ಬಂಟ್ವಾಳ: ಕ್ಯಾಂಪ್ಕೊ ಸಂಸ್ಥಾಪಕರಾದ ವಾರಾಣಾಸಿ ಸುಬ್ರಾಯ ಭಟ್ (87)ಅವರು ಧೀರ್ಘ ಕಾಲದ ಅನಾರೋಗ್ಯದಿಂದ ಬಂಟ್ವಾಳ ತಾಲೂಕಿನ ಅಡ್ಯನಡ್ಕದ ತಮ್ಮ ನಿವಾಸದಲ್ಲಿ ಡಿಸೆಂಬರ್ 27 ರಂದು ನಿಧನರಾಗಿದ್ದಾರೆ. ಅವರು ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಕರ್ನಾಟಕ ಮತ್ತು ಕೇರಳ ರಾಜ್ಯದ ಜಂಟಿ ಉದ್ಯಮವಾಗಿ ಜುಲೈ 11, 1973ರಲ್ಲಿ ಪ್ರಾರಂಭವಾದ ಸಂಸ್ಥೆ ಅಡಿಕೆ ಬೆಳೆಗಾರರ ಪಾಲಿನ ಆಶಾಕಿರಣವಾಯಿತು. ಎರಡು ರಾಜ್ಯಗಳ ಯಶಸ್ವಿ ಸಹಕಾರಿ ಸಂಸ್ಥೆಯಾಗಿ ರೂಪುಗೊಂಡ ಬೆಳವಣಿಗೆಯ ಹಿಂದೆ ಸುಬ್ರಾಯ ಭಟ್ ಅವರ ಅಪಾರ ಶ್ರಮವಿತ್ತು.
ಸುಬ್ರಾಯ ಭಟ್ ಅವರ ನಿಧನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾದಿಕಾರಿ ಡಾ. ವಿರೇಂದ್ರ ಹೆಗ್ಗಡೆ ಅವರಸಹಿತ ವಿವಿಧ ರಾಜಕೀಯ , ಸಾಮಾಜಿಕಹಾಗೂ ರೈತ ಮುಖಂಡರು ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.
Click this button or press Ctrl+G to toggle between Kannada and English