ಪುತ್ತೂರು : ಮಾಡಾವು ಕೈಕಂಬ ನಿವಾಸಿ ನೌಶಿದಾಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಸೂಚನೆ ನೀಡಿದ್ದೇನೆ ಎಂದು ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ತಿಳಿಸಿದ್ದಾರೆ. ಅಪಹರಣದ ನಾಟಕ ಮಾಡುವ ಮೂಲಕ ಸಮಾಜದಲ್ಲಿ ಗೊಂದಲ ಉಂಟುಮಾಡಿ ಪುತ್ತೂರಿನಲ್ಲಿ ಕೋಮು ದ್ವೆಶದ ಪರಿಸ್ಥಿತಿ ಉಂಟಾಗಿತ್ತು ಎಂದು ಅವರು ಹೇಳಿದರು.
ನೌಶಿದಾ ತನ್ನನ್ನು ಅಪಹರಣ ಮಾಡಲಾಗಿದೆ ಎಂಬ ಕಟ್ಟುಕಥೆಯಿಂದ ಪುತ್ತೂರಿನಲ್ಲಿ ಶಾಂತಿಯನ್ನು ಕದಡುವ ಪ್ರಯತ್ನ ನಡೆದಿತ್ತು. ಮುಂದೆ ಇಂತಹ ನಕಲಿ ಪ್ರಕರಣಗಳು ನಡೆಯಬಾರದು. ಈ ರೀತಿಯ ಮೋಸಗಳನ್ನು ನಡೆಸುವವರಿಗೆ ಇದು ಪಾಠವಾಗಬೇಕು. ಕಾನೂನಿನ ಕಠಿಣ ಕ್ರಮ ಇಲ್ಲಿ ಅನಿವಾರ್ಯ. ನೌಶಿದಾಳ ಎಡವಟ್ಟಿನಿಂದ ಮುಂದೆ ನಿಜವಾಗಿಯೂ ಇಂತಹ ಘಟನೆ ನಡೆದರೆ ಜನ ನಂಬದಂತಹ ಪರಿಸ್ಥಿತಿ ಉಂಟಾಗಿದೆ ಎಂದು ಶಕುಂತಳಾ ಶೆಟ್ಟಿ ಪತ್ರಕರ್ತರೊಂದಿಗೆ ಹೇಳಿದರು.
ಎಸ್.ಡಿ.ಪಿ.ಐ. ಅಧ್ಯಕ್ಷ ಅಬೂಬಕ್ಕರ್ ಸಿದ್ದೀಕ್ ಮಾತನಾಡಿ ನೌಶಿದಾ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತನಿಖೆಯಿಂದ ಇದು ಸುಳ್ಳು ಎಂದು ಸಾಬೀತಾಗಿದೆ. ಈ ಘಟನೆಯ ಕುರಿತು ಪೂರ್ಣ ಸತ್ಯ ವಿಚಾರ ಬಹಿರಂಗಗೊಳ್ಳಬೇಕು ತಿಳಿಸಿದ್ದಾರೆ.
Click this button or press Ctrl+G to toggle between Kannada and English