ಕೆಎಸ್‌ಆರ್‌ಟಿಸಿ ರಾಜಹಂಸ ಬಸ್‌ ಮೇಲೆ ಕಲ್ಲು ತೂರಾಟ ನಡೆಸಿದ ದುಷ್ಕರ್ಮಿಗಳು

Monday, November 3rd, 2014
KSRTC bus

ಮಂಗಳೂರು : ಕೆಲವು ಅಪರಿಚಿತ ದುಷ್ಕರ್ಮಿಗಳು ಟೈರ್‌ಗೆ ಬೆಂಕಿ ಹಚ್ಚಿ ಕೆಎಸ್‌ಆರ್‌ಟಿಸಿ ರಾಜಹಂಸ ಬಸ್‌ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ಸೋಮವಾರ ಮುಂಜಾನೆ ಅಡ್ಯಾರ್‌ ಕಟ್ಟೆಯಲ್ಲಿ ನಡೆದಿದೆ. ಜಿಲ್ಲೆಯಲ್ಲಿ ಕೆಲವು ಸಂಘಟನೆಗಳು ಬಂದ್‌ಗೆ ಕರೆ ನೀಡಿವೆ ಎಂಬ ವದಂತಿ ಹರಡಿದ ಹಿನ್ನೆಲೆಯಲ್ಲಿ ಮುಂಜಾನೆ ಅಡ್ಯಾರ್‌ ಕಟ್ಟೆಯಲ್ಲಿ ಮೊದಲು ರಾಷ್ಟ್ರೀಯ ಹೆದ್ದಾರಿ ಮಧ್ಯದಲ್ಲೇ ಟೈರ್‌ಗೆ ಬೆಂಕಿ ಹಚ್ಚಲಾಯಿತು ಅಲ್ಲದೇ ದುಷ್ಕರ್ಮಿಗಳು ಆದೇ ಮಾರ್ಗದಲ್ಲಿ ಸಾಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ ಮೇಲೆ ಕಲ್ಲು ತೂರಾಟ ನಡೆಸಿ ಗಾಜುಗಳನ್ನು ಪುಡಿಗೈದರು. ಘಟನಾಸ್ಥಳಕ್ಕೆ […]

ಮಂಗಳೂರಿನ ಕೇಂದ್ರ ಮೈದಾನದಲ್ಲಿ 59 ನೇ ಕನ್ನಡ ರಾಜ್ಯೋತ್ಸವ

Saturday, November 1st, 2014
Rajyotsava

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ಮಂಗಳೂರಿನ ಕೇಂದ್ರ ಮೈದಾನದಲ್ಲಿ ನ 1, ಶನಿವಾರ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ರಾಜ್ಯದ ಇತರ 11 ನಗರಗಳ ಜೊತೆ ಮಂಗಳೂರು ನಗರದ ಪದ ಬಳಕೆಯನ್ನು ಅಧಿಕೃತ ಜಾರಿಗೊಳಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ರಾಷ್ಟ್ರ ದ್ವಜಾರೋಹಣ ಗೈದ ಬಳಿಕ ಪೇರೆಡ್ ಕಾಮಂಡರ್ ರಿಂದ ಗೌರವ ವ್ಂದನೆ ಪಡೆದ ಬಳಿಕ 14 ತಂಡ ಗಳ ಆಕರ್ಷಕ ಪಥ ಸಂಚಲನ ವೀಕ್ಷಿಸಿದರು. ಬಳಿಕ ಮಾತನಾಡಿದ ಜಿಲ್ಲಾ ಉಸ್ತುವಾರಿ […]

ಬ್ಯುಟೀಷಿಯನ್ ಗೆ ರಾಡ್‌ನಿಂದ ಹಲ್ಲೆ ನಡೆಸಿದ ಗೋವಾ ದಂಪತಿಗಳು

Saturday, November 1st, 2014
Surabhi

ಸುರತ್ಕಲ್‌ : ಗೋವಾ ಮೂಲದ ದಂಪತಿಗಳು ಸುರತ್ಕಲ್‌ ನಲ್ಲಿರುವ ಸುರಭಿ ಬ್ಯೂಟಿಪಾರ್ಲರ್‌ ಗೆ ಫೆಶಿಯಲ್‌ ಮಾಡಿಸಿ ಕೊಳ್ಳಲು ಬಂದಿದ್ದು ಆದಾದ ಬಳಿಕ ದಂಪತಿಗಳು ಬ್ಯುಟೀಷಿಯನ್ ಗೆ ರಾಡ್‌ನಿಂದ ಹಲ್ಲೆ ನಡೆಸಿದ ಘಟನೆ ಶುಕ್ರವಾರ ನಡೆದಿದೆ. ಹಲ್ಲೆಗೊಳಗಾದ ಯುವತಿ ಕಾಂತೇರಿ ಧೂಮಾವತಿ ದೈವಸ್ಥಾನದ ಕಟ್ಟಡದಲ್ಲಿ ಸುರಭಿ ಬ್ಯೂಟಿಪಾರ್ಲರ್‌ ನಡೆಸುತ್ತಿದ್ದ ಅಕ್ಷತಾ (19) ಎಂದು ಗುರುತಿಸಲಾಗಿದೆ. ಫೆಶಿಯಲ್‌ ಮಾಡಿಕೊಳ್ಳಲೆಂದು ಬಂದ ಹೆಂಗಸು ಫೆಶಿಯಲ್‌ ಮಾಡಿಕೊಂಡ ಬಳಿಕ ಹಣ ಕೇಳಿದಾಗ ಆಕೆಯ ಪತಿ ಅಕ್ಷತಾ ಮೇಲೆ ರಾಡ್‌ ನಿಂದ ಹಲ್ಲೆ ನಡೆಸಿ […]

ಅಡ್ಯಾರ್‌ ಬಳಿ ಕೊಲೆ ಆರೋಪಿಯನ್ನು ಕೊಲೆಗೈದ ದುಷ್ಕರ್ಮಿಗಳ ತಂಡ

Saturday, November 1st, 2014
iyaz

ಮಂಗಳೂರು : ನಗರದ ಹೊರವಲಯದದ ಅಡ್ಯಾರ್‌ ಚೆಕ್ ಪೋಸ್ಟ್ ಬಳಿ ಇರುವ ಸೆಲೂನ್ ಒಂದರಲ್ಲಿ ಯುವಕನೊಬ್ಬನನ್ನು ಕಾರಿನಲ್ಲಿ ಬಂದ ಆರು ಮಂದಿ ದುಷ್ಕರ್ಮಿಗಳ ತಂಡ ಹಾಡು ಹಗಲೇ ಮಚ್ಚಿನಿಂದ ಕೊಚ್ಚಿ ಭೀಕರವಾಗಿ ಕೊಲೆಗೈದ ಘಟನೆ ಶುಕ್ರವಾರ ನಡೆದಿದೆ. ಕೊಲೆಯಾದವನ್ನು ಅಡ್ಯಾರ್‌ ನಿವಾಸಿ ಇಸ್ಮಾಯಿಲ್ ಅವರ ಮಗ ಇಜಾಜ್‌ (24) ಎಂದು ಗುರುತಿಸಲಾಗಿದ್ದು, ಹಿಂದೆ ಕೊಲೆಯೊಂದರಲ್ಲಿ ಭಾಗಿಯಾಗಿದ್ದ ಹಿನ್ನಲೆಯಲ್ಲಿ ಈತನನ್ನು ಕೊಲೆಗೈಯಲಾಗಿದೆ ಎಂದು ಶಂಕಿಸಲಾಗಿದೆ. 2012ರಲ್ಲಿ ನಡೆದ ಪುತ್ತು ಮೋನು ವಿನ ಕೊಲೆ ಪ್ರಕರಣದ 19 ಆರೋಪಿಗಳಲ್ಲಿ ಇಜಾಜ್‌ […]

ಕರಾವಳಿಯಾದ್ಯಂತ ಏಕಕಾಲದಲ್ಲಿ ಚಾಲಿಪೋಲಿಲು ಚಿತ್ರ ಬಿಡುಗಡೆ

Saturday, November 1st, 2014
Chali-Polilu

ಮಂಗಳೂರು: ಮನರಂಜನೆಯನ್ನು ಬಯಸಿ ಥಿಯೇಟರ್ಗೆ ಬರುವ ಪ್ರೇಕ್ಷಕರಿಗೆ ಚಾಲಿ ಪೋಲಿಲು ತುಳು ಸಿನಿಮಾ ಇಷ್ಟವಾಗಲಿದೆ. ತುಳುರಂಗಭೂಮಿಯ ಬಹಳಷ್ಟು ಕಲಾವಿದರನ್ನು ಚಾಲಿಪೋಲಿಲು ಸಿನಿಮಾದಲ್ಲಿ ಬಳಸಲಾಗಿದೆ ಎಂದು ಕ್ರೆಡೈ ಅಧ್ಯಕ್ಷ ಪುಷ್ಪರಾಜ್ ಜೈನ್ ತಿಳಿಸಿದರು. ಜ್ಯೋತಿ ಚಲನ ಚಿತ್ರಮಂದಿರದಲ್ಲಿ ಚಾಲಿಪೋಲಿಲು ಸಿನಿಮಾದ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಮಾದ್ಯಮಗಳು ಯಾವಾಗಲೂ ನಿಷ್ಠುರವಾದಿಗಳು ಇದ್ದುದನ್ನೇ ಇದ್ದಂತೆ ಹೇಳುವ ಪತ್ರಕರ್ತರು ವಸ್ತುನಿಷ್ಠ ವರದಿಯನ್ನೇ ಪ್ರತಿಪಾದಿಸುತ್ತಾರೆ. ಚಾಲಿಪೋಲಿಲು ಸಿನಿಮಾದ ಬಗ್ಗೆ ಪತ್ರಿಕೆಗಳು ಈಗಾಗಲೇ ಮೆಚ್ಚುಗೆ ವ್ಯಕ್ತಪಡಿಸಿದೆ. ಈ ಸಿನಿಮಾ ಶತದಿನೋತ್ಸವ ಆಚರಿಸಲಿ ಎಂದು ಅವರು […]

ಸೃಷ್ಟಿ ವೈಶಿಷ್ಟ್ಯ : ಲಚ್ಚಿಲ್ ನಲ್ಲಿ ನಾಲ್ಕು ಕಾಲಿನ ಕೋಳಿ ಮರಿ ಜನನ

Thursday, October 30th, 2014
Poultry breeding

ಬಂಟ್ವಾಳ: ನಾಲ್ಕು ಕಾಲಿನ ಕೋಳಿ ಮರಿಯೊಂದು ಜನಿಸುವ ಮೂಲಕ ಅಚ್ಚರಿ ಮೂಡಿಸಿದೆ. ಬಂಟ್ವಳ ತಾಲೂಕಿನ ತುಂಬೆ ಗ್ರಾಮದ ಗಾಣದ ಲಚ್ಚಿಲ್ ಎಂಬಲ್ಲಿನ ಪದ್ಮಾವತಿ ಎಂಬವರ ಮನೆಯಲ್ಲಿ ಪ್ರಕೃತಿಯ ಈ ವೈಚಿತ್ರ ಮೂಡಿ ಬಂದಿದ್ದು ಸ್ಥಳೀಯವಾಗಿ ಜನರಲ್ಲಿ ಕುತೂಹಲ ಮೂಡಿಸಿದೆ. ಇವರ ಮನೆಯ ಸಾಕು ಕೋಳಿಯೊಂದು ಮೊಟ್ಟೆ ಇಟ್ಟು 12 ಮರಿಗಳಿಗೆ ಎರಡು ದಿನಗಳ ಹಿಂದೆಯಷ್ಟೇ ಜನ್ಮ ನೀಡಿತ್ತು. ಈ ಪೈಕಿ ಒಂದು ಕೋಳಿ ಮರಿ ವಿಶೇಷವಾಗಿ ಕಮಡು ಬಂದಿದ್ದು ಸರಿಯಾಗಿ ಪರಿಶೀಲಸಿದಾಗ ನಾಲ್ಕು ಕಾಲುಗಳಿರುವುದು ಕಂಡು ಬಂದಿದೆ. […]

ಮರಳು ಸಾಗಾಟ ಲಂಚಕ್ಕಾಗಿ ಕೈಯೊಡ್ಡಿದ ಪೊಲೀಸ್, ಸ್ಪಂದನ ಚಾನೆಲ್ ವರದಿಗಾರನ ಮೇಲೆ ಹಲ್ಲೆ

Thursday, October 30th, 2014
spandana

ಉಡುಪಿ : ಜಿಲ್ಲೆಯ ಬ್ರಹ್ಮಾವರ ಠಾಣೆಯಲ್ಲಿ ಮರಳು ಸಾಗಾಟಕ್ಕಾಗಿ ಲಂಚಕ್ಕಾಗಿ ಕೈಯೊಡ್ಡುತ್ತಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಸ್ಪಂದನ ಚಾನೆಲ್ ಇತ್ತೀಚೆಗೆ ರಹಸ್ಯ ಕಾರ್ಯಾಚರಣೆ ಯನ್ನು ಮಾಡಿತ್ತು. ಈ ಕಾರ್ಯಚರಣೆಯ ಮುಂದುವರಿದ ಭಾಗವಾಗಿ ಚಾನೆಲ್ ನ ವಿಶೇಷ ವರದಿಗಾರ ಬ್ರಹ್ಮಾವರ ಠಾಣೆಗೆ ಹೋಗಿದ್ದಾಗ ರಹಸ್ಯ ಕಾರ್ಯಚರಣೆ ಮಾಡುತ್ತಿರುವುದು ಪೊಲೀಸರ ಅರಿವಿಗೆ ಬಂದು ವರದಿಗಾರರ ಮೇಲೆ ಹಲ್ಲೆ ಮಾಡಲಾಗಿತ್ತು ಮತ್ತು ರಹಸ್ಯ ಕಾರ್ಯಚರಣೆಯ ಕ್ಯಾಮರವನ್ನು ಕಿತ್ತುಕೊಳ್ಳಲಾಗಿತ್ತು. ರಹಸ್ಯ ಕಾರ್ಯಚರಣೆಯಲ್ಲಿ ಬ್ರಹ್ಮಾವರ ಸರ್ಕಲ್ ಇನ್ಸ್ ಫೆಕ್ಟರ್ ಅರುಣ್ ನಾಯಕ್ ಮತ್ತು ಕಾನ್ಸ್ಟೇಬಲ್ […]

ಕುದ್ರೋಳಿಯಲ್ಲಿ ಪಾರಿವಾಳ ಸ್ಪರ್ಧಾ ಕೂಟ

Wednesday, October 29th, 2014
Pigeon games held

ಮಂಗಳೂರಿನ: ನಿರಂತರ ಮೂರು ತಿಂಗಳುಗಳ ಕಾಲ ನಡೆದ 2014-15ನೆ ಸಾಲಿನ ಮಂಗಳೂರು ಚಾಂಪಿಯನ್ ಪಾರಿವಾಳ ಸ್ಪರ್ಧಾ ಕೂಟದ ಪ್ರಶಸ್ತಿ ವಿತರಣಾ ಸಮಾರಂಭವು ಸತತ 8ನೆ ಬಾರಿಗೆ ಕುದ್ರೋಳಿಯಲ್ಲಿ ಅಕ್ಟೋಬರ್ 26ರಂದು ನಡೆಯಿತು. ಕುದ್ರೋಳಿ ವಾರ್ಡ್ ಕಾರ್ಪೋರೇಟರ್ ಅಬ್ದುಲ್ ಅಝೀರೆ್ ಕುದ್ರೋಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪಾರಿವಾಳ ತಜ್ಞ ಕಷ್ಣ ಕುಳಾಲ್ ಮಾತನಾಡಿ, ದಕ್ಷಿಣ ಕನ್ನಡದಲ್ಲಿ ಪಾರಿವಾಳ ಸ್ಪರ್ಧೆಗಳು ಕಳೆದ 68 ವರ್ಷಗಳಿಂದ ನಡೆಯುತ್ತಿವೆ. ಆದಾಗ್ಯೂ ಜಿಲ್ಲೆಯಲ್ಲಿ ಪಾರಿವಾಳ ಸ್ಪರ್ಧಾಳುಗಳ ಯಾವುದೇ ವೇದಿಕೆ ಅಥವಾ ಸಮಿತಿ ಇಲ್ಲ. […]

ವಿಳಂಬಧೋರಣೆ ಭ್ರಷ್ಟಾಚಾರಕ್ಕೆ ಸಮಾನ: ಜಿಲ್ಲಾಧಿಕಾರಿ

Monday, October 27th, 2014
AB Ibrahim

ಮಂಗಳೂರು : ಸಾರ್ವಜನಿಕ ಕರ್ತವ್ಯ ನಿರ್ವಹಣೆಯಲ್ಲಿ ನಿಧಾನಗತಿ ಅನುಸರಿಸುವುದು ಮತ್ತು ಸೇವೆಯನ್ನು ಒದಗಿಸುವುದರಲ್ಲಿ ವಿಳಂಭವಾಗಿಸುವುದು ಭ್ರಷ್ಟಾಚಾರಕ್ಕೆ ಸಮಾನವಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಹೇಳಿದ್ದಾರೆ. ಅವರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಭ್ರಾಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸಲು ಅಕ್ಟೋಬರ್ 27ರಿಂದ ನವೆಂಬರ್ 1ರವರೆಗೆ ನಡೆಯಲಿರುವ ಜಾಗೃತಿ ಅರಿವು ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡಿದರು. ದಕ್ಷ ಆಡಳಿತ ಮತ್ತು ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಲು ಭ್ರಷ್ಟಾಚಾರವು ದೊಡ್ಡ ಪಿಡುಗಾಗಿದೆ. ಆದರೆ, ಭ್ರಷ್ಟಾಚಾರದೊಂದಿಗೆ ಹೊಂದಾಣಿಕೆಯು ಉತ್ತಮ ಸಮಾಜ ನಿರ್ಮಾಣಕ್ಕೆ […]

ಬಂಟ್ವಾಳ : 383 ಗಣವೇಶಧಾರಿ ಸ್ವಯಂಸೇವಕರ ಆಕರ್ಷಕ ಪಥಸಂಚಲನ

Monday, October 27th, 2014
RSS Bantwal

ಬಂಟ್ವಾಳ : ತಾಲೂಕಿನ ಅಣ್ಣಳಿಕೆಯಿಂದ ರಾಯಿ ಮಹಾಲಿಂಗೇಶ್ವರ ದೇವಸ್ಥಾನದ ವಠಾರದವರೆಗೆ 383 ಗಣವೇಶಧಾರಿ ಸ್ವಯಂಸೇವಕರ ಆಕರ್ಷಕ ಪಥಸಂಚಲನ ಸೋಮವಾರ ನಡೆಯಿತು. ವಿಜಯದಶಮಿ ಪ್ರಯುಕ್ತ ನಡೆದ ಈ ಕಾರ್ಯಕ್ರಮದಲ್ಲಿ ಬೌದ್ಧಿಕ್ ಶ್ರೀ ರಾಜೇಶ್ ರವರು ಮಾತನಾಡಿ ಹಿಂದೂ ಸಮಾಜಕ್ಕೆ ಸಂಘ ಶಕ್ತಿ ತುಂಬಿದೆ ಸಮಾಜದ ಒಳಿತಿಗಾಗಿ ಲಕ್ಷಾಂತರ ಜನ ಜೊತೆಯಾಗಿ ಕೆಲಸಮಾಡುವವರನ್ನು ಕಲ್ಪಿಸಿಕೊಟ್ಟಿದೆ. ಸಂಘ ಉಪೇಕ್ಷೆ ವಿರೋಧಗಳನ್ನು ದಾಟಿ ಸ್ವೀಕಾರ ಹಂತ ತಲುಪಿದೆ. ನಮ್ಮ ಪ್ರಭಾವ ಶಕ್ತಿ ಅಲ್ಪ ಬದಲಾಗಿ ಸಂಘಸ್ಥಾನವೇ ನಮ್ಮ ಶಕ್ತಿ ಇದನ್ನು ಬಲಪಡಿಸಬೇಕಾಗಿರುವುದು ಇಂದಿನ […]