- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕಾಂಗ್ರೆಸ್ಸ್ ನಲ್ಲಿ 17 ಕ್ರಿಮಿನಲ್ ಶಾಸಕರು, ಸಿದ್ದರಾಮಯ್ಯ ಸರಕಾರಕ್ಕೆ ಬಹುಮತದ ಚಿಂತೆ

siddhramaiha [1]ಬೆಂಗಳೂರು : ಕ್ರಿಮಿನಲ್ ಕೇಸುಗಳನ್ನು ಎದುರಿಸುತ್ತಿರುವ ಶಾಸಕರ ಅಪರಾಧ ಸಾಬೀತಾಗಿ 2 ವರ್ಷಕ್ಕಿಂತ ಹೆಚ್ಚು ಅವಧಿಗೆ ಶಿಕ್ಷೆಗೆ ಗುರಿಯಾದ ಸಂಸದ ಮತ್ತು ಶಾಸಕ ತನ್ನ ಸದಸ್ಯತ್ವ ಕಳೆದುಕೊಳ್ಳುತ್ತಾನೆ ಎಂದು ಭಾರತದ ಸರ್ವೋಚ್ಚ ನ್ಯಾಯಾಲಯ ಜು.10ರಂದು ಐತಿಹಾಸಿಕ ತೀರ್ಪು ನೀಡಿದೆ.

ಆಡಳಿತಾರೂಢ ಕಾಂಗ್ರೆಸ್ ಅತೀ ಹೆಚ್ಚು ಕ್ರಿಮಿನಲ್ ಶಾಸಕರನ್ನು ಹೊಂದಿದೆ. ಕಾಂಗ್ರೆಸ್ಸಿನ ಒಟ್ಟು 17 ಶಾಸಕರು ಕ್ರಿಮಿನಲ್ ಕೇಸುಗಳನ್ನು ಎದುರಿಸುತ್ತಿದ್ದಾರೆ, ಬಿಜೆಪಿಯಿಂದ 9 ಮತ್ತು ಜೆಡಿಎಸ್ ನಿಂದ 6 ಶಾಸಕರ ವಿರುದ್ದ  ಕ್ರಿಮಿನಲ್  ಮೊಕದ್ದಮೆ ಇದೆ. ಇವರ ಆರೋಪ ಸಾಬೀತಾಗಿ ಎರಡು ವರ್ಷಕ್ಕಿಂತ ಹೆಚ್ಚು ಜೈಲು ಶಿಕ್ಷೆ ಪಡೆದರೆ ಅಲ್ಲಿಗೆ ಅವರ ರಾಜಕೀಯ ಭವಿಷ್ಯ ಮುಗಿದಂತೆ.

ಕರ್ನಾಟಕದಲ್ಲಿ ವಿಧಾನಸಭೆಗೆ ಆಯ್ಕೆಯಾಗಿರುವ ಸದಸ್ಯರಲ್ಲಿ ಶೇ.34ರಷ್ಟು, ಅಂದರೆ 74 ಶಾಸಕರು ಕ್ರಿಮಿನಲ್ ಕೇಸುಗಳನ್ನು ಎದುರಿಸುತ್ತಿದ್ದಾರೆ. ಅವರಲ್ಲಿ ಶೇ.17ರಷ್ಟು, ಅಂದರೆ 38 ಶಾಸಕರು ಗಂಭೀರವಾದ ಕ್ರಿಮಿನಲ್ ಕೇಸುಗಳನ್ನು ಎದುರಿಸುತ್ತಿದ್ದಾರೆ. ಅತಿ ಹೆಚ್ಚು ಆರೋಪ ಎದುರಿಸುತ್ತಿರುವುದು ಸಿ.ಪಿ. ಯೋಗೇಶ್ವರ್ (39 ಪ್ರಕರಣ). ಎರಡನೇ ಸ್ಥಾನದಲ್ಲಿ 17 ಪ್ರಕರಣ ಎದುರಿಸುತ್ತಿರುವ ಯಡಿಯೂರಪ್ಪನವರಿದ್ದಾರೆ.

121 ಸದಸ್ಯರನ್ನು ಹೊಂದಿರುವ ಆಡಳಿತ ಪಕ್ಷ ಕಾಂಗ್ರೆಸ್ ನಿಂದ ಆರೋಪಿ ಸ್ಥಾನದಲ್ಲಿರುವ 17 ಶಾಸಕರು ಅಪರಾಧಿಗಳೆಂದು ಸಾಬೀತಾದರೆ ಸಿದ್ದರಾಮಯ್ಯ ಸರಕಾರ ಬಹುಮತ ಕಳೆದುಕೊಳ್ಳುವುದಂತೂ ಖಚಿತ.