- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕರ್ನಾಟಕ ಶ್ರೀಮದ್ ಭುವನೇಶ್ಚರೀ ಕಥಾಮಂಜರೀ ಮತ್ತು ಪಂಚಕೋಶ ವಿಪಂಚಿಕಾ ಗ್ರಂಥಗಳ ಲೋಕಾರ್ಪಣೆ

ಹರಿಕೃಷ್ಣ ಪುನರೂರು [1]ಮಂಗಳೂರು: ವಿದ್ಯಾನ್ ಶ್ರೀ ಬಂದಗದ್ದೆ ನಾಗರಾಜರಿಂದ ರಚಿಸಲ್ಪಟ್ಟ `ಕರ್ನಾಟಕ  ಶ್ರೀಮದ್ ಭುವನೇಶ್ವರೀ ಕಥಾಮಂಜರೀ’ ಎನ್ನುವ ಶಾಸ್ತ್ರೀಯ ಕನ್ನಡ ಮಹಾಕಾವ್ಯವೂ ಮತ್ತು `ಪಂಚಕೋಶ ವಿಪಂಚಿಕಾ’ ಎನ್ನುವ ಸಂಸ್ಕೃತ ಕೃತಿಯು ದಿನಾಂಕ 25-10-2010ನೇ ಸೋಮವಾರ ಅಪರಾಹ್ನ 3.30 ಗಂಟೆಗೆ ಮಂಗಳೂರು ಪುರಭವನದಲ್ಲಿ ಜರಗಲಿರುವುದು. ಈ ಸಾರ್ವಜನಿಕ ಸಮಾರಂಭದಲ್ಲಿ ಶ್ರೀ ರಾಮಚಂದ್ರಾಪುರ ಮಠಾಧೀಶ ಪರಮಪೂಜ್ಯ ಶ್ರೀಮದ್ ಜಗದ್ಗುರು ಶಂಕರಾಚಾರ್ಯ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಹಾಗೂ ಶ್ರೀ ಪೇಜಾವರ ಮಠಾಧೀಶ ಶ್ರೀಮದ್ ಜಗದ್ಗುರು ಮಧ್ವಾಚಾರ್ಯ ಮಹಾಸಂಸ್ಥಾನ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀ ಪಾದಂಗಳವರ ದಿವ್ಯ ಸಾನಿಧ್ಯದಲ್ಲಿ ಲೋಕಾರ್ಪಣೆಗೊಳ್ಳಲಿದೆ. ಜೊತೆಗೆ ಈ ಹಿಂದೆ ಇವರಿಂದಲೇ ರಚಿಸಲ್ಪಟ್ಟ `ಶ್ರೀಮದ್ ವಿಷ್ಣುಪುರಾಣ’ ಮತ್ತು `ಶ್ರೀಮದ್ ಗಣೇಶ ಪುರಾಣ’ ಎಂಬ ಎರಡು ಕನ್ನಡ ಮಹಾಕಾವ್ಯಗಳ ದ್ವಿತೀಯ ಆವೃತಿಗಳು ಈ  ಸಂದರ್ಭದಲ್ಲೇ ಲೋಕಾರ್ಪಣೆಗೊಳ್ಳಲಿದೆ ಎಂದು ಇಂದು ಪತ್ರಿಕಾ ಭವನದಲ್ಲಿ ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದರು.
ಗ್ರಂಥಗಳ ಲೋಕಾರ್ಪಣೆಗೋಸ್ಕರ ದಿನಾಂಕ 25-10-10 ರಂದು ಯತಿದ್ವಯರ ದಿವ್ಯ ಸಾನಿಧ್ಯಗಳಲ್ಲಿ ಮಂಗಳೂರು ಪುರಭವನದಲ್ಲಿ ಆಯೋಜಿಸಲಾಗಿರುವ ಸಾರ್ವಜನಿಕ ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ
ಸರಕಾರದ ಉನ್ನತ ಶಿಕ್ಷಣ ಸಚಿವರಾದ ಡಾ. ವಿ.ಎಸ್ ಆಚಾರ್ಯರು ವಹಿಸಿಕೊಳ್ಳಲಿದ್ದಾರೆ. ವಿದ್ವಾನ್ ವೇ. ಮೂ ಬ್ರಹ್ಮಶ್ರೀ ಕೃ. ನಾರಾಯಣ ಶಾಸ್ತ್ರೀ ಬುಚ್ಚನ್ ರವರು ಗ್ರಂಥಗಳ ದ್ವಿತೀಯ ಆವೃತ್ತಿಯನ್ನು ಬಿಡುಗಡೆಗೊಳಿಸಲಿದ್ದಾರೆ. ಮಹಾಕಾವ್ಯಾವಲೋಕನವನ್ನು ಹಿರಿಯ ಸಾಹಿತಿಗಳೂ, ಸಂಶೋಧಕರೂ ಆಗಿರುವ ಡಾ. ಕಬ್ಬನಾಲೆ ವಸಂತ ಔಆರದ್ವಾಜ್ರವರು ನಡೆಸಿಕೊಡಲಿದ್ದಾರೆ. ಪಂಚಕೋಶ ವಿಪಂಚಿಕಾ ಕೃತಿ ಸಮೀಕ್ಷೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಮಾನವ ಪ್ರಜ್ಞೆ ಮತ್ತು ಯೋಗ ವಿಜ್ಞಾನ ವಿಭಾಗದ ಮುಖ್ಯಸ್ಥರಾಗಿರುವ ಡಾ.ಕೆ.ಕೃಷ್ಣ ಭಟ್ ಹಾಗೂ ಧರ್ಮ ಭಾರತೀ ಸಂಪಾದಕರಾಗಿರುವ ವಿದ್ವಾನ್ ಸಿ. ಜಗದೀಶ ಶರ್ಮಾರವರು ಮಾಡಲಿದ್ದಾರೆ. ಮಹಾಕಾವ್ಯ ಮತ್ತು ಯಕ್ಷಗಾನ ಸಂಬಂಧವಾಗಿ ಖ್ಯಾತ ವಿಮರ್ಶಕರೂ, ಯಕ್ಷಗಾನ ಕಲಾವಿದರೂ ಆಗಿರುವ ಡಾ. ಎಂ ಪ್ರಭಾಕರ ಜೋಶಿಯವರು ಹಾಗೂ ಮಹಾಕಾವ್ಯ ಮತ್ತು ಗಮಕ ಸಂಬಂಧವಾಗಿ ಕರ್ನಾಟಕ
ಗಮಕ ಕಲಾ ಪರಿಷತ್ತಿನ ಉಪಾಧ್ಯಕ್ಷರಾಗಿರುವ ವಿದ್ವಾನ್ ತೆಕ್ಕೆಕೆರೆ ಸುಬ್ರಹ್ಮಣ್ಯ ಭಟ್ ರವರು ಮಾತನಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಶ್ರೀ ಜೆ. ಕೃಷ್ಣ ಪಾಲೇಮಾರ್, ಶಾಸಕರಾಗಿರುವ ಶ್ರೀ ಎನ್. ಯೋಗೀಶ್ ಭಟ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ಶ್ರೀ ಬಿ. ನಾಗರಾಜ ಶೆಟ್ಟಿ ಮತ್ತು ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿರುವ ಶ್ರೀ ಎಸ್. ಪ್ರದೀಪ ಕುಮಾರ ಕಲ್ಕೂರರವರು ಭಾಗವಹಿಸಲಿದ್ದಾರೆ ಎಂದು ಪುನರೂರು ಹೇಳಿದರು.
ಪ್ರದೀಪ್ ಕುಮಾರ ಕಲ್ಕೂರ, ಆರ್.ಡಿ ಶಾಸ್ತ್ರಿ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.