ಮಂಗಳೂರು: ಪಂಪ್‍ವೆಲ್‍ನ ಫೈರ್ ಆ್ಯಂಡ್ ಸೇಫ್ಟಿ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಅದೇ ಕಾಲೇಜಿನ ವಿದ್ಯಾರ್ಥಿಯೊಂದಿಗೆ ಕಾಣೆ ಯಾಗಿದ್ದಾಳೆ ಎಂದು ವಿದ್ಯಾ ರ್ಥಿನಿಯ ಹೆತ್ತವರು ಕಂಕನಾಡಿ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ.
ಪುತ್ತೂರು ತಾಲೂಕಿನ ಉಪ್ಪಳಿಗೆ ನಿವಾಸಿ ಮಧುಶ್ರೀ ಎಂಬಾಕೆ ಪಂಪ್‍ವೆಲ್‍ನ ಫೈರ್ ಆ್ಯಂಡ್ ಸೇಫ್ಟಿ ಕಾಲೇಜಿನಲ್ಲಿ ಶಿಕ್ಷಣ ಪಡೆಯುತ್ತಿದ್ದು, ಕಳೆದ ಮಂಗಳವಾರದಿಂದ ನಾಪತ್ತೆಯಾಗಿದ್ದಾಳೆ. ಈ ಬಗ್ಗೆ ಯುವತಿಯ ಮನೆಯವರು ಮಂಗಳವಾರ ಕಂಕನಾಡಿ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಅದರಂತೆ ನಿನ್ನೆ ಅವರು ಬಜರಂಗದಳದ ಕಾರ್ಯಕ ರ್ತರಿಗೆ ಮಗಳನ್ನು ಹುಡುಕಿಕೊಡುವಂತೆ ಕೇಳಿಕೊಂಡಿದ್ದಾರೆ. ಹೀಗಾಗಿ ನಿನ್ನೆ ಸಂಜೆ ಕಾಲೇಜಿಗೆ ಭೇಟಿಕೊಟ್ಟ ಸಂಘಟನೆಯ ಕಾರ್ಯಕರ್ತರು ಯುವತಿಯ ಬಗ್ಗೆ ಮಾಹಿತಿ ಪಡೆದಿದ್ದಾರೆ. ಅದರಂತೆ ಕಾಲೇಜಿನಲ್ಲಿ ಇಬ್ಬರೇ ವಿದ್ಯಾರ್ಥಿನಿಯರಿದ್ದು, ಉಳಿದವರು ವಿದ್ಯಾರ್ಥಿ ಗಳಾಗಿದ್ದರು ಎಂದು ತಿಳಿದುಬಂದಿದೆ. ಈ ವಿದ್ಯಾರ್ಥಿಗಳಲ್ಲಿ ಉಡುಪಿ ತೆಂಕ ಎರ್ಮಾಳಿನ ಮುಹಮ್ಮದ್ ತಾಹೀರ್ ಎಂಬಾತ ಕೂಡ ಮಂಗಳವಾರದಂದು ನಾಪತ್ತೆಯಾಗಿದ್ದು, ಮತ್ತೆ ಕಾಲೇಜಿಗೆ ಬಂದಿಲ್ಲ ಎನ್ನಲಾಗಿದೆ. ಹೀಗಾಗಿ ಸಂಘಟನೆಯ ಕಾರ್ಯಕರ್ತರು ಮತ್ತೋರ್ವ ವಿದ್ಯಾರ್ಥಿನಿಯಲ್ಲಿ ವಿಚಾರಿಸಿದಾಗ, ಮಧುಶ್ರೀ ಮತ್ತು ತಾಹೀರ್ ಮಂಗಳ ವಾರ ಜೊತೆಯಾಗಿ ಸ್ಟೇಟ್‍ಬ್ಯಾಂಕಿನಲ್ಲಿ ಇದ್ದುದ್ದಾಗಿ ತಿಳಿಸಿದ್ದಾಳೆ.
ಯುವಕನ ಮನೆಯವರು ಈ ಬಗ್ಗೆ ಯಾವುದೇ ನಾಪತ್ತೆ ದೂರು ದಾಖಲಿಸಿಲ್ಲವಾದರೂ ಈತನಕ ಆತ ಮನೆಗೆ ಬಂದಿಲ್ಲ ಎಂದು ಕಾಲೇಜು ಆಡಳಿತ ಮಂಡಳಿಗೆ ದೂರ ವಾಣಿ ಮೂಲಕ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ. ಇದೀಗ ಬಜರಂಗದ ಳದ ಕಾರ್ಯಕರ್ತರು ಕಾಲೇಜಿಗೆ ಭೇಟಿ ಕೊಟ್ಟ ವಿಚಾರ ತಿಳಿದ ಪೊಲೀಸರು ಅಲರ್ಟ್ ಆಗಿದ್ದು. ಅವರಿಬ್ಬರ ಬಗ್ಗೆ ಮಾಹಿತಿ ಕಲೆ ಹಾಕಲು ಆರಂಭಿಸಿದ್ದಾರೆ.
ಮಧುಶ್ರೀ ಮತ್ತು ತಾಹೀರ್‍ನ ಮೊಬೈಲ್ ಕಾಲ್ ಡೀಟೈಲ್ಸ್ ಪಡೆದಾಗ ಅವರಿ ಬ್ಬರ ಮಧ್ಯೆ ಪರಸ್ಪರ ಮಾತುಕತೆ ಮತ್ತು ಮೆಸೇಜ್‍ಗಳು ಬದಲಾಗಿರುವ ಬಗ್ಗೆ ವಿವರಗಳು ಲಭ್ಯವಾಗಿದೆ ಎನ್ನಲಾಗಿದೆ. ಹೀಗಾಗಿ ಇವರಿಬ್ಬರು ಜೊತೆಯಾ ಗಿಯೇ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಇದಕ್ಕೆ ಪುಷ್ಠಿ ನೀಡುವಂತೆ ಇಬ್ಬರ ಮೊಬೈಲ್ ಕೂಡ ಸ್ವಿಚ್ಡ್ ಆಫ್ ಆಗಿದೆ.
Click this button or press Ctrl+G to toggle between Kannada and English