ಕುಂದಾಪುರ : ಮಧ್ಯ ಆಫ್ರಿಕಾದ ಬಾಂಗ್ವೆ ವಿಮಾನ ನಿಲ್ದಾಣದಲ್ಲಿ ಫ್ರೆಂಚ್ ಸೈನಿಕರ ಗುಂಡಿಗೆ ಬಲಿಯಾದ ಕುಂದಾಪುರ ಬಳ್ಕೂರಿನ ಕೃಷ್ಣಯ್ಯ ಮೊಗವೀರ ಅವರ ಪಾರ್ಥಿವ ಶರೀರ ಶರೀರವನ್ನು ಸೋಮವಾರ ಮಧ್ಯಾಹ್ನ ಹುಟ್ಟೂರಿಗೆ ತರಲಾಯಿತು.
ಫ್ರಾನ್ಸ್ ರಾಯಭಾರ ಕಚೇರಿಯ ಎರಿಕ್ ಲೆವೆರ್ಟೊ ಅವರು ಫ್ರೆಂಚ್ ಸೈನಿಕರ ಗುಂಡಿಗೆ ಬಲಿಯಾದ ಕೃಷ್ಣಯ್ಯ ಮೊಗವೀರ ಅವರ ಪಾರ್ಥಿವ ಶರೀರ ಹುಟ್ಟೂರು ತಲುಪುವ ಮುನ್ನ ಬಳ್ಕೂರಿನ ಮೃತರ ಮನೆಗೆ ಆಗಮಿನಿಸಿ ಫ್ರೆಂಚ್ ಸೈನಿಕರಿಂದ ಆದ ಈ ಕೃತ್ಯಕ್ಕೆ ವಿಷಾದ ವ್ಯಕ್ತಪಡಿಸಿದರು.
ಊರಿನ ಸಾವಿರಾರು ಮಂದಿ ಕೃಷ್ಣಯ್ಯ ಅವರ ಮೃತದೇಹದ ಅಂತಿಮ ದರ್ಶನಕ್ಕೆ ಸೇರಿದ್ದು, ಮನೆಯವರ ಆಕ್ರಂದನ ಮುಗಿಲು ಮುಟ್ಟಿತ್ತು. ವಿದೇಶದಲ್ಲಿ ಗುಂಡೇಟಿಗೆ ಬಲಿಯಾದ ಕೃಷ್ಣಯ್ಯ ಮೊಗವೀರ ರವರ ಮನೆಯವರಿಗೆ ಯಾವುದೇ ಸರಕಾರಿ ಅಧಿಕಾರಿಗಳು ಕುಟುಂಬಿಕರಿಗೆ ಸಾಂತ್ವನ ಹೇಳಲು ಬಾರದೇ ಇದ್ದುದ್ದರ ಬಗ್ಗೆ ಮುಂಬಯಿ ಬಗ್ವಾಡಿ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಸುರೇಶ್ ಕಾಂಚನ್ ಹಾಗೂ ಶಾಖಾಧ್ಯಕ್ಷ ಎಂ.ಎಂ. ಸುವರ್ಣ ಹಾಗು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
Click this button or press Ctrl+G to toggle between Kannada and English