ಮೆಸ್ಕಾಂನ ಎಕ್ಸಿಕ್ಯೂಟಿವ್ ಎಂಜಿನಿಯರ್ ಕೊಲೆ ಆರೋಪಿಗಳ ಬಂಧನ

Monday, October 6th, 2014
Mescom engineer Killers

ಮಂಗಳೂರು: ಬಿಜೈ ನಿವಾಸಿ ಮೆಸ್ಕಾಂನ ಎಕ್ಸಿಕ್ಯೂಟಿವ್ ಎಂಜಿನಿಯರ್ ಜಗದೀಶ್ ರಾವ್(56) ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಇಬ್ಬರು ಆರೋಪಿಗಳನ್ನು ಉರ್ವಾ ಠಾಣಾ ಪೊಲೀಸರು ಸೋಮವಾರ ವಶಕ್ಕೆ ಪಡೆದುಕೊಂಡಿದ್ದು, ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸ್ ಕಮಿಷನರ್ ಹಿತೇಂದ್ರ ಹೇಳಿದ್ದಾರೆ. ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಶಿರಸಂಗಿ ನಿವಾಸಿ ಸಿದ್ದಪ್ಪ ಯಾನೆ ಸಿದ್ದು(22), ದಾವಣಗೆರೆಯ ನಿಟ್ಟೋಳಿ ಸೈಯದ್ ಫೀರ್ ಬಡಾವಣೆ ನಿವಾಸಿ ಮುರ್ತುಜ ಖಾದ್ರಿ ಯಾನೆ ರಫೀಕ್(27) ಎಂಬವರು ನಗರದಲ್ಲಿ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದಾಗ ಉರ್ವಾ ಠಾಣಾ ಪೊಲೀಸರು ವಶಕ್ಕೆ ಪಡೆದು […]

ರೈಲ್ವೆ ಸಚಿವ ಡಿವಿ ಸದಾನಂದ ಗೌಡ ಪುತ್ರ ಕಾರ್ತಿಕ್ ಗೌಡ ಜೊತೆ ತಿರುಪತಿ ದರ್ಶನ

Sunday, October 5th, 2014
DVS Tirupati

ಬೆಂಗಳೂರು : ಮೈತ್ರಿ ಪ್ರಕರಣ ಜಟಿಲವಾದ ಹಿನ್ನಲೆಯಲ್ಲಿ ಕೇಂದ್ರ ರೈಲ್ವೆ ಸಚಿವ ಡಿವಿ ಸದಾನಂದ ಗೌಡ ಅವರು ಸಂಸಾರ ಸಮೇತರಾಗಿ ಭಾನುವಾರ ಬೆಳಗ್ಗೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದುಕೊಂಡಿದ್ದಾರೆ. ಡಿವಿ ಸದಾನಂದ ಗೌಡ, ಕಾರ್ತಿಕ್ ಗೌಡ ಹಾಗೂ ಡಾಟಿ ಸದಾನಂದ ಗೌಡ ಅವರನ್ನು ತಿರುಮಲ ತಿರುಪತಿ ದೇವಸ್ಥಾನಂನ ಜಂಟಿ ಕಾರ್ಯಕಾರಿ ಅಧಿಕಾರಿ ಕೆಎಸ್ ಶ್ರೀನಿವಾಸ್ ರಾಜು ಅವರು ಆತ್ಮೀಯವಾಗಿ ಬರ ಮಾಡಿಕೊಂಡರು. ಸದಾನಂದ ಗೌಡ ಅವರ ಕುಟುಂಬದ ಜೊತೆಗೆ ಆಂಧ್ರಪ್ರದೇಶದ ಮುಜರಾಯಿ ಇಲಾಖೆ ಸಚಿವ ಮಾಣಿಕ್ಯಾಲ ರಾವ್ […]

ತ್ಯಾಗ ಬಲಿದಾನದ ಹಬ್ಬವಾದ ಈದ್‌ -ಉಲ್‌- ಅದಾ ಆಚರಣೆ

Sunday, October 5th, 2014
eid-ul-ada

ಮಂಗಳೂರು : ಮುಸಲ್ಮಾನ ಬಾಂಧವರು ತ್ಯಾಗ ಬಲಿದಾನದ ಹಬ್ಬವಾದ ಈದ್‌ -ಉಲ್‌- ಅದಾ(ಬಕೀದ್) ವನ್ನು ಭಾನುವಾರ ಮಂಗಳೂರು, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಆಚರಿಸಿದರು. ಮಂಗಳೂರಿನ ಬಾವುಟಗುಡ್ಡೆಯಲ್ಲಿರುವ ಈದ್ಗಾ ಮೈದಾನದಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ ಮುಸ್ಲಿಂ ಭಾಂಧವರು ಸಾಮೂಹಿಕ ನಮಾಜ್‌ ನಲ್ಲಿ ಪಾಲ್ಗೊಂಡು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಮಂಗಳೂರು ಕಾಜ್ಹಿ ತೋಕ ಅಹಮ್ಮದ್ ಮುಸ್ಲಿಯಾರ್ ಈದ್‌ -ಉಲ್‌- ಅದಾ ಸಂದೇಶವನ್ನು ನೀಡಿದರು. ಹಿಂದೆ ದೇವರ ಆಜ್ಞೆಯ ಮೇರೆಗೆ ಪ್ರವಾದಿ ಇಬ್ರಾಹಿಂ ರು ತನ್ನ ಮಗನನ್ನೇ ದೇವರಿಗೆ […]

ಕುದ್ರೋಳಿ ನವರಾತ್ರಿ ಸಂಬ್ರಮ`ಬೃಹತ್‌ ಮಂಗಳೂರು ದಸರಾ ಮೆರವಣಿಗೆ’ ಯಲ್ಲಿ ಸಮಾಪನ

Sunday, October 5th, 2014
ಕುದ್ರೋಳಿ ನವರಾತ್ರಿ ಸಂಬ್ರಮ`ಬೃಹತ್‌ ಮಂಗಳೂರು ದಸರಾ ಮೆರವಣಿಗೆ’ ಯಲ್ಲಿ ಸಮಾಪನ

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನವರಾತ್ರಿ ಮೆರವಣಿಗೆ ಶನಿವಾರ ಸಂಜೆ ಆರಂಭಗೊಂಡ ‘ಬೃಹತ್‌ ಮಂಗಳೂರು ದಸರಾ ಮೆರವಣಿಗೆ ರವಿವಾರ ಮುಂಜಾನೆ ಸಮಾಪನಗೊಂಡಿತು. ಶೋಭಾ ಯಾತ್ರೆಯಲ್ಲಿ ಶ್ರೀಶಾರದೆ, ಮಹಾಗಣಪತಿ, ಆದಿಶಕ್ತಿ, ನವದುರ್ಗೆಯರು, ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಸ್ತಬ್ಧಚಿತ್ರಗಳು; ಕೇರಳದ ಚೆಂಡೆ ವಾದ್ಯ, ವಿವಿಧೆಡೆಯ ಜಾನಪದ ಕಲಾ ನೃತ್ಯ ತಂಡಗಳು, ಮಹಾರಾಷ್ಟ್ರದ ಡೋಲು, ಕರಾವಳಿ ಹುಲಿವೇಷ ಸಹಿತ ಪಾರಂಪರಿಕ ವೈವಿಧ್ಯ, ಆಂಧ್ರದ ಬಾಲಮುರಳೀಕೃಷ್ಣ ಕೋಲಾಟಂ, ಕಲ್ಲಡ್ಕದ ಶಿಲ್ಪ ಗೊಂಬೆ, ತ್ರಿಶ್ಯೂರಿನ ವರ್ಣದ ಕೊಡೆಗಳು, ವಾದ್ಯವೃಂದ, ಕರಾವಳಿಯ ಅನೇಕ […]

ನವವಿವಾಹಿತೆಯ ಶವ ಮನೆಯ ಬಾವಿಯಲ್ಲಿ ಪತ್ತೆ

Saturday, October 4th, 2014
Safida

ಕಾಸರಗೋಡು : ನವವಿವಾಹಿತೆಯ ಶವ ಕಾಸರಗೋಡು ಜಿಲ್ಲೆಯ ಅಂಬಲಟ್ಟರ ಎಂಬಲ್ಲಿ ಬಾವಿಯಲ್ಲಿ ಪತ್ತೆಯಾದ ಬಗ್ಗೆ ಶುಕ್ರವಾರ ವರದಿಯಾಗಿದೆ. ಮೃತ ವಿವಾಹಿತ ಯುವತಿಯನ್ನು ಸಫೀದಾ (19) ಎಂದು ತಿಳಿದು ಬಂದಿದೆ. ಗುರುವಾರ ರಾತ್ರಿ ಮನೆಯಲ್ಲಿ ಮಲಗಿದ್ದ ಸಫೀದಾ ನಾಪತ್ತೆಯಾಗಿದ್ದರು. ಮನೆಯವರು ಸಫೀದಾಗಾಗಿ ಹುಡುಕಾಟ ನಡೆಸುತ್ತಿದ್ದ ವೇಳೆ ಬಾವಿಯಲ್ಲಿ ಶವ ಪತ್ತೆಯಾಗಿದೆ. ಅಗ್ನಿ ಶಾಮುಕ ದಳದ ಸಿಬ್ಬಂದಿ ಶವವನ್ನು ಮೇಲಕ್ಕೆತ್ತಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಅಡೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರಾಷ್ಟ್ರ ಪಕ್ಷಿ ನವಿಲನ್ನು ಕೊಂದು ಗರಿಗಳನ್ನು ಮಂಗಳೂರು ನಗರದಲ್ಲಿ ಮಾರಾಟ

Thursday, October 2nd, 2014
ರಾಷ್ಟ್ರ ಪಕ್ಷಿ ನವಿಲನ್ನು ಕೊಂದು ಗರಿಗಳನ್ನು ಮಂಗಳೂರು ನಗರದಲ್ಲಿ ಮಾರಾಟ

ಮಂಗಳೂರು : ರಾಜಸ್ಥಾನ ಮೂಲದ ಕೆಲವೊಂದು ವ್ಯಕ್ತಿಗಳು ಅಲ್ಲಿ ಯಥೇಚ್ಛವಾಗಿ ಸಿಗುವ ನವಿಲುಗಳ ಆಹಾರದಲ್ಲಿ ಅಮಲು ಪದಾರ್ಥಗಳನ್ನು ಬೆರೆಸಿ ಅವುಗಳನ್ನು ಹಿಡಿದು ಕೊಂದು ತಿಂದು ಅವುಗಳ ಗರಿಗಳನ್ನು ದೇಶಾದ್ಯಂತ ಮುಕ್ತವಾಗಿ ಮಾರಾಟ ಮಾಡುತ್ತಿದ್ದಾರೆ ಎಂದು ಪರಿಸರ ಸಂರಕ್ಷಣಾ ಒಕ್ಕೂಟ ತಿಳಿಸಿದೆ. ಮಂಗಳೂರು ನಗರದಲ್ಲಿ ಈಗ ಜಾತ್ರಾ ಸಮಯ ಆದುದರಿಂದ ಈ ರಾಜಸ್ಥಾನದ ಜನರು ಹೊರೆಗಟ್ಟಲೆ ನವಿಲು ಗರಿಗಳನ್ನು ತಂದು ಸಾರ್ವಜನಿಕವಾಗಿ ಮಾರಾಟ ಮಾಡುತ್ತಿದ್ದಾರೆ. ಅವರನ್ನು ವಿಚಾರಿಸಿದರೆ ತಾವುಗಳು ಬಿದ್ದ ಗರಿಗಳನ್ನು ತಂದು ಮಾರಾಟ ಮಾಡುತ್ತಿರುವುದಾಗಿ ತಿಳಿಸುತ್ತಾರೆ. ಇದು […]

ಪುತ್ತೂರು ಪುರಸಭಾಧ್ಯಕ್ಷರಾಗಿ ನೆಲ್ಲಿಕಟ್ಟೆ ಜಗದೀಶ್‌ ಶೆಟ್ಟಿ ಆಯ್ಕೆ

Wednesday, October 1st, 2014
ಪುತ್ತೂರು ಪುರಸಭಾಧ್ಯಕ್ಷರಾಗಿ ನೆಲ್ಲಿಕಟ್ಟೆ ಜಗದೀಶ್‌ ಶೆಟ್ಟಿ ಆಯ್ಕೆ

ಪುತ್ತೂರು: ಪುತ್ತೂರು ಪುರಸಭೆಗೆ ಮಂಗಳವಾರ ನಡೆದ ಅಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿ ಎಚ್‌. ಮಹಮ್ಮದಾಲಿ ಅವರನ್ನು ಸೋಲಿಸುವ ಮೂಲಕ ಬಂಡಾಯ ಅಭ್ಯರ್ಥಿ ಕಾಂಗ್ರೆಸ್‌ನ ನೆಲ್ಲಿಕಟ್ಟೆ ಜಗದೀಶ್‌ ಶೆಟ್ಟಿ ಪುರಸಭಾ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ. ಅವರು 18 ಮತಗಳನ್ನು ಪಡೆದು ಎಚ್‌. ಮಹಮ್ಮದಾಲಿ ಅವರನ್ನು ಸೋಲಿಸಿದರು. ಮಂಗಳವಾರ ಬೆಳಗ್ಗೆ ಕಾಂಗ್ರೆಸ್‌ನಿಂದ ಎಚ್‌. ಮಹಮ್ಮದಾಲಿ ಮತ್ತು ನೆಲ್ಲಿಕಟ್ಟೆ ಜಗದೀಶ್‌ ಶೆಟ್ಟಿ ಹಾಗೂ ಬಿಜೆಪಿಯಿಂದ ವಿಶ್ವನಾಥ ಗೌಡ ನಾಮಪತ್ರ ಸಲ್ಲಿಸಿದ್ದರು. ನೆಲ್ಲಿಕಟ್ಟೆ ಜಗದೀಶ್‌ ಶೆಟ್ಟಿ ನಾಮಪತ್ರವನ್ನು ಹಿಂದೆ ತೆಗೆದುಕೊಳ್ಳದೇ ಚುನಾವಣಾ ಕಣದಲ್ಲಿ […]

ಮಂಗಳೂರು ಮಹಾನಗರ ಪಾಲಿಕೆ ಸಾಮಾನ್ಯ ಸಭೆ – ಮಂಗಳೂರು ಒನ್‌ ತನಿಖೆಗೆ ಸದನ ಸಮಿತಿ

Tuesday, September 30th, 2014
MCC

ಮಂಗಳೂರು: ಮಂಗಳೂರು ಒನ್‌ ಸೇವಾ ಕೇಂದ್ರಗಳು ಜನರಿಂದ ಸಂಗ್ರಹಿಸಿದ ಆಸ್ತಿ ತೆರಿಗೆಯನ್ನು ಕ್ಲಪ್ತ ಸಮಯದಲ್ಲಿ ಪಾಲಿಕೆಯ ಖಾತೆಗೆ ಪಾವತಿಸುತ್ತಿಲ್ಲ. ಪಾಲಿಕೆಗೆ ಸಂದಾಯ­ವಾದ ಮೊತ್ತ ಹಾಗೂ ಸೇವಾ ಕೇಂದ್ರಗಳು ಸಂಗ್ರಹಿಸಿರುವ ಮೊತ್ತದಲ್ಲಿ ₨ 2.5 ಕೋಟಿ­ಯಷ್ಟು ವ್ಯತ್ಯಯ ಕಂಡುಬಂದಿದೆ’ ಎಂದು  ಪಾಲಿಕೆ ಸದಸ್ಯ ವಿಜಯ ಕುಮಾರ್‌ ಶೆಟ್ಟಿ ಆರೋಪಿಸಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಮೇಯರ್‌ ಮಹಾಬಲ ಮಾರ್ಲ ಅವರು, ಈ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಲು ಸದನ ಸಮಿತಿಯನ್ನು ನೇಮಿಸಿದರು. ಪಾಲಿಕೆ ಸಭಾಂಗಣದಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ […]

ಪಾಕಿಸ್ಥಾನಃ ಗಡಿ ಉಲ್ಲಂಘನೆ ಮಾಡಿದ ಆರೋಪ ೨೫ ಮೀನುಗಾರರ ಬಂಧನ

Tuesday, September 30th, 2014
Fishermen

ಇಸ್ಲಮಾಬಾದ್‌ : ಭಾನುವಾರ ಸಂಜೆ ಮೀನು ಹಿಡಿಯಲು ತೆರಳಿದ 25 ಭಾರತೀಯ ಮೀನುಗಾರರನ್ನು ಪಾಕಿಸ್ತಾನದ ಬಂದರು ರಕ್ಷಣಾ ಪಡೆ ಭಂದಿಸಿದೆ. ಗಡಿ ಉಲ್ಲಂಘನೆ ಮಾಡಿದ ಆರೋಪ ಎದುರಿಸಿತ್ತುರುವ  ಎಲ್ಲಾ ಮೀನುಗಾರರನ್ನು ಕರಾಚಿಯ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಇವರೆಲ್ಲರಿಗೂ ಕನಿಷ್ಠ 1 ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆಗಳಿವೆ.

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಪರಿಶಿಷ್ಟ ವರ್ಗದ ವಿಧವೆಯರಿಂದ ಅರ್ಚನೆ

Tuesday, September 30th, 2014
Kudroli priest

ಮಂಗಳೂರು: ಪರಿಶಿಷ್ಟ ವರ್ಗದ ಇಬ್ಬರು ಮಹಿಳೆಯರು ಅರ್ಚಕಿ ಸ್ಥಾನ ಸ್ವೀಕರಿಸಿ ಕುದ್ರೋಳಿ ಶ್ರೀ ಗೋಕರ್ಣನಾಥ ಹಾಗೂ ಪರಿವಾರ ದೇವರುಗಳ ಗರ್ಭಗುಡಿ ಪ್ರವೇಶಿಸಿ ಪೂಜಾ ವಿಧಾನಗಳನ್ನು ನೆರವೇರಿಸಿದರು. ಕ್ಷೇತ್ರದ ನವೀಕರಣದ ರೂವಾರಿ ಬಿ. ಜನಾರ್ದನ ಪೂಜಾರಿ ಅವರ ನೇತೃತ್ವದಲ್ಲಿ ಪರಿಶಿಷ್ಟ ವರ್ಗಕ್ಕೆ ಸೇರಿದ ಮಂಗಳೂರು ಉರ್ವ ಚಿಲಿಂಬಿಯ ದಿ| ಸದಾಶಿವ ಅವರ ಪತ್ನಿ ಲಕ್ಷ್ಮೀ (65) ಹಾಗೂ ಉಳ್ಳಾಲ ಕುತ್ತಾರು ರಾಣಿಪುರದ ದಿ| ಕೃಷ್ಣಪ್ಪ ಅವರ ಪತ್ನಿ ಚಂದ್ರಾವತಿ (46) ಅವರು ನವರಾತ್ರಿ ಹಾಗೂ ದಸರಾ ಸಂಭ್ರಮದ ಸಂದರ್ಭದಲ್ಲಿ […]