ಕಾವೂರು ಪ್ರತಿಭಟನೆಗೆ ಯಡಿಯೂರಪ್ಪ ಭೇಟಿ

Sunday, October 19th, 2014
BSY

ಮಂಗಳೂರು : ಮೂಲ್ಕಿಯಲ್ಲಿ ನಡೆಯುತ್ತಿರುವ ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಯಡಿಯೂರಪ್ಪ ಕಾವೂರಿನಲ್ಲಿ ಭಜರಂಗದಳ ಮತ್ತು ವಿಶ್ವಹಿಂದೂ ಪರಿಷದ್‌ ನ ಕಾರ್ಯಕರ್ತರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಪ್ರತಿಭಟನಾ ಕಾರರನ್ನು ಉದ್ದೇಶಿಸಿ ಮಾತನಾಡಿದ ಬಿಎಸ್‌ವೈ ಹಲ್ಲೆ ನಡೆಸಿದ ಎಸ್‌ಐಯನ್ನು ಸರ್ಕಾರ ಕೂಡಲೆ ಅಮಾನತು ಮಾಡಬೇಕೆಂದು ಆಗ್ರಹಿಸಿದರು. ಕಾವೂರು ಪೊಲೀಸ್‌ ಠಾಣೆಯೆದುರು ಶುಕ್ರವಾರ ದಿಂದ ಸಂಘಟನೆಯ ಕಾರ್ಯಕರ್ತನ ಮೇಲೆ ವೀನಾ ಕಾರಣ ಹಲ್ಲೆ ನಡೆಸಿದ ಠಾಣಾ ಎಸ್‌ಐ ಉಮೇಶ್‌ ಕುಮಾರ್‌ ಅವರ ಅಮಾನತಿಗೆ ಭಜರಂಗದಳ ಮತ್ತು ವಿಶ್ವಹಿಂದೂ ಪರಿಷದ್‌ ಸಂಘಟನೆಯ […]

ಐ.ಎ.ಎಸ್. ಅಧಿಕಾರಿ ರಶ್ಮೀ ಮಹೇಶ್ ಹಲ್ಲೆಗೆ ಎಬಿವಿಪಿ ಖಂಡನೆ

Saturday, October 18th, 2014
abvp

ಮಂಗಳೂರು : ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿದ ದಕ್ಷ ಐಎಎಸ್ ಅಧಿಕಾರಿ ರಶ್ಮಿ ಮಹೇಶ್ ಹಲ್ಲೆಯನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತೀವ್ರವಾಗಿ ಖಂಡಿಸುತ್ತದೆ. ಭ್ರಷ್ಟಾಚಾರವನ್ನು ನಿಯಂತ್ರಣದಲ್ಲಿ ಇಡಬೇಕಾದ ಸರ್ಕಾರವೇ ಭ್ರಷ್ಟಾಚಾರದ ಪರನಿಂತು ದಕ್ಷ ಅಧಿಕಾರಿಗೆ ಹಲ್ಲೆಯಾದಾಗ ಪೋಲೀಸ್ ಅಧಿಕಾರಿಗಳು ಇದ್ದರೂ ತಡೆಯಲಾಗದಿರುವುದು ವಿಷಾದನೀಯ. ಈ ವ್ಯವಸ್ಥೆಯನ್ನು ಸಾಮಾನ್ಯ ಜನರು ಸಹ ತಲೆ ತಗ್ಗಿಸುವಂತೆ ಮಾಡಿದೆ. ಈ ಘಟನೆಯನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರವು ಗಂಭೀರವಾಗಿ ತೆಗೆದುಕೊಂಡು ಹಲ್ಲೆ ನಡೆಸಿದ ವ್ಯಕ್ತಿಗಳ ಮೇಲೆ ಕ್ರಮ ಜರುಗಿಸಿ, ಮುಂದೆಂದೂ […]

ಬೋಳಾರದಲ್ಲಿ ನೂತನ ಬಸ್ಸು ತಂಗುದಾಣದ ಉದ್ಘಾಟನೆ

Friday, October 17th, 2014
Mahabala Marla

ಮಂಗಳೂರು : ನಗರವನ್ನು ಸುಂದರವಾಗಿ ಇಡುವಲ್ಲಿ, ಸಾರ್ವಜನಿಕರಿಗೂ ಬದ್ಧತೆ ಇದೆ. ಎಲ್ಲ ಕೆಲಸಕ್ಕೂ ಸರಕಾರವನ್ನು ನಂಬಿ ಕುಳಿತುಕೊಳ್ಳುವುದಲ್ಲ. ಸಾರ್ವಜನಿಕರ ಸ್ಪಂದನೆ ದೊರಕಿದಾಗ, ನಗರ ಸುಂದರವಾಗಲು ಸಾಧ್ಯ ಎಂದು, ಮೇಯರ್ ಶ್ರೀ ಮಹಾಬಲ ಮಾರ್ಲ ಅಭಿಪ್ರಾಯಿಸಿದ್ದಾರೆ. ಮಂಗಳೂರು ಹೊಯ್ಗೆ ಬಜಾರ್ ವಾರ್ಡ್ ಗೆ ಒಳಪಟ್ಟ ಬೋಳಾರ ಲಿವೆಲ್ ಪರಿಸರದಲ್ಲಿ ‘ಸಿಟಿ ಬೀಚ್’ ಪ್ರಾಯೋಜಕತ್ವದಲ್ಲಿ, ಮಾಯಾ ಸಮೂಹ ಸಂಸ್ಥೆಗಳು ಮತ್ತು ಬೋಳಾರ ಲಿವೆಲ್ ಓ.ಸಿ. ಫ್ರೆಂಡ್ಸ್ ಸಹಕಾರದಲ್ಲಿ ಪುನರ್ ನಿರ್ಮಿಸಲ್ಪಟ್ಟ ನೂತನ ಬಸ್ಸು ತಂಗುದಾಣವನ್ನು ಮೇಯರ್ ಶ್ರೀ ಮಹಾಬಲ ಮಾರ್ಲ […]

ಬೆಲೆಯೇರಿಕೆ ವಿರೋಧಿಸಿ ಸಿಪಿಐಯಿಂದ ಪ್ರತಿಭಟನೆ

Friday, October 17th, 2014
cpi

ಮಂಗಳೂರು : ಮೋದಿ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವ ಪೂರ್ವದಲ್ಲಿ ಬಣ್ಣ ಬಣ್ಣದ ಆಶ್ವಾಸನೆಗಳೊಂದಿಗೆ ಆಡಳಿತದ ಚುಕ್ಕಾಣಿ ಹಿಡಿದು ನಂತರದ ದಿನಗಳಲ್ಲಿ ದೇಶದ ಜನತೆಗೆ ಮೋಸ ಮಾಡಿದೆ. ಜನರ ನೈಜ ಸಮಸ್ಯೆಗಳನ್ನು ಮರೆಮಾಚಲು ಸ್ವಚ್ಛ ಭಾರತ ನಿರ್ಮಾಣದ ನೆಪವೊಡ್ಡಿ ಜಾಹಿರಾತಿನಲ್ಲಿ ಮಿಂಚುವ ಮೋದಿಗೆ ಈ ದೇಶದ ಬಡತನ, ನಿರುದ್ಯೋಗ ಸಮಸ್ಯೆಗಳ ಬಗ್ಗೆ ಕಿಂಚಿತ್ತೂ ಗಮನವಿಲ್ಲ, ಈ ನಿಟ್ಟಿನಲ್ಲಿ ಸ್ವಚ್ಛ ಭಾರತ ನಿರ್ಮಾಣ ಮಾಡಲು ಹೊರಟ ಇವರಿಗೆ ಸ್ವಚ್ಛ ಹೃದಯವಿದೆಯೇ ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಪಿ.ಸಂಜೀವ […]

ಮಂಗಳೂರು ವಿಮಾನ ನಿಲ್ದಾಣದಲ್ಲಿ 27.10 ಲಕ್ಷ ಮೌಲ್ಯದ ಆಕ್ರಮ ಚಿನ್ಟ ಸಾಗಟ ಪತ್ತೆ

Tuesday, October 14th, 2014
Gold Smuggler

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್‌ ಅಧಿಕಾರಿಗಳು ಲೈಫ್‌ಜಾಕೆಟ್‌ ಬ್ಯಾಗಿನೊಳಗೆ ಹುದುಗಿಸಿಟ್ಟು ಅಕ್ರಮವಾಗಿ ಸಾಗಿಸುತ್ತಿದ್ದ 27.10 ಲಕ್ಷ ರೂ. ಮೌಲ್ಯದ 1 ಕಿಲೋ ಚಿನ್ನವನ್ನು ಸೋಮವಾರ ಮಂಗಳೂರು ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಂಡು ಓರ್ವನನ್ನು ಬಂಧಿಸಿದ್ದಾರೆ. ಕೊಡಗು ನಾಪೊಕ್ಲು ನಿವಾಸಿ ಮಡಪಳ್ಳಿ ಮಹಮ್ಮದ್‌ ಇಸ್ಮಾಯಿಲ್‌ ಬಂಧಿತ ಆರೋಪಿಯಾಗಿದ್ದಾನೆ. ಜೆಟ್‌ ಏರ್‌ವೇಸ್‌ನಲ್ಲಿ ದುಬಾೖಯಿಂದ ಮಂಗಳೂರಿಗೆ ಮಂಗಳವಾರ ಬೆಳಗ್ಗೆ 9 ಗಂಟೆಗೆ ಆಗಮಿಸಿದ ಆರೋಪಿಯು ಚಿನ್ನ ಹುದುಗಿಸಿಟ್ಟಿದ್ದ ಲೈಫ್‌ ಜಾಕೆಟ್‌ ಬ್ಯಾಗನ್ನು ವಿಮಾನದ ಸೀಟಿನಡಿಯಲ್ಲಿ ಅಡಗಿಸಿಟ್ಟಿದ್ದ. ಕಸ್ಟಮ್ಸ್‌ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದ […]

ನಿವೇಶನರಹಿತರಿಗೆ ನಿವೇಶನ ನೀಡಬೇಕೆಂದು ಒತ್ತಾಯಿಸಿ ಸಿಪಿಐ(ಎಂ) ಪ್ರತಿಭಟನೆ

Monday, October 13th, 2014
cpim protest

ಮಂಗಳೂರು : ಅಜಿ೯ದಾರರಿಗೆ ಮನೆ ನಿವೇಶನ ನೀಡಬೇಕೆಂದು ಒತ್ತಾಯಿಸಿ ಸಿಪಿಐ(ಎಂ) ನೇತೃತ್ವದಲ್ಲಿ ನಿವೇಶನರಹಿತರು ಮಂಗಳೂರು ಮಹಾನಗರ ಪಾಲಿಕೆಯೆದುರು ಅ13 ಸೋಮವಾರ ಪ್ರತಿಭಟನೆ ನಡೆಸಿದರು. ಪ್ರತಿಭಟನಕಾರರು ಜ್ಯೋತಿ ವೃತ್ತದಿಂದ ಪಾಲಿಕೆಯವರೆಗೆ ಮೆರವಣಿಗೆ ನಡೆಸಿದರು. ಈಗಾಗಲೇ ನೀಡಿರುವ ಅಜಿ೯ಗಳನ್ನು ನಿವೇಶನರಹಿತರ ಪಟ್ಟಿಗೆ ಸೇರ್ಪಡೆಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಸಿಪಿಐ(ಎಂ) ನಗರ ಕಾರ್ಯದಶಿ೯ ಸುನೀಲ್ ಕುಮಾರ್ ಬಜಾಲ್, ಮಾತನಾಡಿಪ್ರತಿ ವರ್ಷ ಭೂರಹಿತರಿಗೆ ಭೂಮಿ ನೀಡಬೇಕೆಂದಿದ್ದರೂ, ಕಳೆದ 20 ವರ್ಷಗಳಿಂದ ಪಾಲಿಕೆ ವ್ಯಾಪ್ತಿಯಲ್ಲಿ ಒಂದು ತುಂಡು ಭೂಮಿ ನೀಡದೆ ಬಡಜನರಿಗೆ ವಂಚಿಸಲಾಗಿದೆ ಎಂದು […]

ಕಾವೂರು ಠಾಣೆ ಪೊಲೀಸರ ವಿರುದ್ದ ಹಿಂದೂ ಕಾರ್ಯಕರ್ತರ ಪ್ರತಿಭಟನೆ

Monday, October 13th, 2014
vhp protest

ಮಂಗಳೂರು : ವಿಶ್ವ ಹಿಂದು ಪರಿಷತ್, ಬಜರಂಗ ದಳ ಕಾರ್ಯಕರ್ತರು ಮೂಡುಶೆಡ್ಡೆ ಹಿಂದೂ ಕಾರ್ಯಕರ್ತನೊರ್ವನಿಗೆ ಕಾವೂರು ಠಾಣೆ ಇನ್ಸ್ ಫೆಕ್ಟರ್ ಹಾಗೂ ಪೇದೆಗಳಿಬ್ಬರು ಚಿತ್ರಹಿಂಸೆ ನೀಡಿರುವುದನ್ನು ಖಂಡಿಸಿ ಅ13 ಸೋಮವಾರ ಜಿಲ್ಲಾಧಿಕಾರಿ ಕಚೇರಿಯೆದುರು ಪ್ರತಿಭಟನೆ ನಡೆಸಿದರು. ವಿಹಿಂಪ ಮುಖ್ಯಸ್ಥ ಜಗದೀಶ್ ಶೇಣವ ಮಾತನಾಡಿ ಹಿಂದೂ ಕಾರ್ಯಕರ್ತ ಚರಣ್ ಈ ಹಿಂದೆ ಕೇಸೊಂದರಲ್ಲಿ ಠಾಣೆಗೆ ಹಾಜರಾಗದೆ, ನೇರ ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆದುಕೊಂಡಿದ್ದಾನೆ. ಇದನ್ನೇ ನೆಪವಾಗಿರಿಸಿ ಚರಣ್ ನನ್ನು ಬಂಧಿಸಿದ ಪೊಲೀಸರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಆತ ಎದ್ದು […]

ಪಿಲಿಕುಳ ಉದ್ಯಾನವನದಲ್ಲಿ ಎರಡು ಹುಲಿಗಳ ನಡುವೆ ಭೀಕರ ಕಾಳಗ

Monday, October 13th, 2014
pilikula Tigers

ಮಂಗಳೂರು : ಪಿಲಿಕುಳದ ಡಾ| ಶಿವರಾಮ ಕಾರಂತ ಜೈವಿಕ ಪಾರ್ಕ್‌ ನಲ್ಲಿ ಎರಡು ಹುಲಿಗಳ ನಡುವೆ ಕಾಳಗ ಉಂಟಾಗಿ ಹೆಣ್ಣು ಹುಲಿ ತೀವ್ರ ಗಾಯಗೊಂಡ ಘಟನೆ ಆಕ್ಟೋಬರ್‌ 13ರ ಸೋಮವಾರದಂದು ನಡೆಯಿತು. ಪಿಲಿಕುಳದ ಉದ್ಯಾನವನದಲ್ಲಿ ಕುಮಾರ್‌ ಹಾಗೂ ಬಂಟಿ ಎಂಬ ಗಂಡು ಮತ್ತು ಹೆಣ್ಣು ಹುಲಿಗಳೆರಡು ಇದ್ದಕ್ಕಿದ್ದಂತೆಯೇ ಪರಸ್ಪರ ಕಚ್ಚಾಟಕ್ಕೆ ಇಳಿದು ನೋಡುಗರಿಗೆ ಆರಂಭದಲ್ಲಿ ಹುಲಿಗಳ ಆಟದಂತೆ ಕಂಡುಬಂದ ಈ ಕಚ್ಚಾಟ ಬರಬರುತ್ತಾ ಕಾವುಪಡೆಯತು. ಕುಮಾರ್‌ ಎಂಬ ಗಂಡು ಹುಲಿ ಮತ್ತು ನಾಲ್ಕೂವರೆ ವರ್ಷದ ಬಂಟಿ ಎಂಬ […]

ನಿಟ್ಟೆ ವಿದ್ಯಾಸಂಸ್ಥೆಯ ಸಿಬ್ಬಂದಿ ವರ್ಗದಿಂದ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ 25 ಲಕ್ಷ ದೇಣಿಗೆ

Saturday, October 11th, 2014
Nitte cheque

ಮಂಗಳೂರು: ಜಮ್ಮು ಕಾಶ್ಮೀರದಲ್ಲಿ ನೆರೆಯಲ್ಲಿ ಹಾನಿಗೊಳಗಾದವರ ಪುನರ್ವಸತಿಗಾಗಿ ನಿಟ್ಟೆ ಸಮೂಹ ವಿದ್ಯಾಸಂಸ್ಥೆಯ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳ ಹಾಗೂ ಸಂಸ್ಥೆಯ ಆಡಳಿತ ಮಂಡಳಿಯ ವತಿಯಿಂದ ಸಂಗ್ರಹವಾದ ಒಟ್ಟು ಮೊತ್ತ ರೂಪಾಯಿ ಇಪ್ಪತೈದು ಲಕ್ಷದ ಡಿಮಾಂಡ್ ಡ್ರಾಫ್ಟ್ ಅನ್ನು ಸಂಸ್ಥೆಯ ಪರವಾಗಿ ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಎಸ್. ರಮಾನಂದ ಶೆಟ್ಟಿಯವರು ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶ್ರೀಯುತ ಎ.ಬಿ. ಇಬ್ರಾಹಿಂ ಅವರ ಮುಖಾಂತರ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ನಿಟ್ಟೆ ವಿಶ್ವವಿದ್ಯಾನಿಲಯದ ಕುಲಸಚಿವರಾದ ಡಾ. ಎಮ್.ಎಸ್.ಮೂಡಿತ್ತಾಯ […]

ಕೊಟ್ಟಾರ ಬಳಿ ಹೆದ್ದಾರಿ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಐವನ್ ಸೂಚನೆ

Saturday, October 11th, 2014
ಕೊಟ್ಟಾರ ಬಳಿ ಹೆದ್ದಾರಿ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಐವನ್ ಸೂಚನೆ

ಮಂಗಳೂರು : ಕೊಡಿಕಲ್ ಕೂಡು ರಸ್ತೆಯ ಬಳಿಯೇ ಫೈಓವರ್ ಸೇತುವೆಯೂ ಸಂಪರ್ಕಿಸುತ್ತಿರುವುದರಿಂದ ಇಲ್ಲಿ ನಿತ್ಯ ಅಪಘಾತಗಳು ಸಂಭವಿಸುತ್ತಿದ್ದು, ಅಪಾಯಕಾರಿಯಾಗಿ ಪರಿಣಮಿಸಿರುವ ಈ ಪ್ರದೇಶದಲ್ಲಿ ಸೂಕ್ತ ಮುಂಜಾಗರೂಕತೆ ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ನಗರ ಟ್ರಾಫಿಕ್ ಪೊಲೀಸ್ ಹಾಗೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಸಮಸ್ಯೆಯ ಸ್ಥಳಕ್ಕೆ ಸೆ.10ರಂದು ಮಧ್ಯಾಹ್ನ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಸಮಸ್ಯೆಯ ಪರಿಹಾಕ್ಕೆ ಕೈಗೊಳ್ಳಬಹುದಾದ ಕ್ರಮಗಳ ಕುರಿತಂತೆ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಫೈಓವರ್ ಅಂತ್ಯವಾಗುವಲ್ಲಿ ಕೊಡಿಕಲ್ […]