ಕಾಡಿನಿಂದ ನಾಡಿಗೆ ಬಂದ 6 ಆನೆಗಳ ಬಲ ಪರೀಕ್ಷೆ

Sunday, August 31st, 2014
6 Dasara Elephants arrived to Mysore city

ಮೈಸೂರು: ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಮೊದಲ ತಂಡದಲ್ಲಿ ಕಾಡಿನಿಂದ ನಾಡಿಗೆ ಆಗಮಿಸಿರುವ 6 ಆನೆಗಳ ಬಲ ಪರೀಕ್ಷೆಯನ್ನು ಭಾನುವಾರ ಮಾಡಲಾಯಿತು. ನಗರದ ಧನ್ವಂತ್ರಿ ರಸ್ತೆಯಲ್ಲಿರುವ ವೇಬ್ರಿಡ್ಜ್‌ನಲ್ಲಿ ಆನೆಗಳನ್ನು ನಿಲ್ಲಿಸಿ ತೂಕ ಮಾಡಲಾಯಿತು. ಈ ಬಲ ಪರೀಕ್ಷೆಯಲ್ಲಿ ಅಂಬಾರಿ ಆನೆ ಅರ್ಜುನ 5470 ಕೆ.ಜಿ ಹೊಂದಿದ್ದು, ಮೊದಲ ತಂಡದಲ್ಲಿ ಬಂದಿರವ ಆನೆಗಳ ಪೈಕಿ ಅರ್ಜುನನೇ ಬಲಶಾಲಿಯಾಗಿದ್ದಾನೆ. ಗಜೇಂದ್ರ 5020 ಕೆ.ಜಿ ತೂಕದೊಂದಿಗೆ 2ನೇ ಸ್ಥಾನ, ಮಾಜಿ ಅಂಬಾರಿ ಆನೆ ಬಲರಾಮ 4970 ಕೆ.ಜಿ ತೂಕದೊಂದಿಗೆ 3ನೇ ಸ್ಥಾನದಲ್ಲಿದೆ. ಉಳಿದಂತೆ […]

ವೈಜ್ಙಾನಿಕ ಕೋಳಿ ತ್ಯಾಜ್ಯ ವಿಲೆಗೆ ಸ್ಥಳೀಯ ಆಡಳಿತಗಳು ಕ್ರಮವಹಿಸಿ-ಎ.ಬಿಇಬ್ರಾಹಿಂ

Wednesday, August 27th, 2014
dc ab ibrahim

ಮಂಗಳೂರು : ಜಿಲ್ಲೆಯಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕೋಳಿ ಮಾಂಸದಂಗಡಿಗಳು, ಇತರೆ ಮಾಂಸದಂಗಡಿಗಳು ತಮ್ಮಲ್ಲಿ ಸಂಗ್ರಹವಾಗುವ ತ್ಯಾಜ್ಯಗಳನ್ನು ಸಮರ್ಪಕವಾಗಿ/ವೈಜ್ಙಾನಿಕವಾಗಿ ವಿಲೆ ಮಾಡದೆ ಅವುಗಳನ್ನು ನದಿಗಳಲ್ಲಿ ರಸ್ತೆ ಬದಿಗಳಲ್ಲಿ ಎಲ್ಲೆಂದರಲ್ಲಿ ಬೇಕಾಬಿಟ್ಟಿ ಬಿಸಾಡುತ್ತಿರುವುದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿರುವುದರ ಬಗ್ಗೆ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಕಳವಳ ವ್ಯಕ್ತಪಡಿಸಿದ್ದು, ಕೂಡಲೇ ಎಲ್ಲಾ ಸ್ಥಳೀಯ ಆಡಳಿತ ಸಂಸ್ಥೆಗಳು ಇನ್ನು ಒಂದು ತಿಂಗಳಲ್ಲಿ ತಮ್ಮಲ್ಲಿರುವ ಇಂತಹ ಅಂಗಡಿಗಳ ಸಮೀಕ್ಷೆ ನಡೆಸಿ ಅವುಗಳಿಂದ ಉತ್ಪತ್ತಿಯಾಗುವ ತ್ಯಾಜ್ಯ ಬಗ್ಗೆ ವರದಿಯನ್ನು ತಯಾರು ಮಾಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ. […]

ಸೂರ್ಯನಾರಾಯಣ ದೇವಸ್ಥಾನಕ್ಕೆ ಐವನ್ ಬೇಟಿ

Tuesday, August 26th, 2014
suryanarayana temple

ಮಂಗಳೂರು, ನಗರದ ಸೂರ್ಯ ನಾರಾಯಣ ದೇವಸ್ಥಾನಕ್ಕೆ ವಿಧಾನ ಪರಿಷತ್ ಸದಸ್ಯ ಐವ್‌ನ್ ಡಿಸೋಜಾ ಸೋಮವಾರ ಭೇಟಿ ನೀಡಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಪದಾಧಿಕಾರಿಗಳು ದೇವಸ್ಥಾನದ ನವೀಕರಣವಾಗುತ್ತಿರುವ ಮಾಹಿತಿ ನೀಡಿದರು. 16ಕೋಟಿ ರೂ. ವೆಚ್ಚದಲ್ಲಿ ದೇವಸ್ಥಾನ ನವೀಕರಿಸಲಾಗುತ್ತಿದ್ದು, ಇದಕ್ಕೆ ಸರಕಾರದ ವತಿಯಿಂದ ಸಹಾಯಧನ ಒದಗಿಸಲು ಸಹಕರಿಸುವಂತೆ ಕೋರಿದರು. ಪ್ರವಾಸೋಧ್ಯಮ ಇಲಾಖೆಯಿಂದ ವಿಶ್ರಾಂತಿ ಧಾಮವನ್ನಾಗಿ ಬೆಳೆಸುವ ಯೋಜನೆಯ ಪ್ರಸ್ತಾಪ ಕೂಡ ಇಡಲಾಯಿತು. ಮಂಗಳೂರು ದಸರಾ ಉದ್ಘಾಟನೆಗಾಗಿ ಮಂಗಳೂರಿಗೆ ಬರುವ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ದೇವಸ್ಥಾನಕ್ಕೆ ಕರೆತರುವಂತೆ ಕೂಡ ದೇವಸ್ಥಾನದ […]

ಅಂತ್ಯ ಸಂಸ್ಕಾರದ ವೇಳೆ ಕಣ್ ಬಿಟ್ಟ ಮಗು ಚಿಕಿತ್ಸೆ ಫಲಕಾರಿಯಾಗದೆ ಸಾವು

Sunday, August 24th, 2014
infant died

ಮಂಗಳೂರು : ತೊಕ್ಕೊಟ್ಟು ಚೆಂಬುಗುಡ್ಡೆಯಲ್ಲಿರುವ ಸ್ಮಶಾನದಲ್ಲಿ ಅಂತ್ಯಸಂಸ್ಕಾರದ ವೇಳೆ ಮಗುವಿನ ಬಾಯಿಗೆ ಕೊನೆಯ ಗುಟುಕು ಹಾಲು ಹಾಕುವ ಸಂದರ್ಭ ಮಗು ಕಣ್ ಬಿಟ್ಟು ಹಾಲು ಚಪ್ಪರಿಸಿ ಮೈ ಅಲ್ಲಾಡಿಸಿ ಪೋಷಕರಿಗೆ ಅಚ್ಚರಿ ಮೂಡಿಸಿ ಸಂತಸವನ್ನು ತಂದಿತ್ತು. ಮಗುವನ್ನು ಕೂಡಲೇ ಮಂಗಳೂರಿನ ಎಸ್ ಸಿಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಗುವಿನ ತಂದೆ ವೈದ್ಯರ ವಿರುದ್ದ ದೂರನ್ನು ನೀಡಿದ್ದರು. ಆದರೆ ಭಾನುವಾರ ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿರುವ ಸುದ್ದಿ ಬಂದಿದೆ. ಸ್ವಾತಂತ್ರ್ಯೋತ್ಸವ (ಅ.15) ದಂದು ಹೆರಿಗೆ ನೋವಿನಿಂದ ಬಳಲುತ್ತಿದ್ದ ಗೌರಿ […]

ಸಮಾಜ ಕಾರ್ಯ ಶಿಕ್ಷಣದಲ್ಲಿ ಕ್ಷೇತ್ರ ಅಧ್ಯಯನವು ಮಾಡುವಾಗ ಮಾನವ್ಯ ಸಂಬಂಧ ಅತೀ ಅಗತ್ಯ : ರೀಟಾ ನರೋನ್ಹಾ

Sunday, August 24th, 2014
ಸಮಾಜ ಕಾರ್ಯ ಶಿಕ್ಷಣದಲ್ಲಿ ಕ್ಷೇತ್ರ ಅಧ್ಯಯನವು ಮಾಡುವಾಗ ಮಾನವ್ಯ ಸಂಬಂಧ ಅತೀ ಅಗತ್ಯ : ರೀಟಾ ನರೋನ್ಹಾ

ಮಂಗಳೂರು : ಸಮಾಜ ಕಾರ್ಯ ಶಿಕ್ಷಣದಲ್ಲಿ ಕ್ಷೇತ್ರ ಅಧ್ಯಯನ ಮಾಡುವಾಗ ಮಾನವ್ಯ ಸಂಬಂಧ ಅತೀ ಅಗತ್ಯ ಎಂದು ರೋಶನಿ ನಿಲಯದಲ್ಲಿ ನಡೆದ ಸಮಾಜ ಕಾರ್ಯ ಮತ್ತು ಶಿಕ್ಷಣಕ್ಕೆ ಸಂಭಂಧಪಟ್ಟ ವಿಚಾರಗೋಷ್ಠಿಯಲ್ಲಿ ಸಮಾಜ ಕಾರ್ಯ ವಿಧ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ. ಪಡಿ ಸಂಸ್ಥೆ ಹಾಗೂ ರೋಶನಿ ನಿಲಯ ಸಹಭಾಗಿತ್ವದಲ್ಲಿ ಆಯೋಜಿಸಿದ ಎಂ.ಎಸ್.ಡಬ್ಲು ಕ್ಷೇತ್ರ ಅಧ್ಯಯನದ ಪೂರ್ವಸಿದ್ದತಾ ಕಾರ್ಯಕ್ರಮವನ್ನು ಆಗಸ್ಟ್ 24 ರಂದು ನಡೆಸಲಾದ ಸಂದರ್ಭದಲ್ಲಿ ಫ್ರೊಫೆಸರ್ ರೀಟಾ ನರೋನ್ಹಾ ರವರು ಭಾಗವಹಿಸಿ, ಸಮಾಜ ಕಾರ್ಯ ಅಧ್ಯಯನಕ್ಕೆ ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ […]

ಸ್ಪರ್ಧೆಗಳು ಕೇವಲ ಬಹುಮಾನಕ್ಕೆ ಸೀಮಿತವಾಗಿರದೆ ವ್ಯಕ್ತಿತ್ವ ರೂಪಿಸುವಲ್ಲಿ ಪೂರಕವಾಗಿರಬೇಕು : ರತೀಂದ್ರನಾಥ್

Sunday, August 24th, 2014
sai-kids-jone

ಬಂಟ್ವಾಳ: ಮಕ್ಕಳ ಅಭಿರುಚಿಗೆ ಪೂರಕವಾಗಿರುವ ಚಿತ್ರ ಕಲೆಗೆ ಇಂತಹ ಸ್ಪರ್ಧೆಗಳು ಸಹಕಾರಿಯಾಗಲಿವೆ, ಸ್ಪರ್ಧೆ ಕೇವಲ ಬಹುಮಾನಕ್ಕೆ ಸೀಮಿತವಾಗಿರದೆ ವ್ಯಕ್ತಿತ್ವ ರೂಪಿಸುವಲ್ಲಿ ಪೂರಕವಾಗಿರರಬೇಕು ಎಂದು ಮಂಗಳೂರು ಶ್ರೀಶಿರ್ಡಿ ಬಾಬ ರಿಯಲ್ ಎಸ್ಟೇಟ್ ಮತ್ತು ಪ್ರೋಮೊಟರ‍್ಸ್ ಮಾಲಕ ಎಚ್ ರತೀಂದ್ರನಾಥ್ ಹೇಳಿದರು ಅವರು ಬಿ.ಸಿ.ರೋಡ್ ಶ್ರೀ ಸಾಯಿ ಕಿಡ್ಸ್ ಝೋನ್ ಪ್ಲೇ ಸ್ಕೂಲ್ ನ ವತಿಯಿಂದ ನರ್ಸರಿ, ಕಿರಿಯ, ಹಿರಿಯ ಪ್ರಾಥಮಿಕ ಹಾಗೂ ಪ್ರೌಡ ಶಾಲಾ ವಿದ್ಯಾರ್ಥಿಗಳಿಗೆ ದ.ಕ.ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಕಾರ‍್ಯಕ್ರಮದ ಅಧ್ಯಕ್ಷತೆಯನ್ನು […]

ದೇಶ ಪ್ರೇಮವುಳ್ಳ ಹಾಗೂ ನಿಸ್ವಾರ್ಥ ಮನೋಭಾವದ ವಕೀಲರು ಬೇಕು : ನಗರೇಶ್

Sunday, August 24th, 2014
adhivakta

ಮಂಗಳೂರು: ಸಾಮಾಜಿಕ ಬದಲಾವಣೆಗೆ ಕಾನೂನು ಉತ್ತಮ ಸಾಧನವಾಗಿದೆ. ಜನಸಾಮಾನ್ಯರಿಗೂ ಕಾನೂನು ಸೇವೆ ಸುಲಭವಾಗಿ ಸಿಗಬೇಕು ಎನ್ನುವ ಉದ್ದೇಶದಿಂದ ಅಧಿವಕ್ತಾ ಪರಿಷತ್ ಸ್ಥಾಪನೆಯಾಗಿದೆ ಎಂದು ಸಾಲಿಸಿಟರ್ ಜನರಲ್ ಆಫ್ ಇಂಡಿಯಾದ ಸದಸ್ಯ, ಕೇರಳ ಬಾರ್ ಅಸೋಸಿಯೇಶನ್ ಸದಸ್ಯ ನಗರೇಶ್ ಹೇಳಿದರು. ಅವರು ಭಾನುವಾರ ಎಸ್‌ಡಿಎಂ ಉದ್ಯಮಾಡಳಿತ ಕಾಲೇಜಿನ ಸಭಾಂಗಣದಲ್ಲಿ ಅಧಿವಕ್ತಾ ಪರಿಷತ್‌ನ ದ.ಕ.ಜಿಲ್ಲಾ ಘಟಕವನ್ನು ಉದ್ಘಾಟಿಸಿ ಮಾತನಾಡಿದರು. ಜನ ಸಾಮಾನ್ಯರ ಸೇವೆ ಮಾಡುವ ರಾಜಕೀಯೇತರ ವಕೀಲರ ಸಂಘಟನೆಯೇ ಅಧಿವಕ್ತಾ ಪರಿಷತ್ ಆಗಿದೆ. ದೇಶದಲ್ಲಿ ಸಾವಿರಾರು ವಕೀಲರ ಸಂಘಟನೆಗಳಿದ್ದು, ಕೆಲವು […]

ಉಳ್ಳಾಲದಲ್ಲಿ ಮಸಣದಲ್ಲಿ ಸತ್ತ ಹಸುಗೂಸು ಅಳಲು ಆರಂಭಿಸಿದ ವಿಸ್ಮಯಕಾರಿ ಘಟನೆ

Saturday, August 23rd, 2014
infant

ಮಂಗಳೂರು: ತೊಕ್ಕೊಟ್ಟು ಚೆಂಬುಗುಡ್ಡೆಯಲ್ಲಿರುವ ಸ್ಮಶಾನದಲ್ಲಿ ಹಸುಗೂಸೊಂದರ ಅಂತ್ಯಸಂಸ್ಕಾರವನ್ನು ಮಾಡಲು ತಯಾರು ನಡೆಸಲಾಗುತ್ತಿತ್ತು. ಅಂತ್ಯಸಂಸ್ಕಾರ ವಿಧಿವಿಧಾನಗಳನ್ನು ನಡೆಸಿ ದಫನ ಮಾಡಲು ಮುಂದಾಗ ಮಗು ಆಳಲು ಆರಂಭಿಸಿದ ವಿಸ್ಮಯಕಾರಿ ಘಟನೆ ಉಳ್ಳಾಲದಲ್ಲಿ ಶನಿವಾರ ನಡೆದಿದೆ. ದೇರಳಕಟ್ಟೆಯಲ್ಲಿರುವ ಆಸ್ಪತ್ರೆಯೊಂದರಲ್ಲಿ ಹೆರಿಗೆಗೆಂದು ಕುಮುಟದ ಗೌರಿ ಎಂಬವರು ಕಳೆದ 15 ದಿನಗಳ ಹಿಂದೆ ದಾಖಲಾಗಿದ್ದರು. ಇವರಿಗೆ ಸೀಸೆರಿಯನ್ ಮಾಡಿದ ವೈದ್ಯರು ಮಗುವನ್ನು ಹೊರ ತೆಗೆದಿದ್ದರಲ್ಲದೆ ಹಸುಗೂಸಿನ ಚೇತರಿಕೆಗಾಗಿ ವಿಷೇಶ ಕೋಣೆಯಲ್ಲಿ ಇರಿಸಲಾಗಿತ್ತು. ಶನಿವಾರ ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಗೌರಿಯ ಗಂಡ ಪುಷ್ಪರಾಜ್‌ಗೆ ಕರೆ […]

ಅನಂತಮೂರ್ತಿಯವರ ನಿಧನಕ್ಕೆ ವೀರೇಂದ್ರ ಹೆಗ್ಗಡೆ ಸಂತಾಪ

Saturday, August 23rd, 2014
Veerendra Heggade

ಧರ್ಮಸ್ಥಳ : ಖ್ಯಾತ ಸಾಹಿತಿ ಶ್ರೀ ಯು. ಆರ್. ಅನಂತಮೂರ್ತಿಯವರ ನಿಧನಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಗಾಢ ಸಂತಾಪ ವ್ಯಕ್ತ ಪಡಿಸಿದ್ದಾರೆ. ಅವರು ಕ್ಷೇತ್ರದ ಅಭಿಮಾನಿಯಾಗಿದ್ದು ಲಕ್ಷದೀಪೋತ್ಸವ ಸಂದರ್ಭದಲ್ಲಿ ನಡೆದ ಸಾಹಿತ್ಯ ಸಮ್ಮೇಳನ ಹಾಗೂ 51 ನೇ ರಾಜ್ಯಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಧರ್ಮ, ಸಾಹಿತ್ಯ ಹಾಗೂ ಇತರ ಸಾಮಾಜಿಕ ವಿಚಾರಗಳ ಬಗ್ಗೆ ಅವರು ನೇರವಾಗಿ ಹಾಗೂ ಅಷ್ಟೇ ಖಾರವಾಗಿ ತಮ್ಮ ಅಭಿಪ್ರಾಯವನ್ನು ಸಾದರ ಪಡಿಸುತ್ತಿದ್ದರು. ಧರ್ಮಸ್ಥಳದ ವಿವಿಧ ಸೇವಾಕಾರ್ಯಗಳ ಬಗ್ಗೆ […]

ರಂಜಾಳ ವಾಸುದೇವ ಪ್ರಭು ನಿಧನ- ಬಿಜೆಪಿ ಸಂತಾಪ

Saturday, August 23rd, 2014
Renjala Vasudeva Prabhu

ಮಂಗಳೂರು : ರಂಜಾಳ ವಾಸುದೇವ ಪ್ರಭು (84 ವರ್ಷ) ಇವರು ಅಲ್ಪಕಾಲದ ಅನಾರೋಗ್ಯದಿಂದ ಇಂದು (23.08.2014) ನಿಧನರಾಗಿದ್ದಾರೆ. ಮೃತರು ಪತ್ನಿ, ಎರಡು ಗಂಡು, ಎರಡು ಹೆಣ್ಣು ಮಕ್ಕಳು, ಸಹೋದರರು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಸಂಸ್ಕೃತ ಅಧ್ಯಾಪಕರಾಗಿದ್ದ ಇವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಸ್ವಯಂ ಸೇವಕರಾಗಿದ್ದರು. ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಶ್ರೀಯುತರ ನಿಧನಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಕ್ಯಾ| ಗಣೇಶ್ ಕಾರ್ಣಿಕ್ , ಜಿಲ್ಲಾಧ್ಯಕ್ಷ ಕೆ. ಪ್ರತಾಪಸಿಂಹ […]