ಅಡಕೆ ನಿಷೇಧಿಸಕ್ಕೆ ರೈತರು ಚಿಂತಿಸಬೇಕಾದ ಅಗತ್ಯವಿಲ್ಲ : ಕೊಂಕೋಡಿ

8:50 PM, Wednesday, December 11th, 2013
Share
1 Star2 Stars3 Stars4 Stars5 Stars
(No Ratings Yet)
Loading...

campco

ಮಂಗಳೂರು: ಕ್ಯಾಂಪ್ಕೊ ಮಂಗಳೂರು ಕಚೇರಿಯಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಕ್ಯಾಂಪ್ಕೊ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಅವರು ಅಡಕೆಯನ್ನು ನಿಷೇಧಿಸಲು ಸರ್ಕಾರ ಕೈಗೊಂಡಿರುವ ನಿರ್ಧಾರಕ್ಕೆ ರೈತರು ಚಿಂತಿಸಬೇಕಾದ ಅಗತ್ಯವಿಲ್ಲ ಕ್ಯಾಂಪ್ಕೊ ಸರ್ಕಾರ ಮಾಡಿರುವ ಹುನ್ನಾರವನ್ನು ನ್ಯಾಯಾಂಗದ ಮೂಲಕ ವಿಫಲಗೊಳಿಸಲಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ಸುಪ್ರೀಂ ಕೋರ್ಟ್ ಗೆ ಕಳೆದ ನವೆಂಬರ್ ನಲ್ಲಿ ಅಡಿಕೆ ನಿಷೇಧ ಮಾಡುವುದರ ಬಗ್ಗೆ ವರದಿಯನ್ನು ಸಲ್ಲಿಸಿದ್ದು, ಕೇಂದ್ರದ ವಕೀಲರು ಕೂಡ ಅಡಿಕೆಯನ್ನು ನಿಷೇಧಿಸಬೇಕು ಎಂಬ ವಾದವನ್ನು ಮಂಡಿಸಿದ್ದಾರೆ. ಕ್ಯಾಂಪ್ಕೊ ಅಡಿಕೆ ಬೆಳೆಗಾರರ ಪರವಾಗಿ ಹಲವು ವಾದಗಳನ್ನು ದೇಶದ ಬೇರೆ ಬೇರೆ ನ್ಯಾಯಾಲಯಗಳಲ್ಲಿ ಹೂಡುತ್ತಾ ಬಂದಿದ್ದು, ಅಂತೆಯೇ ಕ್ಯಾಂಪ್ಕೊ ಕಂಪನಿಯು ಗುಟ್ಕಾ ನಿಷೇಧಕ್ಕೆ ಸಂಬಂಧಿಸಿದಂತೆ ಕೂಡ ದಾವೆಯನ್ನು ಅಡಿಕೆ ಬೆಳೆಗಾರರ ಹಿತರಕ್ಷಣೆಗಾಗಿ ಹೂಡಿದ್ದು ಕ್ಯಾಂಪ್ಕೊ ನೇತೃತ್ವದಲ್ಲಿ ಇತರ ಸಹಕಾರಿ ಸಂಸ್ಥೆಗಳು ಬೆಳೆಗಾರರ ಪರವಾಗಿ ದಾವೆಗಳನ್ನು ಹೂಡಿದ್ದೇವೆ. ಸುಪ್ರೀಂಕೋರ್ಟ್ ಗೆ ನಾವು ಹಲವಾರಿ ಭಾರಿ ಹಾಜರಾಗಿದ್ದೇವೆ ಈ ದಾವೆಯು ಮುಂದಿನ ಜನವರಿ ತಿಂಗಳಿನಲ್ಲಿ ವಿಚಾರಣೆಗೆ ಬರಲಿದೆ ಎಂದು ಅವರು ತಿಳಿಸಿದರು.

ದೇಶದ 12 ರಾಜ್ಯಗಳಲ್ಲಿ ಕೋಟ್ಯಾಂತರ ಜನ ರೈತರು ಮತ್ತು ಕಾರ್ಮಿಕರು ಅಡಿಕೆಯನ್ನು ನಂಬಿ ಜೀವನ ನಡೆಸುತ್ತಿದ್ದಾರೆ. ಇತ್ತೀಚಿನ ದಿನಗಳವರೆಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡ ಅಡಿಕೆ ಬೆಳೆಗಾರರನ್ನು ಪ್ರೋತ್ಸಾಹಿಸಿವೆ. ಅಡಿಕೆ ಬೆಳೆಯಿಂದ ಕೋಟ್ಯಾಂತರ ರೂಪಾಯಿಗಳ ವರಮಾನ ಮಾರಾಟ ತೆರಿಗೆ, ಮಾರಾಟ ಶುಲ್ಕದ ಮೂಲಕ ಸರ್ಕಾರದ ಖಜಾನೆಗೆ ಹರಿದು ಬರುತ್ತಿದ್ದು, ಸರ್ಕಾರವು ಅಡಿಕೆಯನ್ನು ನಿಷೇಧಿಸಲು ಸಾಧ್ಯವಿಲ್ಲ. ಕ್ಯಾಂಪ್ಕೊ ನೇತೃತ್ವದಲ್ಲಿ ಇತರ ಸಹಕಾರಿ ಸಂಸ್ಥೆಗಳೂ ಕೂಡ ಅಡಿಕೆಯ ರಕ್ಷಣೆಗಾಗಿ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಂಡಿವೆ ಎಂದರು.

ಅಡಿಕೆಯ ಬಗ್ಗೆ ಹಲವು ಸಂಸ್ಥೆಗಳು ನಡೆಸಿರುವ ಪ್ರಯೋಗದಲ್ಲಿ ಅಡಿಕೆಯಲ್ಲಿ ಹಾನಿಕಾರಕ ಅಂಶಗಳಿಲ್ಲ ಎಂಬ ವಿವರ ದೊರೆತಿದ್ದು, ಇತರ ಆಹಾರ ವಸ್ತುಗಳಿಗೆ ಹೋಲಿಸಿದರೆ ಅಡಿಕೆಯಲ್ಲಿ 0.15 ಮಾತ್ರ ಅಲ್ಕಲಾಯ್ಡ್ ನ್ ಪ್ರಮಾಣವಿದೆ ಇದು ಆರೋಗ್ಯಕ್ಕೆ ಮಾರಕವಲ್ಲ ಹಾಗಾಗಿ ಅಡಿಕೆ ಬೆಳೆಗಾರರು ಹೆದರಬೇಕಾದ ಅಗತ್ಯವಿಲ್ಲ ಎಂದು ಅವರು ವಿವರ ನೀಡಿದರು.

ಸ್ಥಳೀಯ ರಾಜಕೀಯ ಮುಖಂಡರೂ ಕೂಡ ಕೇಂದ್ರ ಸರ್ಕಾರದ ಕಣ್ಣುತೆರೆಸುವ ಕಾರ್ಯವನ್ನು ಮಾಡಬೇಕು ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕ್ಯಾಂಪ್ಕೊದ ಉಪಾಧ್ಯಕ್ಷ ಕೆ.ಸತೀಶ್ಚಂದ್ರ ಭಂಡಾರಿ, ವ್ಯವಸ್ಥಾಪಕ ನಿರ್ದೇಶಕ ಎಂ.ಸುರೇಶ್ ಭಂಡಾರಿ ಉಪಸ್ಥಿತರಿದ್ದರು.

campco

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English