ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷರಾಗಿ ಅಜಿತ್‌ ಕುಮಾರ್‌ ರೈ ಮಾಲಾಡಿಗೆ ಗೆಲುವು

8:16 PM, Thursday, November 14th, 2013
Share
1 Star2 Stars3 Stars4 Stars5 Stars
(No Ratings Yet)
Loading...
Ajith Kumar Rai Maladi

ಮಂಗಳೂರು: ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಹಾಗೂ ಕಾರ್ಯಕಾರಿ ಸಮಿತಿಗೆ ರವಿವಾರ ನಡೆದ ಚುನಾವಣೆ ಫಲಿತಾಂಶ ಬುಧವಾರ ಸಂಜೆ ಪ್ರಕಟಗೊಂಡಿದ್ದು, ಅಜಿತ್‌ ಕುಮಾರ್‌ ರೈ ಮಾಲಾಡಿ ಅವರು ತಮ್ಮ ಪ್ರತಿಸ್ಪರ್ಧಿ ಸದಾನಂದ ಶೆಟ್ಟಿ ಅವರ ವಿರುದ್ಧ 1,149 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಅಜಿತ್‌ ಕುಮಾರ್‌ ರೈ ಮಾಲಾಡಿ ಅವರು 4,363 ಮತ ಗಳಿಸಿದರೆ, ಸದಾನಂದ ಶೆಟ್ಟಿ ಅವರು 3,214 ಮತ ಪಡೆದರು. ಮಂಗಳೂರು ತಾಲೂಕಿನಲ್ಲಿ ಮಹಿಳಾ ಮೀಸಲು ಸ್ಥಾನ ಸೇರಿಸಿ ಒಟ್ಟು 20 ಸ್ಥಾನಗಳಿಗೆ ಮತದಾನ ನಡೆದಿದ್ದು, ಎಲ್ಲ ಸ್ಥಾನಗಳಲ್ಲಿ ಅಜಿತ್‌ ಕುಮಾರ್‌ ರೈ ಮಾಲಾಡಿ ಅವರ ಬೆಂಬಲಿತ ಅಭ್ಯರ್ಥಿಗಳು ಜಯ ದಾಖಲಿಸಿದ್ದಾರೆ. ನಗರದ ಬಂಟ್ಸ್‌ಹಾಸ್ಟೆಲ್‌ನ ಶ್ರೀ ರಾಮಕೃಷ್ಣ ಕಾಲೇಜಿನಲ್ಲಿ ಮತ ಎಣಿಕೆಯ ಕಾರ್ಯ ಪೊಲೀಸ್‌ ಭದ್ರತೆಯಲ್ಲಿ ನಡೆಯಿತು.

Ajith Kumar Rai Maladi

ಕುಂದಾಪುರ ತಾಲೂಕಿನಲ್ಲಿ ಅಜಿತ್‌ ಕುಮಾರ್‌ ರೈ ಮಾಲಾಡಿ ಅವರ ಬೆಂಬಲಿತ ಅಭ್ಯರ್ಥಿಗಳು ಪ್ರಾಬಲ್ಯ ಸಾಧಿಸಿದರೆ, ಉಡುಪಿಯಲ್ಲಿ ಸದಾನಂದ ಶೆಟ್ಟಿ ಅವರ ಬೆಂಬಲಿಗರು ಹೆಚ್ಚಿನ ಸ್ಥಾನ ಪಡೆದರು. ಬೆಳ್ತಂಗಡಿಯ ಮಹಿಳಾ ಮೀಸಲು ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿದ್ದು, ಮತದಾನ ನಡೆದ ಮೂರೂ ಸ್ಥಾನಗಳಲ್ಲಿ ಸದಾನಂದ ಶೆಟ್ಟಿ ಅವರ ಬೆಂಬಲಿಗರು ಜಯ ಸಾಧಿಸಿದ್ದಾರೆ. ಕಾರ್ಕಳ ತಾಲೂಕಿನಲ್ಲಿ 4 ಸ್ಥಾನಗಳು ಸದಾನಂದ ಶೆಟ್ಟಿ ಅವರ ಬೆಂಬಲಿಗರ ಪಾಲಾಗಿದ್ದು, 3 ಸ್ಥಾನಗಳು ಅಜಿತ್‌ ಕುಮಾರ್‌ ರೈ ಮಾಲಾಡಿ ಬಣ ಗೆದ್ದುಕೊಂಡಿದೆ.

ಮಂಗಳೂರು ತಾಲೂಕಿನಲ್ಲಿ ರವಿರಾಜ್‌ ಶೆಟ್ಟಿ ನಿಟ್ಟೆಗುತ್ತು, ಸುರೇಶ್ಚಂದ್ರ ಶೆಟ್ಟಿ, ಕೃಷ್ಣ ಪ್ರಸಾದ್‌ ರೈ, ಜಗನ್ನಾಥ್‌ ಶೆಟ್ಟಿ ಬಾಳ, ಶಶಿರಾಜ್‌ ಶೆಟ್ಟಿ ಕೊಳಂಬೆ, ಮೇಘನಾಥ್‌ ಶೆಟ್ಟಿ, ಉಮೇಶ್‌ ರೈ, ಕೇಶವ ಮಾರ್ಲ, ಡಾ| ಪೃಥ್ವಿ ಶೆಟ್ಟಿ, ಜಯರಾಮ ಸಾಂತ, ಗೋಪಾಲಕೃಷ್ಣ ಶೆಟ್ಟಿ, ರವೀಂದ್ರನಾಥ್‌ ಪೂಂಜ, ಸುರೇಶ ರೈ, ಯಶೋಧರ ಶೆಟ್ಟಿ, ವಿಕಾಸ್‌ ಶೆಟ್ಟಿ, ಮನಮೋಹನ್‌ ಶೆಟ್ಟಿ, ಸುಂದರ್‌ ಶೆಟ್ಟಿ, ಸಂದೀಪ್‌ ಶೆಟ್ಟಿ, ಶ್ರೀನಿವಾಸ್‌ ಆಳ್ವ ಹಾಗೂ ಮಹಿಳಾ ಅಭ್ಯರ್ಥಿ ಅಡ್ಯಾರು ಜಯಲಕ್ಷ್ಮೀ ಹೆಗ್ಡೆ ಗೆಲುವು ಸಾಧಿಸಿದ್ದಾರೆ.

ಸುಳ್ಯದ ನಾಲ್ಕು ಸ್ಥಾನ, ಬಂಟ್ವಾಳದ 8 ಸ್ಥಾನ, ಪುತ್ತೂರಿನ 8 ಸ್ಥಾನ ಹಾಗೂ ಕಾಸರಗೋಡಿನ 9 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು, ಈ ತಾಲೂಕು ಸಮಿತಿಗಳಲ್ಲಿ ಬಂಟರ ಮಾತೃಸಂಘದ ಅಧ್ಯಕ್ಷರ ಆಯ್ಕೆಗಾಗಿ ಮಾತ್ರ ಮತದಾನ ನಡೆದಿತ್ತು. ವಿಜಯ್‌ ಕುಮಾರ್‌ ಅವರು ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English