ಮಂಗಳೂರು : ಬಿಜೆಪಿ ಯಿಂದ ಹೊರನಡೆದು ಕುಮಾರಸ್ವಾಮಿಯವರ ಜೆಡಿಎಸ್ ಪಕ್ಷ ಸೇರ್ಪಡೆ ಗೊಂಡ ಮಾಜಿ ಬಿಜೆಪಿ ಸಚಿವ ನಾಗರಾಜ ಶೆಟ್ಟಿ ಜೆಡಿಎಸ್ ನಲ್ಲಿ ರಾಜ್ಯ ಉಪಾಧ್ಯಕ್ಷರ ಸ್ಥಾನವನ್ನು ಅಲಂಕರಿಸಿದ್ದರು. ಆದರೆ ಇದೀಗ ಜೆಡಿಎಸ್ ನಲ್ಲಿನ ಬಿನ್ನಭಿಪ್ರಾಯಗಳಿಂದಾಗಿ ಅವರು ತಮ್ಮ ಮಾಜಿ ಪಕ್ಷ ಬಿಜೆಪಿ ಸೇರಿಕೊಳ್ಳುವ ಸೂಚನೆ ಕಂಡುಬರುತ್ತಿದೆ.
ಈಗಾಗಲೇ ಜೆಡಿಎಸ್ ಗೆ ರಾಜಿನಾಮೆ ನೀಡಿರುವ ನಾಗರಾಜ ಶೆಟ್ಟಿ ಬಿಜೆಪಿ ಪಕ್ಷದಲ್ಲಿನ ಬಿನ್ನಭಿಪ್ರಾಯದಿಂದಾಗಿ ಜೆಡಿಎಸ್ ಸೇರಿದ್ದೇ ಆದರೆ ಜೆಡಿಎಸ್ ನ ಜಿಲ್ಲಾಧ್ಯಕ್ಷರ ಕಾರ್ಯಗಳಿಂದಾಗಿ ಬೇಸತ್ತು ಆ ಪಕ್ಷಕ್ಕೆ ರಾಜಿನಾಮೆ ನೀಡಿದುದಾಗಿ ತಿಳಿಸಿದ್ದಾರೆ. ಇಂದು ನಗರದಲ್ಲಿ ನಡೆಯಲಿರುವ ವಿಜಯ ಸಂಕಲ್ಪ ಸಮಾವೇಶದಲ್ಲಿ ಅವರು ಬಿಜೆಪಿ ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ.
Click this button or press Ctrl+G to toggle between Kannada and English