ಏಷ್ಯನ್ ಕ್ರೀಡಾಕೂಟ : ಯೋಗೇಶ್ವರ್ ಗೆ ಚಿನ್ನ, ರಾಜ್ಯದ ಅಥ್ಲೀಟ್ ಪೂವಮ್ಮಗೆ ಕಂಚು

Monday, September 29th, 2014
Yogeshwar Poovamma

ಇಂಚೆನ್ : ಭಾರತದ ಕುಸ್ತಿ ಪಟು ಯೋಗೇಶ್ವರ್ ದತ್ ಪುರುಷರ 65 ಕೆ.ಜಿ. ವಿಭಾಗದ ಫ್ರೀ ಸ್ಟೈಲ್‌ ವಿಭಾಗದಲ್ಲಿ ಚಿನ್ನದ ಸಾಧನೆ ತೋರಿದರೆ ರಾಜ್ಯದ ಅಥ್ಲೀಟ್ ಎಂ.ಆರ್.ಪೂವಮ್ಮ ಮಹಿಳೆಯರ 400 ಮೀ. ಓಟದಲ್ಲಿ ಕಂಚಿನ ಪದಕ್ ಪಡೆದಿದ್ದಾರೆ. ಪಂಜಾಬಿನ ಖುಷ್‌ಬಿರ್‌ ಕೌರ್ ಅವರು ಮಹಿಳೆಯ 20 ಕಿ.ಮೀ ನಡಿಗೆ ಸ್ಪರ್ಧೆಯಲ್ಲಿ ಬೆಳ್ಳಿ ಪಡೆದು, 17ನೇ ಏಷ್ಯನ್ ಕ್ರೀಡಾಕೂಟದಲ್ಲಿ ಭಾನುವಾರ 9ನೇ ದಿನವೂ ಭಾರತದ ಪರ ಭರ್ಜರಿ ಪದಕ ಬೇಟೆಯಾಡಿದರು. ಯೋಗೇಶ್ವರ್ ಅವರ ಚಿನ್ನದ ಸಾಧನೆಯೊಂದಿಗೆ ಭಾರತದ ಚಿನ್ನದ […]

ಅರ್ಚರಿಯಲ್ಲಿ ಭಾರತಕ್ಕೆ ಬಂಗಾರದ ಅಚ್ಚರಿ

Saturday, September 27th, 2014
ಅರ್ಚರಿಯಲ್ಲಿ ಭಾರತಕ್ಕೆ ಬಂಗಾರದ ಅಚ್ಚರಿ

ಇಂಚೆನ್‌ : ಭಾರತದ ಕ್ರೀಡಾ ಪ್ರೇಮಿಗಳ ಪಾಲಿಗೆ ಶನಿವಾರ ಶುಭದಿನ. 17ನೇ ಏಷ್ಯನ್ ಕ್ರೀಡಾಕೂಟದ ಆರ್ಚರಿ ಸ್ಪರ್ಧೆಯಲ್ಲಿ ಭಾರತವು ತಲಾ ಒಂದು ಬಂಗಾರ ಹಾಗೂ ಒಂದು ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ ಚಾರಿತ್ರಿಕ ಸಾಧನೆ ಮಾಡಿದೆ. ಇಲ್ಲಿ ನಡೆಯುತ್ತಿರುವ 17ನೇ ಏಷ್ಯನ್ ಕ್ರೀಡಾಕೂಟದ ಕಂಪೌಂಡ್ ಪುರುಷರ ಆರ್ಚರಿ  ತಂಡವು ಬಂಗಾರ ಗೆದ್ದಿದೆ. ಈ ಕ್ರೀಡಾಕೂಟದಲ್ಲಿ ಭಾರತಕ್ಕೆ ದೊರೆತ ಎರಡನೇ ಚಿನ್ನದ ಪದಕವಿದು. ಇದೇ ವಿಭಾಗದ ಮಹಿಳೆಯರ ತಂಡವು   ಕಂಚಿನ ಸಾಧನೆ ಮಾಡಿದೆ. ಮತ್ತೊಂದೆಡೆ ಪುರುಷರ […]

ಒಂದು ಇಲಿ ಹಿಡಿಯೋಕ್ಕೆ 10,000 ರೂ.

Wednesday, July 9th, 2014
Rat

ಬೆಂಗಳೂರು : ಬಿಬಿಎಂಪಿ ಕೇಂದ್ರ ಕಚೇರಿ ಮತ್ತು ವಲಯ ಕಚೇರಿಯಲ್ಲೂ ಇಲಿಗಳ ಹಾವಳಿ ಹೆಚ್ಚಾಗಿದೆ. 6 ತಿಂಗಳಿಂದ ಇಲಿಗಳ ಕಾಟವನ್ನು ತಡೆಯಲು ಸಾಧ್ಯವಾಗದೇ ಬಿಬಿಎಂಪಿ ಅಧಿಕಾರಿಗಳು ತತ್ತರಿಸಿಹೋಗಿದ್ದಾರೆ. ಇಲಿಗಳನ್ನು ಹಿಡಿಯಲು ಬೆಕ್ಕುಗಳನ್ನು ಸಾಕುವುದಂತೂ ಬಿಬಿಎಂಪಿಗೆ ಸಾಧ್ಯವಾಗದ ಕೆಲಸ. ಹೀಗಾಗಿ ಇಲಿಗಳನ್ನು ಹಿಡಿಯಲು ಮೂರು ಕಂಪನಿಗಳಿಗೆ ಟೆಂಡರ್ ನೀಡಲಾಗಿದ್ದು, ಒಂದು ಇಲಿ ಹಿಡಿಯಲು 10 ಸಾವಿರ ರೂ. ಖರ್ಚು ಮಾಡಲಾಗುತ್ತಿದೆ. 6 ತಿಂಗಳಲ್ಲಿ ಹಿಡಿಯಲಾದ ಇಲಿಗಳ ಸಂಖ್ಯೆ ಕೇವಲ 20 ಎಂದು ಹೇಳಲಾಗುತ್ತಿದೆ. 20 ಇಲಿಗಳನ್ನು ಹಿಡಿಯಲು ಸುಮಾರು […]

ಕಾರ್ಕಳ ಭೀಕರ ಅಪಘಾತ : ಬೆಂಗಳೂರು ಡಿಸಿಪಿ ಪತ್ನಿ ಹಾಗು ಚಾಲಕ ಬಲಿ

Thursday, April 3rd, 2014
Police Jeep

ಕಾರ್ಕಳ: ಪೊಲೀಸ್‌ ಬೊಲೆರೋ ಜೀಪ್‌ ಹಾಗೂ ಸರಕಾರಿ ಬಸ್‌ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಜೀಪ್‌ನಲ್ಲಿದ್ದ ಬೆಂಗಳೂರು ಪಶ್ಚಿಮ ವಲಯದ ಡಿಸಿಪಿ ಲಾಬೂರಾಮ್‌ ಅವರ ಪತ್ನಿ ಗಾಯತ್ರಿ (35) ಹಾಗೂ ಜೀಪ್‌ ಚಾಲಕ ನಟರಾಜ್‌ ಸಾವಿಗೀಡಾಗಿ, ಉಳಿದ ಮೂವರು ಗಾಯಗೊಂಡ ಘಟನೆ ತಾಲೂಕಿನ ಬೈಲೂರು ಗ್ರಾಮದಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದೆ. ಬೊಲೇರೊ ಪೊಲೀಸ್‌ ಜೀಪ್‌ ಧರ್ಮಸ್ಥಳದಿಂದ ಕಾರ್ಕಳ ಮೂಲಕ ಉಡುಪಿಗೆ ಸಾಗುತ್ತಿದ್ದು ಅದರಲ್ಲಿ 5 ಜನ ಪ್ರಯಾಣಿಕರಿದ್ದರು. ಬಸ್‌ ಉಡುಪಿಯಿಂದ ಕಾರ್ಕಳ ಕಡೆಗೆ ಬರುತ್ತಿತ್ತು. ಮಧ್ಯಾಹ್ನ 1.30ರ […]

ಕಾರ್ಕಳದಲ್ಲಿ 1 ಕೋಟಿಗೂ ಹೆಚ್ಚು ಮೌಲ್ಯದ ಬೃಹತ್ ಪ್ರಮಾಣದ ಅಕ್ರಮ ಸ್ಫೋಟಕ ಪತ್ತೆ

Thursday, March 27th, 2014
Explosive

ಕಾರ್ಕಳ : ಒಟ್ಟು ರೂ. 1 ಕೋಟಿಗೂ ಹೆಚ್ಚು ಮೌಲ್ಯದ ಬೃಹತ್ ಪ್ರಮಾಣದ ಅಕ್ರಮ ಸ್ಫೋಟಕ ಕಾರ್ಕಳ ತಾಲ್ಲೂಕಿನ ಮೂರು ಕಡೆ ಮಂಗಳವಾರ ಪತ್ತೆಯಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಖಚಿತ ಮಾಹಿತಿ ಮೇರೆಗೆ ಎಎಸ್‍ಪಿ ಅಣ್ಣಾಮಲೈ ನೇತೃತ್ವದ ಪೊಲೀಸ್ ಸಿಬ್ಬಂದಿ ಏಕಕಾಲಕ್ಕೆ ತಾಲ್ಲೂಕಿನ ನಕ್ರೆ ಗ್ರಾಮದ ವರ್ಣಬೆಟ್ಟು, ಪಟ್ಟಣದ ಸಮೀಪವಿರುವ ಕೋಟಿ ಚೆನ್ನಯ ಥೀಂ ಪಾರ್ಕ್ ಸಮೀಪದ ಗಂಧದ ಬಟ್ಟಿ ಎಂಬಲ್ಲಿನ ತೋಟದಲ್ಲಿ ಹಾಗೂ ತೆಳ್ಳಾರು ಸಮೀಪದ ದುರ್ಗಾ ಗ್ರಾಮದಲ್ಲಿ ನಡೆಸಿದ ದಾಳಿಯಲ್ಲಿ ಇವು ದೊರೆತಿವೆ. […]

ಸಾಮಸಂಗ್‌ ಪ್ರಸ್ತುತ ಪಡಿಸಿದೆ ಎಲ್ಲಕ್ಕಿಂತ ದುಬಾರಿ ಟ್ಯಾಬ್ಲೆಟ್‌

Friday, March 7th, 2014
ಸಾಮಸಂಗ್‌ ಪ್ರಸ್ತುತ ಪಡಿಸಿದೆ ಎಲ್ಲಕ್ಕಿಂತ ದುಬಾರಿ ಟ್ಯಾಬ್ಲೆಟ್‌

ನವದೆಹಲಿ: ಮೊಬೈಲ್ ಕಂಪೆನಿ ಸಾಮಸಂಗ್‌‌ ದೇಶದಲ್ಲಿ ಅತಿ ದುಬಾರಿ ಟ್ಯಾಬ್ಲೆಟ್‌ ಬಿಡುಗಡೆ ಮಾಡಿದೆ . ಇದರ ಬೆಲೆ ಕೇವಲ 65,575 ರೂಪಾಯಿಗಳು ಮಾತ್ರ. ಇದರ ಜೊತೆಗೆ 3,799 ರೂಪಾಯಿಯ ಕವರ್‌ ಉಚಿತವಾಗಿ ನೀಡಲಾಗುವುದು ಎಂದು ಕಂಪೆನಿಯ ಮೂಲಗಳು ತಿಳಿಸಿವೆ. ಗ್ಯಾಲಾಕ್ಸಿ ನೋಟ್‌ ಫ್ರೋನಲ್ಲಿ 2560X1600 ರಿಜೊಲ್ಯೂಶನ್‌ನ 12.2 ಇಂಚಿನ ಸೂಪರ್ ಎಲ್‌ಸಿಡಿ ಸ್ಕ್ರೀನ್‌ ಇದೆ. ಈ ದುಬಾರಿ ಟ್ಯಾಬ್ಲೆಟ್‌‌ ಆಂಡ್ರೈಡ್‌ 4.4 ಅಪರೆಟಿಂಗ್‌ ಸಿಸ್ಟಮ್‌ ಮೂಲಕ ಕಾರ್ಯನಿರ್ವಹಿಸುತ್ತದೆ. ಈ ಹೊಸ ಟ್ಯಾಬ್ಲೆಟ್‌‌ನಲ್ಲಿ 1.9 ಗಿಗಾಹರ್ಡ್ಸ್‌‌ ಕಾಒಕ್ಟ್‌ ಕೊರ […]

ಚಿರು ಅಭಿನಯದ ‘ಚಂದ್ರಲೇಖ’ ಚಿತ್ರ ವಿಮರ್ಶೆ

Friday, March 7th, 2014
ಚಿರು ಅಭಿನಯದ ‘ಚಂದ್ರಲೇಖ’ ಚಿತ್ರ ವಿಮರ್ಶೆ

ಬೆಂಗಳೂರುಃ ಕಾಮಿಡಿ, ಥ್ರಿಲ್ಲಿಂಗ್ ಹಾಗೂ ಹಾರರ್ ಅಂಶಗಳನ್ನು ಹದವಾಗಿ ಬೆರೆಸಿ ಮಾಡಿದ ಚಿತ್ರವಿದು. ಆಕಡೆ ತೀರಾ ಹಾರರ್ ಅಲ್ಲದ ಈಕಡೆ ತೀರಾ ಕಾಮಿಡಿ ಅಲ್ಲದ ವಿಭಾಗಕ್ಕೆ ಈ ಚಿತ್ರವನ್ನು ಸೇರಿಸಬಹುದು. ಆ ಮಟ್ಟಿಗೆ ಇದೊಂದು ವಿಭಿನ್ನ ಪ್ರಯೋಗ ಅನ್ನಬಹುದು. ಆದರೆ ಈ ಚಿತ್ರದ ಸಂಪೂರ್ಣ ಕ್ರೆಡಿಟ್ ಸಿಗೋದು ಮಾತ್ರ ತೆಲುಗಿನ ‘ಪ್ರೇಮ ಕಥಾ ಚಿತ್ರಂ’ಗೆ. ಏಕೆಂದರೆ ‘ಚಂದ್ರಲೇಖ’ ಚಿತ್ರ ಅದರ ಪಡಿಯಚ್ಚು. ತೆಲುಗು ಚಿತ್ರವನ್ನು ಯಥಾವತ್ತಾಗಿ ಕನ್ನಡಕ್ಕೆ ತಂದಿದ್ದಾರೆ ಓಂ ಪ್ರಕಾಶ್ ರಾವ್. ಇಲ್ಲಿ ಅವರ ತನ […]

ಸ್ಥಳೀಯ ಸಂಸ್ಥೆ ಅಧ್ಯಕ್ಷ ಉಪಾಧ್ಯಕ್ಷರ ನೇಮಕ ಹೈಕೋರ್ಟ್ ಒಪ್ಪಿಗೆ

Tuesday, February 25th, 2014
High-Court

ಬೆಂಗಳೂರು: ಕಾನೂನು ತೊಡಕಿನಿಂದ ಕಳೆದೊಂದು ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ರಾಜ್ಯದ ಸ್ಥಳೀಯ ಸಂಸ್ಥೆ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಯ ಚುನಾವಣೆಗೆ ಹೈಕೋರ್ಟ್ ಕೊನೆಗೂ ಹಸಿರು ನಿಶಾನೆ ತೋರಿದೆ. ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಯ ಮೀಸಲು ಪಟ್ಟಿಯನ್ನು ಮರು ತಯಾರಿಸುವಂತೆ ಏಕ ಸದಸ್ಯ ಪೀಠ ನೀಡಿದ್ದ ಆದೇಶಕ್ಕೆ ಮುಖ್ಯ ನ್ಯಾ.ಡಿ.ಎಚ್.ವಘೇಲ ಹಾಗೂ ನ್ಯಾ.ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ಪೀಠ ತಡೆಯಾಜ್ಞೆ ನೀಡಿದ್ದು, ಶೀಘ್ರದಲ್ಲೇ ಚುನಾವಣೆ ನಡೆಸುವಂತೆ ಆದೇಶಿಸಿದೆ. ಮಾ.25ಕ್ಕೆ ಮುಂದೂಡಿಕೆ: ವಿವಾದಿತ ಮಂಗಳೂರು ನಗರಪಾಲಿಕೆ ಮೇಯರ್ ಹುದ್ದೆಯನ್ನು ಸಾಮಾನ್ಯ ಹಾಗೂ […]

ಸಿಐಎಸ್‍ಎಫ್ ಸಿಬ್ಬಂದಿ ಗುಂಡು ಹಾರಿಸಿ ಆತ್ಮಹತ್ಯೆ

Monday, February 24th, 2014
Sandeep-Sarkate

ಸುರತ್ಕಲ್ : ಸಿಐಎಸ್‍ಎಫ್ ಸಿಬ್ಬಂದಿಯೊಬ್ಬ ತನ್ನ ಸರ್ವಿಸ್ ರೈಫಲ್‍ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ತಡರಾತ್ರಿ ಪಣಂಬೂರು ಸಿಐಎಸ್‍ಎಫ್ ಕ್ಯಾಂಪ್‍ನಲ್ಲಿ ಸಂಭವಿಸಿದೆ. ಮಹಾರಾಷ್ಟ್ರ ನಿವಾಸಿ ಸಂದೀಪ್ ಸರ್ಕಟೆ (26) ಎಂಬವರೇ ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ. ಕೇವಲ ಎರಡು ವರುಷದ ಹಿಂದೆಯಷ್ಟೇ ಸಿಐಎಸ್‍ಎಫ್‍ಗೆ ಸೇರ್ಪಡೆಗೊಂಡಿದ್ದ ಸಂದೀಪ್ ಆರಂಭದಿಂದಲೂ ಪಣಂಬೂರು ವಿಭಾಗದಲ್ಲಿ ಕೆಲಸವನ್ನು ನಿರ್ವಹಿಸುತ್ತಿದ್ದರು. ಶುಕ್ರವಾರ ಇವರು ರಾತ್ರಿ ಪಾಳಿಯ ಕೆಲಸವನ್ನು ನಿರ್ವಹಿಸುತ್ತಿದ್ದು ತಡರಾತ್ರಿ 1.20ರ ಸುಮಾರಿಗೆ ತಮ್ಮ ಕಚೇರಿಯ ಹಿಂಭಾಗಕ್ಕೆ ತೆರಳಿ ಸರ್ವಿಸ್ ರೈಫಲ್‍ನಿಂದ ತಲೆಗೆ ಗುಂಡು […]

ಗುಂಡು ಹಾರಿಸಿಕೊಂಡು ಸಿಆರ್ ಪಿಎಫ್ ಯೋಧ ಆತ್ಮಹತ್ಯೆ

Saturday, February 22nd, 2014
CRPF-jawan

ಮಂಗಳೂರು: ಹೊಟ್ಟೆಗೆ ಗುಂಡು ಹಾರಿಸಿಕೊಂಡು ಸಿಆರ್ ಪಿಎಫ್ ಯೋಧ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರಿನ ಎನ್‌ಎಂಪಿಟಿಯಲ್ಲಿ ಶನಿವಾರ ನಡೆದಿದೆ. ಇಂದು ಬೆಳಗ್ಗೆ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಯೋಧ ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತ ಯೋಧನನ್ನು ಮಹಾರಾಷ್ಟ್ರ ಮೂಲದ 38 ವರ್ಷದ ಕೆ.ಟಿ ಸಂದೀಪ್ ಸರ್ಕಟೆ ಎಂದು ಗುರುತಿಸಲಾಗಿದೆ. ಈ ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಪಣಂಬೂರ್ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.