ರಾಷ್ಟ್ರಕವಿ ಎಂ.ಗೋವಿಂದ ಪೈ ಸ್ಮಾರಕ ಕೇಂದ್ರ ಉದ್ಘಾಟನೆಗೆ ಸಜ್ಜು

Tuesday, February 16th, 2016
Govinda pai

ಮಂಜೇಶ್ವರ: ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳ ಸ್ಮರಣೆಗಾಗಿ ನಿರ್ಮಿಸಲಾಗಿರುವ ಗಿಳಿವಿಂಡನ್ನು ಕೇರಳ ಹಾಗೂ ಕರ್ನಾಟಕ ಸರಕಾರಗಳ ಸಹಕಾರದೊಂದಿಗೆ ಮಾ.5 ರಂದು ಉದ್ಘಾಟಿಸಲಾಗುವುದು. ಗಿಳಿವಿಂಡಿನ ಉದ್ಘಾಟನೆ ಮಾ.5 ಹಾಗೂ 6ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳ ಪಾಲ್ಗೊಳ್ಳುವಿಕೆಯೊಂದಿಗೆ ಉದ್ಘಾಟಿಸಲಾಗುವುದೆಂದು ಮಾಜಿ ಕೇಂದ್ರ ಸಚಿವ ಎಂ ವೀರಪ್ಪ ಮೊಯಿಲಿ ನೇನೃತ್ವದ ಸ್ಮಾರಕ ನಿರ್ಮಾಣ ಸಮಿತಿ ಮಂಜೇಶ್ವರದಲ್ಲಿ ಸೇರಿದ ಸಭೆಯಲ್ಲಿ ತೀರ್ಮಾನಿಸಿದೆ. ಗೋವಿಂದ ಪೈಗಳ ಸ್ಮರಣಾರ್ಥವಾಗಿ ಪೈಗಳ ನಿವಾಸದ ಸನಿಹ ಭವನಿಕಾ ಅಡಿಟೋರಿಯಂ ನ್ನು ನೂತನವಾಗಿ ನಿರ್ಮಿಸಲಾಗಿದ್ದು,ಇದರ ಉದ್ಘಾಟನೆಯೂ ಈ […]

ಬದಿಯಡ್ಕದಲ್ಲಿ ಕನ್ನಡ ಚಿಂತನೆ ಕಾರ್ಯಕ್ರಮ- ಕಯ್ಯಾರ ಕಾವ್ಯ ವಿಶೇಷೋಪನ್ಯಾಸ ಹಾಗೂ ಕಾವ್ಯಗಾಯನ

Tuesday, February 16th, 2016
Kyyara

ಬದಿಯಡ್ಕ: ಕವಿ ಕಯ್ಯಾರರಿಗೆ ಬದುಕು ಮತ್ತು ಕಾವ್ಯ ಬೇರೆಯಾಗಿರಲಿಲ್ಲ.ಅವರ ಕೃತಿಗಳೆಲ್ಲವು ಜೀವನಾನುಭವಗಳ ತಿರುಳುಗಳಾಗಿದ್ದವು.ಇವು ಕಯ್ಯಾರರ ಜೀವನ್ಮುಖಿ ಚಿಂತನೆಗಳನ್ನು ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿದೆಯೆಂದು ಅಧ್ಯಾಪಿಕೆ,ಕವಯಿತ್ರಿ ದಿವ್ಯಗಂಗಾ ಪಿ.ಅಭಿಪ್ರಾಯ ವ್ಯಕ್ತಪಡಿಸಿದರು. ಬೆಂಗಳೂರಿನ ಕನ್ನಡ ಆಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕಾಸರಗೋಡಿನ ಅಪೂವ ಕಲಾವಿದರು ಇದರ ಸಹಯೋಗದಲ್ಲಿ ಬದಿಯಡ್ಕದ ಅಂಬೇಡ್ಕರ್ ವಿಚಾರ ವೇದಿಕೆಯ ಸಹಕಾರದಲ್ಲಿ ಬದಿಯಡ್ಕದ ಸಂಸ್ಕೃತಿ ಭವನದಲ್ಲಿ ಆಯೋಜಿಸಲಾಗಿದ್ದ ಮೂರನೇ ಕನ್ನಡ ಚಿಂತನ ಕಾರ್ಯಕ್ರಮದಲ್ಲಿ ಅವರು ಕಯ್ಯಾರರ ಕಾವ್ಯಗಳಲ್ಲಿ ಜೀವನ ದೃಷ್ಟಿ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ ಮಾತನಾಡುತ್ತಿದ್ದರು. ಕಯ್ಯಾರರ […]

ದಾಖಲೆ ರಹಿತವಾಗಿ ಬಸ್ಸಿನಲ್ಲಿ ಕೊಂಡೊಯ್ಯುತ್ತಿದ್ದ 28 ಲಕ್ಷ ರೂ ವಶಕ್ಕೆ :

Monday, February 15th, 2016
28lakhs

ಮಂಜೇಶ್ವರ : ಮಂಗಳೂರಿನಿಂದ ಕಾಸರಗೋಡಿಗೆ ಬಸ್ಸಿನಲ್ಲಿ ಕೊಂಡೊಯ್ಯುತ್ತಿದ್ದ ದಾಖಲೆ ರಹಿತ 28 ಲಕ್ಷ ರೂ ವನ್ನು ಮಂಜೇಶ್ವರ ವಾಮಂಜೂರ್ ಚೆಕ್‌ಪೋಸ್ಟ್ ನಲ್ಲಿ ಅಧಿಕಾರಿಗಳು ಶುಕ್ರವಾರ ಮಧ್ಯಾಹ್ನ ವಶಕ್ಕೆ ತೆಗೆದುಕೊಂಡಿದ್ದಾರೆ. ಹಣ ಸಾಗಿಸುತ್ತಿದ್ದ ಮಹಾರಾಷ್ಟ್ರಾ ನಿವಾಸಿ ಆನಂದ್ ರಾವ್ ಎಂಬಾತನನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಸರ್ಕಿಲ್ ಇನ್ಸ್‌ಪೆಕ್ಟರ್ ಮುರಳೀದರನ್ , ಇನ್ಸ್ ಪೆಕ್ಟರ್ ಶ್ರೀಕುಮಾರ್ , ಅಸಿಸ್ಟೆಂಟ್ ಇನ್ಸ್‌ಪೆಕ್ಟರ್ ಬಾಬುರಾಜ್ , ಪ್ರಿವೆಂಟಿವ್ ಆಫೀಸರ್ ಉಮ್ಮರ್ ಕುಟ್ಟಿ , ರಾಜೀವನ್ ಚಾಲಕ ರಾಜೀವನ್ ಇದ್ದರು.

ಗಡಿನಾಡ ಕನ್ನಡಿಗರ ಕನ್ನಡ ಸೇವೆಗೆ ಸಾವಿರ ಸಲಾಮ್

Monday, February 15th, 2016
Kayyara Smaramanjali

ಬದಿಯಡ್ಕ: ಕಾಸರಗೋಡು ಕನ್ನಡದ ಗಡಿಭಾಗ. ಇಲ್ಲಿ ಕನ್ನಡದ ಉಳಿವಿಗಾಗಿ, ಬೆಳೆವಿಗಾಗಿ ನಿರಂತರ ಹೋರಾಟದ ಜೀವನವನ್ನೇ ನಡೆಸಿ ಕನ್ನಡದ ಬಾವುಟವನ್ನು ಹಾರಿಸಲು ಶ್ರಮವಹಿಸಿದವರು ಕಯ್ಯಾರ ಕಿಂಞಣ್ಣ ರೈಗಳು. ಇವರು ಕೃಷಿಕರಾಗಿದ್ದುಕೊಂಡೇ ಕನ್ನಡ ತಾಯಿಯ ಸೇವೆ ಮಾಡಿದ್ದು ಗಡಿನಾಡು ಕಾಸರಗೋಡು ಪ್ರದೇಶದಲ್ಲಿರುವುದು ಇಲ್ಲಿಯ ಕನ್ನಡಿಗರಿಗೆ ಹೆಮ್ಮೆ ಮತ್ತು ಕನ್ನಡದ ಬದುಕು ನಡೆಸಲು ಸಾಧ್ಯವಾಗಿದೆ ಎಂದು ಕರ್ನಾಟಕ ಮಾರುಕಟ್ಟೆ ನಿಗಮದ ಅಧ್ಯಕ್ಷ ಎಲ್.ಎನ್.ಮೂರ್ತಿ ಅವರು ಅಭಿಪ್ರಾಯಪಟ್ಟರು. ಇವರು ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕ ಹಾಗೂ ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ […]

ದೀನದಯಾಳ ಉಪಾಧ್ಯಾಯ ಸ್ಮೃತಿ ದಿನ

Sunday, February 14th, 2016
dindayal

ಕುಂಬಳೆ: ದೀನ ದಯಾಳ ಉಪಾಧ್ಯಾಯರು ಪಕ್ಷದ ಸಿದ್ದಾಂತಕ್ಕೆ ನಿಷ್ಠರಾಗಿ ಇತರ ಪಕ್ಷಗಳೊಂದಿಗೆ ಸ್ನೇಹ, ಆದಾರಗಳೊಂದಿಗೆ ತುಲನೆಗೆ ನಿಲುಕದ ನೇತಾರರಾಗಿದ್ದರೆಂದು ಬಿಜೆಪಿ ಮಂಜೇಶ್ವರ ಮಂಡಲ ಪ್ರಧಾನ ಕಾರ್ಯದರ್ಶಿ ಮರಳೀಧರ ಯಾದವ್ ನಾಯ್ಕಾಪು ಅಭಿಪ್ರಾಯ ವ್ಯಕ್ತಪಡಿಸಿದರು. ಬಿಜೆಪಿ ಕುಂಬಳೆ ಪಂಚಾಯತ್ ಸಮಿತಿಯ ಆಶ್ರಯದಲ್ಲಿ ಪಕ್ಷದ ಕಾರ್ಯಾಲಯದಲ್ಲಿ ನಡೆದ ದೀನ ದಯಾಳ ಸ್ಮೃತಿ ದಿನವನ್ನು ಪುಷ್ಪಾರ್ಚನೆಗೈದು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ದೀನ ದಯಾಳರ ಸರಳ ಜೀವನ ಕ್ರಮ ಮಾದರಿಯೆಂದು ತಿಳಿಸಿದ ಅವರು ಇಂದಿನ ಯುವ ಸಮೂಹ ಅವರ ವ್ಯಕ್ತಿತ್ವವನ್ನು ಅರ್ಥಮಾಡಿಕೊಂಡು ಅಳವಡಿಸುವಲ್ಲಿ […]

ರಚನಾ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್‌ನ ಕಚೇರಿಯ ದ್ವಿತೀಯ ಅಂತಸ್ತಿನ ಉದ್ಘಾಟನೆ

Sunday, February 14th, 2016
Badiyadka Club

ಬದಿಯಡ್ಕ: ಕುದ್ರೆಪ್ಪಾಡಿಯ ರಚನಾದ ಆಶಯ, ಕಾರ್ಯಚಟುವಟಿಕೆಗಳು, ಸಾಧನೆಗಳು, ಸದಸ್ಯರುಗಳ ಅರ್ಪಣಾ ಮನೋಭಾವನೆಗಳು ಶ್ಲಾಘನೀಯ ಎಂದು ಬದಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಅಭಿಪ್ರಾಯ ವ್ಯಕ್ತಪಡಿಸಿದರು. ರಚನಾ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್‌ನ ಕಚೇರಿಯ ದ್ವಿತೀಯ ಅಂತಸ್ತಿನ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಅವರು ಮಾತನಾಡುತ್ತಿದ್ದರು. ಸಂಘಟನೆಗಳು ಸಮಾಜ ಪರಿವರ್ತನೆಯ ನಿಟ್ಟಿನಲ್ಲಿ ಕಾರ್ಯಶೀಲವಾಗುವುದರ ಜೊತೆಗೆ ಶಾಂತಿ ಸೌಹಾರ್ಧತೆಗೆ ಹೆಚ್ಚು ಮಹತ್ವ ನೀಡಬೇಕು.ಯುವ ಜನರ ಸಮಗ್ರ ಶ್ರೇಯೋಭಿವೃದ್ದಿಗೆ ಉತ್ತಮ ಯೋಜನೆಗಳನ್ನು ಸಿದ್ದಪಡಿಸಬೇಕು ಎಂದು ತಿಳಿಸಿದ ಅವರು ಇದರ […]

ಡೋನ್ ಬೊಸ್ಕೊ ಶಾಲಾ ವಿದ್ಯಾರ್ಥಿಗಳಿಂದ ತರಕಾರಿ ಕೈತೋಟ

Sunday, February 14th, 2016
don bosco school

ಉಪ್ಪಳ: ಕಯ್ಯಾರು ಡೋನ್ ಬೊಸ್ಕೊ ಎಯುಪಿ ಶಾಲಾ ಇಕೋ ಕ್ಲಬ್‌ನ ನೇತೃತ್ವದಲ್ಲಿ ಅದರ ಶ್ರಮದಿಂದಾಗಿ ಒಂದು ಆಕರ್ಷಕ ಹಾಗೂ ಲಾಭದಾಯಕ ಮಾದರಿ ತರಕಾರಿ ತೋಟವನ್ನು ಶಾಲಾ ವಠಾರದಲ್ಲಿ ಬೆಳೆಸಲಾಗಿದೆ. ವಿವಿದ ರೀತಿಯ ತರಕಾರಿಗಳಾದ ಬೆಂಡೆಕಾಯಿ, ಹಾಗಲ ಕಾಯಿ, ಕುಂಬಳ ಕಾಯಿ, ಪಡುವಲ ಕಾಯಿ, ಬದನೆ ಕಾಯಿ ಮುಂತಾದ ತರಕಾರಿಗಳು ಬೆಳೆದು ನಿಂತಿದೆ. ಈ ತರಕಾರಿಗಳನ್ನು ಮಧ್ಯಾಹ್ನದ ಊಟಕ್ಕೆ ಬಳಸಲಾಗುತ್ತಿದೆ. ಶಾಲಾ ಇಕೋ ಕ್ಲಬ್‌ನ ಸದಸ್ಯರು ತಮ್ಮ ಬಿಡುವಿನ ಸಮಯದಲ್ಲಿ ತರಕಾರಿ ತೋಟಕ್ಕೆ ಭೇಟಿ ನೀಡಿ ಅದಕ್ಕೆ ಗೊಬ್ಬರ, […]

7 ಪರಿಶಿಷ್ಟ ಜಾತಿ ಕುಟುಂಬಗಳಿಗೆ ಭೂ ದಾಖಲೆ ವಿತರಣೆ

Thursday, February 11th, 2016
land Document

ಬದಿಯಡ್ಕ: ಜಿಲ್ಲಾಧಿಕಾರಿಗಳು ಪಾಲ್ಗೊಂಡ ಅದಾಲತ್ ನಲ್ಲಿ ಭೂದಾಖಲೆಗಳು ಇಲ್ಲದ 7 ಪರಿಶಿಷ್ಟ ಜಾತಿ ಕುಟುಂಬಗಳಿಗೆ ಭೂ ದಾಖಲೆಗಳನ್ನು ವಿತರಿಸಲಾಯಿತು. ಕುಟುಂಬಶ್ರೀ ಜಿಲ್ಲಾ ಮಿಶನ್ ಹಾಗೂ ಜಿಲ್ಲಾಡಳಿತಗಳ ನೇತೃತ್ವದಲ್ಲಿ ಬುಧವಾರ ಬದಿಯಡ್ಕ ಸಂಸ್ಕೃತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿತರಿಸಿದರು.ಬದಿಯಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾರ್ಯಾಡು,ಪೆರಿಯಡ್ಕ,ಮಾರ್ಪನಡ್ಕ,ಕಾಡಮನೆ,ಪೆರಡಾಲ,ಮುಂಡಿತ್ತಡ್ಕ ಕಾಲೊನಿಗಳ ನೂರಾರು ಜನರು ಪಾಲ್ಗೊಂಡ ಕಾರ್ಯಕ್ರಮದಲ್ಲಿ 10ಮಂದಿಗೆ ಮನೆ ನಿರ್ಮಾಣ,ಚಿಕಿತ್ಸಾ ಸಹಾಯ ಹಾಗೂ 11 ನೂತನ ಆಧಾರ್ ಕಾರ್ಡ್‌ಗಳನ್ನು ಜಿಲ್ಲಾಧಿಕಾರಿಗಳು ವಿತರಿಸಿದರು.ಕಾರ್ಯಕ್ರಮದಲ್ಲಿ 150 ದೂರುಗಳನ್ನು ಪರಿಹರಿಸಲಾಯಿತು.ಜೊತೆಗೆ ಹೊಸತಾದ 70 ದೂರುಗಳನ್ನು ಸ್ವೀಕರಿಸಲಾಯಿತು. ಬದಿಯಡ್ಕ […]

ಬದಿಯಡ್ಕದ ತುಳುವರ್ಲ್ಡ್ ವತಿಯಿಂದ ಕೆಡ್ಡಸ ಕೂಟ

Thursday, February 11th, 2016
tulu world

ಬದಿಯಡ್ಕ: ಆಧುನಿಕ ವಿಚಾರ ಧಾರೆಗಳಿಗೆ ಮಾರುಹೋದ ಪರಿಣಾಮ ಯುವ ಸಮೂಹ ಪ್ರಾಚೀನ ಶ್ರೀಮಂತ ಸಾಂಸ್ಕೃತಿಕ ಹಿನ್ನೆಲೆಯ ತುಳುವಳಿಕೆಯ ಕೊರತೆ ಎದುರಿಸುತ್ತಿದೆ.ಯುವ ಸಮೂಹಕ್ಕೆ ತುಳುನಾಡಿನ ಸಾಂಸ್ಕೃತಿಕತೆಯ ಅರಿವನ್ನು ಮೂಡಿಸುವಲ್ಲಿ ಕೆಡ್ಡಸ ಆಚರಣೆಗಳಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರಬೇಕೆಂದು ಬದಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಎನ್ .ಕೃಷ್ಣ ಭಟ್ ಅಭಿಪ್ರಾಯ ವ್ಯಕ್ತಪಡಿಸಿದರು. ಬದಿಯಡ್ಕದ ತುಳುವರ್ಲ್ಡ್ ವತಿಯಿಂದ ಬುಧವಾರ ಸಂಜೆ ಬದಿಯಡ್ಕದಲಲಿ ನಡೆದ ಕೆಡ್ಡಸ ಕೂಟ ಕಾರ್ಯಕ್ರಮವನ್ನು ಕೆಡ್ಡಸದ ವಿಶೇಷತೆಯಾದ ನವ ಧಾನ್ಯಗಳ ಮಿಶ್ರಣ ನನ್ನೇರಿಯನ್ನು ವಿತರಿಸಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಇಂದಿನ ಯುವ […]

ಮೂರು ದೋಣಿ,ನೂರು ಮರಳು ಗೋಣಿ ವಶಕ್ಕೆ-ಇಬ್ಬರು ಹೊಳೆಯಲ್ಲಿ ಪರಾರಿ

Thursday, February 11th, 2016
Kumble Sand

ಕುಂಬಳೆ: ಮೊಗ್ರಾಲ್ ಕಡವತ್ತಿನಲ್ಲಿ ಅನಧಿಕೃತವಾಗಿ ಮರಳು ಸಾಗಾಟದ ಬಗ್ಗೆ ಪತ್ತೆಹಚ್ಚುವ ಕಾರ್ಯಾಚರಣೆಗೆ ಕಂದಾಯ ಅಧಿಕಾರಿಗಳು ಮಂಗಳವಾರ ರಾತ್ರಿ ಮಿಂಚಿನ ಧಾಳಿ ನಡೆಸಿದ್ದು ಅಧಿಕಾರಿಗಳನ್ನು ಕಂಡು ಇಬ್ಬರು ಮರಳು ಸಾಗಾಟದಾರರು ಹೊಳೆಗೆ ಹಾರಿ ತಪ್ಪಿಸಿಕೊಂಡ ಘಟನೆ ನಡೆದಿದೆ. ಮಂಗಳವಾರ ರಾತ್ರಿ ಮಂಜೇಶ್ವರ ತಹಶೀಲ್ದಾರ್ ಕೆ.ಶಶಿಧರ ಶೆಟ್ಟಿ ನೇತೃತ್ವದಲ್ಲಿ ಕಂದಾಯ ಅಧಿಕಾರಿಗಳು ಕಡವಿಗೆ ಧಾಳಿ ನಡೆಸಿದರು.ಧಾಳಿಯ ವೇಳೆ ಮರಳು ಸಂಗ್ರಹಿಸುತ್ತಿದ್ದ ಇಬ್ಬರು ಹೊಳೆಗೆ ಹಾರಿ ಪರಾರಿಯಾಗಿದ್ದು,100 ಗೋಣಿಚೀಲಗಳಲ್ಲಿ ಸಂಗ್ರಹಿಸಲಾಗಿದ್ದ ಮರಳು ಹಾಗೂ ಮರಳು ಸಂಗ್ರಹಕ್ಕೆ ಬಳಸಿದ ಮೂರು ನಾಡ ದೋಣಿಗಳನ್ನು […]