ದಂಡುಪಾಳ್ಯ ಗ್ಯಾಂಗ್ ನ 11 ಮಂದಿಗೆ ಮರಣದಂಡನೆ

Friday, October 1st, 2010
ದಂಡುಪಾಳ್ಯ ಗ್ಯಾಂಗ್

ಬೆಂಗಳೂರು : ವಿಚಿತ್ರ ರೀತಿಯಲ್ಲಿ ಕೊಲೆ, ದರೋಡೆ, ಅತ್ಯಾಚಾರ ವನ್ನು ನಡೆಸುತ್ತಿದ್ದ ದಂಡುಪಾಳ್ಯ ಗುಂಪಿನ 11 ಮಂದಿಗೆ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಚ್.ಆರ್.ಶ್ರೀನಿವಾಸ್  ರವರು ಗುರುವಾರ ಮರಣದಂಡನೆ ಶಿಕ್ಷೆ ವಿಧಿಸಿದ್ದಾರೆ. ಕೃಷ್ಣ, ಹನುಮ ಅಲಿಯಾಸ್ ದೊಡ್ಡಹನುಮ, ಮುನಿಕೃಷ್ಣ, ವೆಂಕಟರಮಣ, ತಿಮ್ಮ ಅಲಿಯಾಸ್ ಕೋತಿ ತಿಮ್ಮ, ವೆಂಕಟೇಶ್ ಅಲಿಯಾಸ್ ಚಂದ್ರ, ಮುನಿಕೃಷ್ಣ ಅಲಿಯಾಸ್ ಕೃಷ್ಣ, ನಲ್ಲ ತಿಮ್ಮ ಅಲಿಯಾಸ್ ತಿಮ್ಮ, ಚಿಕ್ಕಮುನಿಯಪ್ಪ ಅಲಿಯಾಸ್ ಮುನಿಯಪ್ಪ, ಕ್ರಿಸಂದು, ಲಕ್ಷ್ಮಿ ಮರಣದಂಡನೆಗೆ ಒಳಗಾದವರು. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ 34ನೇ ವಿಶೇಷ ನ್ಯಾಯಾಲಯದ […]

ಲೋಕಾಯುಕ್ತ ಬಲೆಗೆ ಬಿದ್ದ ಬಿಬಿಎಂಪಿ ಸದಸ್ಯ

Friday, October 1st, 2010
ಲೋಕಾಯುಕ್ತ ಬಲೆಗೆ ಬಿದ್ದ ಬಿಬಿಎಂಪಿ ಸದಸ್ಯ

ಬೆಂಗಳೂರು :  ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಪುತ್ರ, ಬಿಬಿಎಂಪಿ ಸದಸ್ಯ ಜಗದೀಶ್ ನಾಯ್ಡು ಕೆಐಎಡಿಬಿ ಪ್ರಕರಣದ ಸಾಕ್ಷಿದಾರೊಬ್ಬರಿಗೆ ಗಾಂಧಿನಗರದ ಕಚೇರಿಯಲ್ಲಿ ಒಂದು ಲಕ್ಷ ರೂಪಾಯಿ ಲಂಚ ನೀಡುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಗುರುವಾರ ನಡೆದಿದೆ. ಲೋಕಾಯುಕ್ತ ಪೊಲೀಸರು ದಿಢೀರನೆ ನಡೆಸಿದ ಕಾರ್ಯಾಚರಣೆಯಲ್ಲಿ ಕಟ್ಟಾ ಜಗದೀಶ್ ನಾಯ್ಡು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವುದು ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ರಾಜಕೀಯ ಭವಿಷ್ಯದ ಮೇಲೆ ಪರಿಣಾಮ ಬೀರಿದೆ. ಬುಧವಾರ ಬಿಬಿಎಂಪಿ ಸಭೆಯಲ್ಲಿ  ಜಗದೀಶ್ ನಾಯ್ಡುವನ್ನು […]

ಪತ್ರಿಕಾ ಮಾರಟಕ್ಕೆ ಅಡ್ಡಿ ಪಡಿಸಿ ಅಂಗಡಿ ಜಖಂಗೊಳಿಸಿದ ದುಷ್ಕರ್ಮಿಗಳು

Monday, September 27th, 2010
Paper stall

ಮಂಗಳೂರು :  ನಗರದ ಮಿಲಾಗ್ರಿಸ್ ಬಳಿ ಟೆಲಿಫೋನ್ ಬೂತ್ ಹಾಗೂ ಪೇಪರ್ ಸ್ಟಾಲ್ ಹೊಂದಿರುವ ಸಾಮಾಜಿಕ ಕಾರ್ಯಕರ್ತ ಮೆಲ್ವಿಲ್ ಪಿಂಟೋ ಎಂಬವರ ಅಂಗಡಿಗೆ ಭಾನುವಾರ ಸಂಜೆ ಆಗಮಿಸಿದ ದುಷ್ಕರ್ಮಿಗಳು ‘ಕರಾವಳಿ ಅಲೆ’ ಮಾರಾಟ ಮಾಡಬಾರದು ಎಂದು ಬೆದರಿಸಿ ಕಾಯಿನ್ ಬಾಕ್ಸ್ ಮತ್ತು ಕಪಾಟಿಗೆ ಹಾನಿ ಮಾಡಿ ‘ಕರಾವಳಿ ಅಲೆ’ಯ ಪ್ರತಿಗಳನ್ನು ಹರಿದು ಹಾಕಿರುವ ಘಟನೆ ನಡೆದಿದೆ. ಬೈಕ್‌ನಲ್ಲಿ ಮೂರು ಮಂದಿ ಬಂದಿದ್ದು ಒಬ್ಬಾತನ ಬಳಿ ಮಾರಕಾಯುಧ ಇತ್ತು ಎಂದು ಮೆಲ್ವಿಲ್ ಪಿಂಟೊ ತಿಳಿಸಿದ್ದಾರೆ. ಬಳಿಕ ಕಂಕನಾಡಿ ಆಸುಪಾಸಿನ […]

ರೌಡಿ ಶೀಟರ್ ಉಮೇಶ್‌ ರೈ ಕೊಲೆ ಆರೋಪಿಗಳ ಬಂಧನ

Friday, September 24th, 2010
ದ ಕ ಎಸ್ ಪಿ ಪತ್ರಿಕಾಗೋಷ್ಠಿ

ಮಂಗಳೂರು : ರೌಡಿ ಶೀಟರ್  ತಿಂಗಳಾಡಿ ಉಮೇಶ್‌ ರೈ (36)  ಕೊಲೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪುತ್ತೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಪುತ್ತೂರು ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಡಿ. ಅಮ್ಮಣ್ಣ ರೈ, ಅಮ್ಮಣ್ಣ ರೈ ಅವರ ಬಾವ ಈಶ್ವರಮಂಗಲ ನಿವಾಸಿ ಜಯರಾಜ ರೈ ಹಾಗೂ ಅರಿಯಡ್ಕ ನಿವಾಸಿಗಳಾದ ರಾಮಚಂದ್ರ ನಾಯ್ಕ ಮತ್ತು ರಾಮಕೃಷ್ಣ ನಾಯ್ಕ ಬಂದಿತ ಆರೋಪಿಗಳು ಎಂದು ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಬ್ರಹ್ಮಣ್ಯೇಶ್ವರ ರಾವ್ ಅವರು ಇಂದು ಸುದ್ದಿಗೋಷ್ಠಿ ಯಲ್ಲಿ ತಿಳಿಸಿದ್ದಾರೆ. ಉಮೇಶ್‌ ರೈ […]

ನಗರದ ರಾಜರಾಜೇಶ್ವರಿ ಮೆಡಿಕಲ್ ಕಾಲೇಜಿನ ವೈದ್ಯರ ಸಾಧನೆ : ಮಹಿಳೆಯ ಹೊಟ್ಟೆಯಲ್ಲಿದ್ದ 4 ಕೆ.ಜಿ. ಗುಲ್ಮಕ್ಕೆ ಶಸ್ತ್ರಚಿಕಿತ್ಸೆ

Friday, September 24th, 2010
ಮಹಿಳೆಯ ಹೊಟ್ಟೆಯಲ್ಲಿದ 4 ಕೆ.ಜಿ. ಗುಲ್ಮ

ಬೆಂಗಳೂರು: ಮಹಿಳೆಯೊಬ್ಬರ ಹೊಟ್ಟೆಯಲ್ಲಿ 4 ಕೆ.ಜಿ. ಗಾತ್ರಕ್ಕೆ ಬೆಳೆದಿದ್ದ ಗುಲ್ಮವನ್ನು (ಸ್ಪ್ಲೀನ್) ಅಪರೂಪದ ಶಸ್ತ್ರಚಿಕಿತ್ಸೆ ಮೂಲಕ ತೆಗೆದುಹಾಕುವಲ್ಲಿ ನಗರದ ರಾಜರಾಜೇಶ್ವರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯರು ಸಫಲರಾಗಿದ್ದಾರೆ. 40 ವರ್ಷ ಪ್ರಾಯದ ಈ ಮಹಿಳೆ ತೀವ್ರ ಹೊಟ್ಟೆನೋವು ಮತ್ತು ಹಸಿವೆಯೇ ಇಲ್ಲದಿರುವಿಕೆಯ ಸ್ಥಿತಿಯೊಂದಿಗೆ ಆಸ್ಪತ್ರೆಗೆ ಬಂದಿದ್ದರು. ಮೊದಲಿಗೆ ವೈದ್ಯರು ಇದು ತೀವ್ರ ಮಲೇರಿಯಾ ಪ್ರಕರಣ ಎಂದು ಭಾವಿಸಿದ್ದರು. ಆದರೆ ಬಳಿಕ ಇದು ಗುಲ್ಮದ ಹಾನಿಕರ ಗೆಡ್ಡೆ ಎಂಬುದು ಗೊತ್ತಾಯಿತು. ಇದೊಂದು ಅಪರೂಪದ ಪ್ರಕರಣವಾಗಿದ್ದು, ನಾನ್-ಹೊಡ್ಜ್ಕಿಮ್ಸ್ ಲಿಂಫೋಮಾ […]

ಅಯೋಧ್ಯ ವಿವಾದದ ತೀರ್ಪು ಮುಂದಕ್ಕೆ : ಜಿಲ್ಲಾಡಳಿತ ಹೊರಡಿಸಿರುವ ಆದೇಶ ರದ್ದು

Thursday, September 23rd, 2010
ಅಯೋಧ್ಯೆ

ಮಂಗಳೂರು : ರಾಮ ಜನ್ಮಭೂಮಿ- ಬಾಬ್ರಿ ಮಸೀದಿ ವಿವಾದದ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯವು ತಡೆಹಿಡಿದ ಹಿನ್ನಲೆಯಲ್ಲಿ ಶುಕ್ರವಾರ ಪ್ರಕಟವಾಗಬೇಕಿದ್ದ ತೀರ್ಪು ಸೆಪ್ಟೆಂಬರ್ 28 ಕ್ಕೆ ಮುಂದೂಡಲಾಗಿದೆ. ರಮೇಶ್ ಚಂದ್ರ ತ್ರಿಪಾಠಿ ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ಹಿನ್ನಲೆಯಲ್ಲಿ ಅಲಹಾಬಾದ್ ಹೈಕೋರ್ಟಿನ ಲಕ್ನೋ ವಿಶೇಷ ಪೀಠವು ಶುಕ್ರವಾರ ಅಪರಾಹ್ನ ಪ್ರಕಟಿಸ ಬೇಕಿದ್ದ ತೀರ್ಪನ್ನು ಮುಂದೂಡಿದೆ. ತ್ರಿಪಾಠಿಯ  ಅರ್ಜಿಯನ್ನು ಮತ್ತೊಂದು ಪೀಠವು ವಿಚಾರಣೆ ನಡೆಸಲಿದ್ದು.  ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 28ಕ್ಕೆ ನ್ಯಾಯಾಲಯ ಮುಂದೂಡಿ, ಆ ತನಕ ಅಲಹಾಬಾದ್ ಹೈಕೋರ್ಟ್ ತೀರ್ಪು […]

ರಾಜ್ಯ ಸಚಿವ ಸಂಪುಟದ ವಿಸ್ತರಣೆ : ಆರು ಮಂದಿ ಸಚಿವರಿಗೆ ಪ್ರಮಾನವಚನ

Wednesday, September 22nd, 2010
ಆರು ಮಂದಿ ನೂತನ ಸಚಿವರು

ಬೆಂಗಳೂರು : ರಾಜ್ಯ ಸರಕಾರವು ಸಚಿವ ಇಂದು ಬೆಳಗ್ಗೆ 9.30ಕ್ಕೆ ಸಂಪುಟದ ಪುನಾರಚನೆ ಮಾಡಿದೆ.  ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರು ಮಂದಿ  ಸಚಿವರಿಗೆ ರಾಜ್ಯಪಾಲರು ಪ್ರಮಾನವಚನ ಭೋದಿಸಿದರು. ನೂತನ ಸಂಪುಟದದಲ್ಲಿ ಶೋಭಾ ಕರಂದ್ಲಾಜೆ, ಸಿ.ಸಿ. ಪಾಟೀಲ, ವಿ. ಸೋಮಣ್ಣ, ಎ ನಾರಾಣಸ್ವಾಮಿ, ಎ. ರಾಮದಾಸ್ ಮತ್ತು ಸಿ. ಎಚ್. ವಿಜಯಶಂಕರ್ ಅವರು ರಾಜ್ಯಪಾಲರಿಂದ ಪ್ರಮಾನವಚನ ಸ್ವೀಕರಿಸಿದರು. ಬಿ.ಜೆ.ಪಿ ಶಾಸಕರ ಮತ್ತು ಸಚಿವರುಗಳ ಬೆದರಿಕೆ ನಡುವೆಯೂ ಸಂಪುಟ ಪುನರ್ ರಚನೆ ಇಂದು ನಡೆಯಿತು. ಶೋಭಾ ಕರಂದ್ಲಾಜೆ ಮತ್ತು ವಿ. […]

ಎಂದಿರನ್ ಚಿತ್ರ ಬಿಡುಗಡೆಗೆ ಸಿದ್ದ

Tuesday, September 21st, 2010
ಎಂದಿರನ್ ಚಿತ್ರ ಬಿಡುಗಡೆಗೆ ಸಿದ್ದ

ಬೆಂಗಳೂರು : ರಜನಿಕಾಂತ್ ಹಾಗೂ ಐಶ್ವರ್ಯಾ ರೈ ಅಭಿನಯದ ಎಂದಿರನ್ ಚಿತ್ರ ಇದೇ ಸೆ.24ರಂದು ದೇಶಾದ್ಯಂತ ಬಿಡುಗಡೆಯಾಗಲಿದೆ. ಅದೇ ಸಂದರ್ಭದಲ್ಲಿ ಎಂದಿರನ್‌ಗೆ ಸ್ಪರ್ಧೆ ನೀಡಲು ಕನ್ನಡದ ಗುಬ್ಬಿ ಚಿತ್ರ ಸಜ್ಜಾಗಿದೆ! ಏಷ್ಯಾದಲ್ಲೇ ಎಂದಿರನ್‌ಗೆ ಅತೀ ಹೆಚ್ಚು ಬಜೆಟ್ಟಿನ ಚಿತ್ರ ಎಂದು ಹೇಳಲಾಗಿದೆ.

ಹಾಸ್ಯನಟ ಕೆ ಎಂ ರತ್ನಾಕರ್ ನಿಧನ

Tuesday, September 21st, 2010
ಹಿರಿಯ ಕಲಾವಿದ ಕೆ ಎಂ ರತ್ನಾಕರ್

ಮೈಸೂರು : ಹಾಸ್ಯನಟನಾಗಿ 350ಕ್ಕೂ ಹೆಚ್ಚು  ಚಿತ್ರಗಳಲ್ಲಿ ಅಭಿನಯಿಸಿದ ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ಕೆ ಎಂ ರತ್ನಾಕರ್  ಇಂದು ಮಧ್ಯಾಹ್ನ ಮೈಸೂರಿನ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ.  ಅವರು ಮೂತ್ರ ಜನಕಾಂಗದ ವೈಫಲ್ಯದ ಅನಾರೋಗ್ಯದಿಂದ ಅಸ್ವಸ್ಥರಾಗಿದ್ದರು. ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ  ದಾಖಲಾಗಿದ್ದರು. ಇನ್ನು ಅಭಿಮಾನಿಗಳಿಗೆ ಅವರು ಬರಿ ನೆನಪಷ್ಟೆ. ಹಾಸ್ಯನಟನಾಗಿ ಅವರದೇ ಆದ ಪ್ರೇಕ್ಷಕ ವರ್ಗವನ್ನು ನಿರ್ಮಿಸಿದ್ದಾರೆ.  ಗುರು ಶಿಷ್ಯರು, ಅಣ್ಣಯ್ಯ, ಗಡಿಬಿಡಿ ಗಂಡ, ಕೆಂಪಯ್ಯ ಐಪಿಎಸ್, ಭಕ್ತ ಕನಕದಾಸ, ಬಯಲು ದೀಪ ಸಾಹಸ ಸಿಂಹ ವಿಷ್ಣುವರ್ಧನ್  […]

ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ರಾಜೀನಾಮೆ

Tuesday, September 21st, 2010
ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ರಾಜೀನಾಮೆ

ಬೆಂಗಳೂರು : ಚಿಕ್ಕಮಗಳೂರು ಶಾಸಕರಾಗಿ ಮೂರು ಬಾರಿ ಆಯ್ಕೆಯಾಗಿದ್ದ ಶಾಸಕ ಸಿ.ಟಿ.ರವಿ ಅಸಮಾಧಾನದಿಂದ ಶಾಸಕ ಸ್ಥಾನಕ್ಕೆ ಮಂಗಳವಾರ ರಾಜೀನಾಮೆ ಸಲ್ಲಿಸುವ ಮೂಲಕ ಬಿಜೆಪಿಯಲ್ಲಿ ಮತ್ತೆ ಭಿನ್ನಮತ ಸ್ಫೋಟಗೊಂಗೊಂಡಿದೆ. ಚಿಕ್ಕಮಗಳೂರಿನಲ್ಲಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದರೂ ಕೂಡ ಯಾವುದೇ ಬೆಲೆ ಸಿಕ್ಕಿಲ್ಲ ಎಂಬ ಅಸಮಾಧಾನದಿಂದ ಸಿ.ಟಿ.ರವಿ ತಮ್ಮ ರಾಜೀನಾಮೆ ಪತ್ರವನ್ನು ಪಕ್ಷದ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರಿಗೆ ಇಂದು ಬೆಳಿಗ್ಗೆ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂಪುಟ ಪುನಾರಚನೆ ಕುರಿತಾಗಿ ಹೈಕಮಾಂಡ್ ಜೊತೆ ಮಾತುಕತೆ […]