ಭಾರತದ ಬಾಡ್ಮಿಂಟನ್ ತಾರೆ ಪಿವಿ ಸಿಂಧು ಬೆಳ್ಳಿಯೊಂದಿಗೆ ಭಾರತಕ್ಕೆ

Saturday, August 20th, 2016
P-V-Sindhu

ರಿಯೋ ಡಿ ಜನೈರೋ: ಭಾರತದ ಬಾಡ್ಮಿಂಟನ್ ತಾರೆ ಪಿವಿ ಸಿಂಧು ಅಂತಿಮವಾಗಿ ಬೆಳ್ಳಿಯೊಂದಿಗೆ ಭಾರತಕ್ಕೆ ಬರುತ್ತಿದ್ದಾರೆ. ಸ್ಪೇನಿನ ಕರೋಲಿನಾ ಮರೀನ್ ವಿರುದ್ಧ ನಡೆದ ರೋಚಕ ಫೈನಲ್ ಹಣಾಹಣಿಯಲ್ಲಿ ಸಿಂಧು ವಿರೋಚಿತ ಸೋಲು ಕಂಡಿದ್ದಾರೆ. ಮೊದಲ ಸೆಟ್ ಗೆದ್ದ ಸಿಂಧು ಕೋಟ್ಯಂತರ ಜನರ ಆಸೆಯನ್ನು ನೆರವೇರಿಸುವ ತವಕದಲ್ಲಿದ್ದರು. ಆದರೆ ನಂತರ ತಿರುಗಿ ಬಿದ್ದ ಸ್ಪೇನಿನ ಎಡಗೈ ಆಟಗಾರ್ತಿ ಕರೋಲಿನಾ ಮರೀನ್ ಕೊನೆಯ ಎರಡು ಸೆಟ್ ಗಳನ್ನು ಗೆದ್ದು ಚಿನ್ನಕ್ಕೆ ಕೊರಳೊಡ್ಡಿದರು. ಭಾರತದ 10ನೇ ಶ್ರೇಯಾಂಕಿತೆ ಪಿವಿ ಸಿಂಧು ಮೊದಲ […]

ಅರಣ್ಯ ಇಲಾಖೆ ಸಿಬ್ಬಂದಿಯಿಂದ ಬಾವಿಗೆ ಬಿದ್ದಿದ್ದ ಎರಡು ನರಿಗಳ ರಕ್ಷಣೆ

Saturday, August 20th, 2016
Forest-Operations

ಮಂಗಳೂರು: ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಂದಲೆ ಗ್ರಾಮದಲ್ಲಿ ಬಾವಿಗೆ ಬಿದ್ದಿದ್ದ ಎರಡು ನರಿಗಳನ್ನು ಮೂಡುಬಿದಿರೆ ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಿದರು. ಕಡಂದಲೆಯ ಬೋಜ ಅಂಚನ್ ಎಂಬುವರ ಬಾವಿಗೆ ಈ ನರಿಗಳು ಬಿದ್ದಿದ್ದವು. ಅರಣ್ಯ ಅಧಿಕಾರಿ ಜಿ.ಡಿ ದಿನೇಶ್ ನೇತೃತ್ವದ ಅರಣ್ಯ ಇಲಾಖೆಯ ತಂಡ ನರಿಗಳನ್ನು ಬಲೆಯ ಮುಖಾಂತರ ಬಾವಿಯಿಂದ ಹೊರತೆಗೆದು ಕಾಡಿಗೆ ಬಿಟ್ಟಿತು. ಉಪ ವಲಯ ಅರಣ್ಯಾಧಿಕಾರಿ ಅನಿಲ್ ಕೆ, ಸಿಬ್ಬಂದಿಗಳಾದ ಎ.ಕೆ ಅಣ್ಣಯ್ಯ, ರಮೇಶ್ ನಾಯ್ಕ್, ಮಿಥುನ್ ಕುಮಾರ್, ಬಸಪ್ಪ, ಸದಾನಂದ, ಕಾರ್ಯಾಚರಣೆಯಲ್ಲಿ […]

ಬಿಎಸ್‌ವೈಗೆ ಸಡ್ಡು : ಈಶ್ವರಪ್ಪ ಬ್ರಿಗೇಡ್‌ ಅಸ್ತಿತ್ವಕ್ಕೆ

Saturday, August 20th, 2016
Eshwarappa

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ಸಲಹೆ-ಸೂಚನೆಗೆ ಕ್ಯಾರೆ ಎನ್ನದ ಪಕ್ಷದ ನಾಯಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಅವರು ಗುರುವಾರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಸಭೆ ನಡೆಸುವ ಮೂಲಕ ಹಿಂದುಳಿದ ಮತ್ತು ದಲಿತ ವರ್ಗಗಳ ಸಂಘಟನೆಗೆ ದಾಪುಗಾಲು ಇಟ್ಟಿದ್ದಾರೆ. ಆದರೆ ಯಡಿಯೂರಪ್ಪ ಅವರ ಭಯದ ಕಾರಣವೋ ಏನೋ ಎಂಬಂತೆ ಈ ಬಾರಿ ಈಶ್ವರಪ್ಪ ಅವರು ಎಚ್ಚರಿಕೆಯ ಹೆಜ್ಜೆ ಇಟ್ಟಿದ್ದು, ಬ್ರಿಗೇಡ್‌ನ‌ ನೂತನ ಪದಾಧಿಕಾರಿಗಳ ಪಟ್ಟಿಯಿಂದ ಅಧಿಕೃತವಾಗಿ ಹೊರಗುಳಿದಿದ್ದಾರೆ. ಬ್ರಿಗೇಡ್‌ಗೆ 22 ರಾಜ್ಯ ಸಂಚಾಲಕರನ್ನು ನೇಮಿಸಿದ್ದು, ಇದರಲ್ಲಿ […]

ಗಾಂಜಾ ಸಾಗಾಟಕ್ಕೆ ಯತ್ನಿಸಿದ ಮಹಿಳೆಯೊಬ್ಬರ ಬಂಧನ

Saturday, August 20th, 2016
Ganja

ಮಂಗಳೂರು: ನಗರದಲ್ಲಿ ಗಾಂಜಾ ಸಾಗಾಟಕ್ಕೆ ಯತ್ನಿಸಿದ ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ. ಬಂಧಿತ ಮಹಿಳೆಯನ್ನು ಕಸಬಾ ಬೆಂಗರೆಯ ಫಾತಿಮಾ (21) ಎಂದು ಗುರುತಿಸಲಾಗಿದೆ. ನಗರದ ಕಾರಾಗೃಹದೊಳಗೆ ಗಾಂಜಾ ಸಾಗಿಸಲು ಯತ್ನಿಸಿದ ಈಕೆಯನ್ನು ಕೈಗಾರಿಕಾ ಭದ್ರತಾ ಪಡೆ ಪೊಲೀಸರು ಬಂಧಿಸಿದ್ದಾರೆ. ಮಹಿಳೆ ತನ್ನ ಬಟ್ಟೆಯೊಳಗೆ 47 ಗ್ರಾಂ ಗಾಂಜಾವನ್ನಿಟ್ಟುಕೊಂಡು ಕೈದಿ ಅಸಿಪ್‌‌ ಎಂಬಾತನಿಗೆ ಸಾಗಿಸಲು ಯತ್ನಿಸುತ್ತಿದ್ದ ವೇಳೆ ಬಂಧಿಸಲಾಗಿದೆ. ಆರೋಪಿ ಮಹಿಳೆಯನ್ನು ಬರ್ಕೆ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ.

ಭಜರಂಗದಳ ಕಾರ್ಯಕರ್ತ ರೌಡಿ ಶೀಟರ್‌ ಶರಣ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರ ವಶ

Saturday, August 20th, 2016
Sharan

ಮಂಗಳೂರು: ಭಜರಂಗದಳ ಕಾರ್ಯಕರ್ತ ಹಾಗೂ ರೌಡಿ ಶೀಟರ್‌ ಶರಣ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೊಲೆರೋ ಕಾರಿನ ಸಮೇತ ಐವರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ. ಶರಣ್ ಹಂತಕರು ಬೊಲೆರೋ ಕಾರಿನಲ್ಲಿ ಬಂದು ಈ ಕೃತ್ಯ ಎಸಗಿದ್ದರು ಎಂಬ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿಯೊಂದು ದೊರೆತಿತ್ತು. ಕೊಲೆ ನಡೆದ ಕೆಲವೇ ಕ್ಷಣದಲ್ಲಿ ಕಾರ್ಯಪ್ರವೃತರಾದ ಪೊಲೀಸ್ ತಂಡ ಹಂತಕರಿಗಾಗಿ ಜಿಲ್ಲೆಯಾದ್ಯಂತ ವ್ಯಾಪಕ ಬಲೆ ಬೀಸಿದ್ದರು. ಈ ನಡುವೆ ಕೊಲೆ ನಡೆದ ಕೆಲವೇ ಸಮಯದಲ್ಲಿ ಹಂತಕರು ಪರಾರಿಯಾಗಲು ಯತ್ನಿಸುತ್ತಿದ್ದ ಬೊಲೆರೋ […]

ತಂತ್ರಜ್ಞಾನದ ಮಹತ್ವವನ್ನು ಮಾನವೀಯ ಮೌಲ್ಯಗಳೊಂದಿಗೆ ಅಂತರ್ಗತಗೊಳಿಸಬೇಕು: ಡಾ| ಉದಯ ಕುಮಾರ್‌

Saturday, August 20th, 2016
Udaya-kumar-Yaragatty

ಮಂಗಳೂರು: ತಂತ್ರಜ್ಞಾನದ ಮಹತ್ವವನ್ನು ಮಾನವೀಯ ಮೌಲ್ಯ ಗಳೊಂದಿಗೆ ಅಂತರ್ಗತಗೊಳಿಸುವಂತೆ ಎನ್‌ಐಟಿಕೆಯ ವಿದ್ಯಾರ್ಥಿ ಕ್ಷೇಮ ಪಾಲನಾ ಡೀನ್‌ ಡಾ| ಉದಯ ಕುಮಾರ್‌ ಯರಗಟ್ಟಿ ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ. ಎಜೆ ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರಿಂಗ್‌ ಆ್ಯಂಡ್‌ ಟೆಕ್ನಾಲಜಿಯ ಪ್ರಸಕ್ತ ಸಾಲಿನ ಪ್ರಥಮ ಬಿಇ ತಂಡದ ಚಟುವಟಿಕೆಗಳನ್ನು ಅವರು ಉದ್ಘಾಟಿಸಿದರು. ಲಕ್ಷ್ಮಿ ಮೆಮೋರಿಯಲ್‌ ಎಜುಕೇ ಶನ್‌ ಟ್ರಸ್ಟ್‌ ಅಧ್ಯಕ್ಷ ಎ.ಜೆ. ಶೆಟ್ಟಿ ಅಧ್ಯಕ್ಷತೆ ವಹಿಸಿ, ಈ ಸಂಸ್ಥೆಯನ್ನು ಶ್ರೇಷ್ಠ ಸಂಸ್ಥೆಯನ್ನಾಗಿ ರೂಪಿಸುವುದಾಗಿ ಹೇಳಿದರು. ಟ್ರಸ್ಟ್‌ನ ಉಪಾಧ್ಯಕ್ಷ ಪ್ರಶಾಂತ್‌ ಶೆಟ್ಟಿ, ನಿರ್ದೇಶಕ ಡಾ| […]

ವಿದ್ಯಾರ್ಥಿಗಳಲ್ಲಿರುವ ಉತ್ಕೃಷ್ಟ ಚಿಂತನೆಯೇ ದೇಶಕ್ಕೆ ಅತಿ ದೊಡ್ಡ ಕೊಡುಗೆ: ಸುರೇಶ್ ಪ್ರಭು

Saturday, August 20th, 2016
Suresh-prabhu

ಮಂಗಳೂರು: ವಿದ್ಯಾರ್ಥಿಗಳಲ್ಲಿರುವ ಉತ್ಕೃಷ್ಟ ಚಿಂತನೆಯೇ ದೇಶಕ್ಕೆ ಅತಿ ದೊಡ್ಡ ಕೊಡುಗೆ ಎಂದು ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಹೇಳಿದರು. ಕೊಂಕಣಿ ಮಾನ್ಯತಾ ದಿನಾಚರಣೆ ಹಾಗೂ ವಿಶ್ವ ಕೊಂಕಣಿ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಾಗತಿಕ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ವಿಫುಲ ಅವಕಾಶವಿದೆ. ಅವುಗಳನ್ನು ವಿದ್ಯಾರ್ಥಿಗಳು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತೀಯರು ಬಹುಭಾಷಾ ಪ್ರವೀಣರು. ಇದು ಮಕ್ಕಳ ಸಾಂಸ್ಕೃತಿಕ, ಭಾಷಾ ಕೌಶಲವನ್ನು ಹೆಚ್ಚಿಸಿದೆ ಎಂದರು. ಕೊಂಕಣಿ ಭಾಷಾ ಹಾಗೂ ಸಾಂಸ್ಕೃತಿಕ […]

ಕರಾವಳಿಗೂ ನೂತನ ಅತ್ಯಾಧುನಿಕ ನರ್ಮ್ ಬಸ್ಸುಗಳು

Friday, August 19th, 2016
Nurm-bus

ಮಂಗಳೂರು: ರಾಜ್ಯದ ವಿವಿಧ ರಸ್ತೆಗಳಲ್ಲಿ ಓಡಾಡಲಿರುವ 637 ಬಸ್‌ಗಳನ್ನು ಆ. 18ರಂದು ಸಿಎಂ ಸಿದ್ಧರಾಮಯ್ಯ ಬಿಡುಗಡೆಗೊಳಿಸಿದ್ದು, ಈ ನರ್ಮ್ ಹೊಸ ಬಸ್‌ಗಳು ಕರಾವಳಿಯಲ್ಲೂ ಓಡಾಡಲಿವೆ. ಪ್ರಥಮ ಹಂತದಲ್ಲಿ ಮಂಗಳೂರಿಗೆ 20 ಹಾಗೂ ಉಡುಪಿಗೆ 28 ನವೀನ ಮಾದರಿಯ ಮಿನಿ ಬಸ್‌ಗಳು ದೊರೆಯಲಿವೆ. ಪುತ್ತೂರು ವಿಭಾಗದ ಪುತ್ತೂರಿಗೆ 28 ಹಾಗೂ ಮಡಿಕೇರಿಗೆ 18 ಡಲ್ಟ್ ಬಸ್‌ಗಳು ಮಂಜೂರಾಗಿವೆ. ಮಂಗಳೂರಿಗೆ 20 ಹಾಗೂ ಉಡುಪಿಗೆ 28 ಬಸ್‌ಗಳು ಮಂಜೂರಾಗಿವೆ. ಈಗಾಗಲೇ ಕೆಲವು ನರ್ಮ್ ಬಸ್‌ಗಳು ರಸ್ತೆಗಿಳಿದಿವೆ. ಹೊಸ ಗಾಡಿಗಳು ಬರುತ್ತಿದ್ದಂತೆಯೇ […]

ಉಭಯ ಸಂಸ್ಥೆಗಳು ದೇಶದಲ್ಲಿ ಸಾಮಾಜಿಕ ಪರಿವರ್ತನೆಯೊಂದಿಗೆ ಆರ್ಥಿಕ ಪ್ರಗತಿಯ ರೂವಾರಿಗಳಾಗಿವೆ: ಟಿ.ಸಿ. ನೌತಿಯಾಲ್‌

Friday, August 19th, 2016
Rudset

ಬೆಳ್ತಂಗಡಿ: ಧರ್ಮಸ್ಥಳದ ರುಡ್‌ಸೆಟ್‌ ಸಂಸ್ಥೆಯ ನಾಯಕತ್ವದಲ್ಲಿ ಅದೇ ಮಾದರಿಯಲ್ಲಿ ದೇಶದಲ್ಲಿ 583ಆರ್‌ಸೆಟಿಗಳು ಕೂಡ ಕೆಲಸ ಮಾಡುತ್ತಿವೆ. ಉಭಯ ಸಂಸ್ಥೆಗಳು ದೇಶದಲ್ಲಿ ಸಾಮಾಜಿಕ ಪರಿವರ್ತನೆಯೊಂದಿಗೆ ಆರ್ಥಿಕ ಪ್ರಗತಿಯ ರೂವಾರಿಗಳಾಗಿವೆ ಎಂದು ಕೇಂದ್ರ ಸರಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಉಪಕಾರ್ಯದರ್ಶಿ ಟಿ.ಸಿ. ನೌತಿಯಾಲ್‌ ಹೇಳಿದರು. ಅವರು ಗುರುವಾರ ಧರ್ಮಸ್ಥಳದ ಸನ್ನಿಧಿ ಅತಿಥಿಗೃಹದಲ್ಲಿ ನಡೆದ ದೇಶದ 17 ರಾಜ್ಯಗಳ 27 ರುಡ್‌ಸೆಟ್‌ ಸಂಸ್ಥೆಗಳ ನಿರ್ದೇಶಕರ ವಾರ್ಷಿಕ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಹೆಗ್ಗಡೆ ಸ್ಫೂರ್ತಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. […]

ಮೊಗವೀರ ಸಂಯುಕ್ತ ಸಭಾದ ಆಶ್ರಯದಲ್ಲಿ ಸಾಮೂಹಿಕ ಸಮುದ್ರ ಪೂಜೆ

Friday, August 19th, 2016
samudra-pooje

ಪಣಂಬೂರು: ಏಳುಪಟ್ಣ ಮೊಗವೀರ ಸಂಯುಕ್ತ ಸಭಾದ ಆಶ್ರಯದಲ್ಲಿ ಸಾಮೂಹಿಕ ಸಮುದ್ರ ಪೂಜೆ ಗುರುವಾರ ತಣ್ಣೀರುಬಾವಿ ಕಡಲ ಕಿನಾರೆಯಲ್ಲಿ ಜರಗಿತು. ಕದ್ರಿ ಸುವರ್ಣ ಕದಳೀ ಮಠದ ರಾಜಯೋಗಿ ನಿರ್ಮಲನಾಥಜೀ ಮಹಾರಾಜರು ಸಮುದ್ರದ ಮಡಿಲಿಗೆ ಹಾಲು, ಸೀಯಾಳ, ಫ‌ಲಪುಷ್ಪಗಳನ್ನು ಅರ್ಪಿಸಿ ಮತ್ಸ್ಯಸಂಪತ್ತು ವೃದ್ಧಿಗೆ ಹಾಗೂ ಮೀನುಗಾರಿಕೆ ಸಂದರ್ಭ ಯಾವುದೇ ವಿಘ್ನಗಳು ಎದುರಾಗದಿರಲಿ ಎಂದು ಪ್ರಾರ್ಥಿಸಿದರು. ಬೃಹತ್‌ ಶೋಭಾಯಾತ್ರೆ ಆರಂಭದಲ್ಲಿ ಬೊಕ್ಕಪಟ್ಣ ಜಂಕ್ಷನ್‌ನಿಂದ ತಣ್ಣೀರುಬಾವಿ ತನಕ ಬೃಹತ್‌ ಶೋಭಾಯಾತ್ರೆ ನಡೆಯಿತು. ಹಾಲು, ಸೀಯಾಳ, ಫ‌ಲಪುಷ್ಪಗಳೊಂದಿಗೆ ಹೊರಟ ಯಾತ್ರೆಯು ಬೊಕ್ಕಪಟ್ಣ ಬ್ರಹ್ಮ ಬೊಬ್ಬರ್ಯ […]