ಧರ್ಮಸ್ಥಳ: ಹೆಗ್ಗಡೆಯವರ 69ನೆ ವರ್ಷದ ಜನ್ಮ ದಿನಾಚರಣೆ

Friday, November 25th, 2016
veerendra heggade

ಉಜಿರೆ: ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ 69ನೆ ವರ್ಷದ ಜನ್ಮ ದಿನಾಚರಣೆಯನ್ನು ಶುಕ್ರವಾರ ಧರ್ಮಸ್ಥಳದಲ್ಲಿ ಬೀಡಿನಲ್ಲಿ ಸರಳವಾಗಿ ಆಚರಿಸಲಾಯಿತು. ಊರ-ಪರವೂರ ಅಭಿಮಾನಿಗಳು ಬಂದು ಹೆಗ್ಗಡೆಯವರಿಗೆ ಭಕ್ತಿ ಪೂರ್ವಕ ಶುಭಾಶಯಗಳನ್ನು ಸಲ್ಲಿಸಿದರು. ಮಾಜಿ ಸಚಿವರಾದ ಅಭಯಚಂದ್ರ ಜೈನ್, ಮೂಡಬಿದ್ರೆಯ ಡಾ. ಎಂ. ಮೋಹನ ಆಳ್ವ, ಜಿಲ್ಲಾ ಕೃಷಿಕ ಸಮಾಜದ ಆಧ್ಯಕ್ಷ ಎಸ್. ಡಿ. ಸಂಪತ್ ಸಾಮ್ರಾಜ್ಯ, ಮಂಗಳೂರಿನ ಕೆ. ರಾಜವರ್ಮ ಬಳ್ಳಾಲ್, ಎಸ್.ಡಿ.ಎಂ. ಕಾನೂನು ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಎ. ರಾಜೇಂದ್ರ ಶೆಟ್ಟಿ ಮೊದಲಾದ ಗಣ್ಯರು […]

‘ನೋಟು ರದ್ದತಿಯಿಂದ ಕಪ್ಪು ಹಣ ನಿಗ್ರಹವಾಯಿತೇ..?’ ಸಿಪಿಐ ಪ್ರತಿಭಟನಾ ಪ್ರದರ್ಶನ

Friday, November 25th, 2016
cpi

ಮಂಗಳೂರು : ದ.ಕ. ಮತ್ತು ಉಡುಪಿ ಜಿಲ್ಲಾ ಮಂಡಳಿ ವತಿಯಿಂದ ದ.ಕ. ಜಿಲ್ಲಾಧಿಕಾರಿ ಕಚೇರಿಯೆದುರು ಸಿಪಿಐ ರಾಷ್ಟ್ರೀಯ ಕರೆಯಂತೆ ಶುಕ್ರವಾರ ದ.ಕ. ಜಿಲ್ಲಾಧಿಕಾರಿ ಕಚೇರಿಯೆದುರು ‘ನೋಟು ರದ್ದತಿಯಿಂದ ಕಪ್ಪು ಹಣ ನಿಗ್ರಹವಾಯಿತೇ..?’ ಎಂಬ ಪ್ರತಿಭಟನಾ ಪ್ರದರ್ಶನ ನಡೆಯಿತು. 1000 ಮತ್ತು 500 ರೂ. ಮುಖ ಬೆಲೆಯ ನೋಟುಗಳ ರದ್ದತಿಯ ನಂತರ ದೇಶದಲ್ಲಿ ಆರ್ಥಿಕ ಅಸಮತೋಲನ ಉಂಟಾಗಿದೆ. ಜನಸಾಮಾನ್ಯರು ಸಂಕಷ್ಟವನ್ನು ಅನುಭವಿಸುತ್ತಿದ್ದು, ಕೇಂದ್ರದ ಸರಕಾರದ ಈ ಕ್ರಮವನ್ನು ವಿರೋಧಿಸುವುದಾಗಿ ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ)ದ ದ.ಕ. ಮತ್ತು ಉಡುಪಿ ಜಿಲ್ಲಾ ಕಾರ್ಯದರ್ಶಿ ಕುಕ್ಯಾನ್ […]

ಭೀಕರ ಗುಂಡಿನ ಕಾಳಗದಲ್ಲಿ ಓರ್ವ ಸೇನಾ ಜವಾನ ಹುತಾತ್ಮ: ಇಬ್ಬರು ಉಗ್ರರು ಬಲಿ

Friday, November 25th, 2016
Bandipora

ಹೊಸದಿಲ್ಲಿ : ಉತ್ತರ ಜಮ್ಮು ಕಾಶ್ಮೀರದ ಬಂಡಿಪೋರಾದಲ್ಲಿ ನಡೆದಿರುವ ಭೀಕರ ಗುಂಡಿನ ಕಾಳಗದಲ್ಲಿ ಓರ್ವ ಸೇನಾ ಜವಾನ ಹುತಾತ್ಮನಾಗಿ ಇಬ್ಬರು ಉಗ್ರರು ಹತರಾಗಿದ್ದಾರೆ. ಇದೇ ವೇಳೆ ಭದ್ರತಾ ಪಡೆಗಳು ಬಂಡಿಪೋರಾ ಸಮೀಪ ಮನೆಯೊಂದರಲ್ಲಿ ಅಡಗಿಕೊಂಡಿರುವ ಉಗ್ರರ ಇನ್ನಂದು ಗುಂಪಿನ ವಿರುದ್ಧ ಗುಂಡಿನ ಕಾಳಗದಲ್ಲಿ ನಿರತವಾಗಿವೆ. ಬಂಡಿಪೋರಾ ಜಿಲ್ಲೆಯ ನಯೀದ್‌ಖಾ ಎಂಬಲ್ಲಿನ ತೋಪೊಂದರಲ್ಲಿ ಉಗ್ರರು ಅಡಗಿಕುಳಿತಿರುವ ಮಾಹಿತಿ ಪಡೆದ ಭದ್ರತಾ ಪಡೆಗಳು ತೋಪನ್ನು ಸುತ್ತುವರಿದು ಗುಂಡಿನ ಕಾಳಗಕ್ಕೆ ತೊಡಗಿಕೊಂಡರು. ಉಗ್ರರೊಂದಿಗೆ ಕಾದಾಟದಲ್ಲಿ 13ನೇ ರಾಷ್ಟ್ರೀಯ ರೈಫ‌ಲ್ಸ್‌ ಪಡೆಯ ಸೈನಿಕನೊಬ್ಬ […]

ಹದಿನಾಲ್ಕು ಲಕ್ಷ ಬೆಲೆ ಬಾಳುವ ವಜ್ರದ ಉಂಗುರ ಹಾಗೂ ಬ್ರಿಟಿಷ್ ಪೌಂಡ್ ಕಳವು

Friday, November 25th, 2016
Diamond-ring

ಮಂಗಳೂರು: ಹದಿನಾಲ್ಕು ಲಕ್ಷ ಬೆಲೆ ಬಾಳುವ ವಜ್ರದ ಉಂಗುರ ಹಾಗೂ ಬ್ರಿಟಿಷ್ ಪೌಂಡ್ ಕಳ್ಳತನವಾಗಿರುವ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯೂಸುಫ್ ಎಂಬುವರು ಲೋಬೊ ಲೇನ್‌ನಲ್ಲಿರುವ ಮನೆ ಮೇವದಲ್ಲಿ ತನ್ನ ಸಹೋದರ ವಹಾಜ್ ಯೂಸುಫ್ ಕೊಠಡಿಯ ಲಾಕರಿನಲ್ಲಿ ಈ ವಜ್ರದ ಉಂಗುರ ಮತ್ತು ಪೌಂಡ್ ಇರಿಸಿದ್ದರು. ಲಾಕರ್‌ನಿಂದ ಈ ವಸ್ತುಗಳು ಕಳ್ಳತನವಾಗಿವೆ. ಯೂಸುಫ್‌ಗೆ ವಜ್ರದುಂಗರ ಮದುವೆ ನಿಶ್ಚಿತಾರ್ಥದಲ್ಲಿ ಗಿಫ್ಟ್‌ ಆಗಿ ದೊರೆತಿತ್ತು ಎಂದಿದ್ದಾರೆ. ಪ್ರಕರಣ ದಾಖಲಿಸಿರುವ ಕದ್ರಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮಂಗಳೂರಿನ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಮೆದುಳಿನ ರಕ್ತನಾಳ ಬಿರುಕಿಗೆ ಹೊಲಿಗೆ ರಹಿತ ಚಿಕಿತ್ಸೆ

Friday, November 25th, 2016
Brain-treatment

ಮಂಗಳೂರು: ತಲೆ ಒಳಗಿರುವ ಅಪಧಮನಿಯ ಒಡೆತ ಒಂದು ಗಂಭೀರವಾದ ಸಮಸ್ಯೆ. ವಿಪರೀತ ತಲೆನೋವು ಇದರ ಮುಖ್ಯ ಲಕ್ಷಣ. ಇದಕ್ಕೆ ಸೂಕ್ತವಾದ ಚಿಕಿತ್ಸೆ ತಲೆಯ ಶಸ್ತ್ರಚಿಕಿತ್ಸೆ ಮಾಡಿ, ತಲೆ ಬುರುಡೆಯನ್ನು ತೆರೆದು ಒಡೆತಕ್ಕೆ ಕ್ಲಿಪ್ ಹಾಕುವುದು. ಪ್ರಪಂಚದಾದ್ಯಂತ ನರರೋಗ ಶಸ್ತ್ರ ಚಿಕಿತ್ಸಾ ತಜ್ಞರು ಹೊಲಿಗೆ ಇಲ್ಲದ ಶಸ್ತ್ರ ಚಿಕಿತ್ಸೆ ಅಳವಡಿಸುತ್ತಿದ್ದಾರೆ. ಈ ಚಿಕಿತ್ಸಾ ಪದ್ಧತಿಯಲ್ಲಿ ಪ್ಲಾಟಿನಮ್ ಧಾತುವಿನ ಕೂದಲಿನ ಗಾತ್ರದ ಸುರುಳಿಯನ್ನು ತೊಡೆಯ ಚಿಕ್ಕ ತೂತಿನ ಮೂಲಕ ಮೆದುಳಿನ ರಕ್ತನಾಳದ ಒಡೆತದಲ್ಲಿ ತುಂಬಿಸಲಾಗುತ್ತದೆ. ಈ ಚಿಕಿತ್ಸಾ ಪದ್ಧತಿಯನ್ನು ಕ್ಯಾಥ್ಲ್ಯಾಬ್‌ನಲ್ಲಿ […]

ವೈಯಕ್ತಿಕ ಕಾರಣಗಳಿಂದಲೇ ಐಎಎಸ್‌ ಅಧಿಕಾರಿ ಡಿ.ಕೆ. ರವಿ ಆತ್ಮಹತ್ಯೆ

Friday, November 25th, 2016
D K Ravi

ಬೆಂಗಳೂರು: ಇಪ್ಪತ್ತು ತಿಂಗಳ ಹಿಂದೆ ರಾಷ್ಟ್ರ ಮಟ್ಟದಲ್ಲಿ ಬಹುಚರ್ಚಿತವಾಗಿದ್ದ ಐಎಎಸ್‌ ಅಧಿಕಾರಿ ಡಿ.ಕೆ. ರವಿ ನಿಗೂಢ ಸಾವಿನ ಬಗ್ಗೆ ಸುದೀರ್ಘಾವಧಿಯ ತನಿಖೆ ಮುಗಿಸಿರುವ ಕೇಂದ್ರ ತನಿಖಾ ದಳ (ಸಿಬಿಐ), ವೈಯಕ್ತಿಕ ಕಾರಣಗಳಿಂದಲೇ ಐಎಎಸ್‌ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಲ್ಲಿ ಹೇಳಿದೆ. ಐಎಎಸ್‌ ಅಧಿಕಾರಿ ಸಾವಿನ ಕುರಿತು ಬೆಂಗಳೂರು ದಕ್ಷಿಣ ವಲಯ ಉಪ ವಿಭಾಗಾಧಿಕಾರಿ ಡಿ.ಬಿ. ನಟೇಶ್‌ಗೆ ಸೋಮವಾರ 90 ಪುಟಗಳ ಅಂತಿಮ ವರದಿ ಸಿಬಿಐ ಅಧಿಕಾರಿಗಳಿಂದ ಸಲ್ಲಿಕೆಯಾಗಿದ್ದು, ಇದರಲ್ಲಿ ತೀರಾ ವೈಯಕ್ತಿಕ ಕಾರಣಗಳಿಂದಾಗಿ ಬೇಸರಗೊಂಡು ರವಿ […]

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಅದ್ಧೂರಿ ಲಕ್ಷ ದೀಪೋತ್ಸವ

Friday, November 25th, 2016
Dharmasthala Laksha Deepotsava

ಬೆಳ್ತಂಗಡಿ: ಪ್ರತಿ ವರ್ಷ ಕಾರ್ತಿಕ ಮಾಸದ ನಿಮಿತ್ತ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಜರಗುವ ಲಕ್ಷ ದೀಪೋತ್ಸವಕ್ಕೆ ಗುರುವಾರ ಅದ್ಧೂರಿ ಚಾಲನೆ ನೀಡಲಾಯಿತು. ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿಯ ದೇವಸ್ಥಾನ ಹಾಗೂ ದೇವಸ್ಥಾನದ ಬೀದಿಗಳನ್ನು ಬಣ್ಣ ಬಣ್ಣದ ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿತದೆ. ಸಂಪ್ರದಾಯ ಬದ್ಧವಾಗಿ ನಡೆಸಿಕೊಂಡು ಬರಲಾಗುತ್ತಿರುವ ಲಕ್ಷ ದೀಪೋತ್ಸವ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಕಡೆಯಿಂದ ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ. ಈ ಎಲ್ಲ ಭಕ್ತರ ನಡುವೆ ನಿನ್ನೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇನ್ನು ದೀಪೋತ್ಸವದ ಅಂಗವಾಗಿ ವಿವಿಧ ಸಾಂಸ್ಕೃತಿಕ […]

ಕದ್ರಿ ಮಾರುಕಟ್ಟೆ ದುರವಸ್ಥೆಯನ್ನು ವಿರೋಧಿಸಿ ತುಳುನಾಡ ರಕ್ಷಣಾ ವೇದಿಕೆ ಪ್ರತಿಭಟನೆ

Thursday, November 24th, 2016
trv

ಮಂಗಳೂರು : ತುಳುನಾಡ ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಕದ್ರಿ ಮಾರುಕಟ್ಟೆ ದುರವಸ್ಥೆಯನ್ನು ವಿರೋಧಿಸಿ ಗುರವಾರ ನಡೆದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕ ಅಧ್ಯಕ್ಷ ಯೋಗೀಶ್ ಶೆಟ್ಟಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಟ್ಟ ಕದ್ರಿ ಪ್ರದೇಶವು ಇತಿಹಾಸ ಪ್ರಸಿದ್ಧ ದೇವಸ್ಥಾನ, ಚರ್ಚ್ ಸೇರಿದಂತೆ ಹೆಚ್ಚಿನ ವಸತಿ ಸಂಕೀರ್ಣ, ಆಸ್ಪತ್ರೆ, ಮದುವೆ ಸಭಾಂಗಣಗಳು ಹೊಂದಿವೆ. 2000 ನೇ ಇಸವಿಯಲ್ಲಿ ಆತುರದಲ್ಲಿ ಪ್ರಾರಂಭವಾದ ಕದ್ರಿ ಮಲ್ಲಿಕಟ್ಟೆಯ ಮಾರುಕಟ್ಟೆಯು ಸಮಸ್ಯೆಗಳ ಆಗರವಾಗಿದೆ ಎಂದಿದ್ದಾರೆ. ಕದ್ರಿ ಮಾರುಕಟ್ಟೆ 1980ರ […]

ಹಣ ಕೊಟ್ಟು ಪ್ರತಿಭಟನಾಕಾರರನ್ನು ಕರೆ ತಂದು ಮೋದಿ ವಿರುದ್ಧ ಪ್ರತಿಭಟನೆ: ಕಾಂಗ್ರೆಸ್ ಗೆ ಮಖಭಂಗ

Thursday, November 24th, 2016
Modi

ಬೆಳಗಾವಿ: 500, 1000 ರೂಪಾಯಿ ನೋಟು ನಿಷೇಧಿಸಿದ ಪ್ರಧಾನಿ ನರೇಂದ್ರ ಮೋದಿ ನಿರ್ಧಾರದ ವಿರುದ್ಧ ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ, ಮತ್ತೊಂದೆಡೆ ಹಣ ಕೊಟ್ಟು ಪ್ರತಿಭಟನಾಕಾರರನ್ನು ಕರೆ ತಂದು ಮೋದಿ ವಿರುದ್ಧ ಪ್ರತಿಭಟನೆ ನಡೆಸಿ ಮಖಭಂಗಕ್ಕೀಡಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ ಎಂದು ಖಾಸಗಿ ಟಿವಿ ಚಾನೆಲ್ ವೊಂದರ ವರದಿ ತಿಳಿಸಿದೆ. ರೇಷನ್ ಕಾರ್ಡ್ ಕೊಡಿಸುವುದಾಗಿ ನಂಬಿಸಿ ಕಾಂಗ್ರೆಸ್ ಪಕ್ಷದವರು ಜನರನ್ನು ಕರೆತಂದಿದ್ದರು. ಆದರೆ ಸ್ಥಳಕ್ಕೆ ಬಂದಾಗ ನೋಟು ನಿಷೇಧಿಸಿದ್ದ ಪ್ರಧಾನಿ ಮೋದಿ ವಿರುದ್ಧ ಪ್ರತಿಭಟನೆ ನಡೆಸಬೇಕು ಎಂದಾಗ…ಜನರು ಗರಂ […]

ವಿದ್ಯುತ್‌ ಕಡಿತ: ಉದ್ಯಮ ಹಾಗೂ ಕೃಷಿ ಚಟುವಟಿಕೆಗಳಿಗೆ ವಿದ್ಯುತ್‌ ಕೊರತೆ

Thursday, November 24th, 2016
Curent

ಮಂಗಳೂರು: ಈ ಬಾರಿ ಮುಂಗಾರು ಕೈಕೊಟ್ಟಿದೆ. ಚಳಿಗಾಲದ ಹೆಸರೇ ಇಲ್ಲದಂತೆ ಬೇಸಗೆ ಸಮೀಪಿಸುತ್ತಿದೆ. ಇದರೊಂದಿಗೆ ವಿದ್ಯುತ್‌ ಕಡಿತದ ಬಿಸಿ ಮಂಗಳೂರು ತಾಲೂಕು ವ್ಯಾಪ್ತಿಯಲ್ಲಿ ತಟ್ಟಲಾರಂಬಿಸಿದ್ದು, ಉದ್ಯಮ ಹಾಗೂ ಕೃಷಿ ಚಟುವಟಿಕೆಗಳಿಗೆ ವಿದ್ಯುತ್‌ ಕೊರತೆ ಕಾಡುತ್ತಿದೆ. ಮೆಸ್ಕಾಂ ತಿಳಿಸುವ ಪ್ರಕಾರ ಮಂಗಳೂರು ತಾಲೂಕು ವ್ಯಾಪ್ತಿಯಲ್ಲಿ ಈಗ ಅಧಿಕೃತ ಲೋಡ್‌ಶೆಡ್ಡಿಂಗ್‌ ಜಾರಿಯಲ್ಲಿಲ್ಲ. ಆದರೆ, ಅನಧಿಕೃತವಾಗಿ ವಿದ್ಯುತ್‌ ಕಡಿತ ಮಾತ್ರ ಸಾಮಾನ್ಯವಾಗಿದೆ. ಈಗ ಇದ್ದ ವಿದ್ಯುತ್‌ ಅರೆಘಳಿಗೆಯಲ್ಲಿಯೇ ಮಾಯವಾಗುತ್ತಿದೆ. ಮತ್ತೆ ಯಾವ ಸಮಯಕ್ಕೆ ಬರುತ್ತದೆ ಎಂಬುದು ಇಲ್ಲಿ ಯಕ್ಷಪ್ರಶ್ನೆ. ಮಂಗಳೂರು ತಾಲೂಕಿಗೆ […]