ವೇಣೂರು ಪಂಚಾಯತ್ ನ ಮಾಜಿ ಅಧ್ಯಕ್ಷ ಎರ್ಮೋಡಿ ಗುಣಪಾಲ್ ಜೈನ್ ನಿಧನ

12:33 AM, Wednesday, July 31st, 2013
Share
1 Star2 Stars3 Stars4 Stars5 Stars
(5 rating, 8 votes)
Loading...

Yermodi Gunapal Jainಬೆಳ್ತಂಗಡಿ  :  ಮಂಗಳವಾರ ಮಧ್ಯಾಹ್ನ ಮೂಡುಬಿದಿರೆ -ಬೆಳ್ತಂಗಡಿ ದಾರಿಯಲ್ಲಿ ಪೆರಿಂಜೆಯ ಹೊಸಂಗಡಿ ಗ್ರಾಪಂ ಕಚೇರಿಯ ಬಳಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಜೈನ ಸಮಾಜದ ಮುಖಂಡ ಎರ್ಮೋಡಿ ಗುಣಪಾಲ್ ಜೈನ್(64) ಮೃತ ಪಟ್ಟಿದ್ದಾರೆ.

ಮೂಡುಬಿದಿರೆಯ ಮನೆಯಿಂದ ವೇಣೂರಿಗೆ ಬರುತ್ತಿದ್ದ ಗುಣಪಾಲ್ ಜೈನ್‌ರ ಇನ್ನೋವಾ ಕಾರಿಗೆ ಹೊಸಂಗಡಿ ಪಂಚಾಯತ್ ಬಳಿ ಬೆಳ್ತಂಗಡಿಯಿಂದ ಮೂಡುಬಿದಿರೆಗೆ ತೆರಳುತ್ತಿದ್ದ ಖಾಸಗಿ ಬಸ್ಸೊಂದು ಢಿಕ್ಕಿ ಹೊಡೆದ ಪರಿಣಾಮ  ಕಾರು ಸುಮಾರು 50 ಮೀಟರ್‌ಗಳಷ್ಟು ತಳ್ಳಲ್ಪಟ್ಟ ಸಂಪೂರ್ಣ ನಜ್ಜುಗುಜ್ಜಾಗಿದೆ.

ತಲೆಗೆ ಗಂಭೀರ ಗಾಯಗೊಂಡಿದ್ದ ಗುಣಪಾಲ್ ಜೈನ್‌ರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ  ಅವರು ಮೃತಪಟ್ಟಿದ್ದರು.  ಅಪಘಾತ ಸಂಭವಿಸಿದ ಕೂಡಲೇ ಬಸ್ ಚಾಲಕ, ನಿರ್ವಾಹಕ ಸ್ಥಳದಿಂದ ಪರಾರಿಯಾಗಿದ್ದರು. ಇದರಿಂದ ಆಕ್ರೋಶಿತಗೊಂಡ ಸಾರ್ವಜನಿಕರು, ಅವರನ್ನು ಬಂಧಿಸದೆ ಬಸ್‌ನ್ನು ಕದಲಲು ಬಿಡೆವು ಎಂದು ಪಟ್ಟು ಹಿಡಿದರು. ಬಳಿಕ ವೇಣೂರು ಮತ್ತು ಬೆಳ್ತಂಗಡಿ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.

ಕೇಂದ್ರದ ಮಾಜಿ ಸಚಿವ ವಿ. ಧನಂಜಯ ಕುಮಾರ್‌ರ ಸೋದರ ಮಾವನಾಗಿರುವ ಗುಣಪಾಲ್ ಪತ್ನಿ, ಪುತ್ರಿ ಸಹಿತ ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ.

ವೇಣೂರು ದಿಗಂಬರ ತೀರ್ಥ ಕ್ಷೇತ್ರ ಸಮಿತಿಯ ಕಾರ್ಯದರ್ಶಿಯಾಗಿ ಗಮನಾರ್ಹ ಸೇವೆ ಸಲ್ಲಿಸಿದ್ದರು, ವೇಣೂರು ಮಹಾ ಮಸ್ತಕಾಭಿಷೇಕ ಸಮಿತಿಯ ಕಾರ್ಯದರ್ಶಿಯಾಗಿ, ವೇಣೂರು ಪಂಚಾಯತ್ ನ ಮಾಜಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಮೃತರ ಗೌರವಾರ್ಥ ವೇಣೂರಿನಲ್ಲಿ ಇಂದು ಶಾಲಾ, ಕಾಲೇಜುಗಳಿಗೆ ರಜೆ ಸಾರಲಾಗಿತ್ತು. ವೇಣೂರು ಪರಿಸರದಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಶೋಕಾಚರಣೆ ನಡೆಸಲಾಯಿತು. ಅವರ ಅಂತ್ಯ ಸಂಸ್ಕಾರವು ಎರ್ಮೋಡಿಯಲ್ಲಿ ಸಂಜೆ ನೆರವೇರಿತು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English