ಕಾಸರಗೋಡು: ಹತ್ತನೇ ತರಗತಿ ವಿದ್ಯಾರ್ಥಿನಿಯನ್ನು ಶಾಲೆಗೆ ಬಿಡುವುದಾಗಿ ಹೇಳಿ ರಿಕ್ಷಾದಲ್ಲಿ ಕರೆದುಕೊಂಡು ಹೋಗಿ ತನ್ನ ಗೆಳೆಯನ ಜೊತೆ ಸೇರಿ ಅತ್ಯಾಚಾರ ಮಾಡಿದ ಇಬ್ಬರನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ.
ಬಾರಡ್ಕ ನಿವಾಸಿ ಆಟೋರಿಕ್ಷಾ ಚಾಲಕ ಇಬ್ರಾಹಿಂ ಬಾಲಕಿಯನ್ನು ಜು.17ರಂದು ಬಲವಂತವಾಗಿ ರಿಕ್ಷಾದಲ್ಲಿ ಕರೆದುಕೊಂಡು ಹೋಗಿ ತನ್ನ ಗೆಳೆಯ ಖಾಲಿದ್ ನೊಂದಿಗೆ ಜನವಾಸವಿಲ್ಲದ ಮನೆಯಲ್ಲಿ ಅತ್ಯಾಚಾರವೆಸಗಿದ್ದಾರೆ ಎಂದು ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಲಭಿಸಿದ ದೂರಿನನ್ವಯ ತನಿಖೆ ನಡೆಸಿದಾಗ ಆರೋಪಿಗಳ ಹೆಸರು ಬಹಿರಂಗವಾಗಿದೆ.
Click this button or press Ctrl+G to toggle between Kannada and English