ಮಂಗಳೂರು : ಹೋಮ್ ಸ್ಟೇ ದಾಳಿ ಪ್ರಕರಣದಲ್ಲಿ ಪತ್ರಕರ್ತರ ಮೇಲೆ ದಾಖಲಾದ ಮೊಕದ್ದಮೆಯನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರಿಗೆ ಶನಿವಾರ ಮನವಿ ಸಲ್ಲಿಸಲಾಯಿತು.
ಪತ್ರಕರ್ತರ ಸಂಘದ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಇಂದಾಜೆ, ಖಜಾಂಜಿ ಯೋಗೀಶ್ ಹೊಳ್ಳ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ರಾಮಕೃಷ್ಣ.ಆರ್., ಪ್ರಧಾನ ಕಾರ್ಯದರ್ಶಿ ಕಿರಣ್ ಸಿರ್ಸೀಕರ್ ಮನವಿ ಸಲ್ಲಿಸಿದ ನಿಯೋಗದಲ್ಲಿದ್ದರು.
ದಾಳಿಯಲ್ಲಿ ಭಾಗವಹಿಸದೆ ಕೇವಲ ಕರ್ತವ್ಯ ನಿಮಿತ್ತ ವರದಿಗಾರಿಕೆಗೆ ಸ್ಥಳಕ್ಕೆ ತೆರಳಿದ ಮಾಧ್ಯಮ ಪ್ರತಿನಿಧಿಗಳನ್ನು ಬಂಧಿಸಿರುವುದು ಪತ್ರಿಕಾ ಸ್ವಾತಂತ್ರೃದ ಹರಣವಾಗಿದೆ. ಹಿಂದಿನ ಸರ್ಕಾರ
ಹೋಂ ಸ್ಟೇ ಪ್ರಕರಣದಲ್ಲಿ ಪತ್ರಕರ್ತರ ಮೇಲೆ ದಾಖಲಾದ ಮೊಕದ್ದಮೆ ವಾಪಸು ಪಡೆಯುವುದಾಗಿ ಹೇಳಿತ್ತು. ಆದರೆ ಇನ್ನು ಕೂಡಾ ನ್ಯಾಯ ದೊರೆತಿಲ್ಲ. ಘಟನೆಗೆ ಸಂಬಂಧಿಸಿದಂತೆ ಪತ್ರಕರ್ತ ನವೀನ್ ಸೂರಿಂಜೆ ಅವರಿಗೆ ಹೈಕೋರ್ಟ್ ಜಾಮೀನು ನೀಡಿದೆ. ಇನ್ನೋರ್ವ ಮಾಧ್ಯಮ ಪ್ರತಿನಿಧಿ ಶರಣ್ ಅವರ ಬಂಧನವಾಗಿ ಆರು ತಿಂಗಳು ಕಳೆದಿದೆ. ಸರ್ಕಾರ ಈ ಇಬ್ಬರು ಮಾಧ್ಯಮ ಪ್ರತಿನಿಧಿಗಳ ಮೇಲಿನ ಮೊಕದ್ದಮೆಯನ್ನು ವಾಪಸು ಪಡೆಯಬೇಕೆಂದು ಮನವಿಯಲ್ಲಿ ವಿನಂತಿಸಲಾಗಿದೆ.
Click this button or press Ctrl+G to toggle between Kannada and English