ್ ಕುಂಞಿಯವರ ಪುತ್ರ ಸಾಕೀರ್(35) ಹಾಗೂ ಅವರ ಪತ್ನಿ ಹಸೀನಾ(25)ರಸ್ತೆಗೆಸೆಯಲ್ಪಟ್ಟರು.ಈ ವೇಳೆ […]

ಕಾಸರಗೋಡು: ಎಸ್.ಎಸ್.ಎಲ್.ಸಿ ಪರೀಕ್ಷೆ ಬುಧವಾರ ಆರಂಭ

Tuesday, March 8th, 2016
kasagod SSLC

ಕಾಸರಗೋಡು: ರಾಜ್ಯದಲ್ಲಿ ಹತ್ತನೇ ತರಗತಿಯ ಪರೀಕ್ಷೆ ಬುಧವಾರ (ಇಂದು) ಆರಂಭಗೊಳ್ಳುತ್ತಿದೆ. ರಾಜ್ಯದ 4,76,857 ಮಂದಿ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ತೆರಳಿ ಭವಿಷ್ಯ ನಿರ್ಧರಿಸುವರು. ಪರೀಕ್ಷೆಗೆ 2903 ಪರೀಕ್ಷಾ ಕೇಂದ್ರಗಳನ್ನು ಸಿದ್ದಗೊಳಿಸಲಾಗಿದೆ. ಮಲೆಯಾಳ ವಿಭಾಗದಲ್ಲಿ 3,20,854 ವಿದ್ಯಾರ್ಥಿಗಳು,ಕನ್ನಡ ವಿಭಾಗದಲ್ಲಿ 3135 ಮಂದಿ ವಿದ್ಯಾರ್ಥಿಗಳು,ತಮಿಳಿನಲ್ಲಿ 2163 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಮೌಲ್ಯ ಮಾಪನ ಏಪ್ರಿಲ್ 1 ರಿಂದ 12ರ ವರೆಗೆ ನಡೆಯಲಿದೆ.

ಎಡನೀರಿನಲ್ಲಿ ಘರ್ಷಣೆ : ನಾಲ್ವರು ಬಿಜೆಪಿ ಕಾರ್ಯಕರ್ತರು ಆಸ್ಪತ್ರೆಗೆ

Tuesday, March 8th, 2016
BJP Clash

ಕಾಸರಗೋಡು: ಎಡನೀರು ಪೇಟೆಯಲ್ಲಿ ಮಾ.7 ರಂದು ಸಂಜೆ ಘರ್ಷಣೆ ನಡೆದಿದ್ದು, ಬಿಜೆಪಿ ಕಾರ್ಯಕರ್ತರಾದ ಎಡನೀರು ಕೆಮ್ಮಂಗಯದ ಪುರುಷೋತ್ತಮ ಅವರ ಪುತ್ರ ಪ್ರೇಮನಾಥ್(31), ಸಹೋದರ ದೀಪಕ್(28), ಸ್ನೇಹಿತರಾದ ಪುಷ್ಪ ಕುಮಾರ್(36) ಮತ್ತು ಶಿವಪ್ರಸಾದ್(28) ಅವರು ಗಾಯಗೊಂಡಿದ್ದಾರೆ. ಈ ಪೈಕಿ ಶಿವಪ್ರಸಾದ್ ಅವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಮೂವರನ್ನು ಜನರಲ್ ಆಸ್ಪತ್ರೆಗೆ ಸೇರಿಸಲಾಗಿದೆ. ಎಡನೀರು ಪೇಟೆಯಲ್ಲಿ 15 ಮಂದಿ ಸಿಪಿಎಂ ಕಾರ್ಯಕರ್ತರು ಮಾರಕಾಯುಧಗಳಿಂದ ಹಲ್ಲೆ ಮಾಡಿದ್ದಾಗಿ ಗಾಯಾಳುಗಳು ಆರೋಪಿಸಿದ್ದಾರೆ. ಭಾನುವಾರ ಸಂಜೆ ಪ್ರೇಮನಾಥ್ ಗೆ ತಂಡವೊಂದು ಆಕ್ರಮಿಸಿತ್ತು.ಈ ಬಗ್ಗೆ […]

ಅಜ್ಞಾತ ರೋಗ ಬಾಧಿಸಿ ಕೊನೆಯುಸಿರೆಳೆಯುತ್ತಿರುವ ಆಡುಗಳು

Tuesday, March 8th, 2016
goat died

ಕುಂಬಳೆ: ಕುಂಬಳೆ ಸಹಿತ ಸುತ್ತುಮುತ್ತಲಿನ ಹಲವೆಡೆಗಳಲ್ಲಿ ಆಡುಗಳಿಗೆ ಬಾಧಿಸುತ್ತಿರುವ ಆತಂಕಾರಿ ರೋಗದಿಂದ ನೂರಾರು ಆಡುಗಳು ಈಗಾಗಲೇ ಮೃತಪಟ್ಟಿದ್ದು, ಆಡು ಸಾಕಾಣಿಕೆದಾರರನ್ನು ತೀವ್ರ ಭೀತಗೊಳಿಸಿದೆ. ಆರಿಕ್ಕಾಡಿ ಬಳಿಯ ಬನ್ನಂಕುಳದ ಮೊಯ್ದೀನ್ ಕುಂಞಿ ಎಂಬವರ ಆಡುಸಾಕಾಣೆ ಪಾರ್ಮ್‌ನ55 ಆಡುಗಳ ಪೈಕಿ 27 ಆಡುಗಳು ರೋಗ ತಗಲಿ ಮೃತಪಟ್ಟಿವೆ.ಜೊತೆಗೆ ಇತರ 15 ಆಡುಗಳಿಗೂ ರೋಗ ತಗಲಿದೆ.ಇದೇ ಪರಿಸರದ ಪಿ.ಕೆ.ನಗರ್ ತಂಙಳ್ ಮನೆಯ ಏಳು ಆಡುಗಳು,ಫಾತಿಮಾ ಎಂಬವರ 4 ಆಡುಗಳು,ಇಬ್ರಾಹಿಂ ಎಂಬವರ 10 ಆಡುಗಳು,ಕಂಚಿಕಟ್ಟೆ ಹನೀಫಾ ಎಂಬವರ 7, ಪೂಕಟ್ಟೆ ಇಬ್ರಾಹಿಂ ಎಂಬವರ […]

ನಿರ್ಗಮನ ಪೀಠಾಧಿಪತಿ ರಾಜಯೋಗಿ ಶ್ರೀ ಸಂಧ್ಯಾನಾಥ್‌ಜೀಯವರಿಂದ ಸಾಂಕೇತಿಕ ಜಲ ಸಮಾಧಿ

Tuesday, March 8th, 2016
ನಿರ್ಗಮನ ಪೀಠಾಧಿಪತಿ ರಾಜಯೋಗಿ ಶ್ರೀ ಸಂಧ್ಯಾನಾಥ್‌ಜೀಯವರಿಂದ ಸಾಂಕೇತಿಕ ಜಲ ಸಮಾಧಿ

ಮಂಗಳೂರು : ಕದಳೀ ಶ್ರೀ ಯೋಗೇಶ್ವರ (ಜೋಗಿ) ಮಠದ ನೂತನ ರಾಜರಾಗಿ ಶ್ರೀ ಯೋಗಿ ನಿರ್ಮಲ್‌ನಾಥ್‌ಜೀಯವರು ಇಂದು ಪಟ್ಟಾಭಿಷೇಕಗೊಂಡ ಬಳಿಕ ನಿರ್ಗಮನ ಪೀಠಾಧಿಪತಿ ರಾಜಯೋಗಿ ಶ್ರೀ ಸಂಧ್ಯಾನಾಥ್‌ಜೀಯವರು ಸಾಂಕೇತಿಕ ಜಲ ಸಮಾಧಿಯಾಗುವ ಪ್ರಕ್ರಿಯೆ ಬೊಕ್ಕಪಟ್ಣ ಬೋಳೂರಿನ ತಣ್ಣೀರುಬಾವಿ ಸಮುದ್ರದಲ್ಲಿ ನಡೆಯಿತು. ಈ ವೇಳೆ ನಿರ್ಗಮನ ಪೀಠಾಧಿಪತಿಯವರು ತಾನು ತಂದ ಪಾತ್ರ ದೇವತೆಯನ್ನು ಸಮುದ್ರದಲ್ಲಿ ವಿಸರ್ಜಿಸಿ ಪೂಜೆ ಸಲ್ಲಿಸಿ, ಮೂರು ಬಾರಿ ಸಮುದ್ರದಲ್ಲಿ ಮುಳುಗೆದ್ದು ಜಲ ಸಮಾಧಿ ಎಂಬ ಸಂಕೇತವನ್ನು ಆಚರಿಸಿದರು. ಸಂಧ್ಯಾನಾಥ್‌ಜೀಯವರೊಂದಿಗೆ ಅವರ ಅನುಯಾಯಿಗಳಿದ್ದರು. ನಂತರ ಕದಳೀ […]

ಕದಳೀ ಶ್ರೀ ಯೋಗೇಶ್ವರ (ಜೋಗಿ) ಮಠದ ನೂತನ ರಾಜರಾಗಿ ಯೋಗಿ ಶ್ರೀ ನಿರ್ಮಲ್‌ನಾಥ್‌ಜೀ ಪಟ್ಟಾಭಿಷಿಕ್ತ

Tuesday, March 8th, 2016
kadali kannada

ಮಂಗಳೂರು : ದಕ್ಷಿಣ ಭಾರತದ ನಾಥ ಪಂಥದ ಪ್ರಮುಖ ಕೇಂದ್ರವಾದ ಕದಳೀ ಶ್ರೀ ಯೋಗೇಶ್ವರ (ಜೋಗಿ) ಮಠದ ನೂತನ ರಾಜರಾಗಿ ಶ್ರೀ ಯೋಗಿ ನಿರ್ಮಲ್‌ನಾಥ್‌ಜೀಯವರು ಅಖಿಲ ಭಾರತ ವರ್ಷಿಯ ಅವಧೂತ್ ಬೇಖ್ ಬಾರಹ ಪಂಠ ಯೋಗಿ ಮಹಾಸಭಾದ ಮುಂದಾಳುಗಳು, ಜೋಗಿ ಸಮಾಜದ ಬಾಂಧವರು, ಭಕ್ತಾಭಿಮಾನಿಗಳ ಉಪಸ್ಥಿತಿಯಲ್ಲಿ ಪಟ್ಟಾಭಿಷಿಕ್ತರಾದರು. ಇದೇ ವೇಳೆ ವಿಟ್ಲ ಜೋಗಿ ಮಠದ ಅರಸುವಾಗಿ ಯೋಗಿ ಶ್ರೀ ಶ್ರದ್ಧಾನಾಥ್‌ಜೀಯವರು ಪಟ್ಟಾಭಿಷೇಕಗೊಂಡರು. ಪಾರಂಪರಿಕ ತಂತ್ರಿಗಳಾದ ಶ್ರೀ ವಿಠಲದಾಸ್‌ರವರ ನೇತೃತ್ವದಲ್ಲಿ ವೈದಿಕ ವಿಧಿ ವಿಧಾನಗಳು ನೆರವೇರಿ 9.25 ರ […]

ಬೇಕಲಕೋಟೆಯಲ್ಲಿ ‘ಹೊಂಬಣ್ಣ’ ಚಿತ್ರೀಕರಣ

Monday, March 7th, 2016
hombanna

ಕಾಸರಗೋಡು: ಬೇಕಲ ಕೋಟೆ ಎಂದಾಗ ನೆನಪಾಗುವುದು ಕನ್ನಡಿಗರ ಶೌರ್ಯದ ಕತೆಗಳು. ದೈವ, ದೇವರುಗಳ ನಾಡಾದ ಕಾಸರಗೋಡಿನಿಂದ ಸುಮಾರು 18 ಕಿ.ಮಿ. ದೂರದಲ್ಲಿ ಪ್ರಕೃತಿ ರಮಣೀಯವಾದ ಸುಂದರ ತಾಣ ಬೇಕಲ ಕೋಟೆ. ಕಳೆದ ಹಲವಾರು ವರ್ಷಗಳಿಂದ ನಿರಂತರವಾಗಿ ಹಲವು ಭಾಷೆಯ ಹಲವಾರು ಚಲನ ಚಿತ್ರಗಳು ಚಿತ್ರೀಕರಣಗೊಂಡಿದೆ. ಅವುಗಳಲ್ಲಿ ಕೆಲವು ಸೂಪರ್ ಹಿಟ್ ಆದವುಗಳು ಇವೆ. ಕಳೆದ ವಾರವಷ್ಟೇ ಮರಾಠಿ ಚಿತ್ರದ ಚಿತ್ರೀಕರಣ ನಡೆದಿದೆ. ಇದರ ಬೆನ್ನಿಗೆ ಕನ್ನಡ ಚಿತ್ರವೊಂದರ ಚಿತ್ರೀಕರಣ ನಡೆಯುತ್ತಿದೆ. ಪ್ರೊಡೆಕ್ಷನ್ ಮೆನೇಜರ್ ಉದಯ ಕುಮಾರ್ ಮನ್ನಿಪ್ಪಾಡಿ […]

ಧಾರ್ಮಿಕ ಸೌಹಾರ್ದತೆಯೇ ದೇಶದ ಸಂಪನ್ನತೆ : ಆಸ್ಕರ್ ಫೆರ್ನಾಂಡೀಸ್

Monday, March 7th, 2016
machampady Uroos

ಮಂಜೇಶ್ವರ: ಎಲ್ಲಾ ಧರ್ಮಗಳೂ ಜಗತ್ತಿಗೆ ಶಾಂತಿ ಸಹಬಾಳ್ವೆಯನ್ನು ಬೋಧಿಸಿವೆ. ಶಾಂತಿ ಸೌಹಾರ್ದತೆಯನ್ನು ಮೈಗೂಡಿಸಿಕೊಂಡರೆ ಬದುಕು ಪರಿಪೂರ್ಣವಾಗುತ್ತವೆ ಎಂದು ಮಾಜೀ ಕೇಂದ್ರ ಸಚಿವ, ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡೀಸ್ ಹೇಳಿದ್ದಾರೆ. ಅವರು ಇಲ್ಲಿನ ಮಚ್ಚಂಪಾಡಿ ಬಪ್ಪಂಕುಟ್ಟಿ ವಲಿಯುಲ್ಲಾಹೀ ಉರೂಸ್ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಭಾರತ ವಿಭಿನ್ನ ಸಂಸ್ಕ್ರತಿಯ ದೇಶವಾಗಿದ್ದು. ಇಲ್ಲಿ ಧಾರ್ಮಿಕ ಸೌಹಾರ್ದತೆ ಸಂಪನ್ನವಾಗಿದೆ,ಭಾರತದಷ್ಟು ವೈವಿಧ್ಯತೆಯಿರುವ ರಾಷ್ಟ್ರ ಜಗತ್ತಿನಲ್ಲಿ ಬೇರೊಂದಿಲ್ಲ ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಉರೂಸ್ ಸಮಿತಿಯ ಅಧ್ಯಕ್ಷ ಪಿ.ಎಚ್.ಅಬ್ದುಲ್ ಹಮೀದ್ ಅಧ್ಯಕ್ಷತೆ ವಹಿಸಿದ್ದರು. […]

ಕಾಸರಗೋಡು ವಲಯ ಬಂಟರ ಸಂಘ ನೂತನ ಅಧ್ಯಕ್ಷರಾಗಿ ಸುಬ್ಬಣ್ಣ ಆಳ್ವ ಆಯ್ಕೆ

Monday, March 7th, 2016
Subbanna Alva

ಕಾಸರಗೋಡು: ಕಾಸರಗೋಡು ವಲಯ ಬಂಟರ ಸಂಘದ ನೂತನ ಅಧ್ಯಕ್ಷರಾಗಿ ಸುಬ್ಬಣ್ಣ ಆಳ್ವ ಕುಚ್ಚಿಕ್ಕಾಡು ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ರಮೇಶ್ ಶೆಟ್ಟಿ ಕಾಳ್ಯಂಗಾಡು, ಕೋಶಾಧಿಕಾರಿಯಾಗಿ ಎಸ್.ಎನ್.ರಾಮ ಶೆಟ್ಟಿ ಮಾಸ್ತರ್ ಅವರನ್ನು ಆರಿಸಲಾಗಿದೆ. ವಲಯ ಸಂಘದ ಅಧ್ಯಕ್ಷರಾಗಿದ್ದ ನ್ಯಾಯವಾದಿ ಸದಾನಂದ ರೈ ಅವರು ಜಿಲ್ಲಾ ಸಂಘದ ಅಧ್ಯಕ್ಷರಾಗಿ ಆಯ್ಕೆಗೊಂಡ ಹಿನ್ನೆಲೆ ತೆರವಾದ ಕಾಸರಗೋಡು ವಲಯ ಬಂಟರ ಸಂಘದ ಅಧ್ಯಕ್ಷತೆಗೆ ಹಾಗೂ ಅದರೊಂದಿಗೆ ಇತರ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸದಾನಂದ ರೈ ಅಧ್ಯಕ್ಷತೆ ವಹಿಸಿದ ಸಭೆಯಲ್ಲಿ ಜಿಲ್ಲಾ ಸಂಘದ ಪ್ರತಿನಿಧಿಗಳು, ಪಂಚಾಯತ್ […]