- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಹೆಚ್.ಐ.ವಿ ಬಗ್ಗೆ ಭಯ ಬೇಡ, ತಿಳುವಳಿಕೆ ಬೇಕು : ಡಾ. ಓ. ಆರ್. ಶ್ರೀರಂಗಪ್ಪ

 ಡಾ. ಓ. ಆರ್. ಶ್ರೀರಂಗಪ್ಪ [1]ಮಂಗಳೂರು: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ದ.ಕ ಹಾಗೂ ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ ದ.ಕ ಇದರ ಮಾರ್ಗದರ್ಶನದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಮಂಗಳೂರು ವಿಶ್ವ ವಿದ್ಯಾನಿಲಯ ವ್ಯಾಪ್ತಿಯ ಎಲ್ಲಾ ಕಾಲೇಜುಗಳ ರೆಡ್ ರಿಬ್ಬನ್ ಕ್ಲಬ್ಗಳು ಮತ್ತು ಸ್ಕೂಲ್ ಆಫ್ ಸೋಷಿಯಲ್ ವರ್ಕ್ಸ್, ರೋಶನಿ ನಿಲಯ, ಮಂಗಳೂರು ವತಿಯಿಂದ ಇಂದು ನಗರದ ರೋಶನಿ ನಿಲಯದಲ್ಲಿ ವಿಶ್ವ ಏಡ್ಸ್ ದಿನಾಚರಣೆಯು ನಡೆಸಲಾಯಿತು.

 ಡಾ. ಓ. ಆರ್. ಶ್ರೀರಂಗಪ್ಪ [2]ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ. ಡಾ. ಓ. ಆರ್. ಶ್ರೀರಂಗಪ್ಪ, ಜಿಲ್ಲಾ ಆರೋಗ್ಯಾಧಿಕಾರಿ ನೆರವೇರಿಸಿದರು. ಉದ್ಘಾಟನೆಯ ಬಳಿಕ ಮಾತನಾಡಿದ ಅವರು ಹೆಚ್.ಐ.ವಿಯ ಬಗ್ಗೆ ಯುವಜನರು ಹೆಚ್ಚಿನ ಮಾಹಿತಿ ಪಡೆದು ತಮ್ಮನ್ನ ತಾವು ರಕ್ಷಿಸುವುದರ ಜೊತೆಗೆ ಸಮಾಜದ ಇತರರಿಗೂ ಮಾಹಿತಿ ನೀಡಬೇಕು. ಹೆಚ್.ಐ.ವಿ ಬಗ್ಗೆ ಭಯ ಬೇಡ, ತಿಳುವಳಿಕೆ ಬೇಕು ಎಂದು ಹೇಳಿದರು.

 ಡಾ. ಓ. ಆರ್. ಶ್ರೀರಂಗಪ್ಪ [3]ಡಾ. ಜೆಸಿಂತಾ ಡಿಸೋಜಾ, ಪ್ರಾಂಶುಪಾಲರು, ಸ್ಕೂಲ್ ಆಫ್ ಸೋಶಿಯಲ್ ವರ್ಕ್ಸ್ ಇವರು ಅಧ್ಯಕ್ಷತೆ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಡಾ. ಅಶೋಕ್ ಕ್ರಿಮೊನಾಲಜಿ ಪ್ರೊಫೆಸರ್, ರೋಶನಿನಿಲಯ, ಮಂಗಳೂರು ಉಪಸ್ಥಿತರಿದ್ದರು.

 ಡಾ. ಓ. ಆರ್. ಶ್ರೀರಂಗಪ್ಪ [4]ಕು. ಆಶಾ, ಮೇಲ್ವಿಚಾರಕಿ, ಐ.ಸಿ.ಟಿ.ಸಿ, ದ.ಕ ಜಿಲ್ಲೆ ಧನ್ಯವಾದ ಸಮರ್ಪಿಸಿದರು. ಡಾ. ರತಿ ದೇವಿ, ಪ್ರಾಧ್ಯಾಪಕರು, ಕೆ.ಎಂ.ಸಿ, ಮಂಗಳೂರು ಇವರು ಎಚ್.ಐ.ವಿ / ಏಡ್ಸ್ ಬಗ್ಗೆ ಸಂವಾದ ನಡೆಸಿದರು.

ರೋಶನಿ ನಿಲಯ, ಮಂಗಳೂರು [5]

ರೋಶನಿ ನಿಲಯ, ಮಂಗಳೂರು [6]