ನನ್ನ ಬಳಿ ಯಾವುದೇ ದಾಖಲೆಗಳಿರಲಿಲ್ಲ : ಬಂಟ್ವಾಳ ಠಾಣಾಧಿಕಾರಿ ಮಹೇಶ್ ಪ್ರಸಾದ್

12:54 AM, Friday, August 2nd, 2013
Share
1 Star2 Stars3 Stars4 Stars5 Stars
(5 rating, 5 votes)
Loading...

Mahesh Prasad

ಮಂಗಳೂರು :  ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ  ಮಹಿಳೆಯೊಬ್ಬರು ವರಕ್ಷಿಣೆ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ 2008 ರಲ್ಲಿ ದಾಖಲಾಗಿತ್ತು. ಅಂದಿನ ಠಾಣಾಧಿಕಾರಿಯಾಗಿರುವ ವಿನಾಯಕ ಬಿಲ್ಲವ ಪ್ರಕರಣದ ತನಿಕೆ ನಡೆಸಿ ಕೇಸು ದಾಖಲಿಸಿಕೊಂಡಿದ್ದರು.

ಪ್ರಕರಣವು 2008 ರಿಂದ ಬಂಟ್ವಾಳ ನ್ಯಾಯಾಲಯದಲ್ಲಿ ಎರಡು ವರ್ಷಗಳ ಕಾಲ ತನಿಖೆಯಲ್ಲಿತ್ತು. ನಂತರ 2010 ರಲ್ಲಿ ಪ್ರಕರಣವನ್ನು ಮಂಗಳೂರು ನ್ಯಾಯಾಲಕ್ಕೆ ವರ್ಗಾಯಿಸಲಾಯಿತು. ಅಂದಿನ ಠಾಣಾಧಿಕಾರಿ ವಿನಾಯಕ ಬಿಲ್ಲವ ಸಂಬಂಧಪಟ್ಟ ಸಾಕ್ಷಿಗಳನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಿರುವುದಾಗಿ ಬಂಟ್ವಾಳ ಗ್ರಾಮಾಂತರ ಠಾಣೆಯ ದಾಖಲೆಗಳಲ್ಲಿ ಬರೆದಿಟ್ಟಿದ್ದಾರೆ.

ಮಂಗಳೂರು ನ್ಯಾಯಾಲಯದಲ್ಲಿ ಪ್ರಕರಣ ಪುನರ್ ತೆರೆದಾಗ ಮೃತ ಮಹಿಳೆಯ ಸಂಪೂರ್ಣ ದಾಖಲೆಗಳನ್ನು ಠಾಣಾಧಿಕಾರಿ ಹಾಜರು ಪಡಿಸಿಲ್ಲ ಎಂದು ನೊಟೀಸು ಜಾರಿಮಾಡಿತ್ತು.

ನ್ಯಾಯಾಲಯ ಕೇಳುವುದು ಮೃತ ಮಹಿಳೆಯು ಸಾಯುವ ಸಂದರ್ಭ ತೊಟ್ಟಂತಹ ಬಟ್ಟೆ. ಆ ಬಳಿಕ ಪ್ರಕರಣದ ವಿಚಾರಣೆ ಮುಂದುವರಿದಿತ್ತು ಠಾಣಾಧಿಕಾರಿ ನ್ಯಾಯಾಲಯಕ್ಕೆ ಪೂರಕ ಮಾಹಿತಿಗಳನ್ನು ಒದಗಿಸಿರಲಿಲ್ಲ. 2012 ರಲ್ಲಿ ಬಂಟ್ವಾಳ ಗ್ರಾಮಾಂತರ ಠಾಣೆಯ ಠಾಣಾಧಿಕಾರಿಯಾಗಿರುವ ವಿನಾಯಕ ಬಿಲ್ಲವ ಅವರಿಗೆ ಕೊಡಗು ಠಾಣೆಗೆ ವರ್ಗವಾಯಿತು, ಬಂಟ್ವಾಳ ಗ್ರಾಮಾಂತರ ಠಾಣೆಗೆ ಮಹೇಶ್ ಪ್ರಸಾದ್ ಠಾಣಾಧಿಕಾರಿಯಾಗಿ ಕರ್ತವ್ಯಕ್ಕೆ ಹಾಜರಾದರು.

2013 ರ ಜುಲೈನಲ್ಲಿ ಪ್ರಕರಣದ ಕುರಿತಂತೆ ಬಂಟ್ವಾಳ ಗ್ರಾಮಾಂತರ  ಠಾಣೆಯ ಮಹೇಶ್ ಪ್ರಸಾದ್ ರವರಿಗೆ ಕೂಡಲೇ ಸಾಕ್ಷ್ಯ ಒದಗಿಸುವಂತೆ ನ್ಯಾಯಾಲಯ ಆದೇಶ ನೀಡಿತು. ಮಹೇಶ್ ಪ್ರಸಾದ್ ನ್ಯಾಯಾಧೀಶರಿಗೆ ಪ್ರಕರಣದ ವಿಷಯವನ್ನು ಮನವರಿಕೆ ಮಾಡಿದ್ದರು. ನನಗೆ ಸಂಬಂಧ ಪಡದ ವಿಷಯಕ್ಕೆ ನಾನು ಉತ್ತರ ನೀಡಿದರೆ ತಪ್ಪು ಎಂದು  ಹೇಳಿದ್ದರು.

ಮಹೇಶ್ ಪ್ರಸಾದ್ ಮೆಗಾ ಮೀಡಿಯಾ ನ್ಯೂಸ್ ನೊಂದಿಗೆ ಮಾತನಾಡಿ, ನನ್ನನ್ನು  ಜುಲೈ 31 ರಂದು ಖುದ್ದಾಗಿ ಹಾಜರಾಗುವಂತೆ ನ್ಯಾಯಾಧೀಶರು ಹೇಳಿದ್ದರು. ನಾನು ಪ್ರಖರಣದ ಸತ್ಯಾ ಸತ್ಯತೆಯನ್ನು ನನ್ನ ಮೇಲಾಧಿಕಾರಿಗಳಿಗೆ ತಿಳಿಸಿದ್ದೇನೆ, ಮಹಿಳೆ ತೊಟ್ಟಂತಹ ಬಟ್ಟೆ ನನ್ನ ಬಳಿ ಇರಲಿಲ್ಲ ಹಿಂದಿನ  ಠಾಣಾಧಿಕಾರಿ ನ್ಯಾಯಾಲಯದಲ್ಲಿ ಅದನ್ನು ಹಾಜರು ಪಡಿಸಿರುವುದಾಗಿ ದಾಖಾಲೆಗಳನ್ನು ಬರೆದಿಟ್ಟಿದ್ದಾರೆ. ನನ್ನ ಬಳಿ ಇಲ್ಲದ ದಾಖಾಲೆಗಳನ್ನು ನಾನು ಹೇಗೆ ನೀಡಲಿ ಎಂದು ತಿಳಿಸಿದರು.

ಅದರಂತೆ ಜುಲೈ 31 ರಂದು ಬಂಟ್ವಾಳ ಡಿವೈಎಸ್ ಪಿ ಸದಾನಂದ ವರ್ಣೇಕರ್ ಮತ್ತು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಭಿಷೇಕ್ ಘೊಯಲ್ ಮಧ್ಯಸ್ಥಿಕೆಯಲ್ಲಿ ಸರಕಾರಿ ವಕೀಲರ ಮುಖಾಂತರ ಪ್ರಕರಣ ಮುಕ್ತಾಯವಾಯಿಗಿದೆ. ನನಗೆ ವಾರಂಟ್ ಬರಲಿಲ್ಲ , ನ್ಯಾಯಾಂಗ ಬಂಧನವಾಗಿಲ್ಲ ಎಂದು ಮಹೇಶ್ ಪ್ರಸಾದ್ ತಿಳಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English