- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ವಿರೇಂದ್ರ ಹೆಗ್ಗಡೆಯವರಿಂದ ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ಗೆ ಚಾಲನೆ

Alvas Nudisiri Virasat [1]

ಮೂಡಬಿದಿರೆ : ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ 2013 ನ್ನು ಡಾ. ಡಿ ವಿರೇಂದ್ರ ಹೆಗ್ಗಡೆಯವರು ಗುರುವಾರ ಸಂಜೆ ಮೂಡಬಿದಿರೆಯ ವಿದ್ಯಾಗಿರಿಯಲ್ಲಿರುವ ಸುಂದರಿ ಆಳ್ವ ಆವರಣದಲ್ಲಿ ಸಂಜೆ 6.30 ರ ವೇಳೆಗೆ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಬತ್ತಕ್ಕೆ ಹಾಲೆರೆಯುವ ಮೂಲಕ ಇತರ ಗಣ್ಯರು ಉದ್ಘಾಟನೆಗೆ ಜತೆಗೂಡಿದರು.

ಸಂಜೆ 3.30ಕ್ಕೆ ಸಾಂಸ್ಕ್ರತಿಕ ಮೆರವಣಿಗೆ ಆರಂಭಗೊಂಡಿತು. ಜನಪದ ಕಲಾವಿದೆ ನಾಡೋಜ ಸುಕ್ರಿ ಬೊಮ್ಮಗೌಡ ಮೆರವಣಿಗೆಯನ್ನು ಉದ್ಘಾಟಿಸಿದರು. ಮೆರವಣಿಗೆಯು ಚೌಟರ ಅರಮನೆಯಿಂದ ಹೊರಟು ವೆಂಕಟ್ರಮಣ ದೇವಸ್ಥಾನ, ಹನುಮಾನ್ ದೇವಸ್ಥಾನದ ಮುಂಭಾಗದಿಂದ ಸಾಗಿ, ಮೂಡುಬಿದಿರೆ ಪಟ್ಟಣದ ಮೂಲಕ ವಿದ್ಯಾಗಿರಿಗೆ ತಲುಪಿತು.

80 ನುಡಿಸಿರಿ ವಿರಾಸತ್ ಘಟಕಗಳ ಅದ್ಯಕ್ಷರುಗಳು, ಪದಾಧಿಕಾರಿಗಳು, ಊರಿನ ಗಣ್ಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.ಜಾನಪದ ಕಲಾವಿದರು, 100 ಕ್ಕೂ ಹೆಚ್ಚು ತಂಡಗಳು , ಸ್ಕೌಟ್ಸ್ ಅಂಡ್ ಗೈಡ್ಸ್ , ಎನ್ ಸಿ ಸಿ ವಿದ್ಯಾರ್ಥಿ ವಿದ್ಯಾರ್ಥಿನಿಯರು, ಡೊಳ್ಳುಕುಣಿತದ ಕಲಾವಿದರು, ಕೊರಗರ ಡೋಲು, ಜನ ವೀರಭದ್ರ ಕುಣಿತದ ಕಲಾವಿದರು, ಕಲ್ಲಡ್ಕ ಗೊಂಬೆಯಾಟದ ಕಲಾವಿದರು, ಅಟಿಕಳೆಂಜಗಳು, ದುಡಿಕುಣಿತ ಕಲಾವಿದರು, ದಫ್, ಐತಿಹಾಸಿಕ, ಪೌರಾಣಿಕ, ಸಾಮಾಜಿಕ ನಾಟಕ ಕಲಾವಿದರು, ಯಕ್ಷಗಾನದ ವಿವಿಧ ವೇಷಗಳು, ಬಂಜಾರ ನೃತ್ಯಗಾರ್ತಿಯರು, ತಟ್ಟೀರಾಯ, ಸೋಮನ ಕುಣಿತ, ಹುಲಿವೇಷ, ಕೇರಳದ ವೇಷಗಳು, ತೆಯ್ಯಂ, ಕಥಕ್ಕಳಿ, ಕೇರಳದ ಮಹಿಳಾ ಚೆಂಡೆ ಬಳಗ, ತ್ರಿವರ್ಣ ಧ್ವಜ , ಹಾಲಕ್ಕಿ, ಕರಗ, ಶಂಖಧ್ವನಿ, ಕಂಸಾಳೆ, ನಂದಿಧ್ವಜ, ಪಟದ ಕುಣಿತ, ಕೊಡಗಿನ ಉಮ್ಮತ್ತಾಟು, ಕೋಲಾಟ, ಮರಗಾಲು ಕುಣಿತ, ಕಂಗೀಲು, ಶ್ರೀಲಂಕಾದ ಡ್ರಮ್ಸ್ ಹೀಗೆ ಸುಮಾರು 5000 ಕಲಾವಿದರು ಸೇರಿದಂತೆ 7000ದಷ್ಟು ಜನ ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್‍ನ ಬೃಹತ್ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ವಿಶ್ವ ನುಡಿಸಿರಿ ವಿರಾಸತ್ ನ ರೂವಾರಿ ಎಂ.ಮೋಹನ್ ಆಳ್ವ ಹಾಗೂ ಇನ್ನಿತರ ಗಣ್ಯರು ಮೆರವಣಿಗೆಯಲ್ಲಿ ಸಾಗಿ ಬಂದರು. ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಕಲಾಕೃತಿಗಳು, ಕಲಾಕಾರರು ವೇದಿಕೆಯಲ್ಲಿ ತಮ್ಮ ಪ್ರದರ್ಶನ ನೀಡಿದರು.

ಉದ್ಘಾಟನಾ ಮಾತುಗಳನ್ನಾಡಿದ ಡಾ. ಡಿ ವಿರೇಂದ್ರ ಹೆಗ್ಗಡೆಯವರು ರಾಜ್ಯದ ವಿವಿಧ ಅಚಾರಗಳನ್ನು ಒಂದು ಸಣ್ಣ ಪಟ್ಟಣ್ದಲ್ಲಿ ಕ್ರೋಡಿಕರಿಸಿ ಅದನ್ನು ವಿಶ್ವದೆಲ್ಲೆಡೆ ಪಸರಿಸುವ ಆಳ್ವರ ಈ ಸಾಧನೆ ಮಹತ್ತರವಾದುದು, ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವ ಈ ಕಾರ್ಯಕ್ರಮ ಇನ್ನಷ್ಟು ಬೆಳೆಯಲಿ ಎಂದು ಹಾರೈಸಿದರು.

Alvas Nudisiri Virasat [2]
Alvas Nudisiri Virasat [3]
Alvas Nudisiri Virasat [4]
Alvas Nudisiri Virasat [5]
Alvas Nudisiri Virasat [6]
Alvas Nudisiri Virasat [7]