- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಪೆರ್ನೆಯಲ್ಲಿ ಸಂಭವಿಸಿದ ಅನಿಲ ದುರಂತದ ಸಂತ್ರಸ್ತರಿಗೆ 43.2 ಲಕ್ಷ ಮೊತ್ತದ ಚೆಕ್ ವಿತರಣೆ

Perne Accident [1]ಬಂಟ್ವಾಳ: ಹಿಂದೂಸ್ಥಾನ್ ಪೆಟ್ರೋಲಿಯಂ ಕಂಪೆನಿಯಿಂದ  ಪೆರ್ನೆಯಲ್ಲಿ ಸಂಭವಿಸಿದ ಅನಿಲ ದುರಂತದ ಸಂತ್ರಸ್ತರಿಗೆ ಒಟ್ಟು 43.2 ಲಕ್ಷ ಮೊತ್ತದ ಚೆಕ್ಕನ್ನು ರಾಜ್ಯ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಭಾನುವಾರ ಬಿ.ಸಿ.ರೋಡ್ ನ ಸಚಿವರ ಕಚೇರಿಯಲ್ಲಿ ವಿತರಿಸಿದರು.

ಒಟ್ಟು 14 ಮಂದಿಗೆ ಪರಿಹಾರ ಧನವಾಗಿ 43.2 ಲಕ್ಷ ಮೊತ್ತದ ಚೆಕ್ ನ್ನು ವಿತರಿಸಲಾಯಿತು. ದುರಂತದಲ್ಲಿ ಜೀವಹಾನಿ ಮತ್ತು  ಮನೆ ಅಪಾರ ಆಸ್ತಿ ನಷ್ಟ ಉಂಟಾಗಿತ್ತು.  ಸ್ಥಳೀಯ ನಿವಾಸಿಗಳಾದ ಸಂದರ ರೈ ಅವರಿಗೆ 7.43 ಲಕ್ಷ, ಶಂಕರ್ ರೈ 2.83 ಲಕ್ಷ, ಮೃತ ಖತೀಜಮ್ಮ ಅವರ ಮಕ್ಕಳಿಗೆ 3.93 ಲಕ್ಷ, ಖತೀಜಮ್ಮ ಕೋಂ ಇಸ್ಮಾಯಿಲ್ ಹಾಜಿ ಅವರಿಗೆ 7.17 ಲಕ್ಷ, ನಾರಾಯಣ ನಾಯ್ಕ ಅವರಿಗೆ 4.10 ಲಕ್ಷ, ಬಟ್ಯ ನಾಯ್ಕ ಅವರಿಗೆ 1.23 ಲಕ್ಷ, ಇಸ್ಮಾಯಿಲ್ ಶಾಫಿ 4.04 ಲಕ್ಷ, ಉಮ್ಮರ್ ಅವರಿಗೆ 3.02 ಲಕ್ಷ, ಅಬ್ಬಾಸ್ 0.88 ಲಕ್ಷ, ಉಮ್ಮಪ್ಪ ಪೂಜಾರಿ 3.58 ಲಕ್ಷ, ಜಿ. ಉಮ್ಮರ್ 1.24 ಲಕ್ಷ, ಚಂದ್ರಶೇಖರ 0.90 ಲಕ್ಷ, ಅಬ್ದುಲ್ಲಾ 2.60 ಲಕ್ಷ, ಯೂಸುಫ್ ಅವರಿಗೆ 0.29 ಲಕ್ಷದ ಚೆಕ್ಕನ್ನು ವಿತರಿಸಲಾಯಿತು.

ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ, ಜಿಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ತಾಲೂಕು ತಹಶೀಲ್ದಾರ್ ಮಲ್ಲೆಸ್ವಾಮಿ, ತಾಲೂಕು ಪಂಚಾಯತ್ ಕಾರ್ಯನಿರ್ವಣಾಧಿಕಾರಿ ವಿಶ್ವನಾಥ ಪೂಜಾರಿ ಮೊದಲಾದವರು  ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.