ಮಂಗಳೂರು: ಮಂಗಳೂರಿನ ಸೆಂಟ್ರಲ್ ರೋಟರಿ ಕ್ಲಬಿನ ವತಿಯಿಂದ ಪಣಂಬೂರು ಬೀಚ್ ಬಳಿ `ಆಟಿಡ್ ರಡ್ಡ್ ದಿನ’ ಎಂಬ ಕಾರ್ಯಕ್ರಮವನ್ನು ಆಗಸ್ಟ್ 09 ಮತ್ತು 10 ರಂದು ಹಮ್ಮಿಕೊಳ್ಳಲಾಗಿದೆ. ಉತ್ಸವದ ಉದ್ಘಾಟನೆಯನ್ನು ಜಿಲ್ಲಾಧಿಕಾರಿಯವರು 09ರಂದು ಸಂಜೆ 4.30ಕ್ಕೆ ನೆರವೇರಿಸುವರು ಎಂದು ರೋಟರಿ ಕ್ಲಬಿನ ಅಧ್ಯಕ್ಷರಾದ ರಾಜ್ ಗೋಪಾಲ್ ರವರು ಗುರುವಾರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಘೊಷ್ಠಿಯಲ್ಲಿ ತಿಳಿಸಿದರು.
ಈ ಕಾರ್ಯಕ್ರಮದ ಉದ್ದೇಶವೆನೆಂದರೆ ನಮ್ಮ ಯುವಪೀಳಿಗೆಗೆ ತುಳುನಾಡಿನ ಆಚಾರ-ವಿಚಾರ, ರೀತಿ-ನಿಯಮ, ಜೀವನ ಪದ್ದತಿ ಮತ್ತು ತುಳುನಾಡಿನ ಸಂಸ್ಕೃತಿ ಬಗ್ಗೆ ಅರಿವು ಮೂಡಿಸುವುದಾಗಿದೆ, ಆಟಿಡ್ ರಡ್ಡ್ ದಿನ ಎಂಬುದು ತುಳುನಾಡಿನ ಸಂಸ್ಕೃತಿ ಮೆಲುಕು ಎಂದು ಅವರು ಹೇಳಿದರು.
ಇದರ ಪ್ರಯುಕ್ತ ಸಾಂಸ್ಕೃತಿಕ ಮತ್ತು ಆಹಾರೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ, ಆಹಾರೋತ್ಸವದಲ್ಲಿ ತುಳುನಾಡಿನ ನಾನಾ ಬಗೆಯ ತಿಂಡಿ-ತಿನಿಸುಗಳು ಲಭ್ಯವಿದೆ. ಪತ್ರಡ್ಡೈ, ಕಣಿಲೆ ಗಸಿ, ಪೆಲಕಾಯಿ ಗಟ್ಟಿ, ತೆಕ್ಕರೆದ ಅಡ್ಡೆ, ಮೋದಲಾದ ತಿಂಡಿ-ತಿನಿಸುಗಳ ರಸದೌತಣದ ಭರ್ಜರಿ ವ್ಯವಸ್ಥೆಯಿರುತ್ತದೆ.
ಪತ್ರಿಕಾಘೊಷ್ಠಿಯಲ್ಲಿ ಸಂತೋಷ್ ಶೇಟ್, ಡಾ.ಅರವಿಂದ್ ಭಟ್, ಮಂಜುನಾಥ್ ರೇವಣ್ಕರ್, ಯತೀಶ್ ಬೈಕಂಪಾಡಿ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English