ದಿನದ ಗರಿಷ್ಟ ಸಮಯವನ್ನು ಕ್ಷೇತ್ರದ ಸಮಸ್ಯೆಗೆ ಮೀಸಲಿರಿಸುವ ಮಹಮ್ಮದ್ ಮುಸ್ತಾಫ

Wednesday, February 17th, 2016
musthafa

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ 16 ನೇ ಕೊಳ್ನಾಡು ಜಿಲ್ಲಾ ಪಂಚಾಯತ್ ಕ್ಷೇತ್ರದಿಂದ ಭಾರತೀಯ ಜನತಾ ಪಾರ್ಟಿಯ ಸಮರ್ಥ ಅಭ್ಯರ್ಥಿಯಾಗಿ ಮಹಮ್ಮದ್ ಮುಸ್ತಾಫ ಇವರು ಸ್ಪರ್ಧಿಸುತ್ತಿದ್ದಾರೆ. ಸಾಧನೆಯ ಹಾದಿಯೆಡೆಗೆ ಸಾಧಿಸುವ ಛಲದೊಂದಿಗೆ ಗುರಿ ಮುಟ್ಟುವ ಹಾದಿ ಮಧ್ಯೆ ಕಠಿಣ ಸವಾಲನ್ನು ಮೆಟ್ಟಿನಿಂತು ವೃತ್ತಿ ಜೀವನದ ಜೊತೆಜೊತೆಗೆ ರಾಜಕೀಯ ಆಸಕ್ತಿಯಿಂದ ಅವಕಾಶವು ತನ್ನನ್ನು ಅರಸಿಕೊಂಡು ಬಂದಾಗ ಭಾರತೀಯ ಜನತಾ ಪಾರ್ಟಿಯ ತತ್ವ ಸಿದ್ಧಾಂತಕ್ಕೆ ಬದ್ಧನಾಗಿ 2000 ನೇ ಇಸವಿಯಲ್ಲಿ ಪಕ್ಷದ ಕಾರ್ಯಕರ್ತನಾಗಿ ರಾಜಕೀಯ ಪ್ರವೆಶ […]

ಯಶಸ್ವಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಎಂಎಸ್ ಮೊಹಮ್ಮದ್ ಮುಂದಿದೆ ಗೆಲುವು…

Wednesday, February 17th, 2016
MS mohammed

ವಿಟ್ಲ : ಪುಣಚ ಗ್ರಾಮದ ಮಣಿಲ ಎಂಬಲ್ಲಿ ಮಧ್ಯಮ ವರ್ಗದಲ್ಲಿ ಹುಟ್ಟಿದ ಎಂಎಸ್ ಮೊಹಮ್ಮದ್ ಅವರದ್ದು ಬಾಲ್ಯದಿಂದಲೂ ನಾಯಕತ್ವದ ಗುಣ. ರಾಷ್ಟ್ರೀಯ ಕಾಂಗ್ರೆಸ್ ನಲ್ಲಿ ವಿದ್ಯಾರ್ಥಿ ದೆಸೆಯಲ್ಲಿಯೇ ಗುರುತಿಸಿಕೊಂಡಿದ್ದ ಇವರಿಗೆ ಪಕ್ಷ ಕೂಡ ಯೋಗ್ಯ ಸ್ಥಾನಮಾನ ನೀಡಿ ಗೌರವಿಸಿದೆ. ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಬಿಎ ಪದವಿ ಮುಗಿಸಿರುವ ಎಂಎಸ್ ಮೊಹಮ್ಮದ್ ಅವರ ಸಕ್ರಿಯ ರಾಜಕೀಯ ನಡೆಗಳನ್ನು ಗುರುತಿಸಿದ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ಸಿನ ಕಾರ್ಯದರ್ಶಿಯನ್ನಾಗಿ ಮಾಡಿದರು. ಬಳಿಕ ಪಕ್ಷಕ್ಕೆ ಸಲ್ಲಿಸಿದ ಸೇವೆಯನ್ನು ಗುರುತಿಸಿದ ಹಿರಿಯ […]

ಜನಪರ ಕೆಲಸಕ್ಕೆ ಸದಾ ಸಿದ್ಧವಾಗಿರುವ ತುಂಗಪ್ಪ ಬಂಗೆರಾ

Wednesday, February 17th, 2016
Tungappa Bangera

ಬಂಟ್ವಾಳ : ಪಿಲಾತಬೆಟ್ಟು ಮಂಡಲ ಪಂಚಾಯತ್ ಸದಸ್ಯ ಪಂಚಾಯತ್ ಉಪಾಧ್ಯಕ್ಷ ಪಿಲಾತಬೆಟ್ಟು ಸೇವಾ ಸಹಕಾರಿ ಬ್ಯಾಂಕ್ ನಿರ್ದೇಶಕ ಜಿಲ್ಲಾ ತೋಟಗಾರಿಕಾ ಸಹಕಾರಿ ಸಂಘದ ನಿರ್ದೇಶಕ ಜಿಲ್ಲಾ ಪಂಚಾಯತ್ ಸದಸ್ಯ-ಉಪಾಧ್ಯಕ್ಷ ಕರ್ನಾಟಕ ರಾಜ್ಯ ಹಿಂದುಳಿದ ಆಯೋಗದ ಸದಸ್ಯ ಹೀಗೆ ಸಮಾಜದ ಹತ್ತಾರು ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಸಮಾಜ ಸೇವೆಗಾಗಿ ರಾಜ್ಯ ರಾಷ್ಟ್ರಮಟ್ಟದ ಪ್ರಶಸ್ತಿಗೆ ಭಾಜನರಾಗಿರುವ ಎಂ.ತುಂಗಪ್ಪ ಬಂಗೇರಾ ಅವರು ಈ ಬಾರಿಯ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಸಂಗಬೆಟ್ಟು ಕ್ಷೇತ್ರದ ಬಿಜೆಪಿ ಅಭ್ಯರ್ಥಿ. ನಾನು ಅಧಿಕಾರವಿದ್ದಾಗಲೂ ಇಲ್ಲದಾಗಲೂ ಸಮಾನವಾಗಿ ನನ್ನಿಂದ […]

ಛಲವಾದಿ ಹೋರಾಟಗಾರ ಸಿಪಿಐ(ಎಂ)ನ ಕೆ.ಯಾದವ ಶೆಟ್ಟಿ

Wednesday, February 17th, 2016
Yadava Shetty

ಮೂಡಬಿದಿರೆ : ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಗ್ರಾಮೀಣ ಅಬಿವೃದ್ಧಿ ಬಗ್ಗೆ ವಿಶೇಷವಾದ ಆಸಕ್ತಿ ಇರುವ ಸಿಪಿಐ(ಎಂ) ಪಕ್ಷದ ಕೆ.ಯಾದವ ಶೆಟ್ಟಿ ಪುತ್ತಿಗೆ ಜಿಲ್ಲಾ ಪಂಚಾಯತ್ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. 21 ವರ್ಷ ಪ್ರಾಯದ ಯುವಕನಾಗಿದ್ದಾಗಲೇ ಮಂಡಲ ಪಂಚಾಯತ್ ಸದಸ್ಯನಾಗಿ ಮೂರು ಸಲ ಪಂಚಾಯತ್ ಸದಸ್ಯನಾಗಿ ಸಾಕ್ಷರತಾ ಆಂದೋಲನ ಶ್ರಮದಾನ ಆಂದೋಲನ ಗ್ರಾಮ/ವಾರ್ಡ್ ಅಭಿವೃದ್ಧಿ ಸಮಿತಿ ಮುಖಾಂತರ ಮಾಡಿದ ಕೆಲಸ ನೋಡಿ ಅಂದಿನ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಶಾಲಿನಿ ಗೋಯಲ್ ಸ್ಥಳದಲ್ಲೇ ಇವರಿಗೆ ಬಹುಮಾನ ಘೋಷಿಸಿದ್ದರು. ಸಿಪಿಐ(ಎಂ) ಪಕ್ಷದ ರಾಜ್ಯ […]

ಸಮಸ್ಯೆಗೆ ಸ್ಪಂದಿಸುವ ಬಿ.ಜೆ.ಪಿಯ ಅಭ್ಯರ್ಥಿ ಕೆ.ರವೀಂದ್ರ ಕಂಬಳಿ

Wednesday, February 17th, 2016
K Raveendra-Kambali

ಬಂಟ್ವಾಳ : 1986 ರಿಂದ 1991 ರ ಅವಧಿಯಲ್ಲಿ ಕೊಡ್ಮಾಣು ಮೇರಮಜಲು ಪುದು ಗ್ರಾಮಗಳನ್ನೊಳಗೊಂಡ ಪುದು ಮಂಡಲ ಪಮಚಾಯತ್ ಪ್ರಧಾನರಾಗಿ ಸೇವೆ ಮಾಡಿದ ಅನುಭವ ಹೊಂದಿರುವ ಶ್ರೀ.ಕೆ.ರವೀಂದ್ರ ಕಂಬಳಿ ಇವರು 13 ನೇ ಪುದು ಜಿಲ್ಲಾ ಪಂಚಾಯತ್ ಕ್ಷೇತ್ರದ ಬಿ.ಜೆ.ಪಿ ಯ ಅಭ್ಯರ್ಥಿಯಾಗಿ ಸ್ಪರ್ಧೆಯಲ್ಲಿದ್ದಾರೆ. ಸಹಕಾರಿ ಕ್ಷೇತ್ರದಲ್ಲಿ ವ್ಯವಸಾಯ ಸೇವಾ ಸಹಕಾರಿ ಸಂಘ ಫರಂಗಿಪೇಟೆ ಇದರ ನಿರ್ದೇಶಕರಾಗಿ ಬಂಟ್ವಾಳ, ತಾಲೂಕು ಕೃಷಿ ಉತ್ಪನ್ನ ಸಹಕಾರಿ ಮಾರಾಟ ಸಂಘ ಇದರ ನಿರ್ದೇಶಕರಾಗಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ ಪ್ರಸ್ತುತ್ತ ದಕ್ಷಿಣ […]

ಮಕ್ಕಳ ಸ್ನೇಹಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿಯವರಿಗೆ ಅಗ್ನಿಪರೀಕ್ಷೆ…

Wednesday, February 17th, 2016
Padmanabha Kottari

ಬಂಟ್ವಾಳ : ಈ ಬಾರಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಟ್ಟದಲ್ಲಿ ಅತ್ಯಂತ ಹೆಚ್ಚು ಕುತೂಹಲವನ್ನು ಉಂಟು ಮಾಡಿರುವುದು ಸಜೀಪ ಮುನ್ನೂರು ಕ್ಷೇತ್ರ. ಕಾರಣ ಈ ಕ್ಷೇತ್ರ ಎರಡು ರಣಕಲಿಗಳ ಕಾದಾಟದ ಕ್ಷೇತ್ರವಾಗಿ ಬದಲಾಗಿದೆ. ಭಾರತೀಯ ಜನತಾ ಪಕ್ಷದಿಂದ ಈ ಬಾರಿ ಇಲ್ಲಿ ಸ್ಪರ್ಧಿಸುತ್ತಿರುವವರು ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ. ಒಂದು ಕಡೆ ಕಾಂಗ್ರೆಸ್ಸಿನ ಚಂದ್ರಪ್ರಕಾಶ್ ಶೆಟ್ಟಿಯವರು ಕಣದಲ್ಲಿದ್ದರೆ, ಮತ್ತೊಂದೆಡೆ ಸಜ್ಜನ ರಾಜಕಾರಣಿ ಕೆ.ಪದ್ಮನಾಭ ಕೊಟ್ಟಾರಿಯವರು ಬಿಜೆಪಿಗೆ ಈ ಕ್ಷೇತ್ರವನ್ನು ಗಳಿಸಿಕೊಡಲು ಪ್ರಯತ್ನಿಸುತ್ತಿದ್ದಾರೆ. 1979 ರಿಂದ ರಾಜಕೀಯ […]

ರಾಷ್ಟ್ರೀಯ ಚಿಂತನೆಯ ಸಂಘಟನೆಯ ಕಾರ್ಯಕರ್ತ ಪ್ರಮೋದ್ ಕುಮಾರ್ ರೈ

Wednesday, February 17th, 2016
Pramod rai kadabettu

ಬಂಟ್ವಾಳ : ಬಿ.ಜೆ.ಪಿ ಯ ಹಿರಿಯ ನಾಯಕ ಕಾಡಬೆಟ್ಟು ನಾರಾಯಣ ರೈ ಯವರ ಸುಪುತ್ರರಾಗಿರುವ ಪ್ರಮೋದ್ ಕುಮಾರ್ ರೈ ಕಾಡಬೆಟ್ಟು ಇವರು ಬಿ.ಜೆ.ಪಿ ಯ ಅಭ್ಯರ್ಥಿಯಾಗಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ 16 ನೇ ಕೊಳ್ನಾಡು ಜಿಲ್ಲಾ ಪಂಚಾಯತ್ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ರಾಷ್ಟ್ರೀಯ ಚಿಂತನೆಯ ಸಂಘಟನೆಯ ಕಾರ್ಯಕರ್ತನಾಗಿ ತನ್ನ ಸಾಮಾಜಿಕ ಜೀವನವನ್ನು ಪ್ರಾರಂಭಿಸಿದರು ಪ್ರಗತಿಪರ ಕೃಷಿಕರಾಗಿ ವಗ್ಗ ಹಾಲು ಉತ್ಪಾದಕರ ಸಹಕಾರಿ ಸಂಘ ಇದರ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಾವಳಪಡೂರು ಕೃಷಿ ಪತ್ತಿನ ಸಹಕಾರಿ ಸಂಘದ […]

ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆಯಲ್ಲಿ ಕೆಡೆಂಜಿ ನಿವಾಸಿಗೆ 2 ಲಕ್ಷ ರೂ.ಗಳ ಚೆಕ್ ವಿತರಣೆ

Wednesday, February 17th, 2016
cheque

ಬದಿಯಡ್ಕ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕಳೆದ ಬಜೆಟ್ ನಲ್ಲಿ ಜನ ಸಾಮಾನ್ಯರಿಗೆ ಘೋಷಿಸಿದ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆ ಯಲ್ಲಿ ಬದಿಯಡ್ಕ ಸನಿಹದ ಕೆಡೆಂಜಿ ನಿವಾಸಿ ಇತ್ತೀಚೆಗೆ ಮೃತರಾದ ಸೀತಾರಾಮರ ಕುಟುಂಬಕ್ಕೆ2 ಲಕ್ಷ ರೂ.ಗಳ ಚೆಕ್ ವಿತರಿಸಲಾಯಿತು. ಬಿಜೆಪಿ ಜಿಲ್ಲಾಧ್ಯಕ್ಷ ಅಡ್ವ.ಕೆ.ಶ್ರೀಕಾಂತ್,ಬದಿಯಡ್ಕ ಕೇರಳ ಗ್ರಾಮೀಣ ಬ್ಯಾಂಕ್ ಅಧಿಕಾರಿಗಳು ಹಾಗೂ ಪಕ್ಷದ ಕಾರ್ಯಕರ್ತರ ಉಪಸ್ಥಿತಿಯಲ್ಲಿ ಸೀತಾರಾಮರ ಪತ್ನಿ ಸರೋಜಿನಿಯವರಿಗೆ ವಿತರಿಸಿದರು.

ಪ್ರಧಾನ ಮಂತ್ರಿಗೆ ಪತ್ರ, ಕೂಡಲೇ ರಸ್ತೆ ಡಾಮರೀಕರಣಕ್ಕೆ ಚಾಲನೆ

Tuesday, February 16th, 2016
Ashwal Shetty

ಉಪ್ಪಳ: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಯೊಬ್ಬ ರಾಷ್ಟ್ರದ ಪ್ರಧಾನ ಮಂತ್ರಿಗಳಿಗೆ ರಸ್ತೆ ಅವ್ಯವಸ್ಥೆಯ ಬಗ್ಗೆ ಬರೆದ ಪತ್ರದಿಂದ ಸುದ್ದಿಯಾಗಿದ್ದಾನೆ. ಮಂಗಲ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಡಿಬೈಲು ನಿವಾಸಿ ಬಾಬು ಶೆಟ್ಟಿ ಹಾಗೂ ಉದಯ ಶೆಟ್ಟಿ ದಂಪತಿಗಳ ಪುತ್ರ, ಮಂಗಳೂರಿನ ಶಾರದಾ ವಿದ್ಯಾಲಯದ ಪದವಿ ವಿದ್ಯಾರ್ಥಿ ಅಶ್ವಲ್ ಶೆಟ್ಟಿ ತಮ್ಮ ಊರು ಕೋಡಿಬೈಲಿನ ರಸ್ತೆ ದುರವಸ್ಥೆಯ ಬಗ್ಗೆ ಪ್ರಧಾನ ಮಂತ್ರಿ ಮೋದಿಯವರಿಗೆ ನಾಲ್ಕು ವಾರಗಳ ಹಿಂದೆ ಸ್ಪೀಡ್ ಪೋಸ್ಟ್ ಮೂಲಕ ಸ್ಥಿತಿಗತಿಗಳ ವಿವರ ಸಹಿತ ಮನವಿ ನೀಡಿದ್ದ.ಇದಕ್ಕೆ ಸ್ಪಂದಿಸಿದ ಪ್ರಧಾನಿಗಳ […]

ಮಂಜೇಶ್ವರ : ಡಸ್ಟರ್ ಕಾರಿನಲ್ಲಿ ಸಾಗಿಸುತ್ತಿದ್ದ 80 ಕಿಲೋ ಗಾಂಜಾ ವಶಕ್ಕೆ

Tuesday, February 16th, 2016
Duster Ganja

ಮಂಜೇಶ್ವರ : ಡಸ್ಟರ್ ಕಾರಿನಲ್ಲಿ ಸಾಗಿಸುತ್ತಿದ್ದ 80ಕಿಲೋ ಗಾಂಜಾವನ್ನು ಡಿ.ವೈ.ಎಸ್.ಪಿ ಎಂ.ವಿ ಸುಕುಮಾರ್ ನೇತೃತ್ವದ ಪೋಲೀಸ್ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ವಶಕ್ಕೆ ತೆಗೆದುಕೊಂಡಿದ್ದಾರೆ. ಡಸ್ಟರ್ ಕಾರಿನಲ್ಲಿದ್ದ ಇಬ್ಬರು ಆರೋಪಿಗಳು ಕಾರ್ಯಾಚರಣೆ ವೇಳೆ ಓಡಿ ಪರಾರಿಯಾಗಿದ್ದಾರೆ. ಸೋಮವಾರ ಸಂಜೆ 3 ಘಂಟೆ ಸಮಾರಿಗೆ ಕುಂಜತ್ತೂರು ತೂಮಿನಾಡು ಬಳಿ ಕಾರ್ಯಾಚರಣೆ ನಡೆಸಲಾಗಿದೆ. ಸಂಶಯಗೊಂಡ ಕಾರನ್ನು ನಿಲ್ಲಿಸುವಂತೆ ಸೂಚಿಸಿದ್ದು ಕಾರು ನಿಲ್ಲಿಸದೇ ಪರಾರಿಯಾಗಲು ಯತ್ನಿಸುವ ವೇಳೆ ಪೋಲೀಸರು ಬೆನ್ನಟ್ಟಿದ ವೇಳೆ ಕಾರನ್ನು ನಿಲ್ಲಿಸಿ ಆರೋಪಿಗಳು ಇನ್ನೊಂದು ಕಾರಿನಲ್ಲಿ ಪರಾರಿಯಾಗಿದ್ದಾರೆ. ಕೆ.ಎಲ್ 14- […]