ಕನ್ನಡಿಗರಿಗೇ ಕನ್ನಡ ಬಾಷೆಯ ಮೇಲೆ ಅಭಿಮಾನ ಇಲ್ಲ !

Thursday, December 4th, 2014
Kannada

ಮಂಗಳೂರು : ಕರ್ನಾಟಕ ರಾಜ್ಯ ಸರಕಾರ ಭ್ರಮೆಯಲ್ಲಿ ಇದೆಯೋ ಅಥವಾ ವಾಸ್ತವಿಕತೆಯನ್ನು ಅರಗಿಸಿಕೊಳ್ಳಲಾಗದ ಸ್ಥಿತಿಯಲ್ಲಿದೆಯೋ ಗೊತ್ತಾಗುತ್ತಿಲ್ಲ. ಇಲ್ಲದೇ ಹೋದರೆ 1994 ರಿಂದ ಬಂದ ಅಷ್ಟೂ ಸರಕಾರಗಳು ತಮ್ಮ ಜೋಳಿಗೆಯಲ್ಲಿದ್ದ ಭಾಷಾ ನೀತಿಯನ್ನು ನ್ಯಾಯಾಲಯದ ಅಂಗಳದಲ್ಲಿ ಬಿಚ್ಚಿಟ್ಟು ಖುಷಿ ನೋಡುತ್ತಿರಲಿಲ್ಲ. ಪ್ರತಿ ಸಾರಿ ನ್ಯಾಯಾಲಯದಿಂದ ಪೆಟ್ಟು ತಿಂದರೂ ಮತ್ತೇ ಮತ್ತೇ ಮೇಲ್ಮನವಿಯನ್ನು ಸಲ್ಲಿಸುವುದರ ಮೂಲಕ ಭಾಷಾ ನೀತಿಯನ್ನು ಗಾಳಿಗೆ ಬಿಟ್ಟ ಅಪವಾದದಿಂದ ದೂರ ಉಳಿಯುವ ಯತ್ನ ಮಾಡುತ್ತಿದೆ. ಆದರೆ ಈ ಬಾರಿ ರಾಜ್ಯ ಸರಕಾರಕ್ಕೆ ಅಂತಹ ಅವಕಾಶ ಸಿಗುವ […]

ಬರೋಡಾದಲ್ಲಿ ವಿಶ್ವ ತುಳುವೆರೆ ಪರ್ಬದ ಪೂರ್ವಭಾವೀ ಸಭೆ

Thursday, December 4th, 2014
ಬರೋಡಾದಲ್ಲಿ ವಿಶ್ವ ತುಳುವೆರೆ ಪರ್ಬದ ಪೂರ್ವಭಾವೀ ಸಭೆ

ಬರೋಡಾ : ಅಖಿಲ ಭಾರತ ತುಳು ಒಕ್ಕೂಟದ ರಜತೋತ್ಸವ ಸ್ಮರಣಾರ್ಥ ಇದೇ ಡಿ. 12-14ರ ಮೂರು ದಿನಗಳಲ್ಲಿ ತುಳುನಾಡಿನ ಅಡ್ಯಾರ್ ನ ಸಹ್ಯಾದ್ರಿ ಕಾಲೇಜ್ ನ ಆವರಣದಲ್ಲಿ ನಡೆಯುವ ವಿಶ್ವ ತುಳುವರೆ ಪರ್ಬದ ಪೂರ್ವಭಾವೀ ಸಭೆಯನ್ನು ಗುಜರಾತ್ ರಾಜ್ಯದ ಬರೋಡಾ ಅಲ್ಕಾಪುರಾ ಇಲ್ಲಿನ ಗುಜರಾತ್ ಬಿಲ್ಲವರ ಸಂಘದ ಸಭಾಗೃಹದಲ್ಲಿ ಕಳೆದ ಬುಧವಾರ ಸಂಜೆ ತುಳು ಸಂಘ ಬರೋಡಾ ಇದರ ಅಧ್ಯಕ್ಷ ಶಶಿಧರ್ ಬಿ.ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟಿತು. ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಅಖಿಲ ಭಾರತ ತುಳು ಒಕ್ಕೂಟ […]

ಲಿಮ್ಕಾ ದಾಖಲೆಯ ಪುತ್ತೂರು ಸುರೇಶ ನಾಯಕ್ರ ಸಮಾಜ ಸೇವೆಗೆ ರಾಷ್ಟ್ರ ಪ್ರಶಸ್ತಿ ಗರಿ.

Thursday, December 4th, 2014
ಲಿಮ್ಕಾ ದಾಖಲೆಯ ಪುತ್ತೂರು ಸುರೇಶ ನಾಯಕ್ರ ಸಮಾಜ ಸೇವೆಗೆ ರಾಷ್ಟ್ರ ಪ್ರಶಸ್ತಿ ಗರಿ.

ಮಂಗಳೂರು :ಜಾದೂ ಮೂಲಕ ಮನೋರಂಜನೆಯೊಂದಿಗೆ ಬುದ್ಧಿಮಾಂದ್ಯತಾ ಜನಜಾಗೃತಿಯನ್ನು ಮಾಡುತ್ತಿರುವ ದ.ಕ ಜಿಲ್ಲೆಯ ಲಿಮ್ಕಾ ದಾಖಲೆಯ ಪುತ್ತೂರು ಸುರೇಶ ನಾಯಕ್ ಗೆ ಅವರು ಮಾಡಿರುವ ವೈಯಕ್ತಿಕ ಸಾಧನೆ ಹಾಗೂ ಸಮಾಜ ಸೇವೆಯನ್ನು ಗುರುತಿಸಿ ಡಿಸೆಂಬರ್ 3ರಂದು ದೆಹಲಿಯ ವಿಘ್ಯಾನ್ ಭವನದಲ್ಲಿ ನಡೆದ ಸಮಾರಂಭದಲ್ಲಿ ಭಾರತದ ಗೌರವಾನ್ವಿತ ರಾಷ್ಟ್ರಪತಿಗಳಾದ ಶ್ರೀ ಪ್ರಣಬ್ ಮುಖರ್ಜಿಯವರು ರೋಲ್ ಮೋಡೆಲ್ ರಾಷ್ಟ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಈ ಪ್ರಶಸ್ತಿಯು ಪ್ರಶಸ್ತಿ ಪತ್ರ ಹಾಗೂ 1,00,000/- ನಗದನ್ನು ಒಳಗೊಂಡಿದೆ. ಇವರು ಪುತ್ತೂರಿನ ಜಯಾ ಮತು ಜಗನ್ನಾಥ […]

ಶಿಕ್ಷಣ ಇಲಾಖೆಯನ್ನು ಕೊಳ್ಳೆ ಹೊಡೆದ ನಟೋರಿಯಸ್ ಕ್ರಿಮಿನಲ್ ಗಳು

Thursday, December 4th, 2014
RK Radhakrishna, Tara Rao

ಮಂಗಳೂರು : ಶಿಕ್ಷಣ ಸಂಸ್ಥೆಗಳು ದೇವಾಲಯಗಳಿದ್ದಂತೆ ಎಂದು ಜನ ನಂಬಿದ್ದಾರೆ. ಅದಕ್ಕಾಗಿಯೇ ಅಲ್ಲಿ ಏನೇ ನಡೆದರೂ ಜನ ಮಾತನಾಡುತ್ತಿಲ್ಲ. ನಗರದ ರಥಬೀದಿಯ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳ ಕೊಲೆನಡೆದು ಎರಡು ವರ್ಷಗಳಾದರೂ ಇನ್ನೂ ಅದರ ಸತ್ಯತೆ ನಿಗೂಡವಾಗಿಯೇ ಉಳಿದಿದೆ. ಆಕೆಯ ಆತ್ಮ ಕಾಲೇಜಿನ ಸುತ್ತ ಇನ್ನು ನನಗೆ ನ್ಯಾಯ ಸಿಕ್ಕಿಲ್ಲ ಎಂದು ಸದ್ದು ಮಾಡುತ್ತಿದೆಯಂತೆ. ಅಕೆಯ ಕೊಲೆಯಾದಂದಿನಿಂದ ಕಾಣೆಯಾದ ವಿದ್ಯಾರ್ಥಿ ಮಂಜೇಶ್ವರದ ಮದನ ಎಲ್ಲಿಹೋಗಿದ್ದಾನೆಂದು ಯಾರಿಗೂ ಗೊತ್ತಿಲ್ಲ. ಈ ಕಾಲೇಜಿನ ಪ್ರಾಂಶುಪಾಲರಿಗೆ ಈ ವಿಷಯ ತಿಳಿದಿತ್ತು, ಕೊಲೆಯಾದ ಅಕ್ಷತಾ ಮತ್ತು […]

ವಕಾಲತ್ತು ನಡೆಸದೇ ವಕೀಲರ ಕಲ್ಯಾಣ ನಿಧಿ ಸೌಲಭ್ಯದ ದುರುಪಯೋಗ

Tuesday, December 2nd, 2014
law

ಮಂಗಳೂರು : ರಾಜ್ಯದಲ್ಲಿ ಪ್ರಸ್ತುತ 84,000 ಸಾವಿರ ವಕೀಲರುಗಳು ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನಲ್ಲಿ ನೊಂದಾವಣಿಯಾಗಿದ್ದು, ಈ ಪೈಕಿ ಸಾವಿರಾರು ವಕೀಲರುಗಳು ವಕಾಲತ್ತು ನಡೆಸದೇ, ಬೇರೆ ಬೇರೆ ಸರಕಾರಿ/ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ನಿರತರಾಗಿದ್ದಾರೆ. ವಕೀಲರ ಕಾಯ್ದೆ 1961 ರ ಕಲಂ 35 ರನ್ವಯ ಸನ್ನದ್ದನ್ನು ಅಮಾನತ್ತಿನಲ್ಲಿಡದೇ ಯಾವುದೇ ನೊಂದಾಯಿತ ವಕೀಲ ಬೇರೆ ಉದ್ಯೋಗದಲ್ಲಿ ನಿರತನಾಗಿರುವುದು ವೃತ್ತಿ ದುರ್ನಡತೆ ಯಾಗುತ್ತದೆ ಹಾಗೂ ಆ ಕಾರಣಕ್ಕೆ ಆ ವಕೀಲರ ನೊಂದಾವಣಿ / ಸನ್ನದ್ದನ್ನು ರದ್ದುಗೊಳಿಸಿ, ಆತನನ್ನು ವೃತ್ತಿಯಿಂದ ಅನರ್ಹಗೊಳಿಸಿ ವಜಾಗೊಳಿಸುವ […]

ಆಯುಷ್ ಚಿಕಿತ್ಸೆ ಜನಪ್ರಿಯಗೊಳಿಸಲು ಸರ್ವ ಪ್ರಯತ್ನಕ್ಕೆ ಆಗ್ರಹ

Monday, November 24th, 2014
Ayush

ಮಂಗಳೂರು : ಸಂಶೋಧನೆ, ಬೋಧನೆ ಮತ್ತು ಪ್ರಸಾರಾಂಗದ ಬಲವರ್ಧನೆಗೆ ಪ್ರತ್ಯೇಕ ವಿಶ್ವ ವಿದ್ಯಾನಿಲಯದ ಸ್ಥಾಪನೆ,ಕಿತ್ಸೆಯಲ್ಲಿ, ಔಷಧ ತಯಾರಿಕೆಯಲ್ಲಿ ಗುಣಮಟ್ಟ ಕಾಪಾಡಿಕೊಳ್ಳಲು ಮಾನದಂಡ ನಿಗದಿ, ಸಮಗ್ರ ವೈದ್ಯಕೀಯ ಪದ್ಧತಿಯ ಅನುಷ್ಠಾನ ಸಹಿತ ವಿವಿಧ ಆಗ್ರಹಗಳನ್ನೊಳಗೊಂಡ ಗೊತ್ತುವಳಿಗಳನ್ನು ಮಂಗಳೂರಿನಲ್ಲಿ ಎರಡು ದಿನಗಳ ಕಾಲ ನಡೆದ ರಾಜ್ಯ ಆಯುಷ್ ವೈದ್ಯರ ಮಹಾಸಮ್ಮೇಳನ `ಆಯುಷ್ ಉತ್ಸವ 2014’ರಲ್ಲಿ ಅಂಗೀಕರಿಸಲಾಗಿದೆ. ಭಾನುವಾರ ಸಮಾರೋಪ ಸಮಾರಂಭಕ್ಕೆ ಮೊದಲು ಮಾಧ್ಯಮ ಪ್ರತಿನಿಧಿಗಳು, ಸಾರ್ವಜನಿಕರು ಮತ್ತು ಆಯುಷ್ ವೈದ್ಯರೊಂದಿಗೆ ನಡೆದ ಸಂವಾದದಲ್ಲಿ ಆಯುಷ್ ಪದ್ಧತಿಯ ಚಿಕಿತ್ಸಾ ಕ್ರಮದ ಬಲವರ್ಧನೆಗೆ […]

ಧರ್ಮಸ್ಥಳದಲ್ಲಿ ಸರ್ವಧರ್ಮ ಸಮ್ಮೇಳನದ 82ನೇ ಅಧಿವೇಶನ

Saturday, November 22nd, 2014
deepotsava

ಧರ್ಮಸ್ಥಳ : ತನಗಾಗಿ ಬದುಕುವುದು ಜೀವನವಲ್ಲ. ನಾವು ಇತರರಿಗಾಗಿ ಬದುಕುವುದೇ ಸಾರ್ಥಕ ಜೀವನ. ನೈತಿಕತೆ ಮತ್ತು ಉತ್ತಮ ಸಂಸ್ಕಾರ ಸರ್ವಧರ್ಮಗಲ ಸಾರವಾಗಿದೆ ಎಂದು ರಾಜ್ಯಪಾಲ ವಜುಭಾಯಿ ವಾಲಾ ಹೇಳಿದರು. ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂದರ್ಭದಲ್ಲಿ ಶುಕ್ರವಾರ ಅಮೃತವರ್ಷಿಣಿ ಸಭಾ ಭವನದಲ್ಲಿ ಸರ್ವಧರ್ಮ ಸಮ್ಮೇಳನದ 82ನೇ ಅಧಿವೇಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಒಂದು ಶಕ್ತಿ ಇದೆ. ಅದನ್ನು ಬೆಳಕಿಗೆ ತರುವುದೇ ಧರ್ಮ ಆಗಿದೆ. ನಾವು ಧರ್ಮ ಮತ್ತು ನೈತಿಕತೆಯನ್ನು ದೈನಂದಿನ ಬದುಕಿನಲ್ಲಿ ಅನುಷ್ಠಾನಗೋಲಿಸಿದಾಗ ಮಾತ್ರ ಇತತರಿಗೆ ಉಪದೇಶ […]

ಬಳ್ಳಾಲ್ ಭಾಗ್ 63ನೇ ವರ್ಷದ ಗುರ್ಜಿ ದೀಪೋತ್ಸವ

Friday, November 21st, 2014
Ballalbagh Gurji

ಮಂಗಳೂರು: ಗುರ್ಜಿ ದೀಪೋತ್ಸವ ಸಮಿತಿ ಬಳ್ಳಾಲ್ ಭಾಗ್ ಮಂಗಳೂರು ಇದರ ಆಶ್ರಯದಲ್ಲಿ 63ನೇ ವರ್ಷದ ಗುರ್ಜಿ ದೀಪೋತ್ಸವವು ನವೆಂಬರ್ 19, ಬುಧವಾರದಂದು ಜರುಗಿತು. ಆ ಪ್ರಯುಕ್ತ ತಾ.17.11.2014ನೇ ಸೋಮವಾರ ಮಧ್ಯಾಹ್ನ ಶ್ರೀ ಸತ್ಯನಾರಾಯಣ ಪೂಜೆ, ಮತ್ತು ಅನ್ನಸಂತರ್ಪಣೆ ನಡೆಯಿತು. ಗುರ್ಜಿ ದೀಪೋತ್ಸವ ಸಮಾರಂಭವನ್ನು ಜಯರಾಮ್ ಹಂದೆ ಕರ್ನಾಟಕ ಬ್ಯಾಂಕ್ ಡಿಜಿಎಂ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಿ.ಪದ್ಮನಾಭ ರೈ , ಜಯಂತಿ ಆಚಾರ್ ಈ ಸಂದರ್ಭ ಉಪಸ್ಥಿತರಿದ್ದರು. ಸಂಜೆ 6.30ಕ್ಕೆ ಸನಾತನ ನಾಟ್ಯಾಲಯ ವಿದುಷಿ ಶಾರದಾಮಣಿ ಶೇಖರ್ […]

ಲೈಂಗಿಕ ದೌರ್ಜನ್ಯವನ್ನು ತಡೆಗಟ್ಟಲು ವಿಶೇಷ ಪೊಲೀಸ್ ದಳ ಅಗತ್ಯ

Thursday, November 6th, 2014
ACSU

ಮಂಗಳೂರು: ವಿದ್ಯಾರ್ಥಿಗಳ ಮೇಲೆ ರಾಜ್ಯದೆಲ್ಲೆಡೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯವನ್ನು ತಡೆಗಟ್ಟಲು ವಿಶೇಷ ಪೊಲೀಸ್ ದಳವನ್ನು ಸ್ಥಾಪಿಸಬೇಕೆಂದು ಒತ್ತಾಯಿಸಿ ಸರ್ವ ಕಾಲೇಜ್ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ನ6. ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ರ್ವ ಕಾಲೇಜ್ ವಿದ್ಯಾರ್ಥಿ ಸಂಘದ ಅಧ್ಯಕ್ಷ ದೀಕ್ಷಿತ್ ವಿ ಶೆಟ್ಟಿ ಮಾತನಾಡಿ ಇತ್ತೀಚೆಗೆ ತೀರ್ಥಹಳ್ಳಿಯಲ್ಲಿ ನಡೆದಿರುವ ನಂದಿತಾ ಶಂಕಾಸ್ಪದ ಸಾವಿನ ಪ್ರಕರಣವನ್ನು ಬಯಲಿಗೆಳೆಯಲು ಪೊಲೀಸ್ ಇಲಾಖೆಯಿಂದ ಇನ್ನೂ ಸಾಧ್ಯವಾಗುತ್ತಿಲ್ಲ. ಈ ಹಿಂದೆ ಅಕ್ಷತಾ, ರತ್ನಾ ಕೊಠಾರಿ ಸಾವು […]

ಬೈಕಂಪಾಡಿ ಹೋಟೇಲ್ ನಲ್ಲಿ ಗೃಹ ಬಳಕೆ ಸಿಲಿಂಡರ್ ಬಳಕೆ :ಕೇಸು ದಾಖಲು

Thursday, November 6th, 2014
LPG

ಮಂಗಳೂರು : ಬೈಕಂಪಾಡಿಯ ಹೋಟೇಲ್ ಒಂದಕ್ಕೆ ದಾಳಿ ಮಾಡಿದ ಆಹಾರ ಇಲಾಖೆ ಅಧಿಕಾರಿಗಳು ಮನೆ ಬಳಕೆಯ ಗ್ಯಾಸ್ ಸಿಲಿಂಡರನ್ನು ಉಪಯೋಗಿಸುತ್ತಿದ್ದ 4 ಸಿಲಿಂಡರ್ ಗಳನ್ನು ವಶಪಡಿಸಿ ಪ್ರಕರಣ ದಾಖಲಿಸಿದ್ದಾರೆ. ಬೈಕಂಪಾಡಿ ಇಂಡಸ್ಟ್ರಿಯಲ್ ಏರಿಯಾದ ಕಾರ್ಖಾನೆಯೊಂದರ ಆವರಣದಲ್ಲಿ ಅಂಗರಗುಂಡಿಯ ಇಸಾಕ್ ಎಂಬವರ ಹೋಟೇಲ್ಗೆ ಗುರುವಾರ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಸಹಾಯಕ ನಿರ್ದೇಶಕಿ ಸುನಂದಾ ನೇತೃತ್ವದ ತಂಡ ದಾಳಿ ಮಾಡಿದಾಗ ಹೋಟೇಲ್ ನಲ್ಲಿ ಬಳಸುತ್ತಿದ್ದ ಮತ್ತು ಅಕ್ರಮವಾಗಿ ಇಟ್ಟಿದ್ದ 4 ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಗಳು ಪತ್ತೆಯಾದವು. […]