ತಂದೆಯ ಅನಾರೋಗ್ಯದಿಂದ ನೊಂದ ಪುತ್ರಿ ಆತ್ಮಹತ್ಯೆ, ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲು

3:20 PM, Monday, May 20th, 2013
Share
1 Star2 Stars3 Stars4 Stars5 Stars
(No Ratings Yet)
Loading...

Willetha Lima Loboಮಂಗಳೂರು : ನಗರದ ಕಾವೂರು ಬಳಿಯ ಬೊಲ್ಪುಗುಡ್ಡೆ ನಿವಾಸಿ ವಿಲೆಟ ಲಿಮಾ ಲೋಬೊ(26) ಎಂಬಾಕೆ ತನ್ನ ತಂದೆಯ ಅನಾರೋಗ್ಯದಿಂದ ತೀವ್ರವಾಗಿ ನೊಂದು ತನ್ನ ಸ್ವ ಗೃಹದಲ್ಲಿ ನೇಣು ಬಿಗಿದು  ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ನಡೆದಿದೆ.

ವಿಲೆಟ ರ ತಂದೆ ವಾಲ್ಟರ್ ಲೋಬೊ ವಾರದ ಹಿಂದೆ ಮಲೇರಿಯಾಕ್ಕೆ ತುತ್ತಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಿಂದ ಭಾನುವಾರ ಬೆಳಗ್ಗೆ ವಾಲ್ಟರ್ ಲೋಬೊ ರಿಗೆ ರಕ್ತದ  ಅವಶ್ಯಕತೆ ಇದೆ ಎಂದು ಕರೆ ಬಂದ ಹಿನ್ನಲೆಯಲ್ಲಿ ಆಸ್ಪತ್ರೆಗೆ ತೆರಳಿದ ವಾಲ್ಟರ್ ಲೋಬೊ ರ ಪತ್ನಿ ಲೂಸಿ ಲೋಬೊ ವ್ಯವಸ್ಥೆ ಮಾಡಿ ಮನೆಗೆ ಮರಳಿದ್ದರು ಆದರೆ ಆಸ್ಪತ್ರೆಯಿಂದ ಪುನಃ ದೂರವಾಣಿ ಕರೆ ಬಂದ ಕಾರ‍ಣ ಆಸ್ಪತ್ರೆಗೆ ಮರಳಿದ್ದರು. ತಂದೆಯ ಈ ಸ್ಥಿತಿಯಿಂದ ನೊಂದ ವಿಲೆಟ ಲಿಮಾ ಮನೆಯ ಕೋಣೆಯೊಂದರಲ್ಲಿ ನೇಣು ಹಾಕಿಕೊಂಡಿದ್ದರೆ ಎನ್ನಲಾಗಿದೆ.

ಆದರೆ ಇತ್ತ ಆಸ್ಪತ್ರೆ ಯಿಂದ ವಿಲೆಟ್ ರ ತಾಯಿ ಕರೆ ಮಾಡಿದ್ದು ಮಗಳು ಕರೆ ಸ್ವೀಕರಿಸ ಹಿನ್ನಲೆಯಲ್ಲಿ ಸಂಶಯಗೊಂಡು ನೆರೆ ಮನೆಯವರಿಗೆ ವಿಷಯ ತಿಳಿಸಿದ್ದಾರೆ. ನೆರೆಮನೆಯವರು ಬಂದು ನೋಡಿದಾಗ ವಿಲೆಟ್ ಲೀಮಾ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಅವರು ಲೂಸಿ ಲೋಬೊ ರಿಗೆ ವಿಷಯ ತಿಳಿಸಿದ್ದಾರೆ. ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English