ಪೌರ ಕಾರ್ಮಿಕರಿಗೆ ಎಡ್ಸ್ ಬಗ್ಗೆ ಜಾಗೃತಿ ಕಾರ್ಯಕ್ರಮ

Monday, November 22nd, 2010
ಎಡ್ಸ್ ಬಗ್ಗೆ ವಿಶೇಷ ಜಾಗೃತಿ ಕಾರ್ಯಕ್ರಮ

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ಹಾಗೂ ಡಾ|ಎಂ.ವಿ.ಶೆಟ್ಟಿ ಕಾಲೇಜು ಜಂಟಿ ಆಶ್ರಯದಲ್ಲಿ ಪಾಲಿಕೆ ಸಭಾಂಗಣದಲ್ಲಿ ಪೌರ ಕಾರ್ಮಿಕರಿಗೆ ಎಡ್ಸ್ ಬಗ್ಗೆ  ವಿಶೇಷ ಜಾಗೃತಿ ಕಾರ್ಯಕ್ರಮವನ್ನು  ಉಪಮೇಯರ್ ರಾಜೇಂದ್ರ ಕುಮಾರ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಪೌರ ಕಾರ್ಮಿಕರಿಗೆ ಅರಿವು ಮೂಡಿಸುವ ಈ ಕಾರ್ಯಕ್ರಮ ಸ್ತುತ್ಯರ್ಹ, ರೋಗ ರಹಿತ ಭಾರತ ನಿರ್ಮಾಣ ಮಾಡಲು ಮುಂದಾಗೋಣ ಎಂದು ಅವರು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮ.ನ.ಪಾ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶಾಂತ.ಆರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ […]

ಮಾನವ ಹಕ್ಕುಗಳ ರಕ್ಷಣೆಗೆ ಸರಕಾದಿಂದ ಸರಿಯಾದ ಬೆಂಬಲ ಇಲ್ಲ : ಎಸ್. ಆರ್ ನಾಯಕ್

Saturday, November 20th, 2010
ಎಸ್. ಆರ್ ನಾಯಕ್

ಮಂಗಳೂರು: ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಎಸ್. ಆರ್ ನಾಯಕ್ ಇಂದು ಜಿಲ್ಲಾಧಿಕಾರಿ ಕಛೇರಿಯ ನ್ಯಾಯಾಲಯದಲ್ಲಿ ದೂರುದಾರರ ಅಹವಾಲುಗಳನ್ನು ಸ್ವೀಕರಿಸಿದರು. ಬಲತ್ಕಾರದ ಮದುವೆ, ಭೂ ಹಗರಣ ಹಾಗೂ ಉದ್ಯೋಗದ ಸಮಸ್ಯೆಯ ಮೂರು ಅರ್ಜಿಗಳನ್ನು ಎಸ್.ಆರ್ ನಾಯಕ್ ಸ್ವೀಕರಿಸಿದರು. ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ನಾಯಕ್ ನಾನು ಬೆಂಗಳೂರಿನಿಂದ ಇಲ್ಲಿಯವರೆಗೆ ಬಂದು ಕೇವಲ ಮೂರು ಅರ್ಜಿಗಳನ್ನು ಮಾತ್ರ ಸ್ವೀಕರಿಸುವುದು, ದ.ಕ ಜಿಲ್ಲೆಯಲ್ಲಿ ಕಾನೂನು ವ್ಯವಸ್ಥೆ, ಸುವ್ಯವಸ್ಥಿತವಾಗಿರುವುದನ್ನು ಸೂಚಿಸುತ್ತಿದೆ ಎಂದರು. 2007 ರಲ್ಲಿ ಸ್ಥಾಪನೆಯಾದ ಮಾನವ ಹಕ್ಕುಗಳ ಆಯೋಗ ಸವಲತ್ತುಗಳಿಲ್ಲದೆ ದೂರುದಾರರ […]

ವರುಷದ ಹರುಷ 2010- ಚಿತ್ರಕಲಾ ಶೈಕ್ಷಣಿಕ ಹಬ್ಬ ಉದ್ಘಾಟನೆ

Friday, November 19th, 2010
ವರುಷದ ಹರುಷ 2010- ಚಿತ್ರಕಲಾ ಶೈಕ್ಷಣಿಕ ಹಬ್ಬ ಉದ್ಘಾಟನೆ

ಮಂಗಳೂರು: ದ.ಕ ಮತ್ತು ಉಡುಪಿ ಜಿಲ್ಲೆಯ ಕ್ರಿಯಾಶೀಲಾ ಚಿತ್ರಕಲಾ ಶಿಕ್ಷಕರ ಸಂಘದ ವತಿಯಿಂದ ವರುಷದ ಹರುಷ 2010 ಶೀರ್ಷಿಕೆಯ ಚಿತ್ರಕಲಾ ಶಿಕ್ಷಕರ ಶೈಕ್ಷಣಿಕ ಹಬ್ಬ ಉದ್ಘಾಟನಾ ಸಮಾರಂಭವು ಇಂದು  ಬೆಳಿಗ್ಗೆ ಮಿಲಾಗ್ರೀಸ್ ಪದವಿಪೂರ್ವ ಕಾಲೇಜು ಸಂಕೀರ್ಣ, ಹಂಪನ್ ಕಟ್ಟಾ, ಮಂಗಳೂರು ಇದರ ಆವರಣದಲ್ಲಿ ನಡೆಯಿತು. ಶೈಕ್ಷಣಿಕ ಹಬ್ಬದ ಉದ್ಘಾಟನೆಯನ್ನು ಮಿಲಾಗ್ರಿಸ್ ಕಾಲೇಜು ಆವರಣದಲ್ಲಿ ಇಡಲಾದ ಬೃಹತ್ ಶಿಲ್ಪವನ್ನು ಉದ್ಘಾಟನೆಗೊಳಿಸುವ ಮೂಲಕ ಫಾ. ಡೆನ್ನಿಸ್ ಡೇಸಾ ಆಡಳಿತ ನಿರ್ದೇಶಕರು, ಫಾದರ್ ಮುಲ್ಲರ್ಸ್ ಆಸ್ಪತ್ರೆ ಇವರು ಚಾಲನೆ ನೀಡಿದರು. ಚಿತ್ರಕಲಾ […]

ನಂದಿನಿ ಉತ್ಪನ್ನ ಮೈಸೂರ್ ಪಾಕ್ 100 ಗ್ರಾಂ ಪ್ಯಾಕ್ ಮಾರುಕಟ್ಟೆಗೆ

Friday, November 19th, 2010
ನಂದಿನಿ ಉತ್ಪನ್ನ ಮೈಸೂರ್ ಪಾಕ್ 100 ಗ್ರಾಂ ಪ್ಯಾಕ್ ಮಾರುಕಟ್ಟೆಗೆ

ಮಂಗಳೂರು: ದ.ಕ ಸಹಕಾರಿ ಹಾಲು  ಉತ್ಪಾದಕರ ಒಕ್ಕೂಟ ನಿ. ಮಂಗಳೂರು, ದ.ಕ ಜಿಲ್ಲಾ ಸಹಕಾರಿ ಯೂನಿಯನ್ ಲಿಮಿಟೆಡ್, ಮಂಗಳೂರು ಇದರ ವತಿಯಿಂದ 57ನೇ ಅಖಿಲ ಭಾರತ ಸಹಕಾ ಸಪ್ತಾಹ – 2010 ಇದರ ಅಂಗವಾಗಿ ನಂದಿನಿ ಉತ್ಪನ್ನ ಮೈಸೂರ್ ಪಾಕ್ 100 ಗ್ರಾಂ ಪ್ಯಾಕ್ ಮಾರುಕಟ್ಟೆಗೆ ಬಿಡುಗಡೆ ಸಮಾರಂಭವು ದಿನಾಂಕ 18ನೇ ಗುರುವಾರ ಹೊಟೇಲ್ ಮಾಯಾ ಇಂಟರ್ ನ್ಯಾಷನಲ್ ಸಭಾಂಗಣದಲ್ಲಿ ನಡೆಯಿತು. ಸಮಾರಂಭದ ಉದ್ಘಾಟನೆಯನ್ನು ಕೊಂಕೋಡಿ ಪದ್ಮನಾಭ ಅಧ್ಯಕ್ಷರು, ಕ್ಯಾಂಪ್ಕೊ ಲಿಮಿಟೆಡ್ ಇವರು ನೆರವೇರಿಸಿದರು. ಉದ್ಘಾಟನೆಯ ಬಳಿಕ […]

ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಉದ್ಘಾಟನೆ

Thursday, November 18th, 2010
ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಉದ್ಘಾಟನೆ

ಮಂಗಳೂರು: ಸಾರ್ವಜನಿಕ ಗ್ರಂಥಾಲಯ ಇಲಾಖೆ ನಗರ ಹಾಗೂ ಜಿಲ್ಲಾ ಕೇಂದ್ರ ಗ್ರಂಥಾಲಯ ಮಂಗಳೂರು ಇದರ ವತಿಯಿಂದ ರಾಷ್ಟ್ರೀಯ ಗ್ರಂಥಾಲಯದ ಸಪ್ತಾಹ ಉದ್ಘಾಟನೆ ಸಮಾರಂಭ ಇಂದು ಬೆಳಿಗ್ಗೆ ಬಾವುಟ ಗುಡ್ಡೆಯಲ್ಲಿರುವ ನಗರ ಕೇಂದ್ರ ಗ್ರಂಥಾಲಯದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಕೆ. ಸಂತೋಷ್ ಕುಮಾರ್ ಭಂಡಾರಿ ಅಧ್ಯಕ್ಷರು ದ.ಕ ಜಿಲ್ಲಾ ಪಂಚಾಯತ್ ಮಂಗಳೂರು ಇವರು ದೀಪ ಬೆಳಗಿಸುವುದರ ಮೂಲಕ ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಗ್ರಂಥಾಲಯ ಸೌಲಭ್ಯಗಳು ಗ್ರಾಮೀಣ ಮಟ್ಟದಲ್ಲಿ ಪಂಚಾಯತ್ಗಳ ಮೂಲಕ ಜನರಿಗೆ ತಲುಪುವಂತಾಗಬೇಕು, ಆಗ ಗ್ರಾಮೀಣ ಜನರಲ್ಲಿ […]

ಆರ್.ಎಸ್.ಎಸ್ ಗುರು ಸುದರ್ಶನ್ ಹೇಳಿಕೆಯನ್ನು ಖಂಡಿಸಿ ದ.ಕ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ

Tuesday, November 16th, 2010
ದ.ಕ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ

ಮಂಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಾಜಿ ಗುರು ಸುದರ್ಶನ್ ಸೋನಿಯಾಗಾಂಧಿಯವರ ಮೇಲೆ ನೀಡಿರುವ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿ ದ.ಕ ಜಿಲ್ಲಾ ಕಾಂಗ್ರೆಸ್ ವತಿಯಿಂದ ಜಿಲ್ಲಾಧಿಕಾರಿ ಕಛೇರಿ ಬಳಿ ಇಂದು ಬೆಳಿಗ್ಗೆ ಪ್ರತಿಭಟನೆ ನಡೆಯಿತು. ಪ್ರತಿಭಟನಾಕಾರರನ್ನುದ್ದೇಶಿಸಿ ಮಾತಾನಾಡಿದ ಕಾಂಗ್ರೆಸ್ ಮುಖಂಡ ಹರಿಕೃಷ್ಣ ಬಂಟ್ವಾಳ ಬಿಜೆಪಿ ಮತ್ತು ಆರ್.ಎಸ್.ಎಸ್ ಗಳು ಒಂದೇ ನಾಣ್ಯದ  ಎರಡು ಮುಖಗಳು ಬಿಜೆಪಿ ಮುಖಂಡರು ಬಹಿರಂಗವಾಗಿ ನಾವು ಆರ್.ಎಸ್.ಎಸ್ ಕಾರ್ಯಕರ್ತರು ಎಂದು ಹೇಳುತ್ತಿದ್ದಾರೆ. ಆರ್.ಎಸ್.ಎಸ್ ಬಿಜೆಪಿಯ ಏಜೆಂಟ್ ಆಗಿ ಕೆಲಸ ಮಾಡುತ್ತಿದೆ ಎಂದು ಅವರು […]

ಮುಖ್ಯಮಂತ್ರಿಗಳಿಂದ ಪುತ್ತೂರಿನಲ್ಲಿ ನಾಳೆ ಭಾಗ್ಯಲಕ್ಷ್ಮಿ ಮತ್ತು ಇತರ ಯೋಜನೆಗಳಿಗೆ ಚಾಲನೆ

Tuesday, November 16th, 2010
ಭಾಗ್ಯಲಕ್ಷ್ಮಿ ಪತ್ರಿಕಾಗೋಷ್ಠಿ

ಮಂಗಳೂರು:  ಪುತ್ತೂರಿನಲ್ಲಿ ನಾಳೆ ನಡೆಯಲಿರುವ ಭಾಗ್ಯಲಕ್ಷ್ಮಿ ಯೋಜನೆಯ ಫಲಾನುಭವಿಗಳ ಉಚಿತ ಆರೋಗ್ಯ ತಪಾಸಣೆ, ಬಾಂಡ್ ವಿತರಣೆ, ತಾಯಂದಿರಿಗೆ ಸೀರೆ ವಿತರಣೆ ಕಾರ್ಯಕ್ರಮದ ಪತ್ರಿಕಾಗೋಷ್ಠಿ ಇಂದು ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕೋರ್ಟ್ ಹಾಲ್ನಲ್ಲಿ ನಡೆಯಿತು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಉಸ್ತವಾರಿ ಸಚಿವ ಕೃಷ್ಣ ಜೆ ಪಾಲೆಮಾರ್ ಭಾಗ್ಯಲಕ್ಷ್ಮಿ ಯೋಜನೆಯಲ್ಲಿ ನೊಂದಾಯಿತ ಮಕ್ಕಳ ವಿಶೇಷ ಆರೋಗ್ಯ ತಪಾಸಣೆ ಮಾಡಿಸಿಕೊಂಡ ತಾಯಂದಿರಿಗೆ ಪ್ರೋತ್ಸಾಹ ನೀಡಲು ಮಾನ್ಯ ಮುಖ್ಯ ಮಂತ್ರಿಗಳು ಮಕ್ಕಳ ತಾಯಂದಿರಿಗೆ ಸೀರೆ ಹಂಚುವ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಹಾಕಿಕೊಂಡಿದ್ದು, ದಿನಾಂಕ 17-11-2010 ರಂದು […]

ಆರ್.ಟಿ.ಓ ಕಛೇರಿಗೆ ಲೋಕಾಯುಕ್ತ ದಾಳಿ 67,640 ರೂ ಅನಧಿಕೃತ ಹಣ ವಶ

Monday, November 15th, 2010
ಆರ್.ಟಿ.ಓ ಕಛೇರಿಗೆ ಲೋಕಾಯುಕ್ತ ದಾಳಿ

ಮಂಗಳೂರು: ಮಂಗಳೂರು ಪ್ರಾದೇಶಿಕ ಸಾರಿಗೆ ಕಛೇರಿಗೆ ಇಂದು ಸಂಜೆ 5.30ಕ್ಕೆ ಕಾರವಾರ, ಉಡುಪಿ ಮತ್ತು ಮಂಗಳೂರು ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ 67,640 ರೂ ಅನಧಿಕೃತ ನಗದನ್ನು ವಶಪಡಿಸಿಕೊಂಡಿದ್ದಾರೆ. ಮಂಗಳೂರು ಪ್ರಾದೇಶಿಕ ಸಾರಿಗೆ ಕಛೇರಿ ದ್ವಿತೀಯ ದರ್ಜೆಯ ಗುಮಾಸ್ತರಾದ ಯೋಗೀಶ್ ಮತ್ತು ಪ್ರಭಾಕರ ಸೇರಿದಂತೆ ಆರ್.ಟಿ.ಓ ಕಛೇರಿಯ ಖಾಸಗಿ ಏಜೆಂಟರಾದ ಕೇಶವ ಪೈ, ನಾಗರಾಜ, ರಘುನಾಥ ಹಾಗೂ ಸಂತೋಷ್ ಎಂಬವರನ್ನು ಬಂಧಿಸಲಾಗಿದೆ. ಲೋಕಾಯುಕ್ತ ಎಸ್.ಪಿ ಜಗಮಯ್ಯನವರ್ ನೇತೃತ್ವದಲ್ಲಿ ಉಡುಪಿ ಡಿವೈಎಸ್ಪಿ, ಪ್ರಭುದೇವ ಮಾಣೆ, ಇನ್ಸ್ಫೆಕ್ಟರ್ ಉದಯ ನಾಯಕ್ […]

ಮಂಗಳೂರಿನ ತಾಲೂಕು ಪಂಚಾಯತ್ ಸದಸ್ಯರ ಒಕ್ಕೂಟ ರಚನೆ

Monday, November 15th, 2010
ಮಂಗಳೂರಿನ ತಾಲೂಕು ಪಂಚಾಯತ್ ಸದಸ್ಯರ ಒಕ್ಕೂಟ ಸ್ಥಾಪನೆ

ಮಂಗಳೂರು: ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮತ್ತು ಉಪಾಧ್ಯಕ್ಷರುಗಳ ಒಕ್ಕೂಟವನ್ನು ಸೋಮವಾರ ಸಂಜೆ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಕೋಟ ಎಂ.ಎಲ್.ಸಿ ಶ್ರೀನಿವಾಸ ಪೂಜಾರಿ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಪಂಚಾಯತ್ ಗಳಿಗೆ ಹೆಚ್ಚಿನ ಅಧಿಕಾರಕ್ಕಾಗಿ ಹಾಗೂ ಕೆಲವೊಂದು ಸವಲತ್ತುಗಳನ್ನು ಪಡೆಯಲು ಮತ್ತು ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡು ಹುಡುಕಲು ಸಮೂಹಿಕ ತೀರ್ಮಾನಕ್ಕಾಗಿ ಮಂಗಳೂರು ತಾಲೂಕಿನ 49 ಗ್ರಾಂ ಪಂಚಾಯತ್  ಗಳ ಅಧ್ಯಕ್ಷ  ಮತ್ತು ಉಪಾಧ್ಯಕ್ಷರುಗಳ ಒಕ್ಕೂಟವನ್ನು ಈ ಸಂದರ್ಭದಲ್ಲಿ ರಚಿಸಲಾಯಿತು. ಉದ್ಘಾಟನೆ ಬಳಿಕ ಮಾತನಾಡಿದ ಕೋಟ ಶ್ರೀನಿವಾಸ […]

ದೇಶದ ಅತ್ಯಂತ ಕಿರಿಯ ಇಂಗ್ಲಿಷ್ ಕಾದಂಬರಿಕಾರ್ತಿ ಹರ್ಷಿತಾ ಮುಗ್ದುಂ

Monday, November 15th, 2010
ದೇಶದ ಅತ್ಯಂತ ಕಿರಿಯ ಇಂಗ್ಲಿಷ್ ಕಾದಂಬರಿಕಾರ್ತಿ

ಬೆಂಗಳೂರು : ಸಾಧನೆಗೆ ವಯಸ್ಸು ಅಡ್ಡಿಯಲ್ಲ, ಸಾಧಿಸುವ ಛಲ ಇದ್ದರೆ ಎಂತಹ ಮಹಾನ್ ಸಾಧನೆಯನ್ನೂ ಎಳೆಯ ಹರೆಯದಲ್ಲೇ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾಳೆ ಬೆಂಗಳೂರಿನ ಬಾಲಕಿ ಹರ್ಷಿತಾ ಮುಗ್ದುಂ. ಏಳನೇ ತರಗತಿಯಲ್ಲಿ ಓದುತ್ತಿರುವ ಈಕೆ “ರೂಬಿ ರಷ್” ಹೆಸರಿನ ಇಂಗ್ಲಿಷ್ ಕಾದಂಬರಿ ಬರೆದು ದೇಶದ ಅತ್ಯಂತ ಕಿರಿಯ ಇಂಗ್ಲಿಷ್ ಕಾದಂಬರಿಕಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಯಲಹಂಕದ ಡಿಲ್ಲಿ ಪಬ್ಲಿಕ್ ಸ್ಕೂಲ್ನಲ್ಲಿ ಓದುತ್ತಿರುವ ಹರ್ಷಿತಾಗೆ ಈಗ 12 ವರ್ಷ. ಪುಸ್ತಕವೇ ಈಕೆಯ ಪ್ರಾಣ. ತನ್ನ ಬಳಿ ಸ್ವಂತ ಕಿರು ಗ್ರಂಥಾಲಯವನ್ನೇ […]