ಕೊಣಾಜೆ ನಾಟೆಕಲ್ ಬಳಿ ಅಕ್ರಮವಾಗಿ ದನ ಸಾಗಾಟದ ವಾಹನ ಪಲ್ತಿ, 10ದನಗಳ ಸಾವು

2:51 PM, Friday, September 13th, 2013
Share
1 Star2 Stars3 Stars4 Stars5 Stars
(No Ratings Yet)
Loading...
cattle transportಮಂಗಳೂರು  : ಮುಡಿಪುವಿನಿಂದ ಮಂಗಳೂರು ಕಡೆಗೆ ಆಗಮಿಸುತ್ತಿದ್ದ ಪಿಕಪ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದು ವಾಹನದಲ್ಲಿದ್ದ ಸುಮಾರು 18 ದನಗಳಲ್ಲಿ 10ದನಗಳು ಸಾವನ್ನಪ್ಪಿದ ರ್ದುಘಟನೆ ನಗರದ ಹೊರವಲಯದ ಕೊಣಾಜೆ ಸಮೀಪದ ನಾಟೆಕಲ್ ತಿರುವಿನಲ್ಲಿ ಗುರುವಾರ ರಾತ್ರಿ ಸಂಬವಿಸಿದೆ.
ಅಕ್ರಮವಾಗಿ ದನಗಳನ್ನು ಸಾಗಾಟ ಮಾಡುತ್ತಿದ್ದ ಕೆ‌ಎ 20 6759 ನೋಂದಣಿ ಸಂಖ್ಯೆಯ ಪಿಕಪ್ ವಾಹನವು ಮುಡಿಪುವಿನಿಂದ ಮಂಗಳೂರು ಕಡೆಗೆ ಆಗಮಿಸುತ್ತಿದ್ದು ನಾಟೆಕಲ್ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮಗುಚಿಬಿತ್ತು. ಅಪಘಾತದ ರಭಸಕ್ಕೆ ಪಿಕಪ್ ನಲ್ಲಿದ್ದ ದನಗಳು ವಾಹನದಡಿಗೆ ಬಿದ್ದಿದ್ದು, ಸ್ಥಳದಲ್ಲೇ ಸಾವನಪ್ಪಿದವು. ಅಪಘಾತ ನಡೆದ ತಕ್ಷಣ ವಾಹನದ ಚಾಲಕ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಅದೇ ರಸ್ತೆಯಲ್ಲಿ ಹಾಲು ಸಾಗಾಣಿಕಾ ವಾಹನದ ಚಾಲಕಕರು ಅಪಘಾತದ ಬಗ್ಗೆ ಅರಿತು ಪೊಲೀಸರಿಗೆ ಸುದ್ದಿ ಮುಟ್ಟಿಸಿದರು. ಪಿಕಪ್ ವಾಹನದಡಿ ಹೊರಳಾಡುತ್ತಿದ್ದ ಕೆಲವೊಂದು ದನಗಳನ್ನು ರಕ್ಷಿಸಿದ್ದಾರೆ.
ಕೊಣಾಜೆ ಪೊಲೀಸ್ ಠಾಣೆಯ ಎಸ್‌ಐ ಸುಧಾಕರ್ ಹಾಗೂ ಸಿಬ್ಬಂದಿಗಳು  ಸ್ಥಳಕ್ಕಾಗಮಿಸಿ ಬದುಕುಳಿದಿದ್ದ ದನಗಳನ್ನು ಠಾಣೆಗೆ ಕೊಂಡೊಯ್ದರು ಹಾಗೂ ಪಿಕಪ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ದನಗಳನ್ನು ಸಮೀಪದ ಮುಡಿಪು, ಕುರ್ನಾಡು, ಸಜಿಪ, ಬೊಳಿಯಾರು ಸ್ಥಳಗಳಿಂದ ಚೆಂಬುಗುಡ್ಡೆಗೆ ಸಾಗಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಕೊಣಾಜೆ ಪೊಲೀಸ್ ಠಾಣೆಯಲ್ಲಿ  ಪ್ರಕರಣ  ದಾಖಲಿಸಲಾಗಿದೆ.

cattle transport

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English