ಮಂಗಳೂರು : ದೂರದರ್ಶನದ (ಡಿ.ಡಿ-1) ವರದಿಗಾರ ಗಂಗಾಧರ್ ಪಡುಬಿದ್ರೆ ತನ್ನ ಪತ್ನಿಯನ್ನು ಹತೈಗೈದ ಘಟನೆ ಸೋಮವಾರ ಸಂಜೆ ಕೋಡಿಕಲ್‌ನ ಜೆ.ಬಿ.ರಸ್ತೆಯ ಮನೆಯೊಂದರಲ್ಲಿ ನಡೆದಿದೆ.
ಅರೋಪಿ ಗಂಗಾಧರ್ ಪಡುಬಿದ್ರೆ ದೂರದರ್ಶನದ (ಡಿ.ಡಿ-1) ವರದಿಗಾರರಾಗಿದ್ದರು. ಮತ್ತು ಆಕೆಸ್ಟ್ರಾ ತಂಡ ಕಟ್ಟಿ ರಸಮಂಜರಿ ಕಾರ್ಯಕ್ರಮಗಳನ್ನು ನೀಡುತ್ತಿದ್ದರು. ಮಮತಾ ಶೆಟ್ಟಿ ( 32) ನಗರದ ಎಸ್.ಡಿ.ಎಮ್ ಕಾಲೇಜಿನ ಶಿಕ್ಷಕಿ ಯಾಗಿದ್ದರು.
ಕೊಲೆಯಾದ ಮಮತಾ ಎಳವೆಯಲ್ಲಿಯೇ ಹೆತ್ತವರನ್ನು ಕಳೆದುಕೊಂಡು ಹಾಸ್ಟೆಲ್‌ನಲ್ಲಿದ್ದಳು. ಅಲ್ಲಿಂದ ಮಮತಾಳನ್ನು ಕರೆತಂದ ಗಂಗಾಧರ ಪಡುಬಿದ್ರಿ ಆಕೆಗೆ ಶಿಕ್ಷಣ ಕೊಡಿಸಿದ್ದ, ಆಕೆ ಕಾನೂನು ಪದವಿಯನ್ನು ಪಡೆದು ನಗರದ ಎಸ್‌ಡಿಎಂ ಲಾ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿದ್ದರು.
ಗಂಗಾಧರ್ ಪಡುಬಿದ್ರೆ ಹಾಗೂ ಮಮತಾ ಶೆಟ್ಟಿ ಮೂರು ವರುಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಅವರಿಬ್ಬರದು ಅಂತಾರ್ಜಾತಿ ವಿವಾಹ. ಮಂಗಳೂರಿನ ಕೋಡಿಕಲ್ ಜೆ.ಬಿ ರಸ್ತೆಯಲ್ಲಿರುವ ಗಂಗಾಧರ್ ಅವರ ಅಕ್ಕನ ಮನೆಯಲ್ಲಿ ವಾಸ್ತವ್ಯ ಹೊಂದಿದ್ದರು.
ಮದುವೆಯಾದ ಕೆಲವು ದಿನಗಳ ಬಳಿಕ ಇವರಿಬ್ಬರ ನಡುವೆ ಅಗಾಗ ಜಗಳವಾಗುತ್ತಿತ್ತು. ಇಬ್ಬರಿಗೂ ಒಬ್ಬರ ಮೇಲೆ ಒಬ್ಬರಿಗೆ ಇದ್ದ ಸಂಶಯವೇ ಜಗಳಕ್ಕೆ ಕಾರಣ ಎಂದು ಸ್ಥಳೀಯರು ತಿಳಿಸಿದ್ದಾರೆ. ಗಂಗಾಧರ್ ಹಲವಾರು ಹುಡುಗಿಯರ ಜೊತೆ ಸಂಪರ್ಕ ಹೊಂದಿದ್ದರು. ಅಷ್ಟೇ ಅಲ್ಲದೇ ಸ್ವಂತ ಹೆಂಡತಿಯ ತಂಗಿಯ ಜೊತೆಯೂ ತುಂಬಾ ಸಲಿಗೆಯಿಂದ ಓಡಾಡುತ್ತಿದ್ದರು. ಆಕೆಸ್ಟ್ರಾ ತಂಡದಲ್ಲಿ ಹೆಚ್ಚಾಗಿ ಹುಡುಗಿಯರೇ ಇದ್ದು ಅವರೊಂದಿಗೆ ಸಲುಗೆಯಿಂದ ಇದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.
ಮಮತಾ ಶೆಟ್ಟಿ ನಗರದ ಎಸ್.ಡಿ.ಎಮ್ ಕಾಲೇಜಿನಲ್ಲಿ ಶಿಕ್ಷಕಿಯಾಗಿದ್ದರು. ಇವರ ನಡುವೆ ನಡೆಯುತ್ತಿದ್ದ ಕಲಹ ಇತ್ತೀಚಿನ ದಿನಗಳಲ್ಲಿ ತುಂಬಾ ಹೆಚ್ಚಾಗಿದ್ದು, ಇವರಿಬ್ಬರೂ ಈ ಬಗ್ಗೆ ಪೊಲೀಸ್ ಠಾಣೆಯ ಮೆಟ್ಟಲು ಹತ್ತಿದ್ದಾರೆ. ಕಳೆದ ಶನಿವಾರ ಕೂಡ ಗಂಗಾಧರ್ ತನ್ನ ಹೆಂಡತಿಯ ನಡತೆ ಸರಿಯಿಲ್ಲವೆಂದು ಉರ್ವಾ ಪೊಲೀಸ್ ಠಾಣೆಯಲ್ಲಿ ಮೌಕಿಕ ದೂರು ನೀಡಿದ್ದಾರೆ ಎನ್ನಲಾಗಿದೆ.
ಕಳೆದರೆಡು ದಿನಗಳಲ್ಲಿ ಇವರಿಬ್ಬರ ಜಗಳ ತಾರಕಕ್ಕೇರಿದ್ದು, ಸೊಮವಾರ ಮಧ್ಯಾಹ್ನ ಮನೆಗೆ ಬಂದ ಗಂಗಾಧರ್ ಹಾಗೂ ಮಮತಾ ಶೆಟ್ಟಿಯ ನಡುವೆ ಜಗಳವಾಗಿದೆ. ಈ ಸಂದರ್ಭದಲ್ಲಿ ಗಂಗಾಧರ್ ಪತ್ನಿಯನ್ನು ಎಳೆದಾಡಿ ದೂಡಿದ ರಭಸಕ್ಕೆ ಅಲ್ಲೆ ಇದ್ದ ಡೈನಿಂಗ್ ಟೇಬಲ್ ತಾಗಿ ಪತ್ನಿಯ ಮುಖದ ಮೇಲೆ ಗಾಯವಾಗಿದೆ. ಬಳಿಕ ಗಂಗಾಧರ್ ಪತ್ನಿಯ ಚೂಡಿದಾರ್ ಶಾಲಿನಿಂದ ಮಮತಾಳ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ.
ಇದೀಗ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿರುವ ಗಂಗಾಧರ್ ಪೊಲೀಸರಿಗೆ ಶರಣಾಗಿದ್ದಾನೆ. ಪೊಲೀಸರು ಗಂಗಾಧರ್ ನನ್ನು ಪೊಲೀಸ್ ಕಸ್ಟಡಿಗೆ ತೆಗೆದು ಕೊಂಡಿದ್ದಾರೆ.
ಸ್ಥಳಕ್ಕೆ ಬೇಟಿ ನೀಡಿದ ಡಿಸಿಪಿ ಧರ್ಮಯ್ಯ ಅವರು, ಇದೊಂದು ಗಂಡ- ಹೆಂಡತಿಯ ನಡುವೆ ಸಂಶಯ ಹಾಗೂ ಮನಸ್ತಾಪದ ಕಾರಣ ಉಂಟಾದ ಜಗಳದಿಂದಾದ ಕೊಲೆ. ಅರೋಪಿ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿರುತ್ತಾನೆ. ಮುಂದಿನ ತನಿಖೆ ನಡೆಸಿ ಅರೋಪ ಪಟ್ಟಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ. ಉರ್ವಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
Click this button or press Ctrl+G to toggle between Kannada and English