`ಅನಧಿಕೃತ ನಿರ್ಮಾಣ ಸ್ವ ಇಚ್ಛೆಯಿಂದ ತೆರವಿಗೆ ಡಿಸೆಂಬರ್ 15ರ ಗಡುವು’

Monday, November 29th, 2010
ಜಿಲ್ಲಾಧಿಕಾರಿ ಶ್ರೀ ಸುಬೋಧ್ ಯಾದವ್

ಮಂಗಳೂರು : ಸುಪ್ರೀಂ ಕೋರ್ಟ್ ಆದೇಶದನ್ವಯ ಜನಪರವಾಗಿ ತೆಗೆದುಕೊಂಡಿರುವ ಅನಧಿಕೃತ ಧಾರ್ಮಿಕ ನಿರ್ಮಾಣಗಳ ತೆರವು ಕಾರ್ಯಾಚರಣೆಯನ್ನು ಸಂಬಂಧಪಟ್ಟವರು ಸ್ವ ಇಚ್ಛೆಯಿಂದ ಕೈಗೊಳ್ಳಲು ಡಿಸೆಂಬರ್ 15ರವರೆಗೆ ಜಿಲ್ಲಾಡಳಿತ ಕಾಲಾವಕಾಶ ನೀಡಿದೆ. ಇಂದು ಈ ಸಂಬಂಧ ಜಿಲ್ಲಾಧಿಕಾರಿ ಶ್ರೀ ಸುಬೋಧ್ ಯಾದವ್ ಅವರ ನೇತೃತ್ವದಲ್ಲಿ ಜರುಗಿದ ಅಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಜನಪರ ನಿರ್ಧಾರವನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ಈಗಾಗಲೇ ಜಿಲ್ಲಾ  ಮತ್ತು ತಾಲೂಕು ಮಟ್ಟದಲ್ಲಿ ಹಲವು ಸುತ್ತಿನ ಸಭೆಗಳನ್ನು ನಡೆಸಲಾಗಿತ್ತು.ಈ ಸಭೆಗಳಿಗೆ ಧಾರ್ಮಿಕ ಮುಖಂಡರು ಹಾಜರಾಗಿದ್ದು, ಸ್ಥಳೀಯರಲ್ಲಿ […]

ಲೇಪಾಕ್ಷಿ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳ ಉದ್ಘಾಟನೆ

Thursday, November 11th, 2010
ಲೇಪಾಕ್ಷಿ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳ ಉದ್ಘಾಟನೆ

ಮಂಗಳೂರು: ಕರಕುಶಲ ವಸ್ತುಗಳ ಅಭಿವೃದ್ಧಿ ಇಲಾಖೆ ಆಂಧ್ರಪ್ರದೇಶ ಇದರ ವತಿಯಿಂದ ಮಂಗಳೂರಿನ ವುಡ್ ಲ್ಯಾಂಡ್ಸ್ ಹೋಟೇಲಿನಲ್ಲಿ ನಡೆಯುವ  ಕೈ ಮಗ್ಗ, ಕರಕುಶಲ ಹಾಗೂ ಆಟಿಕೆಗಳ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಮಂಗಳೂರಿನ ನಗರಪಾಲಿಕೆಯ ಮೇಯರ್ ರಜನಿ ದುಗ್ಗಣ್ಣ ಇಂದು ಬೆಳಿಗ್ಗೆ ಉದ್ಘಾಟಿಸಿದರು. ಕರಕುಶಲ ವಸ್ತುಗಳ ಬೇಡಿಕೆಯನ್ನು ಹೆಚ್ಚಿಸುವ ಮತ್ತು ಅಭಿವೃದ್ಧಿಸುವ ಉದ್ದೇಶದಿಂದ ಆಂದ್ರ ಕರಕುಶಲ ಮತ್ತು ಕೈ ಮಗ್ಗ ಇಲಾಖೆ ಪ್ರತಿ ವರ್ಷದ ದೇಶದ ಅನೇಕ ಕಡೆಗಳಲ್ಲಿ ವಸ್ತು ಪ್ರದರ್ಶನ ನಡೆಸುತ್ತಿದ್ದು ಇದರಿಂದ ಕರಕುಶಲ ಹಾಗೂ […]

ಜನ ಸಾಮಾನ್ಯರ ಬ್ಯಾಂಕ್ ವಿಜಯಾಬ್ಯಾಂಕ್ : ಸಂಸ್ಥಾಪಕರ ದಿನಾಚರಣೆಯಲ್ಲಿ ಕೆ.ಎನ್. ವಿಜಯಪ್ರಕಾಶ್

Saturday, October 23rd, 2010
ವಿಜಯಾಬ್ಯಾಂಕ್ ಸಂಸ್ಥಾಪಕರ ದಿನಾಚರಣೆ

ಮಂಗಳೂರು: ಎಂಬತ್ತು ವರ್ಷಗಳ ಹಿಂದೆ ಅತ್ತಾವರ ಬಾಲಕೃಷ್ಣ ಶೆಟ್ಟಿ ಮತ್ತು ಮೂಲ್ಕಿ ಸುಂದರ್ ರಾಮ್ ಶೆಟ್ಟಿಯವರು ಸ್ಥಾಪಿಸಿದ ವಿಜಯಾಬ್ಯಾಂಕಿನ  ಸಂಸ್ಥಾಪಕರ ದಿನಾಚರಣೆಯನ್ನು ಇಂದು ಜ್ಯೋತಿಯಲ್ಲಿರುವ ವಿಜಯಾಬ್ಯಾಂಕ್ ನ ಪ್ರಧಾನ ಕಛೇರಿಯಲ್ಲಿ ನಡೆಸಲಾಯಿತು. ಮಂಗಳೂರು ಮಹಾನಗರಪಾಲಿಕೆಯ ಕಮಿಷನರ್ ಕೆ.ಎನ್.ವಿಜಯ ಪ್ರಕಾಶ್ ಹಾಗೂ ಬ್ಯಾಂಕಿನ ನಿರ್ದೇಶಕ ಬಿ. ಇಬ್ರಾಹಿಂ ಸಂಸ್ಥಾಪಕರ ಬಾವಚಿತ್ರಗಳಿಗೆ ಪುಷ್ಪ ಮಾಲೆ ಹಾಕುವ ಮೂಲಕ ಸಂಸ್ಥಾಪನಾ ದಿನಾಚರಣೆಗೆ ಚಾಲನೆ ನೀಡಿದರು. ಜನ ಸಾಮಾನ್ಯರಿಗೆ ವಿಜಯಾಬ್ಯಾಂಕ್ ಅಪಾರ ಕೊಡುಗೆ ನೀಡಿದೆ. ಮಂಗಳೂರು ನಗರ ಅಭಿವೃದ್ಧಿಗೂ ಪಾಲಿಕೆಯೊಂದಿಗೆ ಕೈ ಜೋಡಿಸಿದೆ […]

ಭರತಾಂಜಲಿಯಿಂದ ಅಕ್ಟೋಬರ್ 23ಕ್ಕೆ ಪುರಭವನದಲ್ಲಿ `ಪಾದ ಪಂಚದಶಕಮ್’

Wednesday, October 20th, 2010
ಭರತಾಂಜಲಿ ಪತ್ರಿಕಾಗೋಷ್ಟಿ

ಮಂಗಳೂರು: ಕಲೋಪಾಸನೆಯ ಪಥದಲ್ಲಿ ಸಾಗುತ್ತಿರುವ ಭರತಾಂಜಲಿ ತನ್ನ 15ನೇ ಪಾದಯಾತ್ರೆಯ ಅಂಗವಾಗಿ `ಪಾದ ಪಂಚದಶಕಮ್’ ಕಾರ್ಯಕ್ರಮವನ್ನು ಇದೇ ಅಕ್ಟೋಬರ್ 23 ಮತ್ತು 24 ರಂದು ನಗರದ ಪುರಭವನದಲ್ಲಿ ಆಯೋಜಿಸಲಾಗಿದೆ. ದಿನಾಂಕ 23 ರಂದು  ಸಂಜೆ ಬೆಂಗಳೂರಿನ ಅಭಿನೇತ್ರಿ ಶ್ರೀಮತಿ ಸೀತಾ ಕೋಟೆಯವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಸಾಹಿತಿ, ವಿಮರ್ಶಕ ಶ್ರೀ ಈಶ್ವರಯ್ಯ ಅಧ್ಯಕ್ಷತೆಯಲ್ಲಿ ಡಾ| ಚಿನ್ನಪ್ಪ ಗೌಡ, ಕುಲಸಚಿವ ಮಂ. ವಿಶ್ವವಿದ್ಯಾನಿಲಯ ಧರ್ಮದರ್ಶಿ ಹರಿಕೃಷ್ಣ ಪುನರೂರು, ಉದಯವಾಣಿಯ ಶ್ರೀ ಆನಂದ್, ಬೆಂಗಳೂರಿನ ಒಡಿಸ್ಸಿ ನೃತ್ಯ ಕಲಾವಿದ ಶ್ರೀ ಉದಯಕುಮಾರ್ […]

“ರಾಜ್ಯ ಮಟ್ಟದ ಕನ್ನಡ ಪುಸ್ತಕ ಮೇಳ – 2010” ಕಲಾ ತಂಡಗಳಿಗೆ ಆಹ್ವಾನ.

Wednesday, October 20th, 2010
ಕನ್ನಡ ಪುಸ್ತಕ ಮೇಳ

ಮಂಗಳೂರು: ಅಕ್ಟೋಬರ್ 24 ರಿಂದ ಕನ್ನಡ ಪುಸ್ತಕ ಪ್ರಾಧಿಕರವು, ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಕನ್ನಡ ಪುಸ್ತಕ ಮೇಳ-2010′ ರಲ್ಲಿ ಕಲಾ ಪ್ರದರ್ಶನಗಳನ್ನು ನೀಡುವರೇ ಸಾಹಿತ್ಯಿಕ, ಸಾಂಸ್ಕೃತಿಕ, ಕಲಾ ತಂಡಗಳನ್ನು ಆಹ್ವಾನಿಸಲಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಸಂಚಾಲಕ ಸದಸ್ಯ ಪ್ರದೀಪ್ ಕುಮಾರ್ ಕಲ್ಕೂರ ಇಂದು ಜಿಲ್ಲಾಧಿಕಾರಿ ಕಛೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಮಂಗಳೂರು ನೆಹರೂ ಮೈದಾನದಲ್ಲಿರುವ ವಿಶಾಲವಾದ ಹಾಗೂ ಸುಸಜ್ಜಿತ ಪೆಂಡಾಲ್ನಡಿ ನಿರ್ಮಿಸಿರುವ  ಪುಸ್ತಕ ಮಳಿಗೆಗಳ ಸಹಿತ ಸಾಹಿತ್ಯ ಪರವಾದ ಅನೇಕ ವೈವಿಧ್ಯಗಳನ್ನೊಳಗೊಂಡ `ಪುಸ್ತಕ ಮೇಳ’ದಲ್ಲಿ ಆಸಕ್ತ […]

ಎಸ್.ಡಿ.ಪಿ.ಐ ನಿಂದ ರಾಜಕೀಯ ಅಸ್ಥಿರತೆ ಸರಿದೂಗಿಸಲು ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ

Friday, October 15th, 2010
ಎಸ್.ಡಿ.ಪಿ.ಐ ನಿಂದ ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ

ಮಂಗಳೂರು: ಕರ್ನಾಟಕ ರಾಜ್ಯದಲ್ಲಿ ಜನತೆ ಹಿಂದೆಂದೂ ಕಂಡಿರದ ನಾಟಕೀಯ ರಾಜಕೀಯ ನಡೆಯುತ್ತಿದೆ. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ತಮ್ಮದು ಭ್ರಷ್ಟಾಚಾರ ರಹಿತ, ರೈತರ ಬಡವರ ಪರ ಆಡಳಿತ ನೀಡುತ್ತೇವೆಂದು ಜನತೆಗೆ ಆಶ್ವಾಸನೆ ನೀಡಿ ಈ ಸರಕಾರದಿಂದ ನಿರೀಕ್ಷಿಸಿದ್ದ ಎಲ್ಲಾ ಭರವಸೆಗಳನ್ನು ಹುಸಿಯಾಗಿಸಿದೆ. ಬಿಜೆಪಿ ಸರಕಾರಕ್ಕೆ ಆಡಳಿತ ನಡೆಸಲು ಈ ರಾಜ್ಯದ ಜನತೆ ಸ್ಪಷ್ಟ ಜನಾದೇಶ ನೀಡಿದ್ದರೂ, ಇತರ ಪಕ್ಷಗಳಿಂದ ಚುನಾಯಿತರಾದ ಜನಪ್ರತಿನಿಧಿಗಳನ್ನು ಹಣ ಹಾಗೂ ಮಂತ್ರಿಗಿರಿಯ ಅಮಿಷ ತೋರಿಸಿ ಕುದುರೆ ವ್ಯಾಪಾರ  ನಡೆಸುವ ಮೂಲಕ “ಆಪರೇಶನ್ ಕಮಲ”ದ […]

ಅಂಧರ ಚಲನ ವಲನ ತರಬೇತಿ ಕೇಂದ್ರದ ದಶಮಾನೋತ್ಸವ ಉದ್ಘಾಟನೆ.

Friday, October 15th, 2010
ಅಂಧರ ತರಬೇತಿ ಕೇಂದ್ರದ ದಶಮಾನೋತ್ಸವ ಉದ್ಘಾಟನೆ

ಮಂಗಳೂರು: ನಗರದ ಅತ್ತಾವರದ ಎನ್.ಜಿ ರಸ್ತೆಯಲ್ಲಿರುವ ಅಂಧರ ಚಲನ ವಲನ ತರಬೇತಿ ಕೇಂದ್ರದ ದಶಮಾನೋತ್ಸವದ ಅಂಗವಾಗಿ ನಡೆದ ಅಂಧರ ಮರು ಸಾಮರ್ಥ್ಯ ಪರೀಕ್ಷೆಯ ತರಬೇತಿ ಪತ್ರಗಳನ್ನು ಇಂದು ಬೆಳಿಗ್ಗೆ ವಿತರಿಸಲಾಯಿತು. ಸಮಾರಂಭದ ಉದ್ಘಾಟನೆಯನ್ನು ಮಂಗಳೂರು ಮಹಾನಗರಪಾಲಿಕೆಯ ಆಯುಕ್ತ ಕೆ.ಎನ್ ವಿಜಯ ಪ್ರಕಾಶ್ ದೀಪ ಬೆಳಗಿಸುವುದರ ಮೂಲಕ ನೆರವೇರಿಸಿದರು, ಪರಿಶುದ್ಧ ಮನಸ್ಸು ಹಾಗೂ ನಿರ್ಮಲ ಹೃದಯಿಗಳು ಯಾವತ್ತೂ ಅಂಧರಲ್ಲ.  ಅವರ ಬಲಹೀನ ಸಾಮರ್ಥ್ಯವನ್ನು ಹೆಚ್ಚಿಸಬೇಕಾದರೆ ಶಕ್ತರು ಉತ್ತಮ ಮನಸ್ಸಿನವರಾಗಿರಬೇಕು, ಅಂಗಹೀನರನ್ನು ತಾತ್ಸಾರದಿಂದ ನೋಡದೆ ಎಲ್ಲರಂತೆ ನೋಡಿಕೊಳ್ಳಬೇಕು ಎಂದು ಉದ್ಘಾಟನೆ […]

ಜೆಡಿಎಸ್ ಶಾಸಕ ಎಂ.ಸಿ.ಅಶ್ವತ್ಥ ರಾಜೀನಾಮೆ

Friday, October 15th, 2010
ಎಂ.ಸಿ.ಅಶ್ವತ್ಥ

ಬೆಂಗಳೂರು : ಜೆಡಿಎಸ್ ಶಾಸಕರಾಗಿದ್ದ ಎಂ.ಸಿ.ಅಶ್ವತ್ಥ ಅವರು ಸ್ಪೀಕರ್ ಕೆ.ಜಿ.ಬೋಪಯ್ಯ ಅವರಿಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ. ಕಳೆದ ಒಂದು ವಾರದಿಂದ ನಾಪತ್ತೆಯಾಗಿದ್ದ ಚನ್ನಪಟ್ಟಣ ಶಾಸಕ ಎಂ.ಸಿ.ಅಶ್ವತ್ಥ ಗುರುವಾರ ಈ ನಿರ್ಧಾರ ಕೈಗೊಂಡಿರುವುದಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಕಳೆದ ಒಂದು ವಾರದಿಂದ ತಮಿಳುನಾಡು ಪ್ರವಾಸದಲ್ಲಿದ್ದೆ. ಹಾಗಾಗಿ ಕಲಾಪದಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ. ಪಕ್ಷದ ನಾಯಕರಿಂದ ತನಗೆ ಯಾವುದೇ ತೊಂದರೆ ಇಲ್ಲ. ಇದೀಗ ನನ್ನ ವೈಯಕ್ತಿಕ ಕಾರಣದಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಹೇಳಿದ್ದಾರೆ. ಅ.11ರಂದು ನಡೆದ ವಿಶ್ವಾಸಮತ ಯಾಚನೆಗಾಗಲಿ, ಅ.14ರಂದು ನಡೆದು […]

ನಮ್ಮವರು ಹಳೆಮೈಸೂರು ಸಂಪ್ರದಾಯದ “ಮೈಸೂರು ದಸರಾ ಬೊಂಬೆ ಪ್ರದರ್ಶನ”

Thursday, October 14th, 2010
ಮೈಸೂರು ದಸರಾ ಬೊಂಬೆ ಪ್ರದರ್ಶನ

ಮಂಗಳೂರು:  ಮಂಗಳೂರುವಾಸಿ –  ಹಳೆಮೈಸೂರು ವಿಪ್ರ ಕೂಟವು ಹದಿನಾಲ್ಕು ವರ್ಷಗಳ ಹಿಂದೆ ಮಂಗಳೂರಿನಲ್ಲಿ ನಮ್ಮವರು  ಸಂಘಟನೆಯ ಹೆಸರಿನಲ್ಲಿ ಸ್ಥಾಪನೆಯಾಯಿತು.  ಇಲ್ಲಿಗೆ ಮೈಸೂರು, ಚಾಮರಾಜಪೇಟೆ, ತುಮುಕೂರು, ಮಂಡ್ಯ, ಚಿತ್ರದುರ್ಗ, ಬಳ್ಳಾರಿ, ಶಿವಮೊಗ್ಗ, ಕೋಲಾರ ಮುಂತಾದ ಕಡೆಗಳಿಂದ ದ.ಕ ಜಿಲ್ಲೆಗೆ ಉದ್ಯೋಗಕ್ಕಾಗಿ ಬಂದು ಇಲ್ಲೇ ನೆಲೆ ನಿಂತು ಹಳೇ ಮೈಸೂರಿನ ಸಾಂಸ್ಕೃತಿಕ ಆಚಾರ ವಿಚಾರ, ಪದ್ದತಿ-ಪರಂಪರೆಗಳು, ಹಾಗೂ ಮೂಲ ಸಂಸ್ಕೃತಿಯನ್ನು ಉಳಿಸಿ, ಹೊಸ ಜನಾಂಗಕ್ಕೆ ತಿಳಿಸುವ ಉದ್ದೇಶದಿಂದ ಈ ಸಂಘಟನೆ ಸ್ಥಾಪನೆಯಾಗಿದೆ. ಮೈಸೂರು ಪ್ರಾಂತ್ಯದಲ್ಲಿ “ಬೊಂಬೆ ಕೂಡಿಸುವ” ಪದ್ಧತಿಯು ಸುಮಾರು […]

ಕೆನಡಾದ ಡೆಲ್ಟಾ ಮಹಾ ನಗರ ಪಾಲಿಕೆಯ ತಂಡ ಮಂಗಳೂರಿನಲ್ಲಿ

Tuesday, October 12th, 2010
ಕೆನಡಾ ಮಹಾ ನಗರ ಪಾಲಿಕೆಯ ತಂಡ ಮಂಗಳೂರಿನಲ್ಲಿ

ಮಂಗಳೂರು :  ಕೆನಡಾದ ಡೆಲ್ಟಾ ಮಹಾ ನಗರ ಪಾಲಿಕೆಯ ಮೇಯರ್ ಲೂಯಿಸ್ ಇ.ಜಾಕ್ಸನ್ ತನ್ನ ನಿಯೋಗದೊಂದಿಗೆ ಸೋಮವಾರ ನಗರಕ್ಕೆ ಭೇಟಿ ನೀಡಿದ್ದಾರೆ.  ಮಂಗಳೂರು ಮಹಾ ನಗರ ಪಾಲಿಕೆ ಯೊಂದಿಗೆ ಹೆಚ್ಚಿನ ಬಾಂಧವ್ಯ ಹೊಂದಲು ಮತ್ತು ಮಹಾನಗರ  ಪಾಲಿಕೆಯ ಅಭಿವೃದ್ದಿ ಕಾರ್ಯಗಳ ಅಧ್ಯಯನಕ್ಕೆ ಈ ತಂಡ ನಗರಕ್ಕೆ ಭೇಟಿ ನೀಡಿದೆ. ನಿಯೋಗದಲ್ಲಿ ಮೇಯರ್ ಸಹಿತ ಅಲ್ಲಿನ ಸಿ‌ಇ‌ಒ ಜಾರ್ಜ್ ವಿ. ಹಾರ್ವೆ, ಆಡಳಿತ ವ್ಯವಸ್ಥಾಪಕಿ ಮಂಜತ್ ಕೈಲಾ ಮತ್ತಿತರರು ಇದ್ದರು. ಇಂದು ಬೆಳಿಗ್ಗೆ ಮಂಗಳೂರು ಮಹಾನಗರ  ಪಾಲಿಕೆಯ ಸಭೆಯಲ್ಲಿ […]