- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮುಂಬೈ ನಿವಾಸಿಗೆ ವಂಚಿಸಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ದರೋಡೆ

Anil-Kumar-Sharma [1]ಮಂಗಳೂರು: ಮುಂಬೈ ನಿವಾಸಿಗೆ ವಂಚಿಸಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ದರೋಡೆಗೈದ ತಂಡವನ್ನು ಬರ್ಕೆ ಪೊಲೀಸರು ಪತ್ತೆ ಹಚ್ಚಿದ್ದು, ಮೂವರನ್ನು ಬಂಧಿಸಿ ದ್ದಾರೆ.

ಬಂಧಿತ ಆರೋಪಿಗಳನ್ನು ಮೂಲತಃ ಉತ್ತರ ಪ್ರದೇಶದವನಾದ ಪ್ರಸ್ತುತ ಜಪ್ಪಿನಮೊಗರಿನಲ್ಲಿ ವಾಸವಾ ಗಿರುವ ಅನಿಲ್‌ಶರ್ಮಾ, ವಾಮಂ ಜೂರಿನ ರಿಚಿ ಯಾನೆ ರಿಚ್ಮಂಡ್, ಮತ್ತು ಜೆಪ್ಪು ಕುಡ್ಪಾಡಿಯ ವಿಜೇಶ್ ಕುಮಾರ್ ಯಾನೆ ವಿಜು ಎಂದು ಗುರುತಿಸ ಲಾಗಿದೆ. ಬಂಧಿತರಿಂದ  ಬೆಳ್ಳಿಯ ಆಭರಣಗಳು, ಚಿನ್ನಾಭರಣಗಳು, ನಗದು ಸೇರಿದಂತೆ ಒಟ್ಟು 765000/- ಮೌಲ್ಯದ ಸ್ವತ್ತುಗಳು ಮತ್ತು ಸ್ವಿಫ್ಟ್ ಕಾರು ಹಾಗೂ ಪಲ್ಸರ್ ಬೈಕ್ ವಶಕ್ಕೆ ಪಡೆಯಲಾಗಿದೆ.

ಘಟನೆಯ ವಿವರ: ಮುಂಬೈನ ನಾರಾಯಣ್‌ಲಾಲ್ ಕುಮಾವತ್ ಎಂಬವರು ಚಿನ್ನಾಭರಣಗಳನ್ನು ಮಾರಾಟ ಮಾಡಲೆಂದು ಆರೋಪಿ ಅನಿಲ್‌ಶರ್ಮಾ ತಿಳಿಸಿದಂತೆ ಮಂಗಳೂ ರಿಗೆ ಬಂದಿದ್ದರು. ಈ ವೇಳೆ ಅನಿಲ್ ಶರ್ಮಾ ಮತ್ತೋರ್ವ ಆರೋಪಿ ವಿಜೇಶನ ಕಾರನ್ನು ಬುಕ್ ಮಾಡಿ ನಾರಾಯಣ್ ಲಾಲ್‌ರನ್ನು ಆಭರಣ ಮಾರಾಟ ಮಾಡುವ ನೆಪದಲ್ಲಿ ಕರೆದುಕೊಂಡು ಹೋಗಿದ್ದ. ಈ ವೇಳೆ ಅನಿಲ್‌ಶರ್ಮಾ ಕಾರಿನಲ್ಲಿ ಸಿಗರೇಟ್ ಸೇದಿದ್ದು, ಇದನ್ನು ಕಾರು ಚಾಲಕ ವಿಜೇಶ್ ಅಕ್ಷೇಪಿಸಿದ್ದ. ಹೀಗಾಗಿ ಲಾಲ್ ಭಾಗ್ ಸಮೀಪದ ಒಳರಸ್ತೆಗೆ ಬಂದಾಗ ಕಾರು ನಿಲ್ಲಿಸುವಂತೆ ಸೂಚಿಸಿದ ಅನಿಲ್ ಶರ್ಮಾ ಕಾರಿನಿಂದ ಹೊರಗೆ ಬಂದು ಸಿಗರೇಟ್ ಸೇದಿದ್ದಾನೆ. ತದನಂತರ ಕಾರು ಸ್ಟಾರ್ಟ್ ಆಗದೇ ಇದ್ದು, ಈ ವೇಳೆ ವಿಜೇಶ್ ಇಬ್ಬರಲ್ಲೂ ಕಾರನ್ನು ತಳ್ಳು ವಂತೆ ಹೇಳಿದ್ದಾನೆ. ಇವರಿಬ್ಬರು ಕಾರನ್ನು ತಳ್ಳಲು ಆರಂಭಿಸಿದಾಗ ವಿಜೇಶ್ ಕಾರಿನಲ್ಲಿದ್ದ ಚಿನ್ನಾಭರಣ ಗಳೊಂದಿಗೆ ಪರಾರಿಯಾಗಿದ್ದ. ಈ ಬಗ್ಗೆ ನಾರಾಯನ್‌ಲಾಲ್ ಕುಮಾವತ್ ಬರ್ಕೆ ಠಾಣೆಗೆ ದೂರು ನೀಡಿದ್ದರು.

ಕಾರ್ಯಾಚರಣೆಯಲ್ಲಿ ಉತ್ತರ ಠಾಣೆಯ ಪೊಲೀಸ್ ನಿರೀಕ್ಷಕರಾದ  ಚೆಲುವರಾಜ, ಬರ್ಕೆ ಠಾಣೆಯ ಎಸ್ಸೈ ಮಹಮ್ಮದ್ ಶರೀಫ್ ಮತ್ತು ಸಿಬ್ಬಂದಿ ಯಾದ ಶೇಖರ ಗಟ್ಟಿ, ಬಾಲಕೃಷ್ಣ, ಪ್ರದೀಪ್ ಕುಮಾರ್ ರೈ,  ಇಸಾಕ್,   ವಿನೋದ್, ದಿನೇಶ್ ಶೆಟ್ಟಿ ಅಸೈಗೋಳಿ, ಸುನಿಲ್ ಕುಮಾರ್,  ಚಂದ್ರಶೇಖರ, ಮತ್ತು ಮಾಯಾ ಪ್ರಭು ಭಾಗವಹಿಸಿದ್ದರು.