ಉಡುಪಿ ಹಿಂದೂ ಸಮಾಜೋತ್ಸವಕ್ಕೆ ವ್ಯಾಪಕ ಬಂದೋಬಸ್ತ್

Friday, March 6th, 2015
udupi Samavesha

ಉಡುಪಿ: ಕುಂಜಿಬೆಟ್ಟು ಎಂ.ಜಿ.ಎಂ ಮೈದಾನದಲ್ಲಿ ಮಾ.9 ಸೋಮವಾರದಂದು ನಡೆಯಲಿರುವ `ವಿರಾಟ್ ಹಿಂದೂ ಸಮಾಜೋತ್ಸವ’ ಕಾರ್ಯಕ್ರಮಕ್ಕೆ ಸಿದ್ದತೆ ನಡೆಯುತ್ತಿದ್ದು ಈ ವೇಳೆ ಯಾವುದೇ ಅಹಿತಕರ ಘಟನೆಗಳಾಗದಂತೆ ಉಡುಪಿ ಜಿಲ್ಲಾ ಪೊಲೀಸರು ವ್ಯಾಪಕ ಬಂದೋಬಸ್ತ್ ಮಾಡಿದ್ದಾರೆ. ಒಂದು ಲಕ್ಷಕ್ಕೂ ವಿಕ್ಕಿ ಜನರು ಭಾಗವಹಿಸುವ ನೀರಿಕ್ಷೆ ಇದೆ. ಶೋಭಯಾತ್ರೆಯು ಅಂದು ಮಧ್ಯಾಹ್ನ 2 ಗಂಟೆಗೆ ಉಡುಪಿ ಜೋಡುಕಟ್ಟೆಯಿಂದ ಲಯನ್ಸ್ ಸರ್ಕಲ್, ಡಯಾನ ಸರ್ಕಲ್, ಕೆ.ಎಂ ಮಾರ್ಗ, ಹನುಮಾನ್ ವೃತ್ತ, ಸರ್ವಿಸ್ ಬಸ್ಸು ನಿಲ್ದಾಣ, ಶೀರಿಬೀಡು ಜಂಕ್ಷನ್, ಸಿಟಿ ಬಸ್ಸು ನಿಲ್ದಾಣ, ಕಲ್ಸಂಕ, […]

ವಿಟ್ಲದಲ್ಲಿ ಹದಿನೇಳರ ಬಾಲಕಿ ನಿಗೂಢ ನಾಪತ್ತೆ

Friday, March 6th, 2015
BiBi Sumaya

ವಿಟ್ಲ: ವಿಟ್ಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳನ್ನು ಕಿಡ್ನ್ಯಾಪ್ ಮಾಡಲಾಗಿದೆ ಎಂದು ಆಕೆಯ ತಂದೆ ಗುರುವಾರ ರಾತ್ರಿ ದೂರು ನೀಡಿದ್ದಾರೆ. ಈಕೆ ಕನ್ಯಾನದ ಕಾಲೇಜ್‍ ವೊಂದರಲ್ಲಿ ದ್ವಿತೀಯ ಪಿಯುಸಿಯಲ್ಲಿ ಕಲಿಯುತ್ತಿದ್ದಳು ಆಕೆ ನಿಗೂಢ ರೀತಿಯಲ್ಲಿ ನಾಪತ್ತೆಯಾಗಿರುವುದು ಪರಿಸರದಲ್ಲಿ ಕುತೂಹಲ ಮೂಡಿದೆ. ಕರೋಪಾಡಿ ಗ್ರಾಮದ ಅರಸಳಿಕೆ ನಿವಾಸಿ ಇಸ್ಮಾಯಿಲ್ ಅವರ ಪುತ್ರಿ ಕಲಂದರ್ ಬೀಬಿ ಸುಮಯ್ಯ(17) ಎಂಬಾಕೆ ಅಪಹರಣಕ್ಕೊಳಗಾದವಳು. ಈಕೆ ಕನ್ಯಾನದಲ್ಲಿ ದ್ವಿತೀಯ ಪಿಯುಸಿಯಲ್ಲಿ ಕಲಿ ಯುತ್ತಿದ್ದು, ಸದ್ಯ ಪರೀಕ್ಷೆಗಾಗಿ ಓದಲೆಂದು ರಜೆ ನೀಡಲಾಗಿತ್ತು. ಗುರುವಾರ ಬೆಳಿಗ್ಗೆ […]

ತಲಪಾಡಿ : ದುರ್ಗಾಪರಮೇಶ್ವರೀ ಮತ್ತು ಪರಿವಾರ ದೈವಗಳಿಗೆ ಬ್ರಹ್ಮಕಲಶಾಭಿಷೇಕ

Friday, March 6th, 2015
Talapady Devipura

ತಲಪಾಡಿ: ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ತಲಪಾಡಿ ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರು ಹಾಗೂ ಪರಿವಾರ ದೇವರ ಪುನರ್ ಪ್ರತಿಷ್ಠೆ ಮತ್ತು ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಪ್ರಯುಕ್ತ ಬುಧವಾರ ಬ್ರಹ್ಮಕಲಶಾಭಿಷೇಕ ನಡೆಯಿತು. ಬ್ರಹ್ಮಶ್ರೀ ವರ್ಕಾಡಿ ದಿನೇಶ ಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ವೇದಮೂರ್ತಿ ತಲಪಾಡಿ ಬಾಲಕೃಷ್ಣ ಭಟ್ಟರ ಉಪಸ್ಥಿತಿ ಯಲ್ಲಿ ಬ್ರಹ್ಮಶ್ರೀ ಎಡಪದವು ವೆಂಕಟೇಶ ತಂತ್ರಿಗಳ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರದಲ್ಲಿ ಗಣಯಾಗ, ಶ್ರೀ ದೇವಿಗೆ ಪಂಚಗವ್ಯ, ಪಂಚಾಮೃತಭಿಷೇಕ ಪೂರ್ವಕ ಪರಿಕಲಶಾಭಿಷೇಕ, ಬಳಿಕ ವೃಷಭ ಸುಮೂಹೂರ್ತದಲ್ಲಿ ಬ್ರಹ್ಮಕಲ ಶಾಭಿಷೇಕ ನ್ಯಾಸಪೂಜೆ, ಮಹಾಪೂಜೆ ಅವಸ್ರುತ […]

ದೈಹಿಕ ಶ್ರಮ ಮಹತ್ವದ್ದು, ಅದನ್ನು ಗೌರವಿಸಬೇಕು : ಮೋಸೆಸ್

Friday, March 6th, 2015
Mangalore University college

ಮಂಗಳೂರು : ಶಿಕ್ಷಣದಲ್ಲಿ ಸಾಮಾಜಿಕ ಉಪಯೋಗಿ ಉತ್ಪಾದನಾ ಕಾರ‍್ಯ (ಕಾರ‍್ಯಾನುಭವ) ದ ಮಹತ್ವವನ್ನು ಅರಿತು ವಿದ್ಯಾರ್ಥಿಗಳನ್ನು ಅದರಲ್ಲಿ ತೊಡಗಿಸಬೇಕು. ತನ್ಮೂಲಕ ಅವರ ಸರ್ವಾಂಗೀಣ ಅಭಿವೃದ್ಧಿಗೆ ಪೂರಕ ವಾತಾವರಣವನ್ನು ಶಾಲೆಯಲ್ಲಿ ಸೃಷ್ಟಿಸಬೇಕು. ಚಿತ್ರಕಲೆ, ಬಣ್ಣದ ಕಾಗದಗಳಲ್ಲಿ ರಚನೆ, ಕಸದಿಂದ ರಸ ಇವುಗಳು ವಿದ್ಯಾರ್ಥಿಗಳ ಬಿಡುವಿನ ವೇಳೆಯ ಸದಪಯೋಗಕ್ಕೆ ಪೂರಕವಾಗಿ ಪರಿಣಮಿಸುತ್ತವೆ ಎಂದು ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಸೇವಾ ಪೂರ್ವ ತರಬೇತಿ ವಿಭಾಗದ ಮುಖ್ಯಸ್ಥರಾದ ಶ್ರೀ ಮೋಸೆಸ್ ಜಯಶೇಖರ್ ನುಡಿದರು ಅವರು ಕಾಲೇಜಿನ ಸಂಭ್ರಮ ಕಾರ‍್ಯಕ್ರಮದ ಆಧ್ಯಕ್ಷತೆಯನ್ನು ವಹಿಸಿ […]

ಒಂದು ರೊಮ್ಯಾಂಟಿಕ್‌ ಕ್ರೈಮ್‌ ಕಥೆ’

Thursday, March 5th, 2015
crime Kathe

ಕನ್ನಡದಲ್ಲಿ “ಒಂದು ರೊಮ್ಯಾಂಟಿಕ್‌ ಕ್ರೈಮ್‌ ಕಥೆ’ ಶೀರ್ಷಿಕೆಯಡಿ ತೆಲುಗಿನಲ್ಲಿ ಸೂಪರ್‌ ಹಿಟ್‌ ಆಗಿದ್ದ ಸಿನಿಮಾ ರಿಮೇಕ್‌ ಆಗಿ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾಗೆ ಸ್ಯಾಮ್‌ ಜೆ ಚೈತನ್ಯ ನಿರ್ದೇಶಕರು. ಇದು ಸಂಪೂರ್ಣ ಯೂತ್ಸ್ ಸಿನಿಮಾ ಆಗಿದ್ದು, ಪೋಷಕರೊಂದಿಗೆ ಹುಡುಗ, ಹುಡುಗಿಯರು ನೋಡಲೇಬೇಕಾದ ಸಿನಿಮಾ ಇದು ಎಂಬುದು ನಿರ್ದೇಶಕರ ಹೇಳಿಕೆ. “ಇದು ಈಗಿನ ಟ್ರೆಂಡ್‌ ಸಿನಿಮಾ. ಅದರಲ್ಲೂ ಹುಡುಗ, ಹುಡುಗಿಯರು ನೋಡಲೇಬೇಕಾದ ಚಿತ್ರ. ಹಾಗಂತ ದೊಡ್ಡವರು ನೋಡಬಾರದು ಅಂತಲ್ಲ, ಅವರೇ ಮುಖ್ಯವಾಗಿ ಸಿನಿಮಾ ನೋಡಬೇಕು ಎಂಬುದು ಸ್ಯಾಮ್‌ ಮಾತು. […]

ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಆಡಳಿತ ನಡೆಸಲು ವಿಫಲವಾಗಿದೆ -ಸುನೀಲ್ ಕುಮಾರ್

Thursday, March 5th, 2015
sunil Kumar

ಮಂಗಳೂರು : ದ.ಕ.ಜಿಲ್ಲಾ ಬಿಜೆಪಿ ಕಚೇರಿಯ ಅಕ್ಷಯ ಸಭಾ ಭವನದಲ್ಲಿ ಮಂಗಳೂರು ವಿಭಾಗದ ಪೂರ್ಣಾವಧಿ ಕಾರ್ಯಕರ್ತರ ಯೋಜನೆ, ಕಾರ್ಯ ನಿರ್ವಹಣೆಯ ಬಗ್ಗೆ ಕಾರ್ಯಾಗಾರ ಗುರುವಾರ, ಮಾರ್ಚ್ 5 ರಂದು ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ರಾಜ್ಯ ಉಪಾಧ್ಯಕ್ಷರು/ವಿಪಕ್ಷ ಮುಖ್ಯ ಸಚೇತಕರಾದ ಶ್ರೀ ಸುನೀಲ್ ಕುಮಾರ್ ಉದ್ಘಾಟಿಸುತ್ತಾ, ರಾಜ್ಯದ ಕಾಂಗ್ರೇಸ್ ಸರಕಾರ 2 ವರ್ಷದ ಆಡಳಿತದಲ್ಲಿ ವೈಫಲ್ಯಗಳಿಂದ ಕೂಡಿದ್ದು, ವಿವಾದಿತ ಹೇಳಿಕೆಗಳನ್ನು ನೀಡುತ್ತಾ ಅಭಿವೃದ್ಧಿಯ ಕಡೆಗೆ ಗಮನ ನೀಡದೆ ಭ್ರಷ್ಟಾಚಾರಕ್ಕೆ ನೀರೆರೆಯುತ್ತಾ, ಆಡಳಿತ ನಡೆಸುತ್ತಿರುವುದನ್ನು ಕಾಣುತ್ತಿದ್ದೇವೆ. ಈ ಬಗ್ಗೆ ಪಕ್ಷದ […]

ಮದರ್‌ ತೆರೆಸಾ ಆರೋಪ : ಕ್ರೈಸ್ತ ಯುವ ಸಂಘಟನೆಗಳ ಪ್ರತಿಭಟನೆ

Thursday, March 5th, 2015
Mother Teresa

ಮಂಗಳೂರು: ಮಂಗಳೂರು ಧರ್ಮ ಪ್ರಾಂತದ ಯುವ ಆಯೋಗ, ಯುವ ಜಾಗೃತ್‌ ವೇದಿಕೆ ಹಾಗೂ ಐಸಿವೈಎಂ ಮತ್ತು ವೈಸಿಎಸ್‌ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಮಾ. 4ರಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಎದುರು ಮೇಣದ ಬತ್ತಿ ಉರಿಸಿ ಶಾಂತಿಯುತ ಪ್ರತಿಭಟನೆ ನಡೆಯಿತು. ಈ ಸಂಧರ್ಭ ಮಾತನಾಡಿದ ಕ್ರೈಸ್ತ ಮುಖಂಡ ವಿನ್ಸೆಂಟ್‌ ಆಳ್ವ ಪಾಂಬೂರು ಮದರ್‌ ತೆರೆಸಾ ಅವರು ಪ್ರೀತಿ ಮತ್ತು ಸೇವೆಯ ಕ್ರಾಂತಿ ಮಾಡಿದ್ದಾರೆ. ಅವರ ಮೇಲೆ ಮತಾಂತರದ ಆರೋಪ ಹೊರಿಸುವುದು ಸರಿಯಲ್ಲ ಎಂದು ಹೇಳಿದರು. ಆರೆಸ್ಸೆಸ್‌ ಮುಖಂಡ […]

ಪೆಟ್ರೋಲ್ ಬಾಂಬ್ : ಏಳು ಮಂದಿ ಪಿಎಫ್‌ಐ ಕಾರ್ಯಕರ್ತರ ಸೆರೆ

Wednesday, March 4th, 2015
pfi members

ಮಂಗಳೂರು: ಸಮಾಜೋತ್ಸವ ಸಂದರ್ಭ ಪೆಟ್ರೋಲ್ ಬಾಂಬ್ ಎಸೆದು ಗಲಭೆ ನಡೆಸಲು ಸಂಚು ರೂಪಿಸಿದ್ದ ಪ್ರಕರಣದಲ್ಲಿ ಒಟ್ಟು ಏಳು ಮಂದಿ ಪಿಎಫ್‌ಐ ಕಾರ್ಯಕರ್ತರನ್ನು ನಗರದ ಸಿಸಿಬಿ ಪೊಲೀಸರು ಹಾಗೂ ಉಳ್ಳಾಲ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸಿಸಿಬಿ ಪೊಲೀಸರು ಅಬ್ದುಲ್ ಸತ್ತಾರ್ ಯಾನೆ ಸತ್ತಾರ್, ನಿಯಾಜ್, ಮೊಹಮ್ಮದ್ ನಾಸಿರ್ ಯಾನೆ ನಾಸಿರ್, ಮೊಹಮ್ಮದ್ ಬಶೀರ್ ಯಾನೆ ಬಶೀರ್ ಎಂಬವರನ್ನು ಬಂಧಿಸಿದ್ದರು. ಈ ಆರೋಪಿಗಳು ನೀಡಿದ ಮಾಹಿತಿಯಂತೆ ಉಳ್ಳಾಲ ಪೊಲೀಸರು ಶಬ್ಬೀರ್ ಅಹಮ್ಮದ್, ಅಹಮ್ಮದ್ ಶಫೀಕ್ ಹಾಗೂ ಅಸ್ಲಂ ಎಂಬವರನ್ನು ಬಂಧಿಸಿದ್ದಾರೆ. […]

ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಪರಿಸರ ಮಿತ್ರ ಶಾಲಾ ಪ್ರಶಸ್ತಿ ಪ್ರದಾನ

Wednesday, March 4th, 2015
parisara mitra

ಮಂಗಳೂರು : ಜಿಲ್ಲಾಡಳಿತ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶಿಕ್ಷಣ ಇಲಾಖೆ ಹಾಗೂ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ಆಶ್ರಯದಲ್ಲಿ ನಗರದ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಪರಿಸರ ಮಿತ್ರ ಶಾಲಾ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮಂಗಳವಾರ ರಾಜ್ಯ ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಖಾತೆ ಸಚಿವ ಬಿ. ರಮಾನಾಥ ರೈ ಉದ್ಘಾಟಿಸಿದರು. ಮಕ್ಕಳಲ್ಲಿ ಪರಿಸರ ಪ್ರೇಮ ಹಾಗೂ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ದಿಶೆಯಲ್ಲಿ ಅರಣ್ಯ ಇಲಾಖೆ ರೂಪಿಸಿರುವ “ಚಿಣ್ಣರ ವನ್ಯದರ್ಶನ’ […]

ತಡ್ಯಾಲುಗುತ್ತು ಚಾವಡಿ ಮನೆಯ ಧರ್ಮದೈವಗಳಿಗೆ ಫೆ.26, 27 ರಂದು ಧರ್ಮನೇಮ

Wednesday, February 25th, 2015
Tadyala

ಬಂಟ್ವಾಳ: ಸಾವಿರ ವರ್ಷಗಳ ಇತಿಹಾಸವಿರುವ ಅಮ್ಟಾಡಿ ಗ್ರಾಮದ ತಡ್ಯಾಲುಗುತ್ತು ಚಾವಡಿ ಮನೆಯ ಧರ್ಮದೈವಗಳಿಗೆ ಧರ್ಮನೇಮವು ಫೆ.26 ಹಾಗೂ 27 ರಂದು ನಡೆಯಲಿದೆ ಎಂದು ತಡ್ಯಾಲು ಗುತ್ತು ರಾಕೇಶ್ ಮಲ್ಲಿ ತಿಳಿಸಿದರು. ಶನಿವಾರ ತಡ್ಯಾಲುಗುತ್ತು ಮನೆಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಲ್ಲಿ. ಬ್ರಹ್ಮಶ್ರೀ ನರಸಿಂಹಮಯ್ಯ ತಂತ್ರಿಗಳ ನೇತೃತ್ವದಲ್ಲಿ, ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆಯಲಿದ್ದು,ಸಾಂಸ್ಕೃತಿಕ ಕಾರ್ಯಕ್ರಗಳನ್ನು ಆಯೋಜಿಸಲಾಗಿದೆ ಎಂದರು. ಫೆ.26 ರಂದು ಬೆಳಿಗ್ಗೆ ಗಣಹೋಮ, ನಾಗತಂಬಿಲ ನಡೆದು, ಬಳಿಕ […]