ತುಂಬಿ ಹರಿದ ನೇತ್ರಾವತಿ ನದಿ, ತಟದಲ್ಲಿ ಸುಮಾರು 300ಕ್ಕೂ ಹೆಚ್ಚು ಮನೆಗಳು ಜಲಸಮಾಧಿ

4:19 PM, Friday, July 5th, 2013
Share
1 Star2 Stars3 Stars4 Stars5 Stars
(No Ratings Yet)
Loading...

Kallapu Rain ಮಂಗಳೂರು : ಸತತವಾಗಿ ಸುರಿದ ಮಳೆಯಿಂದಾಗಿ ಉಳ್ಳಾಲ ನೇತ್ರಾವತಿ ನದಿ ತುಂಬಿ ಹರಿಯುತ್ತಿದ್ದು, ನೇತ್ರಾವತಿ ತಟದಲ್ಲಿ ಕೃತಕ ನೆರೆಯಿಂದ ಸುಮಾರು 300ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿವೆ. 100ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ.

ಕಲ್ಲಾಪು ಪಟ್ಲ, ಆಡಂಕುದ್ರು, ಜಪ್ಪಿನಮೊಗರು, ಉಳ್ಳಾಲ ಮಾರ್ಗತಲೆ, ಕಕ್ಕೆತೋಟ, ಉಳ್ಳಾಲ ಉಳಿಯ, ಉಳ್ಳಾಲ ಹೊಗೆ, ಅಂಬ್ಲಿಮೊಗರು ಗ್ರಾಮದ ಕೋಟ್ರಗುತ್ತು, ಮದಕ, ಗಟ್ಟಿಕುದ್ರು, ದೋಟ, ಅಡು, ಪೆಂರ್ಗಾಬ್‌, ಹರೇಕಳ ಗ್ರಾಮದ ಡೇರಿಕಟ್ಟೆ, ಬೈತಾರ್‌, ಪಾವೂರು ಕಡವು, ಪಾವೂರು ಗ್ರಾಮದ ಇನೋಳಿ ಕೆಳಗಿನ ಕೆರೆ, ಗಾಡಿಗದ್ದೆ, ಕಿಲ್ಲೂರು, ಪಾವೂರು ಉಳಿಯ, ಮುನ್ನೂರು ಗ್ರಾಮದ ಸೋಮನಾಥ ಉಳಿಯ, ಮಜಲ್‌ತೋಟ, ಪಾಂಡ್ಯಾರ್‌ ಕುತ್ತಾರಗುತ್ತು, ಬೆಳ್ಮ ಗ್ರಾಮದ ಪ್ರದೇಶದಲ್ಲಿ ನೆರೆ ನೀರು ತುಂಬಿ ಮನೆಗಳು ಜಲಾವೃತಗೊಂಡಿದೆ.

ಆಡಂಕುದ್ರು, ಕಲ್ಲಾಪು ಪಟ್ಲದಲ್ಲಿ ಅಗ್ನಿಶಾಮಕ ದಳದ ಎರಡು ತಂಡಗಳು, ಉಳ್ಳಾಲದ ಶಿವಾಜಿ ಜೀವರಕ್ಷಕ ಈಜುಗಾರರ ಸಂಘದ ಸದಸ್ಯರು ಮತ್ತು ಜೀವ ರಕ್ಷಕ ಈಜುಗಾರರ ಸಂಘದ ಸದಸ್ಯರು, ಕಾರ್ಯನಿರ್ವಹಿಸುತ್ತಿದ್ದಾರೆ.

Kallapu Rain ಅಗ್ನಿಶಾಮಕ ದಳದ ಮುಖ್ಯ ಅಧಿಕಾರಿ ವರದರಾಜನ್‌ ಮಾರ್ಗದರ್ಶನದಲ್ಲಿ ಠಾಣಾಧಿಕಾರಿ ವಸಂತ, ಸಿಬಂದಿಗಳಾದ ಯಳರಾಜು, ಎಂ.ಪಿ. ಲೀಲಾಧರ್‌, ಧನಂಜಯ, ರವಿ, ಅರ್ಜುನ್‌, ಪ್ರಸಾದ್‌, ರಮೇಶ್‌, ರಫೀಕ್‌ ತಂಡವು 2 ದೋಣಿಗಳಲ್ಲಿ ಕಾರ್ಯಚರಿಸುತ್ತಿದ್ದಾರೆ.

ಈ ಪ್ರದೇಶದಲ್ಲಿ ಜಲಾವೃತಗೊಂಡಿರುವ 100ಕ್ಕೂ ಅಧಿಕ ಮನೆಗಳಿಂದ ಸುಮಾರು 200 ಜನರನ್ನು ಸ್ಥಳಾಂತರ ಮಾಡಿದ್ದಾರೆ. ನೀರು ನುಗ್ಗಿರುವ ಮನೆಗಳ ಸಾಮಗ್ರಿಗಳನ್ನು ಸ್ಥಳಾಂತರಿಸಲಾಗಿದೆ.

ಕಲ್ಲಾಪು ಪಟ್ಲದಲ್ಲಿ ಸರಕಾರಿ ಪ್ರಾಥಮಿಕ ಶಾಲೆ ಜಲಾವೃತಗೊಂಡಿದ್ದು ಶಾಲೆಯೊಳಗೆ ನೀರು ತುಂಬಿಕೊಂಡಿದೆ. ಉಳ್ಳಾಲ ಆಳೇಕಲ ಮದವಿ ಪದವಿಪೂರ್ವ ಕಾಲೇಜಿನ ಸುತ್ತ ನೀರು ತುಂಬಿಕೊಂಡಿದ್ದು ಸ್ಥಳೀಯ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಕಲ್ಲಾಪು ಆಡಂಕುದ್ರು, ಜಪ್ಪಿನಮೊಗರು ಸೇರಿದಂತೆ ನೇತ್ರಾವತಿ ನದಿ ತಟದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳಿಂದ ಕೃತಕ ನೆರೆ ಉಂಟಾಗಲು ಕಾರಣವಾಗಿದೆ. ಕೃತಕ ನೆರೆಯಿಂದ ಬೆಳ್ಮ, ಸೋಮನಾಥ ಉಳಿಯ, ಆಡಂಕುದ್ರು ಬಳಿ ಕೃಷಿಗೆ ಹಾನಿಯಾಗಿದೆ.

Kallapu Rain ಕಲ್ಲಾಪು ಪಟ್ಲ ಬಳಿ ಸ್ಥಳೀಯ ನಿವಾಸಿ 65ರ ಹರೆಯದ ಸಿಪ್ರಿಯನ್‌ ಡಿ’ಸೋಜಾ ಅವರ ಸಾಮಾಜಿಕ ಕಳಕಳಿ ಎಲ್ಲರ ಗಮನ ಸೆಳೆಯಿತು. ತಮ್ಮ ಖಾಸಗಿ ದೋಣಿಯಲ್ಲಿ ಸ್ಥಳೀಯರನ್ನು ನೆರೆ ನೀರಿನಿಂದ ರಸ್ತೆ ಬದಿಗೆ ಸಾಗಿಸುವ ಕಾರ್ಯವನ್ನು ಗುರುವಾರ ಬೆಳಗ್ಗಿನಿಂದಲೇ ನಡೆಸುತ್ತಿದ್ದಾರೆ. ಸ್ಥಳೀಯರು ಹಣ ನೀಡಲು ಹೋದಾಗ ನಿರಾಕರಿಸುವ ಅವರು ಜಲಾವೃತಗೊಂಡ ಮನೆಗಳಿಂದ ಜನರನ್ನು ದೋಣಿಯಲ್ಲಿ ಕರೆತರುವ ಕಾರ್ಯವನ್ನು ಮುಂದುವರೆಸುತ್ತಿರುವುದು ಕಂಡುಬಂತು.

ನೆರೆ ಪೀಡಿತ ಪ್ರದೇಶಗಳಿಗೆ ಸಚಿವ ಯು.ಟಿ ಖಾದರ್, ಜಿಲ್ಲಾಧಿಕಾರಿ ಎನ್.ಪ್ರಕಾಶ್ ನಗರ ಸಭಾ ಸದಸ್ಯರು ಭೇಟಿ ನೀಡಿ ಸಂತ್ರಸ್ಥರಿಗೆ ಸಾಂತ್ವಾನ ಹೇಳಿದರು.

Kallapu Rain

Kallapu Rain

Kallapu Rain

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English