ಮಂಗಳೂರಿನ ಪೊಲೀಸ್‌ ಆಯುಕ್ತರಾಗಿ ಆರ್‌, ಹಿತೇಂದ್ರ ಅಧಿಕಾರ ಸ್ವೀಕಾರ

12:14 PM, Tuesday, December 17th, 2013
Share
1 Star2 Stars3 Stars4 Stars5 Stars
(No Ratings Yet)
Loading...

Mangalore police commissionaire R. Hitendra

ಮಂಗಳೂರು: ಮಂಗಳೂರಿನ ಪೊಲೀಸ್‌ ಆಯುಕ್ತರಾಗಿ ಆರ್‌, ಹಿತೇಂದ್ರ ಅವರು ಸೋಮವಾರ ಅಧಿಕಾರ ವಹಿಸಿಕೊಂಡಿದ್ದಾರೆ. ಅವರು ಪೊಲೀಸ್‌ ಕಮಿಷನರೆಟ್‌ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ನಿರ್ಗಮನ ಕಮಿಷನರ್‌ ಮನೀಶ್‌ ಕರ್ಭೀಕರ್‌ ಅವರಿಂದ ಅಧಿಕಾರ ಸ್ವೀಕರಿಸಿದರು.

ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಜಿಲ್ಲೆಯಲ್ಲಿ ಕೋಮು ಗಲಭೆ ಸಂಭವಿಸುತ್ತಿರುವ ಬಗ್ಗೆ ಹಾಗೂ ಭೂಗತ ಚಟುವಟಿಕೆಗಳ ಕುರಿತು ತಿಳಿದುಕೊಂಡಿದ್ದೇನೆ. ಈ ಬಗ್ಗೆ ಕೂಲಂಕಷ ಅಧ್ಯಯನ ನಡೆಸಿ ಮುಂದಿನ ಕ್ರಮ ಜರಗಿಸಲಾಗುವುದು, ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ ಕ್ರಿಮಿನಲ್‌ ಆರೋಪ ಹೊತ್ತ ಕೈದಿಗಳನ್ನು ಈಗಾಗಲೇ ಮೈಸೂರು ಜೈಲಿಗೆ ವರ್ಗಾಯಿಸಲಾಗಿದೆ ಎಂದರು.

ಸಮಾಜ ವಿರೋಧಿ ಚಟುವಟಿಕೆಗಳನ್ನು ಮಟ್ಟ ಹಾಕಲು ಮಾಧ್ಯಮದವರ ಸಹಕಾರ ನೀಡಬೇಕು ಎಂದು ಈ ಸಂದರ್ಭದಲ್ಲಿ ಅವರು ಹೇಳಿದರು.

ಮೂಲತಃ ಕರ್ನಾಟಕದ ಕೋಲಾರದ ಚಿಂತಾಮಣಿಯವರಾಗಿದ್ದು, 1996ರ ಐಪಿಎಸ್‌ (ಕರ್ನಾಟಕ ಕೇಡರ್‌) ಅಧಿಕಾರಿಯಾಗಿರುತ್ತಾರೆ. ಬಿ.ಇ. (ಎಲೆಕ್ಟ್ರಾನಿಕ್ಸ್‌) ಪದವೀಧರರಾಗಿರುತ್ತಾರೆ. ಇವರು ಈ ಹಿಂದೆ ಸಿಬಿಐ ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಎಸ್‌ಪಿ ಮತ್ತು ಡಿಐಜಿ ಆಗಿ ಸೇವೆ ಸಲ್ಲಿಸಿದ್ದರು.

2006 ನ. 1ರಂದು ಸಿಬಿಐಗೆ ಸೇರಿದ್ದ ಅವರು ಎಸ್‌ಪಿ ಆಗಿ ಬ್ಯಾಂಕಿಂಗ್‌ ಸುರಕ್ಷತೆ ಮತ್ತು ವಂಚನೆ ನಿಯಂತ್ರಣ ಘಟಕದಲ್ಲಿ ಹಾಗೂ 2010 ಎಪ್ರಿಲ್‌ 1ರಿಂದ ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಡಿಐಜಿ ಆಗಿದ್ದರು.

ಸುಪ್ರೀಂ ಕೋರ್ಟು ಸೂಚಿಸಿದ ಉನ್ನತ ಅಧಿಕಾರಿಗಳ ಮತ್ತು ರಾಜಕಾರಣಿಗಳ ಭ್ರಷ್ಟಾಚಾರ ಪ್ರಕರಣಗಳ ತನಿಖೆಯನ್ನು ಅವರು ನಡೆಸಿದ್ದಾರೆ. ಅವರ ಸೇವೆಗಾಗಿ 2012ರ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಭಾರತೀಯ ಪೊಲೀಸ್‌ ಪದಕ ನೀಡಿ ಗೌರವಿಸಲಾಗಿತ್ತು.

Mangalore police commissionaire R. Hitendra

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English