ಡಿ.ಸಿ. ಆಪೀಸ್ ಬಳಿ ಎ.ಬಿ.ವಿ.ಪಿ.ಯಿಂದ ಸಿ.ಇ.ಟಿ. ಸಮಸ್ಯೆಯನ್ನು ಬಗೆಹರಿಸುವಂತೆ ಒತ್ತಾಯಿಸಿ ಪ್ರತಿಭಟನೆ

7:47 PM, Wednesday, July 31st, 2013
Share
1 Star2 Stars3 Stars4 Stars5 Stars
(5 rating, 5 votes)
Loading...

Abvp protestಮಂಗಳೂರು : ಸಿ.ಇ.ಟಿ. ಕೇಂದ್ರ ಮತ್ತು ರಾಜ್ಯ ಸರಕಾರಗಳ ನಿರ್ಲಕ್ಷದಿಂದ ಸಾವಿರಾರು ವಿದ್ಯಾರ್ಥಿಗಳು ಇಂಜಿನಿಯರ್ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಈ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ಮತ್ತು ಕಾಲೇಜು ಚುಣಾವಣೆ ನಿಷೇಧ ಕ್ರಮದ ವಿರುದ್ದ ಎ.ಬಿ.ವಿ.ಪಿ. ಜುಲೈ 31 ರಂದು ರಾಜ್ಯದ್ಯಾಂತ ಪ್ರತಿಭಟನೆಗೆ ಕರೆ ಕೊಟ್ಟಿದ್ದು, ಅದರ ಅಂಗವಾಗಿನಗರದ ಡಿ.ಸಿ. ಆಫೀಸ್ ಬಳಿಯೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವಾಪ್ತಿಯ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

Abvp protestಪ್ರತಿಭಟನೆಯಲ್ಲಿ ಎ.ಬಿ.ವಿ.ಪಿ.ರಾಜ್ಯ ಕಾರ್ಯದರ್ಶಿ ರಮೇಶ್ ಕೆ. ಮಾತನಾಡಿ ಸುಪ್ರಿಂಕೋರ್ಟ್ ಸಿ.ಇ.ಟಿ ಪ್ರವೇಶಾತಿಯನ್ನು ಜುಲೈ 30ಕ್ಕೆ ಅಂತಿಮಗೊಳಿಸಿದ್ದು ಇದರಿಂದಾಗಿ ಸಾವಿರಾರು ವಿದ್ಯಾರ್ಥಿಗಳು  ಗೊಂದಲದಲ್ಲಿದ್ದಾರೆ. ರಾಜ್ಯದ ಇಂಜಿನೀಯರಿಂಗ್ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು 8,772 ಸೀಟುಗಳು ಬಾಕಿ ಉಳಿದಿವೆ. ಒಂದು ವೇಳೆ ಸುಪ್ರಿಂಕೋರ್ಟ್ ಸಮಯವಕಾಶ ಕೊಟ್ಟರೆ ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದು. ಇಲ್ಲದಿದ್ದರೆ ಸರಕಾರದ ವಿದ್ಯಾರ್ಥಿ ವಿರೋಧಿ ನೀತಿಯಿಂದ ಸೀಟುಗಳು ಹಾಗೆಯೇ ಉಳಿಯುತ್ತದೆ.

Abvp protestಬಿ.ಫಾರ್ಮ್ (ಬ್ಯಾಚುಲರ್ ಆಫ್ ಕಾಮರ್ಸ್) ವಿದ್ಯಾರ್ಥಿಗಳ ಪ್ರವೇಶಾತಿಯನ್ನು ಕೂಡ ಸಿ.ಇ.ಟಿ. ಕೇಂದ್ರ ಮೂಲಕ ಪ್ರವೇಶ ಪ್ರಕ್ರಿಯೆಯೆಂದು ನಿರ್ಧರಿಸಲಾಗಿದ್ದರೂ ಅದಕ್ಕೆ ಪೂರಕ ತಯಾರಿ ನಡೆದಿಲ್ಲ. ಬೇರೆ ಬೇರೆ ತಾಂತ್ರಿಕ ಕಾರಣಗಳನ್ನು ನೀಡಿ ರಾಜ್ಯ ಸರಕಾರವು ವಿದ್ಯಾರ್ಥಿ ವಿರೋಧಿ ನೀತಿಯನ್ನು ತೋರಿಸುತ್ತದೆ. ಸರಕಾರಿ ಕೋಟದಲ್ಲಿ ಸೀಟು ಲಭಿಸಿದ ವಿದ್ಯಾರ್ಥಿಗಳಿಂದ ನಿರ್ಧರಿತ ಶುಲ್ಕಕ್ಕಿಂತ ಹೆಚ್ಚಿನ ಶುಲ್ಕವನ್ನು ವಸೂಲಿ ಮಾಡಿದ ಪ್ರಸಂಗವೂ ನಡೆದಿದೆ. ಈ ಬಗ್ಗೆ ಮುಖ್ಯಮಂತ್ರಿಗಳು ಮತ್ತು ಉನ್ನತ ಶಿಕ್ಕಣ ಸಚಿವರು ಇತ್ತ ಗಮನ ಹರಿಸಿ ವಿದ್ಯಾರ್ಥಿಗಳ ನೆರವಿಗೆ ಬರಬೇಕಾಗಿದೆ ಎಂದು ಕರೆ ನೀಡಿದರು.
Abvp protest

Abvp protest

Abvp protest

Abvp protest
ವೀಡಿಯೊ

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English