ಸಿನಿಮಾದೊಳಗೊಂದು ಸಿನಿಮಾ ಕಥೆಯನ್ನು ಹೇಳುವ ‘ಸೂಂಬೆ’

Wednesday, March 18th, 2015
soombe review

ಮಂಗಳೂರು : ಸಿನಿಮಾದೊಳಗೊಂದು ಸಿನಿಮಾ ಕಥೆಯನ್ನು ಹೇಳಿ ಹಾಸ್ಯ, ಪ್ರೇಮ ಹಾಗೂ ಕಲಾವಿದನ ನೈಜ ಜೀವನವನ್ನು ಎಲ್ಲೂ ಬೋರ್ ಹೊಡೆಸದಂತೆ ನಿರ್ದೇಶಿಸಿರುವುದು ಯುವ ನಿರ್ದೇಶಕ ಸಾಯಿಕೃಷ್ಣ ಕುಡ್ಲ ಅವರ ಚಿತ್ರದ ಪ್ಲಸ್ ಪಾಯಿಂಟ್. ಸಿನಿಮಾ ಸೆಟ್ ನೊಳಗೊಂದು ನಾಟಕ ತಂಡ, ನಾಟಕ ಕಲಾವಿದ ಸಿನಿಮಾ ನಟನಾಗಿ ಅವಕಾಶ ಪಡೆದು ಸಿನಿಮಾ ನಾಯಕಿಯನ್ನು ಪ್ರೀತಿಮಾಡುವ ಸನ್ನಿವೇಶಗಳನ್ನು ಸಾಯಿಕೃಷ್ಣ ಚೆನ್ನಾಗಿ ತೋರಿಸಿದ್ದಾರೆ. ನಾಯಕ ನಟನಿಗೆ ಬೆನ್ನು ಬಿಡದೆ ಕಾಡುವ ಪೈನಾನ್ಸಿಯರ್ ಖಳನಾಯಕನ ಪಾತ್ರ ಸಿನಿಮಾದಲ್ಲಿ ಕ್ಷಣ ಕ್ಷಣವೂ ಕುತೂಹಲವನ್ನು ಮೂಡಿಸಿದೆ. […]

ಹಳದಿಯಾದ ಹಲ್ಲುಗಳು ಒಂದೇ ದಿನದಲ್ಲಿ ಬಿಳಿ

Wednesday, March 18th, 2015
teeth

ಶಾಂಘೈ : ಚೀನಾದ ಪ್ರಾಕ್ಟರ್ ಅಂಡ್ ಗ್ಯಾಂಬಲ್ ಕಂಪನಿಯು ನಿಮ್ಮ ಹಲ್ಲುಗಳು ಒಂದೇ ದಿನದಲ್ಲಿ ಮಲ್ಲಿಗೆಯಂತೆ ಫಳಫಳನೆ ಹೊಳೆಯುತ್ತವೆ. ಲಕಲಕಿಸುವ ದಂತಪಂಕ್ತಿ ಪಡೆಯಲು ನಮ್ಮ ಕಂಪನಿ ಟೂತ್ ಪೇಸ್ಟ್ ಬಳಸಿ ತಂಬಾಕು ಜಗಿದು ಹಳದಿಯಾದ ಹಲ್ಲುಗಳು, ಗುಟ್ಖಾ ಅಗಿದು ಕಂದುಬಣ್ಣವೇರಿದ ಹಲ್ಲುಗಳಿಗೆ ಇದು ಸೂಕ್ತ ಎಂದು ಜಾಹೀರಾತು ನೀಡಿದ ಕಂಪನಿಯ ಮೇಲೆ ಭಾರೀ ದಂಡ ಹೇರಲಾಗಿದೆ. ಪ್ರಾಕ್ಟರ್ ಅಂಡ್ ಗ್ಯಾಂಬಲ್ ಕಂಪನಿಯ ಮೇಲೆ ಚೀನಾದ ಶಾಂಘೈ ರೆಗ್ಯುಲೇಟರ್ 10 ಲಕ್ಷ ಡಾಲರ್ ದಂಡ ವಿಧಿಸಿದೆ. ಯಾವುದೇ ಕಂಪನಿಯ […]

ಬಂಟ್ವಾಳ : ಆಹಾರವನ್ನು ಹುಡುಕಿ ಬಂದ ಚಿರತೆ ಆಯತಪ್ಪಿ ಬಾವಿಯೊಳಗೆ ಬಿತ್ತು

Wednesday, March 18th, 2015
Chita

ಬಂಟ್ವಾಳ : ಆಹಾರವನ್ನು ಹುಡುಕಿ ಬಂದ ಚಿರತೆ ಆಯತಪ್ಪಿ ಬಾವಿಯೊಳಗೆ ಬಿದ್ದ ಘಟನೆ ಬಂಟ್ವಾಳದ ವಳಲೂರು ಎಂಬಲ್ಲಿ ನಡೆದಿದೆ. ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ರಕ್ಷಿಸಿ ಪಿಲಿಕುಳ ವನ್ಯಧಾಮ ಕೇಂದ್ರಕ್ಕೆ ರವಾನಿಸಿದ್ದಾರೆ. ಮಂಗಳವಾರ ರಾತ್ರಿ ಕೋಳಿ ತಿನ್ನಲು ಬಂದ ಚಿರತೆ ವಳವೂರಿನ ನಿವಾಸಿ ಲಿಂಗಪ್ಪ ಪೂಜಾರಿ ಅವರ ಮನೆ ಸಮೀಪದ ಬಾವಿಗೆ ಬಿದ್ದಿತ್ತು. ಬುಧವಾರ ಬೆಳಗ್ಗೆ ಚಿರತೆಯನ್ನು ನೋಡಿದ ಸ್ಥಳೀಯರು ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದರು. ಬಾವಿಗೆ ಬಿದ್ದಿದ್ದ ಚಿರತೆ ಪೈಪನ್ನು […]

ಕೆ.ಎನ್. ಟೇಲರ್ ನಿಧನ: ಸಚಿವರ ಸಂತಾಪ

Wednesday, March 18th, 2015
kn tailor

ಮಂಗಳೂರು : ಹಿರಿಯ ತುಳು ನಾಟಕಕಾರ ಕೆ.ಎನ್.ಟೇಲರ್ ಅವರ ನಿಧನಕ್ಕೆ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ತುಳು ಚಿತ್ರರಂಗದಲ್ಲಿ 10 ಚಲನಚಿತ್ರಗಳನ್ನು ನಿರ್ಮಾಣ ಮಾಡಿ, ನಿರ್ದೇಶಿಸಿ, ನಾಯಕನಾಗಿ ನಟಿಸಿ ಎಪ್ಪತ್ತು, ಎಂಬತ್ತರ ದಶಕದಲ್ಲಿ ತುಳು ಚಿತ್ರರಂಗದ ರಾಜ್‍ಕುಮಾರ್ ಎಂದು ಕರೆಸಿಕೊಂಡಿದ್ದ ಕೆ.ಎನ್.ಟೈಲರ್ (76) ಅವರು ಬುಧವಾರ ಮಂಗಳೂರಿನ ವಿನಯ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಕಳೆದ ಕೆಲ ದಿನಗಳಿಂದ ಆನಾರೋಗ್ಯ ಪೀಡಿ ತರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫ‌ಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಕನ್ನಡ ಚಿತ್ರರಂಗದ ಮೇರು ನಟ ನಟಿಯರಾದ […]

ಗುರುಪುರ ನದಿಗೆ ಇನ್ನೊಂದು ಸೇತುವೆ

Wednesday, March 18th, 2015
Gurupur River

ಮಂಗಳೂರು : ಮಂಗಳೂರು ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮಂಗಳೂರು-ಅತ್ರಾಡಿ ರಾಜ್ಯ ಹೆದ್ದಾರಿಯ ಮರವೂರಿನಲ್ಲಿ ಗುರುಪುರ ನದಿಗೆ ಹೊಸ ಸೇತುವೆ ನಿರ್ಮಿಸುವ ಪ್ರಸ್ತಾವನೆ ಸರಕಾರದ ಪರಿಶೀಲನೆಯಲ್ಲಿದೆ ಎಂದು ಲೋಕೋಪಯೋಗಿ ಸಚಿವ ಡಾ | ಎಚ್‌.ಸಿ. ಮಹದೇವಪ್ಪ ಹೇಳಿದರು. ವಿ.ಪರಿಷತ್‌ನಲ್ಲಿ ಸದಸ್ಯ ಐವನ್‌ ಡಿಸೋಜ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಈ ರಾಜ್ಯ ಹೆದ್ದಾರಿಯ ಕಿ.ಮೀ. 12.98ರ ಮರವೂರು ಸೇತುವೆಯಿಂದ ಕಿ.ಮೀ 16.50 ಕಿ.ಮೀವರೆಗಿನ 3.52 ಕಿ.ಮೀ ಉದ್ದದ ಭಾಗವು ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಬರುತ್ತದೆ ಎಂದರು.

ಪ್ರಾಮಾಣಿಕ ಅಧಿಕಾರಿ ಡಿ.ಕೆ.ರವಿವರ ಸಾವಿನ ಪ್ರಕರಣವನ್ನು ಉನ್ನತ ತನಿಖೆಗೆ ವಹಿಸಿ

Tuesday, March 17th, 2015
ABvp protest

ಮಂಗಳೂರು : ರಾಜ್ಯದ ದಕ್ಷ ಐ.ಎ.ಎಸ್ ಅಧಿಕಾರಿ ಡಿ.ಕೆ.ರವಿಯವರ ಸಾವಿನ ಕುರಿತಂತೆ ಉನ್ನತ ತನಿಖೆಯನ್ನು ನಡೆಸಬೇಕು ಮತ್ತು ರಾಜ್ಯದ ಪ್ರಾಮಾನಿಕ ಅಧಿಕಾರಿಗಳಿಗೆ ರಕ್ಷಣೆ ನೀಡಬೇಕೆಂದು ಎಬಿವಿಪಿ ಆಗ್ರಹಿಸಿ ಮಂಗಳವಾರ ಎಬಿವಿಪಿ ನಗರದಲ್ಲಿ ಪ್ರತಿಭಟನೆಯನ್ನು ನಡೆಸಿತು. ಶಾರದ ಕಾಲೇಜಿನಿಂದ ಹೊರಟ ನೂರಾರು ಎಬಿವಿಪಿ ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಯ ಮೂಲಕ ಬಂದು ಬೆಸೆಂಟ್ ಕಾಲೇಜು ವೃತ್ತದ ಬಳಿ ಸೇರಿದರು. ಅಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಎಬಿವಿಪಿ ನಗರ ಕಾರ್ಯದರ್ಶಿ ಜಯೇಶ್ ಮಾತನಾಡಿ, ಐಎಎಸ್ ಅಧಿಕಾರಿ ಡಿ. ಕೆ. ರವಿಯವರು ರಾಜ್ಯದ […]

ಮುಡಿಪು : ಪ್ರವಾಸದ ಬಸ್ಸಿಗೆ ಮತ್ತು ಮಸೀದಿಗೆ ಕಲ್ಲು ತೂರಾಟ, 6 ಮಂದಿಯ ಬಂಧನ

Tuesday, March 17th, 2015
Mudipu School

ಉಳ್ಳಾಲ: ಮುಡಿಪು ಘಟನೆಗೆ ಸಂಬಂಧಿಸಿದಂತೆ 6 ಮಂದಿ ಆರೋಪಿಗಳನ್ನು ಬಂಧಿಸಿರುವ ಕೊಣಾಜೆ ಪೊಲೀಸರು ಕಾರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಮುಡಿಪು ಕಾಲೇಜಿನ ಪ್ರವಾಸದ ವಿಚಾರದಲ್ಲಿ ಹಿಂದೂ ಸಂಘಟನೆಗಳ ನಡೆಸಿದ್ದ ಪ್ರತಿಭಟನೆ ಬಳಿಕ ಅಹಿತಕರ ಘಟನೆಗಳಿಗೆ ಕಾರಣವಾಗಿತ್ತು. ಸಂಬಾರ್‌ತೋಟ ಬಳಿಯ ಮಸೀದಿಗೆ ಕಲ್ಲು ತೂರಾಟದ ವಿಚಾರದಲ್ಲಿ ಕಾರನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಘಟನೆಗೆ ಸಂಬಂಧಿಸಿದಂತೆ 6 ಮಂದಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಬಂಧಿತರನ್ನು ರಮೇಶ್‌ ತಿಲಕ್‌, ಹರಿಪ್ರಸಾದ್‌, ಪ್ರವೀಣ್‌, ದಿನೇಶ್‌, ವಿವೇಕಾನಂದ ಎಂಬವರಾಗಿದ್ದು, ಇವರು ಮಂಚಿ ಮತ್ತು ಮುಡಿಪುವಿನ […]

ಉತ್ತಮ ಕೆಲಸ ಮಾಡುವ ಕೆಲಸಗಾರನನ್ನು ಗುರುತಿಸಿ ಗೌರವಿಸುವುದು ಅಗತ್ಯ : ರಾಜಾರಾಂ ಭಟ್

Tuesday, March 17th, 2015
LD Bank

ಬಂಟ್ವಾಳ: ಉತ್ತಮ ಕೆಲಸ ಮಾಡುವ ಕೆಲಸಗಾರನಿಗೆ ಸಂಬಳ ನೀಡುವುದರ ಜೊತೆಗೆ ಆತ ಸಂಸ್ಥೆಗೊಸ್ಕರ ನೀಡಿದ ತ್ಯಾಗ ಮತ್ತು ನಿಶ್ವಾರ್ಥ ಸೇವೆಯನ್ನು ಗುರುತಿಸಿ ಗೌರವಿಸುವುದು ನಮ್ಮ ಕರ್ತವ್ಯ ಎಂದು ಜಿಲ್ಲಾ ಕೇಂದ್ರದ ನಿರ್ದೇಶಕ ಪಿ.ಜಿ.ರಾಜಾರಾಂ ಭಟ್ ಹೇಳಿದ್ದಾರೆ. ಅವರು ಬಂಟ್ವಾಳ ತಾಲೂಕು ಪ್ರಾಥಮಿಕ ಸಹಕಾರಿ ಸಂಘಗಳ ಮುಖ್ಯ ಕಾರ‍್ಯನಿರ್ವಹಣಾಧಿಕಾರಿಗಳ ಒಕ್ಕೂಟದ ವತಿಯಿಂದ ವಿವಿದ ಸಹಕಾರಿ ಬ್ಯಾಂಕಿನಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ಸಿಬಂದಿಗಳನ್ನು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕು ಬಂಟವಾಳ ಶಾಖೆಯಲ್ಲಿ ಗೌರವಿಸಿ ಮಾತನ್ನು ಹೇಳಿದರು. ಅವರ ಕರ್ತವ್ಯದ […]

ತೊಕ್ಕೋಟು : ಅತ್ಯಾಚಾರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು

Monday, March 16th, 2015
Thokkottu Rape

ತೊಕ್ಕೋಟು : ಜಿಲ್ಲೆಯಲ್ಲಿ ಮುಂದೆ ಯಾವ ಮಗುವಿನ ಮೇಲೆಯೂ ಲೈಂಗಿಕ ದೌರ್ಜನ್ಯ ನಡೆಯಬಾರದು. ಅದಕ್ಕಾಗಿ ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ತೊಕ್ಕೊಟ್ಟು ಅತ್ಯಾಚಾರ ಪ್ರಕರಣದ ಬಾಲಕಿಯ ತಾಯಿ ಸರಕಾರವನ್ನು ಆಗ್ರಹಿಸಿದರು. ನಗರದಲ್ಲಿ ಭಾನುವಾರ ದ.ಕ. ಜಿಲ್ಲಾ ಸಂಯುಕ್ತ ಮುಸ್ಲಿಂ ಜಮಾಅತ್ ಕರೆದ ಪತ್ರಿಕಾಗೋಷ್ಠಿಯಲ್ಲಿ ಅಳಲು ತೋಡಿಕೊಂಡ ಅವರು, ದಿಲ್ಲಿ, ಬೆಂಗಳೂರಿನಲ್ಲಿ ಅತ್ಯಾಚಾರ ಘಟನೆ ನಡೆದ ತಕ್ಷಣ ಶಾಸಕ, ಸಚಿವರು ಧಾವಿಸಿದರು. ಹೋರಾಟ ನಡೆಯಿತು, ಹೊಸ ಕಾನೂನು ರಚನೆಯಾಯಿತು. ನಮ್ಮಲ್ಲಿ ಆರೋಪಿ ಬಂಧನವಾಗಿದೆ. ಅದು ಬಿಟ್ಟರೆ […]

ಮಂಗಳೂರು ವಿಶ್ವವಿದ್ಯಾಲಯಕ್ಕೆ ಛಿಮಾರಿ ಹಾಕಿದ ಹೈಕೋರ್ಟ್

Monday, March 16th, 2015
high Court

ಮಂಗಳೂರು : ಮಿಫ಼್ಟ್ (MIFT) ಕಾಲೇಜಿನ ಪ್ರಥಮ ವರ್ಷದ ದ್ವಿತೀಯ ಸೆಮಿಸ್ಟರ್ ಫ಼್ಯಾಶನ್ ಡಿಸೈನಿಂಗ್ ವಿದ್ಯಾರ್ಥಿನಿ ಕು. ದಿವ್ಯಶ್ರೀ ಎಸ್.ಎಲ್ ಗೆ ಮಂಗಳೂರು ವಿಶ್ವವಿದ್ಯಾಲಯವು ಪ್ರಥಮ ಸೆಮಿಸ್ಟರ್ ಫ಼್ಯಾಶನ್ ಡಿಸೈನಿಂಗ್ ಪರೀಕ್ಷಾ ಫ಼ಲಿತಾಂಶವನ್ನು ತಡೆಹಿಡಿದಿರುವ ಕ್ರಮವನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿಯನ್ನು ದಾಖಲಿಸಿರುತ್ತಾರೆ. ರಿಟ್ ಅರ್ಜಿಯನ್ನು ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಬಿ.ವಿ.ನಾಗರತ್ನರು ಮಂಗಳೂರು ವಿಶ್ವವಿದ್ಯಾಲಯವನ್ನು ತರಾಟೆ ತೆಗೆದುಕೊಂಡಿರುತ್ತಾರೆ. ವಿದ್ಯಾರ್ಥಿನಿಯು ಮುಕ್ತ ವಿಶ್ವವಿದ್ಯಾಲಯ ಮೈಸೂರಿನಲ್ಲಿ ದ್ವೀತೀಯ ಪಿ.ಯು.ಸಿ ತತ್ಸಮಾನದಲ್ಲಿ ತೇರ್ಗಡೆಯಾಗಿದ್ದು. ಎಲ್ಲಾ ವಿಶ್ವವಿದ್ಯಾಲಯಗಳು ತತ್ಸಮಾನ (Equalent)ಪಿ.ಯು.ಸಿ.ಯಲ್ಲಿ ತೇರ್ಗಡೆಯಾದವರನ್ನು […]