- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಶಿವರಾಜ್ ಕುಮಾರ್ 101ನೇ ಚಿತ್ರ

Shivaraj Kumar Priya Mani [1]ಬೆಂಗಳೂರು : ಶಿವರಾಜ್ ಕುಮಾರ್ 101ನೇ ಚಿತ್ರ ಕ್ಕೆ ನಾಯಕಿಯಾಗಿ ಬಹುಭಾಷಾ ತಾರೆ ಪ್ರಿಯಾಮಣಿ ನಟಿಸಲಿದ್ದಾರೆ. ಪುನೀತ್ ರಾಜ್‌ಕುಮಾರ್ ‘ರಾಮ್’ ಚಿತ್ರದ ಮೂಲಕ ಕನ್ನಡಕ್ಕೆ ಬಂದು ಸುದೀಪ್,ಗೋಲ್ಡನ್ ಸ್ಟಾರ್ ಗಣೇಶ್   ಚಿತ್ರಗಳಲ್ಲಿ ಪ್ರೇಕ್ಷಕರ ಗಮನ ಸೆಳೆದು, ಶಿವರಾಜ್ ಕುಮಾರ್ ಜೊತೆ ನಟಿಸುತ್ತಿರುವ ನಾಲ್ಕನೇ ಚಿತ್ರ ಇದಾಗಿರುವುದು ವಿಶೇಷ.
ಪ್ರೇಮ್ ನಿರ್ದೇಶನದ ‘ಜೋಗಯ್ಯ’ ಶಿವರಾಜ್ ಕುಮಾರ್ ಅವರ 100 ನೇ ಚಿತ್ರವಾಗಿತ್ತು,  ಈಗ 101ನೇ ಚಿತ್ರವೂ ಘೋಷಣೆಯಾಗಿದೆ. ಹೆಸರಿಡದ ಈ ಚಿತ್ರಕ್ಕೆ ಸೂಪರ್ ಹಿಟ್ ಸಂಗೀತ ನಿರ್ದೇಶಕ ಗುರುಕಿರಣ್ ಸಂಗೀತ ನೀಡಲಿದ್ದಾರೆ. ಚಿತ್ರ ನಿರ್ದೇಶನವನ್ನು ರಾಘವ್ ಲೋಕಿ ಮಾಡಲಿದ್ದಾರೆ. ‘ಸತ್ಯ ಇನ್ ಲವ್’ ಮೂಲಕ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗೆ ಭಿನ್ನ ಗೆಟಪ್ ನೀಡಿದ್ದವರು ರಾಘವ್ ಲೋಕಿ. ಕ್ರಾಂತಿಕಾರಿ ಕಥೆಯಿರುವ ಈ ಚಿತ್ರದಲ್ಲಿ ಶಿವಣ್ಣ ವಿಶಿಷ್ಟ ಪಾತ್ರ ನಿರ್ವಹಿಸಲಿದ್ದಾರೆ ಎಂದು ಲೋಕಿ ಹೇಳಿದ್ದಾರೆ.
ಈ ಚಿತ್ರದ ಹಾಡುಗಳ ರೆಕಾರ್ಡಿಂಗ್ ನವೆಂಬರ್ 26ರಿಂದ  ನಡೆಯಲಿದೆ. ಡಿಸೆಂಬರ್ 14ರಿಂದ ಎರಡು ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಜನವರಿ 3ರಿಂದ ಅಧಿಕೃತವಾಗಿ ಶೂಟಿಂಗ್ ಆರಂಭವಾಗುತ್ತದೆ. ದೇಶ ವಿದೇಶಗಳಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ಚಿತ್ರ ನಿರ್ಮಾಪಕರಾದ ಆಂಧ್ರಪ್ರದೇಶದ ರವಿ ಮತ್ತು ಭಾಸ್ಕರ್ ತಿಳಿಸಿದ್ದಾರೆ. ರಂಗಾಯಣ ರಘು, ಅವಿನಾಶ್, ದಿಲೀಪ್ ಮತ್ತು ಕೋಮಲ್ ಮಂತಾದವರು  ತಾರಾಗಣದಲ್ಲಿರುತ್ತಾರೆ.