ನಿಡ್ಡೋಡಿಗೆ ವಿವಿಧ ಇಲಾಖೆಗಳ ಅಧಿಕಾರಿಗಳ ಭೇಟಿ, ಗ್ರಾಮಸ್ಥರ ವಿರೋಧ

6:21 PM, Friday, May 17th, 2013
Share
1 Star2 Stars3 Stars4 Stars5 Stars
(No Ratings Yet)
Loading...

Niddodi power projectಮೂಡುಬಿದಿರೆ : ಯುಪಿಸಿಎಲ್‌ಗಿಂತ ಮೂರೂವರೆ ಪಟ್ಟು ದೊಡ್ಡದಾದ ನಿಡ್ಡೋಡಿಯಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ ಉಷ್ಣವಿದ್ಯುತ್‌ ಸ್ಥಾವರ ಸ್ಥಾಪನೆಗೆ ಸಂಬಂಧಪಟ್ಟಂತೆ  ವಿವಿಧ ಇಲಾಖೆಗಳ ಅಧಿಕಾರಿಗಳು ಸ್ಥಳ ಪರಿಶೀಲನೆಗೆ ಆಗಮಿಸಿದ್ದರು. ವಿಷಯ ತಿಳಿದ ನಿಡ್ಡೋಡಿ ಪ್ರದೇಶದ ಸುತ್ತಮುತ್ತಲಿನ ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಘಟನೆ ಗುರುವಾರ ನಡೆಯಿತು.

ಗುರುವಾರ ಸುಮಾರು 11ಗಂಟೆಗೆ ಸೆಂಟ್ರಲ್‌ ಎಲೆಕ್ಟ್ರಿಕಲ್‌ ಅಥಾರಿಟಿಯ ಅಧಿಕಾರಿ ಎಂ.ಎಸ್‌. ಪುರಿ ಅವರ ನೇತೃತ್ವದಲ್ಲಿ  ಆಗಮಿಸಿದ ಅಧಿಕಾರಿಗಳು ಸ್ಥಳ ಪರಿಶೀಲನೆಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿಯನ್ನು ಗ್ರಾಮಸ್ಥರಿಗೆ ನೀಡಿರಲಿಲ್ಲ. ಆದರೆ ಗ್ರಾಮ ಕರಣಿಕರು ಊರಲ್ಲಿ ಇರದ ಕಾರಣ ಗ್ರಾಮಸ್ಥರಿಗೆ ಮಾಹಿತಿ ನೀಡಲು ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ಗ್ರಾಮಸ್ಥರಿಗೆ ಸಮಾಜಾಯಿಸಿ ನೀಡಿದರು.

Niddodi power projectಸೆಂಟ್ರಲ್‌ ಎಲೆಕ್ಟ್ರಿಕಲ್‌ ಅಥಾರಿಟಿಯ ಅಧಿಕಾರಿ ಎಂ.ಎಸ್‌. ಪುರಿ, ಸಹಾಯಕ ಆಯುಕ್ತ ಸದಾಶಿವ ಪ್ರಭು, ಕೆಪಿಟಿಸಿಎಲ್‌ ಪ್ರಧಾನ ಎಂಜಿನಿಯರ್‌ ಲಕ್ಷ್ಮಣ, ಮೆಸ್ಕಾಂ ಎಕ್ಸಿಕ್ಯೂಟಿವ್‌ ಎಂಜಿನಿಯರ್‌ ಜಗದೀಶ, ಕೆಐಡಿಬಿ ಭೂಸ್ವಾಧೀನಾಧಿಕಾರಿ ಅಧಿಕಾರಿ ನಾಗರಾಜ್‌ ಸೇರಿದಂತೆ ಹಲವು ಅಧಿಕಾರಿಗಳು ಆಗಮಿಸಿದ್ದರು. ಸಿಇಎ ಅಧಿಕಾರಿ ಎಂಎಸ್‌ ಪುರಿ ಮಾತನಾಡಿ, ‘ಈ ಪ್ರದೇಶದ ಕೃಷಿ ಭೂಮಿಯ ಪರಿಶೀಲನೆ ಮಾಡಲು ಬಂದಿದ್ದು, ಇಲ್ಲಿನ ಭೌಗೋಳಿಕ ಅಂಶಗಳನ್ನು ಸರಿಯಾಗಿ ಗಮನಿಸಿ, ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಮುಂದಿನ ಕ್ರಮ ಕೈಗೊಳ್ಳಲಾಗುವುದೆಂದು ಹೇಳಿದರು.

ನಿಡ್ಡೋಡಿಯಲ್ಲಿ ಉಷ್ಣವಿದ್ಯುತ್ ಸ್ಥಾವರ ಸ್ಥಾಪನೆಯಿಂದಾಗಿ ಇಲ್ಲಿನ ಕೃಷಿ ಅವಲಂಭಿತ ನೂರಾರು ಕುಟುಂಬ ಪಾಲಾಗಲಿದ್ದಾರೆ ಎಂದು ಮಾತೃಭೂಮಿ ಹೋರಟ ಸಮಿತಿ ಸಂಚಾಲಕ ಕಿರಣ್ ಮಂಜನಬೈಲು ಹೇಳಿದರು.

Niddodi power projectನಿಡ್ಡೋಡಿಗೆ ಅಧಿಕಾರಿಗಳು ಆಗಮಿಸಿದ ವಿಷಯ ತಿಳಿದ ಶಾಸಕ ಕೆ. ಅಭಯಚಂದ್ರ ದೂರವಾಣಿ ಮೂಲಕ ಜಿಲ್ಲಾಧಿಕಾರಿಯವರನ್ನು ಸಂಪರ್ಕಿಸಿ ಯಾವುದೇ ಕಾರಣಕ್ಕೂ ತಂಡ ಮುಂದುವರಿಯಲು ಬಿಡಬಾರದು’ ಎಂದು ಸೂಚನೆ ನೀಡಿ, ಜನರಿಗೆ ನೋವಾಗುವಂತೆ, ತೊಂದರೆಯಾಗುವಂತೆ ನಡೆದುಕೊಳ್ಳುವುದಿಲ್ಲ’ ಸ್ಥಾವರ ಸ್ಥಾಪನೆಗೆ ತಮ್ಮ ವಿರೋಧವಿರುವುದಾಗಿ ಎಂದು ಅವರು ದೂರವಾಣಿ ಕರೆ ಮೂಲಕ  ಸ್ಪಷ್ಟಪಡಿಸಿದರು.

ಈ ಸಂದರ್ಭ ಗ್ರಾಮಸ್ಥರು ಸಿಇಎ ಅಧಿಕಾರಿ ಎಂ.ಎಸ್‌. ಪುರಿ ಅವರಿಗೆ ಈ ಯೋಜನೆಯನ್ನು ಕೈಬಿಡುವಂತೆ  ಮನವಿಯನ್ನು ಸಲ್ಲಿಸಿದರು.

Niddodi power project

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English