ಜೀವವುಳಿಸಲು ಭಗವಂತನು ನೀಡಿದ ಅವಕಾಶವೇ ರಕ್ತದಾನ-ಕೊಂಡೆವೂರು ಶ್ರೀಗಳು

6:27 PM, Wednesday, January 22nd, 2014
Share
1 Star2 Stars3 Stars4 Stars5 Stars
(No Ratings Yet)
Loading...

Kondevoor Math

ಮಂಗಳೂರು : ಜಗದ್ಗುರು ಶ್ರೀ ನಿತ್ಯಾನಂದ ಮಹಾಪೀಠಮ್ ಚಾರಿಟೇಬಲ್ ಟ್ರಸ್ಟ್ ಕೊಂಡೆವೂರು ನೇತೃತ್ವದಲ್ಲಿ ರಕ್ತನಿಧಿ ಕೇಂದ್ರ ಎ.ಜೆ.ಆಸ್ಪತ್ರೆ,ಎ.ಜೆ. ವೈದ್ಯಕೀಯ ಮಹಾವಿದ್ಯಾಲಯ ಮಂಗಳೂರು ಸಹಯೋಗದಲ್ಲಿ 19/01/2014 ಆದಿತ್ಯವಾರ ಜರಗಿದ ರಕ್ತದಾನ ಶಿಬಿರವನ್ನು ಪ.ಪೂ. ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಯವರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಇಂದು ಬಡ ರೋಗಿಗಳಿಗೆ ರಕ್ತದ ಅವಶ್ಯಕತೆ ಬಹಳ ಇದೆ. ಇಂತಹ ಸಂದರ್ಭದಲ್ಲಿ ಭಗವಂತನು ನಮಗೆ ನೀಡಿದ ರಕ್ತದಾನದ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಜೀವವುಳಿಸಲು ನೆರವಾಗಬೇಕಿದೆ ಮಾತ್ರವಲ್ಲ ಶ್ರೀ ನಿತ್ಯಾನಂದ ಯೋಗಾಶ್ರಮದ ಪಂಚಮುಖೀ ಯೋಜನೆಗಳಲ್ಲೊಂದಾದ ಆರೋಗ್ಯ ಯೋಜನೆಗೂ ಸಮಸ್ತರ ಸಹಕಾರದ ಅಗತ್ಯ ಎಂದು ಪೂಜ್ಯರು ಮೌಲಿಕ ಸಂದೇಶ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಾರು ಸದಾಶಿವ ದೇವಸ್ಥಾನದ ಮೊಕ್ತೇಸರರಾದ ಶ್ರೀ ಕೃಷ್ಣಪ್ಪ ಪೂಜಾರಿ ದೇರಂಬಳ ರವರು ಯೋಗಾಶ್ರಮದಲ್ಲಿ ನಡೆಯುವ ಹಲವಾರು ಸಮಾಜೋಪಯೋಗಿ ಕಾರ್ಯಕ್ರಮಗಳನ್ನು ಶ್ಲಾಘಿಸಿದರು. ಮಂಗಲ್ಪಾಡಿ ಗ್ರಾಮ ಪಂಚಾಯತು ಸದಸ್ಯೆ ಶ್ರೀಮತಿ ಕುಬ್ರ ಮೊಹಮ್ಮದ್, ಎ.ಜೆ. ಆಸ್ಪತ್ರೆಯ ನಿವರ್ಾಹಕರಾದ ಶ್ರೀ ಲಕ್ಷ್ಮೀಶ ರೈ, ಎ.ಜೆ.ಆಸ್ಪತ್ರೆಯ ಪೆಥೋಲಜಿ ವಿಭಾಗದ ಸಹಪ್ರಾಧ್ಯಾಪಕರಾದ ಡಾ/ಅರವಿಂದ್, ಎ.ಜೆ. ಸಂಸ್ಥೆಯ ನೇಮಕಾಧಿಕಾರಿ ಪೊಯ್ಯಕಂಡ ಚಂದ್ರಶೇಖರ್ ಹಾಗೂ ಉಪ್ಪಳದ ಮಹಿಳಾ ತಜ್ಙೆ ಡಾ/ರಮ್ಯ ಕೆ.ಆರ್. ರವರುಗಳು ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದು ರಕ್ತದಾನದ ಮಹತ್ವವನ್ನು ಒತ್ತಿ ಹೇಳಿದರು. ಮೋಹನದಾಸ ಕೊಡೆವೂರುರವರು ಸ್ವಾಗತಿಸಿ ಶಿವಾನಂದ ಉಪ್ಪಳರವರು ವಂದನಾರ್ಪಣೆಗೈದ ಕಾರ್ಯಕ್ರಮದ ನಿರೂಪಣೆಯನ್ನು ರಾಮಚಂದ್ರ ಬಲ್ಲಾಳ್ ರವರು ಮಾಡಿದರು. ಸ್ತ್ರೀ ಪುರುಷ ಭೇದವಿಲ್ಲದೆ 65 ಜನರು ರಕ್ತದಾನ ಮಾಡಿ ಅಮೂಲ್ಯ ಕೊಡುಗೆ ನೀಡಿದರು.

Kondevoor Math

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English