ಮಂಗಳೂರು : ಬ್ಯಾರಿ ಕಲಾರಂಗದ ವತಿಯಿಂದ ಮಂಗಳೂರು ನಗರದ ಪುರಭವನದಲ್ಲಿ ಡಿ.11 ಬುಧವಾರ ಬ್ಯಾರಿ ಕಲಾವಿದರ ಸಮಾವೇಶ ನಡೆಯಿತು.
ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಅಬ್ದುಲ್ ರವೂಫ್ ಪುತ್ತಿಗೆ ‘ದಪ್ಪು’ ಬಾರಿಸುವ ಮೂಲಕ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ನಾಟಕಕಾರ ಸಂಜೀವ್ ದಂಡಕೇರಿ ಧ್ವಜಾರೋಹಣ ಮಾಡಿದರು.
ಬ್ಯಾರಿ ಕಲಾರಂಗದ ಅಧ್ಯಕ್ಷ ಅಝೀಝ್ ಬೈಕಂಪಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ತುಳು ನಾಟಕಕಾರ, ಚಲನಚಿತ್ರ ನಿರ್ಮಾಪಕ ವಿಜಯ ಕುಮಾರ್ ಕೊಡಿಯಾಲ್ಬೈಲ್, ತುಳುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷ, ಯೋಗೀಶ್ ಶೆಟ್ಟಿ ಜೆಪ್ಪು, ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಮುಹಮ್ಮದ್ ಬ್ಯಾರಿ ಎಡಪದವು, ಟ್ಯಾಲೆಂಟ್ ರಿಸರ್ಚ್ ಫೌಂಡೇಷನ್ ಅಧ್ಯಕ್ಷ ರಿಯಾಝ್, ಮಾಜಿ ಉಪಮೇಯರ್ ಬಶೀರ್ ಬೈಕಂಪಾಡಿ, ಬ್ಯಾರಿ ಚಲನಚಿತ್ರ ನಿರ್ಮಾಪಕ ಅಲ್ತಾಫ್ ಹುಸೈನ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನ್ಯಾಶನಲ್ ಟ್ಯುಟೋರಿಯಲ್ನ ಪ್ರಾಂಶುಪಾಲ ಖಾಲಿದ್ ಉಜಿರೆ ಸ್ವಾಗತಿಸಿದರು. ಹುಸೈನ್ ಕಾಟಿಪಳ್ಳ ಕಾರ್ಯಕ್ರಮ ನಿರ್ವಹಿಸಿದರು.
Click this button or press Ctrl+G to toggle between Kannada and English