ನಂಜನಗೂಡು ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ನಿಶ್ಚಿತ: ಜನಾರ್ದನ ಪೂಜಾರಿ

Thursday, December 29th, 2016
Janardana Poojary

ಮಂಗಳೂರು: ನಂಜನಗೂಡು ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ನಿಶ್ಚಿತವೆಂದು ಕಾಂಗ್ರೆಸ್‌ನವರೇ ಆದ ಜನಾರ್ದನ ಪೂಜಾರಿ ಪಕ್ಷದ ವಿರುದ್ಧವೇ ಭವಿಷ್ಯ ನುಡಿದಿದ್ದಾರೆ. ನಂಜನಗೂಡು ಉಪಚುನಾವಣೆಗೆ ಕಾಂಗ್ರೆಸ್‌‌ನಿಂದ ಎಷ್ಟೇ ಒಳ್ಳೆಯ ಅಭ್ಯರ್ಥಿ ಹಾಕಿದರು ಪಕ್ಷ ಸೋಲುತ್ತದೆ. ಶ್ರೀನಿವಾಸ್ ಪ್ರಸಾದ್ ಪಕ್ಷದ ಮಾನ ಹರಾಜು ಹಾಕುತ್ತಿದ್ದಾರೆ. ಮುಖ್ಯಮಂತ್ರಿ ಈಗಲಾದರು ಎಚ್ಚೆತ್ತುಕೊಳ್ಳಿ. ಜನರಿಂದ, ಕಾರ್ಯಕರ್ತರಿಂದ ನೀವು ಅಧಿಕಾರಕ್ಕೆ ಬಂದಿದ್ದೀರಾ. ಕಾಂಗ್ರೆಸ್‌ನಲ್ಲಿ ಗೊಂದಲ ಇರುವುದರಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಂಗ್ರೆಸ್ ಧೂಳಿಪಟವಾಗುವ ಎಲ್ಲ ಲಕ್ಷಣ ಗೋಚರಿಸುತ್ತಿದೆ ಎಂದು ಸ್ವಪಕ್ಷದ ವಿರುದ್ಧವೇ ಪೂಜಾರಿ ವಾಗ್ದಾಳಿ ನಡೆಸಿದ್ದಾರೆ. ನನಗೆ […]

ಮಂಗಳೂರಿಗೆ ಬಂದಿದೆ ಡೆಡ್‌ಸಿ ಉತ್ಪನ್ನಗಳು

Saturday, December 17th, 2016
dead-sea-products

ಮಂಗಳೂರು : ಮೊದಲ ಬಾರಿಗೆ ಇಂಡಿಯಾ ಬ್ಯೂಟಿ ಮಿನೆರಲ್ ದೊಡ್ಡ ಮಟ್ಟದ ಸತ್ತ ಸಮುದ್ರ ಉತ್ಪನ್ನಗಳನ್ನು ತಲೆಕೂದಲು, ಚರ್ಮ ಹಾಗೂ ದೇಹ ಸೌಂದರ್ಯಕ್ಕಾಗಿ ಹೂರತರುತ್ತಿದೆ. ಬ್ಯೂಟಿ ಮಿನೆರಲ್ಸ್ ಪ್ರಾಚೀನ ಸೌಂದರ್ಯದ ಅವಶ್ಯಕತೆಗಳನ್ನು ಡೆಡ್‌ಸಿ ಮೂಲಕ ಉತ್ಪಾದಿಸುತ್ತಿದೆ. ಇದು ಹಲವಾರು ರೀತಿಯ ಸೌಂದರ್ಯವರ್ಧಕಗಳನ್ನು ಉತ್ಪಾದಿಸುವುದಲ್ಲದೆ, ತುಂಬಾ ಅತ್ಯಾಧುನಿಕ ಅನುಭವಗಳನ್ನೊಳಗೊಂಡ ಉತ್ಪಾದನಾ ಪ್ರಕ್ರಿಯೆ ಮೂಲಕ ಹೊಸ ಹಾಗೂ ಉತ್ತಮ ವಸ್ತುಗಳನ್ನು ಅಭಿವೃದ್ಧಿಪಡಿಸುತ್ತಿದೆ. ಡೆಡ್‌ಸಿಯು ಜಗತ್ತಿನ ಅತೀ ಗುಣಮಟ್ಟದ ಖನಿಜಗಳನ್ನು ಹೊಂದಿದ್ದು, ಇವು ಚರ್ಮದ ಕಾಳಜಿಯನ್ನು ವಿಶೇಷವಾಗಿ ನಿರ್ವಹಿಸುತ್ತವೆ. ಪ್ರಸಿದ್ಧ ಚಿತ್ರ […]

ಸಮಾಜದ್ರೋಹಿ ದುಷ್ಟಶಕ್ತಿಗಳನ್ನು ಹಿಮ್ಮೆಟ್ಟಿಸುವುದಲ್ಲ, ರಣರಂಗದಲ್ಲಿ ಸದೆಬಡಿಯುವ ಕಾರ್ಯ ಪ್ರತಿ ಗ್ರಾಮಗಳಲ್ಲಾಗಬೇಕು: ಜಗದೀಶ್ ಕಾರಂತ್

Monday, November 28th, 2016
Hindu samavesha

ಮಂಗಳೂರು: ಸಮಾಜದ್ರೋಹಿ ದುಷ್ಟಶಕ್ತಿಗಳನ್ನು ಹಿಮ್ಮೆಟ್ಟಿಸುವುದಲ್ಲ, ಎದುರಿಸುವುದೂ ಅಲ್ಲ ಬದಲಾಗಿ ರಣರಂಗದಲ್ಲಿ ಸದೆಬಡಿಯುವ ಕಾರ್ಯ ಪ್ರತಿ ಗ್ರಾಮಗಳಲ್ಲಾಗಬೇಕು ಎಂದು ಹಿಂದೂ ಜಾಗರಣ ವೇದಿಕೆ ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ್ ಹೇಳಿದರು. ಹಿಂದೂ ಜಾಗರಣ ವೇದಿಕೆಯ ಶಕ್ತಿನಗರ ವಲಯ ಮತ್ತು ಕಣ್ಣೂರು ನಗರ ಘಟಕಗಳ ಉದ್ಘಾಟನಾ ಪ್ರಯುಕ್ತ ಶಕ್ತಿನಗರದ ಕೇಂದ್ರ ಮೈದಾನದಲ್ಲಿ ಭಾನುವಾರ ಜರುಗಿದ ಬೃಹತ್ ಹಿಂದೂ ಸಮಾವೇಶದಲ್ಲಿ ಮಾತನಾಡಿದ ಅವರು, ಹೋರಾಟ, ಸಂಘಟನೆ ಸಮಾವೇಶ ಎಂದರೆ ಸಮಸ್ಯೆಗಳ ವೈಭವೀಕರಣ ಬಿಟ್ಟು ಉತ್ತರ ಕಂಡುಕೊಳ್ಳುವಂತಾಗಬೇಕು. ಸಾಮಾಜಿಕ ಪಿಡುಗುಗಳಿಗೆ ಪರಿಹಾರ […]

ಅಳ್ವಾಸ್ ಪಿಯು ಕಾಲೇಜಿನ ವಿದ್ಯಾರ್ಥಿ ಹಾಸ್ಟೆಲ್‌ನಿಂದ ಕಾಣೆ

Friday, October 7th, 2016
rithik

ಮಂಗಳೂರು: ಅಳ್ವಾಸ್ ಪಿಯು ಕಾಲೇಜಿನ ವಿದ್ಯಾರ್ಥಿ ಹಾಸ್ಟೆಲ್‌ನಿಂದ ಕಾಣೆಯಾಗಿರುವ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾಣೆಯಾದ ವಿದ್ಯಾರ್ಥಿ ಬೆಂಗಳೂರು ಮಾರ್ತಳ್ಳಿ ನಿವಾಸಿ ಭಾಸ್ಕರ್ ಎಂಬುವರ ಪುತ್ರ ರಿತಿಕ್(17)ಎಂದು ತಿಳಿದುಬಂದಿದೆ. ಈತ ಪುತ್ತಿಗೆಯ ಸಹ್ಯಾದ್ರಿ ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದ. ರಿತಿಕ್ ಬುಧವಾರ ಕಾಣೆಯಾಗಿದ್ದು, ಈ ಬಗ್ಗೆ ಹಾಸ್ಟೆಲ್ ವಾರ್ಡನ್ ಬಾಲಣ್ಣ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ರಿತಿಕ್ ಹಾಸ್ಟೆಲ್‌ನಿಂದ ಹೊರಡುವ ಮುನ್ನ ಆಕಾಶ ನೀಲಿಬಣ್ಣದ ಶರ್ಟ್‌, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದ. ದೃಢಕಾಯ ಶರೀರದ ರಿತಿಕ್‌ […]

“ಮುಂಗಾರು ಮಳೆ 2′ ಚಿತ್ರದ ನಾಯಕಿ ನೇಹಾ ಶೆಟ್ಟಿ ಮಂಗಳೂರಿನಲ್ಲಿ

Monday, September 26th, 2016
nehashetty

ಮಂಗಳೂರು:  “ಮುಂಗಾರು ಮಳೆ 2′ ಚಿತ್ರದ ನಾಯಕಿ ಕರಾವಳಿಯ 19ರ ಹರೆಯದ ನೇಹಾ ಶೆಟ್ಟಿ. ಶನಿವಾರ ನಗರದ ಸಿನೆಪೊಲಿಸ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ರವಿಚಂದ್ರನ್‌ ಅವರ ಎದುರುನಟಿಸಲು ನಿಜಕ್ಕೂ ನನಗೆ ನರ್ವಸ್‌ ಆಗಿತ್ತು. ಆದರೆ ಅವರು ನನ್ನ ಜತೆ ಅತ್ಯಂತ ವಿನಯ ಹಾಗೂ ಆತ್ಮೀಯತೆಯಿಂದ ಧೈರ್ಯ ತುಂಬುವ ಮೂಲಕ ಸ್ಫೂರ್ತಿ ನೀಡಿದರು. ಅವರ ಜತೆಗಿನ ನಟನೆ ಅದ್ಭುತ ಅನುಭವ ಎಂದರು. ಗಣೇಶ್‌ ಅಭಿನಯದ ಮುಂಗಾರು ಮಳೆ ಚಿತ್ರ ಬಿಡುಗಡೆಯಾದ ಸಂದರ್ಭ ನಾನು ಶಾಲೆಗೆ ಹೋಗುತ್ತಿದ್ದ ನೆನಪು. ಅದರ ಮೊಲ ನನಗೆ ತುಂಬಾ […]

ಕಲೆ ಮತ್ತು ಸಾಹಿತ್ಯಗಳೆರಡರ ಕೌಶಲ ಪ್ರಕಾಶಕ್ಕೆ ಗಮಕ ಕಲೆ ಅವಕಾಶ ನೀಡುತ್ತದೆ

Friday, September 16th, 2016
kumbale

ಕುಂಬಳೆ: ನಾಡಿನ ಸಾಂಪ್ರದಾಯಿಕ ಕಲೆಯಾದ ಗಮಕ ಪ್ರಕಾರವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಯುವ ಸಮೂಹ ಸ್ವ ಆಸಕ್ತಿಯಿಂದ ಮಾಡಬೇಕು. ಕಲೆ ಮತ್ತು ಸಾಹಿತ್ಯಗಳೆರಡರ ಕೌಶಲ ಪ್ರಕಾಶಕ್ಕೆ ಗಮಕ ಕಲೆ ಅವಕಾಶ ನೀಡುತ್ತದೆಯೆಂದು ಖ್ಯಾತ ಕಲಾವಿದ ಎಸ್ ಎನ್ ಪಂಜಾಜೆ ಅಭಿಪ್ರಾಯ ವ್ಯಕ್ತಪಡಿಸಿದರು. ಕರ್ನಾಟಕ ಗಮಕ ಕಲಾ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಕಾಸರಗೋಡಿನ ಹವ್ಯಕ ಭವನದಲ್ಲಿ ಇತ್ತೀಚೆಗೆ ನಡೆದ ೩ ದಿನಗಳ ಗಮಕ ಕಲಾ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು. ಗಮಕ […]

ಕ್ರೀಡೆಯಲ್ಲಿ ಪ್ರತಿಭಾವಂತರಿಗೆ ತರಬೇತಿ ಅಗತ್ಯ: ಅಜಿತ್‌ಕುಮಾರ್ ರೈ ಮಾಲಾಡಿ

Monday, August 29th, 2016
Ajith-Kumar-Maladi

ಮಂಗಳೂರು: ಕ್ರೀಡೆಯಲ್ಲಿ ಎಳೆಯ ಪ್ರತಿಭಾವಂತರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ತರಬೇತುಗೊಳಿಸುವ ಕಾರ್ಯನಡೆಯಬೇಕಾಗಿದೆ. ಎಳವೆಯಲ್ಲೇ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿದರೆ ಸಮಾಜವೂ ಅಭಿವೃದ್ಧಿ ಕಾಣಲು ಸಾಧ್ಯವಿದೆ ಎಂದು ಶ್ರೀ ಸಿದ್ದಿವಿನಾಯಕ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ಅಜಿತ್‌ಕುಮಾರ್ ರೈ ಮಾಲಾಡಿ ತಿಳಿಸಿದರು. ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಬಂಟ್ಸ್‌ಹಾಸ್ಟೆಲ್‌ನ ಶ್ರೀರಾಮಕೃಷ್ಣ ಕಾಲೇಜ್ ಮೈದಾನದಲ್ಲಿ ಜರಗಿದ ಬಂಟರ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವೇದಿಕೆಯಲ್ಲಿ ಟ್ರಸ್ಟಿಗಳಾದ ಶೆಡ್ಡೆ ಮಂಜುನಾಥ ಭಂಡಾರಿ, ನಿಟ್ಟೆಗುತ್ತು ರವಿರಾಜ ಶೆಟ್ಟಿ, ಕೃಷ್ಣಪ್ರಸಾದ್ ರೈ […]

ಕದ್ರಿ ದೇವಸ್ಥಾನದ ಪ್ರಾಂಗಣದಲ್ಲಿ ಕಲ್ಕೂರ ಪ್ರತಿಷ್ಠಾನದ “ಶ್ರೀ ಕೃಷ್ಣ ವೇಷ ಸ್ಪರ್ಧೆ’

Friday, August 26th, 2016
Shree-Krishna

ಮಂಗಳೂರು : ಕಲ್ಕೂರ ಪ್ರತಿಷ್ಠಾನದ ವತಿಯಿಂದ ಆಯೋಜಿಸುತ್ತಿರುವ ರಾಷ್ಟ್ರ ಮಟ್ಟದ ಮಕ್ಕಳ ಉತ್ಸವ “ಶ್ರೀ ಕೃಷ್ಣ ವೇಷ ಸ್ಪರ್ಧೆ’ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಪ್ರಾಂಗಣದಲ್ಲಿ ಬುಧವಾರ ನಡೆಯಿತು. ಬೆಳಗ್ಗಿನಿಂದ ಸಂಜೆ ವರೆಗೆ ಒಟ್ಟು 8 ವೇದಿಕೆಗಳಲ್ಲಿ 27 ವಿಭಾಗಗಳ ಸ್ಪರ್ಧೆ ಜರಗಿದವು. ರಾಷ್ಟ್ರ ಮಟ್ಟದ ಮಕ್ಕಳ ಉತ್ಸವವನ್ನು ಎ.ಜೆ. ಸಮೂಹ ಸಂಸ್ಥೆಯ ಅಧ್ಯಕ್ಷ ಎ.ಜೆ. ಶೆಟ್ಟಿ ಉದ್ಘಾಟಿಸಿ, ಶುಭ ಕೋರಿದರು. ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಧಿಸ್ಥಾನದ ವೇ| ಮೂ| ಲಕ್ಷ್ಮಿನಾರಾಯಣ ಆಸ್ರಣ್ಣ ಆಶೀರ್ವಚನ ನೀಡಿದರು. ಕದ್ರಿ […]

ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಮಸೂದೆಗೆ ರಾಜ್ಯಸಭೆಯ ಅನುಮೋದನೆ

Thursday, August 4th, 2016
GST

ಹೊಸದಿಲ್ಲಿ: ಒಂದು ದೇಶ-ಒಂದೇ ರೀತಿಯ ತೆರಿಗೆ’ ಎಂಬ ಧ್ಯೇಯ ಹೊಂದಿರುವ “ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಸೂದೆ’ಗೆ ಕೊನೆಗೂ ರಾಜ್ಯಸಭೆಯ ಅನುಮೋದನೆ ಸಿಕ್ಕಿದೆ. ಬುಧವಾರ ಮಧ್ಯಾಹ್ನ ಮಂಡಿಸಲಾದ ಐತಿಹಾಸಿಕ ಮಸೂದೆ ಕುರಿತು ಸತತ 7 ಗಂಟೆಗಳ ಚರ್ಚೆ ನಡೆದು, ಬಳಿಕ ಮಸೂದೆಯನ್ನು ಮತಕ್ಕೆ ಹಾಕಿದಾಗ, ಮಸೂದೆ ಪರ 203 ಮತ್ತು ವಿರುದ್ಧವಾಗಿ ಮತ ಚಲಾವಣೆಯಾದವು. ಈ ಮೂಲಕ ಮಸೂದೆಗೆ ಸದನವು ಬಹುಮತದ ಅನುಮೋದನೆ ನೀಡಿತು. ಮಸೂದೆಗೆ ಎಐಎಡಿಎಂಕೆ ಮಾತ್ರವೇ ವಿರೋಧ ವ್ಯಕ್ತಪಡಿಸಿತ್ತು. ಆದರೆ ಕಾಂಗ್ರೆಸ್‌ ಕೂಡಾ […]

ಸ್ವಾಮಿ ವಿವೇಕಾನಂದ ಶಾಖೆ ಮಜಲೋಡಿ ಮಿಜಾರು ಬಂಟ್ವಾಳ ಇದರ ಅಧ್ಯಕ್ಷರಾಗಿ ಉಮೇಶ್ ಮಜಲೋಡಿ ಆಯ್ಕೆ

Wednesday, July 27th, 2016
Umesh-majalody

ಬಂಟ್ವಾಳ: ಸ್ವಾಮಿ ವಿವೇಕಾನಂದ ಶಾಖೆ ಮಜಲೋಡಿ ಮಿಜಾರು ಬಂಟ್ವಾಳ ಇದರ ನೂತನ ಅಧ್ಯಕ್ಷರಾಗಿ ಉಮೇಶ್ ಮಜಲೋಡಿ ಆಯ್ಕೆಯಾಗಿದ್ದಾರೆ. ಗೌರವಧ್ಯಾಕ್ಷರಾಗಿ ಚಿದಾನಂದ ಕುಜ್ಲುಬೆಟ್ಟು, ಗೌರವ ಸಲಹೆಗಾರರಾಗಿ ಗೋಪಾಲ ಮಜಲೋಡಿ, ಕಾರ‍್ಯದರ್ಶಿಯಾಗಿ ಪ್ರವೀಣ್ ಕೆಲ್ದೋಡಿ ಇವರನ್ನು ಶಾಖೆಯ ಮಹಾಸಭೆಯಲ್ಲಿ ಆಯ್ಕೆಮಾಡಲಾಯಿತು. ಈ ಸಂದರ್ಭ ಹಿಂದೂ ಯುವಸೇನೆ ಬಂಟ್ವಾಳ ತಾಲೂಕು ಘಟಕದ ಪ್ರಧಾನ ಕಾರ‍್ಯದರ್ಶಿ ವಸಂತ ಕುಮಾರ್ ಕೊಂಗ್ರಬೆಟ್ಟು, ಪ್ರಮುಖರಾದ ರಾಮಚಂದ್ರ ಗೌಡ, ನವೀನ್ ಮಣಿಹಳ್ಳ, ಯೋಗೀಶ್ ಕೇಲ್ದೋಡಿ, ಹರೀರ್ಶ ಮಜಲೋಡಿ ಹಾಗೂ ಶಾಖೆಯ ಸದಸ್ಯರುಗಳು ಉಪಸ್ಥಿತರಿದ್ದರು.