- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮೂತ್ರದಿಂದ ಮೊಬೈಲ್‌ ಫೋನ್‌ ಚಾರ್ಜ್‌!

Urine charge Dr. Lonin [1]

ಡಾ.ಲೊನ್ನಿಸ್‌

ಲಂಡನ್ :  ಬ್ರಿಟನ್‌ ಸಂಶೋಧಕರು ಮನುಷ್ಯನ ಮೂತ್ರವನ್ನು ಬಳಸಿಕೊಂಡು ಮೊಬೈಲ್‌ಫೋನ್‌ ಜಾರ್ಚ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಮೈಕ್ರೋಬಯಲ್ ಸೆಲ್‌(MFCs) ಬಳಸಿ ಮೂತ್ರದಿಂದ ಅವರು ವಿದ್ಯುತ್‌ ಉತ್ಪಾದಿಸಿದ್ದಾರೆ. ಈ ಸೆಲ್‌ ಮೂಲಕ ಮನುಷ್ಯನ ಮೂತ್ರ ಹಾದುಹೋದಾಗ ಆರ್ಗ್ಯಾನಿಕ್ ಮ್ಯಾಟರ್ ವಿದ್ಯುತ್ ಆಗಿ ಪರಿವರ್ತನೆಯಾಗುತ್ತದೆ ಎಂದು ಅವರು ಸಾಧಿಸಿ ತೋರಿಸಿದ್ದಾರೆ.

ಸಂಶೋಧಕರು ಸ್ಯಾಮ್‌ಸಂಗ್‌ ಫೀಚರ್‌ ಫೋನ್‌ನ್ನು ಬ್ರಿಟನ್‌ನ ಬ್ರಿಸ್ಟಲ್ ರೊಬೊಟಿಕ್ಸ್ ಪ್ರಯೋಗಾಲಯದಲ್ಲಿ ಮೂತ್ರವನ್ನು ಬಳಸಿ ಚಾರ್ಜ್‌ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಸಂಶೋಧಕರು ಮತ್ತಷ್ಟು ಸಂಶೋಧನೆ ನಡೆಸುತ್ತಿದ್ದು, ಸ್ಮಾರ್ಟ್‌ಫೋನ್‌ ಸೇರಿದಂತೆ ಇನ್ನಿತರ ಗೃಹ ಬಳಕೆ ಉತ್ಪನ್ನಗಳನ್ನು  ಮೂತ್ರದಿಂದ ಚಾರ್ಜ್‌ ಮಾಡಲು ಸಾಧ್ಯವೇ ಎನ್ನುವುದರ ಬಗ್ಗೆ ಪ್ರಯೋಗದಲ್ಲಿ ನಿರತರಾಗಿದ್ದಾರೆ.

ಈ ಸಂಬಂಧ ಅಮೆರಿಕ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಸ್ಮಾರ್ಟ್‌ ಟಾಯ್ಲೆಟ್‌ ನಿರ್ಮಿಸಲು ಯೋಜನೆ ಸಹ ಹಾಕಿಕೊಂಡಿದ್ದೇವೆ ಎಂದು ಈ ಸಂಶೋಧನೆ ಮಾಡಿರುವ ತಂಡದ ಸದಸ್ಯ ಡಾ.ಲೊನ್ನಿಸ್‌ ಹೇಳಿದ್ದಾರೆ.