- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ನಗರದ ನಂತೂರು ವೃತ್ತದ ಬಳಿ ಪರಿಸರದ ನಾಗರಿಕರಿಂದ ಪೂರ್ಣಗೊಳ್ಳದ ಕಾಮಗಾರಿಯನ್ನು ಖಂಡಿಸಿ ಉಪವಾಸ ಸತ್ಯಾಗ್ರಹ

nantoor [1]ಮಂಗಳೂರು : ಗುರುವಾರ ನಗರದ ನಂತೂರು ವೃತ್ತದ ಬಳಿ ಪರಿಸರದ ನಾಗರಿಕರು ವರ್ಷಗಳು ಕಳೆದರೂ ತಾಂತ್ರಿಕ ದೋಷ ಪೂರಿತ ನಂತೂರು ವೃತ್ತದಲ್ಲಿನ ಪೂರ್ಣಗೊಳ್ಳದ ಕಾಮಗಾರಿಯನ್ನು ಖಂಡಿಸಿ  ಒಂದು ದಿನದ ಉಪವಾಸ ಸತ್ಯಾಗ್ರಹವನ್ನು ನಡೆಸಿದರು .

ಸ್ಥಳೀಯ ನಾಗರಿಕರಾದ ಎ.ಜಿ.ಶರ್ಮ ಅವರು, ಪ್ರತಿಭಟನೆಯನ್ನುದ್ದೇಶಿಸಿ ನಂತೂರು ವೃತ್ತದ ದುಸ್ಥಿತಿ ಕೇಳುವವರಿಲ್ಲ. ಇಲ್ಲಿಯ ಸಮಸ್ಯೆಯ ಬಗ್ಗೆ ಜನಪ್ರತಿನಿಧಿಗಳಿಗೆ, ರಾಷ್ಟ್ರೀಯ ಇಲಾಖೆಯ ಗಮನಕ್ಕೆ ತಂದರೂ ಈ ಬಗ್ಗೆ ಯಾರೂ ಸರಿಯಾದ ಸ್ಪಂದನೆ ನೀಡುತ್ತಿಲ್ಲ. ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದ್ದು, ಮಳೆಗಾಲದಲ್ಲಂತೂ ಕೆಸರು ನೀರುಗಳು ರಸ್ತೆಯ ಹೊಂಡಗಳಲ್ಲಿ ತುಂಬಿಕೊಳ್ಳುತ್ತವೆ. ಇದರಿಂದ ಜನಸಂಚಾರ, ಹಾಗೂ ವಾಹನ ಸಂಚಾರಕ್ಕೆ ತಡೆಯಾಗಿದೆ. ಸಾರ್ವಜನಿಕರಿಗೆ ತಲುಪಬೇಕಾದ ಸ್ಥಳಕ್ಕೆ ತಲುಪಲು ತೊಂದರೆಯಾಗುತ್ತಿದೆ ಎಂದು ತಿಳಿಸಿದರು.

ಅಷ್ಟೇ ಅಲ್ಲದೇ ಇಲ್ಲಿ ಸರಿಯಾಗಿ ಒಳಚರಂಡಿ ವ್ಯವಸ್ಥೆ ಇಲ್ಲ. ದಾರಿ ದೀಪ ಉರಿಯುದಿಲ್ಲ. ಪಾದಚಾರಿಗಳಿಗೆ ನಡೆದು ಹೋಗಲು ಕಾಲುದಾರಿಯೇ ಇಲ್ಲ. ಇದನ್ನೇಲ್ಲಾ ಕೂಡಲೇ ಸರಿಪಡಿಸಿ ಕೊಡಬೇಕೆಂದು ಸರಕಾರವನ್ನು ಆಗ್ರಹಿಸಿದರು.

ಈ ಸಂದರ್ಭದಲ್ಲಿ ರಸ್ತೆ ಪ್ರಾಧಿಕಾರದ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪ್ರತಿಭಟನಾಕಾರರ ಮನವಿಯನ್ನು ಸ್ವೀಕರಿಸಿದರು. ರಸ್ತೆ ದುರಸ್ಥಿಗೆ ಸಂಬಂಧಿಸಿದಂತೆ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆಯನ್ನು ನೀಡಿದರು. ಈ ಹಿನ್ನಲೆಯಲ್ಲಿ ಉಪವಾಸ ಸತ್ಯಾಗ್ರಹವನ್ನು ತಾತ್ಕಲಿಕವಾಗಿ ಹಿಂಪಡೆಯಲಾಯಿತು.

ಉಪವಾಸ ಸತ್ಯಾಗ್ರಹದಲ್ಲಿ ಮರೋಳಿ, ನಂತೂರು,ಬಿಕರ್ನಕಟ್ಟೆ, ಕದ್ರಿ, ಪದವು, ಕಂಡೆಟ್ಟು, ಜಜ್ಜೋಡಿ, ಜಯಶ್ರೀಗೇಟ್, ಕೈಕಂಬ, ಶಕ್ತಿನಗರ, ಕುಲಶೇಖರ ಪರಿಸರದ ನಾಗರಿಕರು, ಸಂಘಸಂಸ್ಥೆಗಳ ಅಧ್ಯಕ್ಷರು, ಹಾಗೂ ಪದಾಧಿಕಾರಿಗಳು ಭಾಗವಹಸಿದ್ದರು. nantoor [2]