ಮಣಿಪಾಲ ಅತ್ಯಾಚಾರ ಆರೋಪಿ ಹರಿಪ್ರಸಾದ್ ಮತ್ತು ಸಹೋದರರಿಗೆ ಜುಲೈ 15ರ ತನಕ ನ್ಯಾಯಾಂಗ ಬಂಧನ

7:18 PM, Wednesday, July 3rd, 2013
Share
1 Star2 Stars3 Stars4 Stars5 Stars
(4 rating, 5 votes)
Loading...

Udupi Rapeಉಡುಪಿ: ಮಣಿಪಾಲ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಹರಿಪ್ರಸಾದ್ ನ ಇಂದು ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಧೀಶೆಯಾಗಿರುವ ನಾಗಜ್ಯೋತಿಯವರು ಆರೋಪಿಗೆ ಜುಲೈ 15ರ ತನಕ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

ಜೈಲಿನಲ್ಲಿ ಹರಿಪ್ರಸಾದ್ ಮೇಲೆ ದಾಳಿ ನಡೆಯುವ ಸಾಧ್ಯತೆಗಳಿರುವ ಕಾರಣಕ್ಕೆ ಭದ್ರತಾ ಕಾರಣಗಳಿಗಾಗಿ ಆತನನ್ನು ನನ್ನು ಶಿವಮೊಗ್ಗ ಜೈಲಿಗೆ ಸ್ಥಳಾಂತರಿಸಲಾಗಿದೆ.

Udupi Rapeಆರೋಪಿಗಳ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ ಯೋಗೀಶ ಮತ್ತು ಹರಿಪ್ರಸಾದ್ ಸೋದರರಾದ ಬಾಲಚಂದ್ರ ಮತ್ತು ಹರೀಂದ್ರ ನನ್ನು ಕೂಡ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಅವರಿಗೂ ಜುಲೈ 15ರ ತನಕ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಅವರನ್ನು ಹಿರಿಯಡ್ಕ ಜೈಲಿನಲ್ಲೇ ಇರಿಸಲಾಗಿದೆ.

ಜೂನ್ 20ರಂದು ಮಣಿಪಾಲದಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯನ್ನು ಮೂರು ಮಂದಿ ರಿಕ್ಷಾ ಚಾಲಕರು ಅತ್ಯಾಚಾರ ಮಾಡಿದ್ದರು. ಒಂದು ವಾರದ ಬಳಿಕ ಯೋಗೀಶ, ಹರಿಪ್ರಸಾದ್ ಮತ್ತು ಆನಂದ್ ಎಂಬವರನ್ನು ಬಂಧಿಸಲಾಗಿತ್ತು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English